Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್‌ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ – 2024 ಅನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.ಕರ್ನಾಟಕ ಸರ್ಕಾರವು ಡಿಜಿಟಲ್‌ ಜಾಹೀರಾತಿಗಾಗಿ ಡಿಜಿಟಲ್‌ ಜಾಹೀರಾತು ಏಜೆನ್ಸಿ ಮತ್ತು ಡಿಜಿಟಲ್‌ ಮಾಧ್ಯಮಗಳನ್ನು ಎಂಪ್ಯಾನಲ್‌ಮೆಂಟ್‌ ಮಾಡಿಕೊಳ್ಳುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್‌ ಏಜೆನ್ಸಿ ಮತ್ತು ಮಾಧ್ಯಮಗಳನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೆಲವು ವರ್ಷಗಳಿಂದ ಮಾಧ್ಯಮದ ವ್ಯಾಪ್ತಿ ಮತ್ತು ಸ್ವರೂಪ ಬದಲಾಗಿದೆ. ಅಂತರ್ಜಾಲ, ಖಾಸಗಿ ಕಂಪ್ಯೂಟರ್‌, ಸ್ಮಾರ್ಟ್‌ ಟಿವಿ ಹಾಗೂ ಸ್ಮಾರ್ಟ್‌ ಫೋನ್‌, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್‌ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಜೊತೆಗೆ, ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮಾಹಿತಿ,…

Read More

ಬಿಎಲ್ಡಿಇ ಸಂಸ್ಥೆಯಲ್ಲಿ ದೇಶದಲ್ಲಿಯೇ ಪ್ರಥಮವಾದ ಜಿರಿಯಾಟ್ರಿಕ್ ಫಾರ್ಮಾಸ್ಯೂಟಿಕಲ್ ಕೇರ್ ಪ್ರ್ಯಾಕ್ಟೀಸ್ ಕೋರ್ಸ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿ.ಫಾರ್ಮಾ ಕೋರ್ಸು ಮುಗಿಸಿರುವ ವಿದ್ಯಾರ್ಥಿಗಳಿಗಾಗಿ ಹಿರಿಯ ನಾಗರಿಕರ ವೃದ್ದಾಪ್ಯ ಕಾಯಿಲೆಗಳಗೆ ಔಷಧೋಪಚಾರ ಮತ್ತು ಆರೈಕೆ ಕುರಿತು ತರಬೇತಿ ನೀಡುವ ಹಾಗೂ ದೇಶದಲ್ಲಿಯೇ ಪ್ರಥಮವಾದ ಜಿರಿಯಾಟ್ರಿಕ್ ಫಾರ್ಮಾಸ್ಯೂಟಿಕಲ್ ಕೇರ್ ಪ್ರ್ಯಾಕ್ಟೀಸ್(Geriatric Pharmaceutical Care Practice – GPCP) ಕೋರ್ಸನ್ನು ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ.ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ.ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ, ಸಮಾಜ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹಿರಿಯ ನಾಗರಿಕರ ವಿಭಾಗ, ಎನ್. ಸಿ. ಡಿ. ಎ. ಪಿ ಮತ್ತು ಪಿಎಂಯು ಉಪನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಎಚ್. ಸಿ. ಶ್ರೀಧರ ಚನ್ನಕೇಶವ ರಂಗಾ ರೆಡ್ಡಿ ವರ್ಚ್ಯೂವಲ್ ಆಗಿ ಉದ್ಘಾಟಿಸಿದರು. ಇತ್ತ ನಗರದಲ್ಲಿ ಫಾರ್ಮಸಿ ಕಾಲೇಜಿನ ನಿರ್ದೇಶಕ ಡಾ. ಆರ್. ಬಿ. ಕೊಟ್ನಾಳ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿಎಸ್ ಆಯುರ್ವೇದ ಮಹಾವಿದ್ಯಾಲಯ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಏಪ್ರಿಲ್ 26 ರಂದು ಶನಿವಾರ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ(BMD Camp) ನಡೆಯಲಿದೆ.ಈ ಶಿಬಿರದಲ್ಲಿ ಕೀಲುಗಳಲ್ಲಿ ನೋವು, ಕೈ-ಕಾಲು ನೋವು, ಬೆನ್ನು ನೋವು, ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ(ಆಸ್ಟಿಯೊಪೊರೊಸಿಸ್) ಲಕ್ಷಣಗಳು ಇರುವವರಿಗೆ ಮೂಳೆಗಳ ಸಾಂದ್ರತೆ ಮಾಪನ ಯಂತ್ರದಿಂದ(BMD Test) ಉಚಿತ ತಪಾಸಣೆ ಮಾಡಲಾಗುವುದು.35 ರಿಂದ 65 ವರ್ಷದೊಳಗಿನ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7975160825 ಮತ್ತು 9513397413 ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿದೆ.ಪಹಲ್ಗಾಮನಲ್ಲಿ ನಡೆದ ನರಮೇಧ ಖಂಡಿಸಿ ಬುಧವಾರ ನಗರದಲ್ಲಿ ಎಬಿವಿಪಿ ಸಭೆ ನಡೆಸಿ, ಉಗ್ರರನ್ನು ಕೂಡಲೇ ಬಂಧಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಾಳಿ, ನಗರ ಸಹ ಕಾರ್ಯದರ್ಶಿ ಅಭಿಷೇಕ ಬಡಿಗೇರ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಸುರೇಖಾ ಕುಲಕರ್ಣಿ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯ, ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.ಈ ಸಂದರ್ಭದಲ್ಲಿ ಸಂದೀಪ ಅರಳಗುಂಡಿ, ಚೇತನ ಕೋರವಾರ, ಪವಿತ್ರಾ, ಸಹನಾ, ಐಶ್ವರ್ಯ, ನೇಸರ ಬಜಂತ್ರಿ, ಸಂಜೀವ, ಕಾರ್ತಿಕ, ಪೂಜನ್ನ,…

Read More

ಯಾಳವಾರ ಗ್ರಾಪಂ ವ್ಯಾಪ್ತಿಯ ನಾಗರಾಳ ಡೋಣ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಮೊದಲ ಪುಟ ದೇವರಹಿಪ್ಪರಗಿ: ನಾಗರಾಳ ಡೋಣ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಸ್ಥಳವನ್ನು ಬದಲಾಯಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪಿಡಿಓ ಮಲ್ಲಿನಾಥ ಮಸಳಿ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ಯಾಳವಾರ ಗ್ರಾಮ ಪಂಚಾಯಿತಿಗೆ ಬುಧವಾರ ತೆರಳಿದ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಟ್ಯಾಂಕ್ ನಿರ್ಮಾಣದ ಕುರಿತು ಗಮನ ಸೆಳೆದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ನಾಗರಾಳಡೋಣ ಪುನರ‍್ವಸತಿ ಕೇಂದ್ರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಈ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸುವುದರಿಂದ ಸುತ್ತಮುತ್ತಲಿನ ಮನೆಗಳು ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತದೆ. ಜೊತೆಗೆ ಟ್ಯಾಂಕ್ ತುಂಬಿ ಹೊರಹೋಗುವ ಹೆಚ್ಚಾದ ನೀರಿನಿಂದ ಸ್ಥಳೀಯ ಪ್ರದೇಶ ರಾಡಿಮಯವಾಗಲಿದೆ. ಅಲ್ಲದೇ ಸುತ್ತಲಿನ ಜಮೀನುಗಳಲ್ಲಿ ನೀರು ನಿಂತು ಬೆಳೆಹಾನಿ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಗ್ರಾಮಸ್ಥರು ಈ ಕುರಿತು ಮನವಿ ಮಾಡಿದ್ದು, ಕೂಡಲೇ ಟ್ಯಾಂಕ್ ನಿರ್ಮಾಣದ…

Read More

ದೇವರಹಿಪ್ಪರಗಿ ತಾಲ್ಲೂಕಿನ ಕೋರವಾರ ಹಾಗೂ ವರ್ಕಾನಳ್ಳಿ ಗ್ರಾಮದ ರೈತರಿಗೆ ಬೆಳೆವಿಮೆ ವಿತರಣೆಯಲ್ಲಿ ಮೋಸ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕೋರವಾರ ಹಾಗೂ ವರ್ಕಾನಳ್ಳಿ ಗ್ರಾಮಗಳ ರೈತರಿಗೆ ಬೆಳೆವಿಮೆ ವಿತರಣೆಯಲ್ಲಿ ಮೋಸ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಪದಾಧಿಕಾರಿಗಳು ಉಪತಹಶೀಲ್ದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಬುಧವಾರ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಪದಾಧಿಕಾರಿಗಳು ವಿಮೆಯ ಮೋಸದ ಕುರಿತು ಗಮನ ಸೆಳೆದರು.ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಆಯ್.ಎಸ್.ಕುಳೇಕುಮಟಗಿ ಮಾತನಾಡಿ, ಕೋರವಾರ ವ್ಯಾಪ್ತಿಯಲ್ಲಿ ೧೨೦೦ರಿಂದ ೧೫೦೦ ರಷ್ಟು ರೈತರು ಬೆಳೆ ವಿಮೆ ತುಂಬಿದ್ದು, ಇವರ ಪೈಕಿ ಕೇವಲ ೬೨ ರೈತರಿಗೆ ಮಾತ್ರ ವಿಮೆ ಬಿಡುಗಡೆಯ ಮಾಹಿತಿಯಿದೆ. ಇದರಲ್ಲಿ ೨೦ ಜನ ರೈತರ ಖಾತೆಗೆ ಹಣ ಜಮೆಯಾಗದೇ ಕೇವಲ ಶಿವರಾಜ ಸಂಗಪ್ಪ ಅಮರಖೇಡ ಎಂಬುವವರ ಒಬ್ಬರ ಖಾತೆಗೆ ಹಣ ಜಮೆ ಮಾಡಲಾಗಿದೆ. ಇದರಿಂದ…

Read More

ವಕ್ಫ್ ನೆಪದಲ್ಲಿ ನಡೆವ ಹೋರಾಟದ ಸಮಯದಲ್ಲಿ ಹಿಂದೂಗಳ ಆಸ್ತಿಗಳಿಗೆ ಹಾನಿಯಾದರೆ, ಕರೆ ನೀಡಿದ ಮುಖಂಡರು & ಹೋರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಶಾಸಕ ಯತ್ನಾಳ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ನನ್ನ ವಿರುದ್ಧ ಅಥವಾ ವಕ್ಫ್ ನೆಪದಲ್ಲಿ ನಡೆಯುವ ಹೋರಾಟದ ಸಮಯದಲ್ಲಿ ಆಕಸ್ಮಾತ ಹಿಂದೂಗಳ ಆಸ್ತಿ-ಪಾಸ್ತಿಗಳಿಗೆ ಹಾನಿಯಾದರೆ, ಹೋರಾಟಕ್ಕೆ ಕರೆ ನೀಡಿದ ಮುಖಂಡರುಗಳು ಹಾಗೂ ಹೋರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸುವವಂತೆ ಒತ್ತಾಯಿಸಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು, ಐಜಿಪಿ ಉತ್ತರ ವಲಯ ಬೆಳಗಾವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಂಗಳವಾರ ಪತ್ರ ಬರೆದಿದ್ದಾರೆ.ಇದೇ ಬರುವ 28-4-2025 ರಂದು ಕೆಲವು ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರು ನನ್ನ ವಿರುದ್ಧ ವಿಜಯಪುರ ನಗರದಲ್ಲಿ ಹೋರಾಟಕ್ಕೆ ಕರೆ ನೀಡಿದ್ದು, ಅಲ್ಲದೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧವಾಗಿಯೂ ಹೋರಾಟಕ್ಕೆ ಸಜ್ಜಾಗಿರುವುದು ತಿಳಿದುಬಂದಿದೆ. ಈ ಹೋರಾಟದಲ್ಲಿ ಭಾಗವಹಿಸಿದವರಿಂದ, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ ಅಥವಾ ಹಿಂದೂಗಳ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮ್‌ನ ಬೈರಸನ್ ವ್ಯಾಲಿಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಧಾಳಿಯು ಅತ್ಯಂತ ಹೇಯ, ಅಮಾನವೀಯ ಕ್ರತ್ಯವಾಗಿದ್ದು ಇದನ್ನು ಕಠೀಣ ಶಬ್ದಗಳ ಮೂಲಕ ಖಂಡಿಸುವುದಾಗಿ ಶಾಸಕ ಸಿದ್ದು ಸವದಿ ಹೇಳಿದ್ದಾರೆ.ಹೆಸರು, ಧರ್ಮವನ್ನು ಖಚಿತಪಡಿಸಿಕೊಂಡು ಹಿಂದುಗಳನ್ನೇ ಗುರಿಯಾಗಿಸಿ ನಡೆಸಿರುವುದು ಅತ್ಯಂತ ಕ್ರೂರವಾಗಿದ್ದು ಇದಕ್ಕೆ ತಕ್ಕ ಶಿಕ್ಷೆಯನ್ನು ಉಗ್ರರು ಅನುಭವಿಸಲೇ ಬೇಕಾಗುತ್ತದೆ. ಶಾಂತವಾಗಿ ಅಭಿವೃದ್ದಿ ಪಥದತ್ತ ಹೊರಟಿದ್ದ ಕಾಶ್ಮೀರ ಪ್ರವಾಸಿಗರ ಹೆಚ್ಚಳದಿಂದ ಅಲ್ಲಿನ ಜನಜೀವನ ಸುಧಾರಣೆಯತ್ತ ದಾಪುಗಾಲಿಟ್ಟಿತ್ತು, ಇದನ್ನು ಸಹಿಸದ ಉಗ್ರರು ಮತ್ತೊಮ್ಮೆ ನೀಚ ಕೃತ್ಯ ಎಸಗಿದ್ದು ಇದನ್ನು ಪ್ರತಿಯೊಬ್ಬರು ಪಕ್ಷ, ಜಾತಿ, ಧರ್ಮ ಬದಿಗಿಟ್ಟು ಖಂಡಿಸಬೇಕು, ಉಗ್ರರಿಗೆ ಅತ್ಯಂತ ಕಠೀಣ ಶಿಕ್ಷಯಾಗಬೇಕು. ಅವರನ್ನು ಹುಡುಕಿ, ಹುಡುಕಿ ಹೊಡೆಯುವ ಕಾರ್ಯ ಕೇಂದ್ರದ ನರೇಂದ್ರ ಮೋದಿ ಸರಕಾರ ಮಾಡುತ್ತದೆ ಎಂಬ ಭರವಸೆ ಇದೆ ಎಂದರು.

Read More

ಬೆದರಿಕೆ ನಿರ್ಲಕ್ಷಿಸಿದ ಭದ್ರತಾ ಪಡೆಗಳು | ಗುಪ್ತಚರ ಸಂಸ್ಥೆಗಳ ಮೂಲಗಳ ಮಾಹಿತಿ | ಪಿಓಕೆ ಕಮಾಂಡರ್ಗಳಿಂದ ಉಗ್ರರಿಗೆ ನಿರ್ದೇಶನ ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಅದರಲ್ಲೂ ಮೃತಪಟ್ಟವರು ಹೆಚ್ಚಿನವರು ವಿವಿಧ ರಾಜ್ಯಗಳ ಪ್ರವಾಸಿಗರು. ಇದು ಗಂಭೀರ ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.ಗುಪ್ತಚರ ಸಂಸ್ಥೆಯ ಮೂಲವೊಂದರ ಪ್ರಕಾರ, ಘಟನೆಗೆ ಕೆಲವು ದಿನಗಳ ಮುನ್ನ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಭಯೋತ್ಪಾದಕನೊಬ್ಬ ದಾಳಿಯ ಬಗ್ಗೆ ಸುಳಿವು ನೀಡುವ ಸೂಚನೆ ನೀಡಿದ್ದನು. ಆದರೆ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ಅದರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದವು. ಇದು ಭೀಕರ ದುರಂತಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ.ಪಿಒಕೆ ಮತ್ತು ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಅಂತರರಾಷ್ಟ್ರೀಯ ಕಮಾಂಡರ್ಗಳು ಘಟನೆ ವೇಳೆ ಉಗ್ರರಿಗೆ ನಿರ್ದೇಶನಗಳನ್ನು ನೀಡುತ್ತಿದ್ದರು ಎಂದು ವರದಿಯಾಗಿದೆ. ದಾಳಿಯಲ್ಲಿ ಭಾಗಿಯಾಗಿರುವ ಉಗ್ರಗಾಮಿಗಳು ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ಉತ್ತಮ ತರಬೇತಿ ಪಡೆದಿದ್ದರು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಗುರು ಮಹಾಂತೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಅಮೃತ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ಪುರಾಣ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಜರುಗಿದ ಗುರುರಕ್ಷೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ೭೫ ಪೌರಕಾರ್ಮಿಕರನ್ನು ಶ್ರೀಮಠದಿಂದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಮಡಿವಾಳಯ್ಯ ಶಾಸೀಜಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಐ. ರೇವೂರಕರ ಇತರರು ಇದ್ದರು.

Read More