Author: editor.udayarashmi@gmail.com

ವಿಜಯಪುರ ಅಭಿವೃದ್ಧಿ ಪ್ರಾಧಿಕಾರಕ್ಕೆ ಐವರು ನಾಮನಿರ್ದೇಶಿತ ಸದಸ್ಯರ ನೇಮಕ | ವಿಡಿಎ ಅಧ್ಯಕ್ಷರ ನೇತೃತ್ವದಲ್ಲಿ ಪದಗ್ರಹಣ ಸಮಾರಂಭ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ, ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯು ಪ್ರಾಧಿಕಾರಕ್ಕೆ ಐವರು ನೂತನ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿದೆ.ನೂತನ ನಾಮನಿರ್ದೇಶಿತ ಸದಸ್ಯರಾಗಿ ರಮೇಶ್ ಶ್ರೀಶೈಲ್ ಆಳೂರ, ಅಬ್ದುಲ್ ಖಾದರ್ ಖಾದಿಮ, ರಮೇಶ್ ಬಾಬು ಲಮಾಣಿ, ಜಯಶ್ರೀ ಹರಿಶ್ಚಂದ ಭಾರತೆ ಹಾಗೂ ಆನಂದ ದುಂಡಪ್ಪ ಕುಸೂರ ಅವರನ್ನು ನೇಮಕ ಮಾಡಲಾಗಿದೆ.ನೂತನ ಸದಸ್ಯರ ನೇಮಕದಿಂದ ವಿಜಯಪುರ ನಗರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ನಗರದ ರಸ್ತೆ, ಒಳಚರಂಡಿ, ಬೀದಿದೀಪ, ಉದ್ಯಾನವನಗಳ ಅಭಿವೃದ್ಧಿ, ಸಂಚಾರ ವ್ಯವಸ್ಥೆ ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯ ಹಾಗೂ ನಾಗರಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ನೂತನ ಸದಸ್ಯರು ತಿಳಿಸಿದ್ದಾರೆ.ಶುಕ್ರವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಜೋಡೋ ಯುವ ಸಂಘಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಥಾಪಿಸುವ ಮೂಲಕ ಯುವಜನರಲ್ಲಿ ಕ್ರೀಡೆ, ಫಿಟ್‌ನೆಸ್, ಆರೋಗ್ಯಕರ ಜೀವನಶೈಲಿ ಹಾಗೂ ನಾಯಕತ್ವದ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ.ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ ೬,೦೦೦ ಜನಸಂಖ್ಯೆಗೆ ಒಂದು ಸಂಘ, ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ ಸರಾಸರಿ ೪,೦೦೦ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ, ಪ್ರತಿ ಪಟ್ಟಣ ಪಂಚಾಯಿತಿ (ಟಿ.ಪಿ.) ವ್ಯಾಪ್ತಿಯಲ್ಲಿ ಸರಾಸರಿ ೪,೦೦೦ ಜನಸಂಖ್ಯೆಗೆ, ಪಟ್ಟಣ ಪುರಸಭೆ (ಟಿ.ಎಂ.ಸಿ.) ವ್ಯಾಪ್ತಿಯಲ್ಲಿ ೬,೦೦೦ ಜನಸಂಖ್ಯೆಗೆ, ನಗರಸಭೆ (ಸಿ.ಎಂ.ಸಿ.) ವ್ಯಾಪ್ತಿಯಲ್ಲಿ ೮,೦೦೦ ಜನಸಂಖ್ಯೆಗೆ ಹಾಗೂ ಮಹಾನಗರ ಪಾಲಿಕೆ ಮತ್ತು ಜಿ.ಬಿ.ಎ. ವ್ಯಾಪ್ತಿಯಲ್ಲಿ ಸರಾಸರಿ ೧೦,೦೦೦ ಜನಸಂಖ್ಯೆಗೆ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲು ಅವಕಾಶವಿದೆ.ಜಿಲ್ಲೆಯಾದ್ಯಂತ ಒಟ್ಟು ೧೦,೦೦೦ ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಸಂಘಗಳ ಮೂಲಕ ೫೦ ಲಕ್ಷಕ್ಕೂ ಅಧಿಕ ಯುವಜನರನ್ನು…

Read More

ಲೇಖನ- ಪ್ರಶಾಂತ ಚಿದಂಬರ ಕುಲಕರ್ಣಿ.ಗಣಿತ ಉಪನ್ಯಾಸಕರುಸಿಂದಗಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೆಲವು ಪ್ರವಾಸಗಳು ನಮ್ಮನ್ನು ಹೊಸ ಸ್ಥಳಗಳಿಗೆ ಕರೆದೊಯ್ಯುತ್ತವೆ. ಕೆಲವು ಪ್ರವಾಸಗಳು ಹೊಸ ವ್ಯಕ್ತಿಗಳನ್ನು ಪರಿಚಯಿಸುತ್ತವೆ. ಆದರೆ ಅಪರೂಪದ ಕೆಲವು ಪಯಣಗಳು ನಮ್ಮೊಳಗಿನ ಮನುಷ್ಯನನ್ನೇ ಹೊಸದಾಗಿ ಪರಿಚಯಿಸುತ್ತವೆ. ಅಂತಹ ಒಂದು ಅನುಭವ ಇತ್ತೀಚೆಗೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ನನಗೆ ದೊರೆಯಿತು. ಬಿ.ಇಡಿ. ವಿದ್ಯಾರ್ಥಿಗಳ ಪಾಠ ವೀಕ್ಷಣೆಯ ನಿಮಿತ್ತ ದೇವರ ಹಿಪ್ಪರಗಿಗೆ ತೆರಳಿದ್ದೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿದ ನಂತರ, ಅಲ್ಲಿಂದ ನೇರವಾಗಿ ಹಿಂದಿರುಗಲು ಮನಸ್ಸು ಒಪ್ಪಲಿಲ್ಲ. ನನ್ನೊಳಗಿನ ಶಿಕ್ಷಕನಿಗಿಂತ ಲೇಖಕ ಹೆಚ್ಚು ಜಾಗೃತನಾಗಿದ್ದ. ನನ್ನ ಹೆಜ್ಜೆಗಳು ಸಹಜವಾಗಿಯೇ ಶರಣ ಮಡಿವಾಳ ಮಾಚಿದೇವರ ಸ್ಮಾರಕದತ್ತ ಸಾಗಿದವು.ದೂರದಿಂದಲೇ ಕಣ್ಣಿಗೆ ಬೀಳುವ ದೇವಾಲಯದ ಭವ್ಯ ಗೋಪುರ, ಅಚ್ಚುಕಟ್ಟಾಗಿ ಸಂರಕ್ಷಿಸಲ್ಪಟ್ಟ ಆವರಣ, ಗಂಭೀರವಾಗಿ ನಿಂತ ದೀಪಸ್ತಂಭ ಮತ್ತು ಮೌನವನ್ನು ಸಂಗೀತವನ್ನಾಗಿಸಿಕೊಂಡ ವಾತಾವರಣ ಇವೆಲ್ಲವೂ ಮನಸ್ಸಿಗೆ ಹೇಳಲಾರದ ನೆಮ್ಮದಿಯನ್ನು ನೀಡಿದವು. ದೇವಾಲಯದ ಪ್ರವೇಶ ದ್ವಾರದಲ್ಲಿ ನಿಂತಾಗ ಅನಿಸಿತು ನಾನು ಕೇವಲ ಒಂದು ದೇವಾಲಯದೊಳಗೆ ಪ್ರವೇಶಿಸುತ್ತಿಲ್ಲ ಎಂಟು ಶತಮಾನಗಳ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮನುಷ್ಯ ಸಮಾಜ ಜೀವಿ ಯಾವುದೇ ವ್ಯಕ್ತಿಯಾದರೂ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸುತ್ತಿರಬೇಕು. ರಾಜಕೀಯ, ಕೌಟುಂಬಿಕ, ಧಾರ್ಮಿಕ, ಸಾಮುದಾಯಿಕ ಹೀಗೆ ಹತ್ತು ಹಲವು ವಿಷಯಗಳಲ್ಲಿ ಆತನ ಗಮನ ಸೆಳೆಯುವ ವಿಷಯಗಳನ್ನು ಮಾತ್ರವಲ್ಲದೆ ಬದುಕಿಗೆ ಹತ್ತಿರವಾದ ವಿಷಯಗಳನ್ನು ಆತ ಅರಿಯುವ ಅವಶ್ಯಕತೆ ಇದ್ದೇ ಇದೆ. ಇದು ಆತ ಬದುಕನ್ನು ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗಿ ಬದುಕಲು ಸಹಾಯಮಾಡುತ್ತದೆ.ಕೊರೋನಾ ಪ್ಯಾಂಡಮಿಕ್ ನಂತರ ಮಕ್ಕಳ ನಡವಳಿಕೆಯಲ್ಲಿನ ವಿಪರೀತ ಬದಲಾವಣೆಗಳನ್ನು ನಾವು ಗಮನಿಸಿ ನೋಡಿದಾಗ ಮಕ್ಕಳು ಬಹುತೇಕ ಅಂತರ್ಮುಖಿಗಳಾಗಿದ್ದು ತಾವಾಯಿತು, ತಮ್ಮ ಕೈಯಲ್ಲಿನ ಎಲೆಕ್ಟ್ರಾನಿಕ್ ಗ್ಯಾಜೆಟ್ ಆಯಿತು ಎಂಬಂತೆ ಬದುಕುತ್ತಿದ್ದಾರೆ. ಒಂದೇ ಕೋಣೆಯಲ್ಲಿ ಹಲವು ಮಕ್ಕಳು ಕುಳಿತಿದ್ದರೂ ಅವರ ಕೈಯಲ್ಲಿ ಮೊಬೈಲ್ ಇದ್ದಾಗ ಪರಸ್ಪರ ಸಂವಹನಕ್ಕೆ ದಾರಿ ಇಲ್ಲದಂತೆ ಬಾಳುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಮಕ್ಕಳು ತಮ್ಮ ಕೋಣೆಯನ್ನು ಸೇರಿ ತಮ್ಮ ಮೊಬೈಲಿನೊಂದಿಗೆ ಭ್ರಮಾ ಲೋಕದಲ್ಲಿ ವಿಹರಿಸುತ್ತಿದ್ದಾರೆ ಇದು ಕೇವಲ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತಿಲ್ಲ, ಪಾಲಕರು ಕೂಡ…

Read More

ಲೇಖನ-ಮಂಡ್ಯ.ಮ.ನಾ.ಉಡುಪ.ಮಂಡ್ಯ ಉದಯರಶ್ಮಿ ದಿನಪತ್ರಿಕೆ ಇಂದು ನಾವು ಬದುಕುತ್ತಿರುವುದು ವಿಚಿತ್ರವಾದ ದ್ವಂದ್ವದ ಕಾಲದಲ್ಲಿ. ಹೊರಗಿನಿಂದ ನೋಡಿದರೆ ಎಲ್ಲವೂ ಅಭಿವೃದ್ಧಿ, ಪ್ರಗತಿ, ಐಷಾರಾಮ. ಒಳಗಿನಿಂದ ನೋಡಿದರೆ ಎಲ್ಲವೂ ಖಾಲಿ, ಗೊಂದಲ ಮತ್ತು ಆಳವಾದ ಒಂಟಿತನ. ಇದು ಅಭಿವೃದ್ಧಿಯೋ ಅಥವಾ ಅವನತಿಯೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಾದ ಸ್ಥಿತಿ ನಮ್ಮದು.ಪ್ರಕೃತಿಯ ಮೇಲೆ ನಡೆಸಿದ ಮೊದಲ ದಾಳಿನಮ್ಮ ಅಭಿವೃದ್ಧಿಯ ಮೊದಲ ಬಲಿಪಶು ಪ್ರಕೃತಿಯೇ. ನಗರ ಬೆಳೆಯಬೇಕೆಂದರೆ ಕೆರೆ ಬೇಕು, ಕೆರೆ ಬೆಳೆಯಬೇಕೆಂದರೆ ಕಾಲುವೆ ಬೇಕು ಎಂದು ನಮ್ಮ ಹಿರಿಯರು ನಂಬಿದ್ದರು. ನಾವು ಅದಕ್ಕೆ ತದ್ವಿರುದ್ಧವಾಗಿ ಯೋಚಿಸಿದೆವು. ಕೆರೆಗಳನ್ನೇ ಮುಚ್ಚಿ ಬಡಾವಣೆ ಮಾಡಿದೆವು, ಕಾಲುವೆಗಳ ಮೇಲೆ ರಸ್ತೆ ಹಾಕಿದೆವು. ನೀರು ಹರಿಯಬೇಕಿದ್ದ ಜಾಗದಲ್ಲಿ ಕಾಂಕ್ರೀಟ್ ಹರಿಯಿತು.ಇದರ ಪರಿಣಾಮ ನೇರವಾಗಿ ಕಾಣುವುದು ನಮ್ಮ ಮನೆಯ ಅಂಗಳದಲ್ಲಿ. ಒಂದು ಕಾಲದಲ್ಲಿ ಬೆಳಗ್ಗೆ ಎದ್ದರೆ ಗುಬ್ಬಚ್ಚಿಗಳ ಚಿಲಿಪಿಲಿ, ಮೈನಾಗಳ ಕಲರವ, ಗೀಜಗ ಹಕ್ಕಿಯ ಗೂಡು ಕಟ್ಟುವ ಪರಿಶ್ರಮ ಸಾಮಾನ್ಯವಾಗಿತ್ತು. ಇಂದು ಆ ಶಬ್ದಗಳ ಜಾಗವನ್ನು ವಾಹನಗಳ ಹಾರ್ನ್, ಕಟ್ಟಡ ಕಟ್ಟುವ ಯಂತ್ರಗಳ ಸದ್ದು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಾನವ ಜನಾಂಗದ ಇತಿಹಾಸ ಪ್ರಾರಂಭವಾಗುವುದೇ ಬುಡಕಟ್ಟು ಜನರಿಂದ. ಮಾನವನ ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲವಾಗಿದೆ ಎಂದು ಬಸವ ತತ್ವ ಚಿಂತಕ ಶರಣ ಜಗದೀಶ ಕಲಬುರ್ಗಿ ಹೇಳಿದರು.ದೇವರಹಿಪ್ಪರಗಿ ಪಟ್ಟಣದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಜಾನಪದ ಪರಿಷತ್ ವಿಜಯಪೂರ ಜಿಲ್ಲಾ ಘಟಕ ಹಾಗೂ ದೇವರಹಿಪ್ಪರಗಿ ತಾಲೂಕು ಘಟಕ ಮತ್ತು ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಬುಡಕಟ್ಟು ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬುಡಕಟ್ಟು ಜನರು ಕಾಲ ಬದಲಾದರೂ ನಾಗರಿಕತೆ ಯತ್ತ ಮುಖ ಮಾಡದೆ ಬದುಕುತ್ತಿರುವುದು ಕಳವಳದ ಸಂಗತಿಯಾಗಿದೆ. ಇನ್ನಾದರೂ ವೈಚಾರಿಕತೆಯ ಬದುಕಿನತ್ತ ಮುಖ ಮಾಡಲಿ ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಪ್ರತಿಯೊಂದು ದೇಶದ ಜಾನಪದ ಸಂಸ್ಕೃತಿಯು ಬುಡಕಟ್ಟು ನೆಲೆಯಿಂದ ಅನಾವರಣಗೊಂಡಿದೆ. ಬುಡಕಟ್ಟು ತಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಬುಡಕಟ್ಟು ಕಲಾವಿದರು ನಮ್ಮ ದೇಶದ…

Read More

ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಸಚಿವ ಡಾ. ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಬರ ಪರಸ್ಥಿತಿ ಎದುರಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸರಕಾರ ರೈತರ ಪರವಾಗಿ ನಿಲ್ಲಲಿದೆ. ಶೇ.೧೭ ರಷ್ಟು ಬಿತ್ತನೆಯಾಗಿದೆ. ಬಹುತೇಕ ಕಡೆ ಬಿತ್ತನೆಯೇ ಆಗಿಲ್ಲ. ರೈತರ ಈ ನೈಜ ಸ್ಥಿತಿಯನ್ನು ಖುದ್ದು ವೀಕ್ಷಿಸಲಾಗಿದೆ. ಸಮಗ್ರ ಹಾಗೂ ವೈಜ್ಞಾನಿಕ ವರದಿ ಸಲ್ಲಿಸಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರು, ಸಕಾರಾತ್ಮಕ ಭರವಸೆ ನೀಡಿದರು.ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಬೆಳಿಗ್ಗೆ ಬರ ಅವಲೋಕನಾ ಪ್ರವಾಸ ಕೈಗೊಂಡ ಸಚಿವರು, ಹಿಟ್ಟಿನಹಳ್ಳಿ,ಮದಭಾವಿ,ಶಿವಣಗಿ, ದೇವರ ಹಿಪ್ಪರಗಿ,ಬಮ್ಮನಜೋಗಿ,ಕನ್ನೊಳಿ ಸೇರಿದಂತೆ ವಿವಿಧ ಪ್ರದೇಶಗಳ ವ್ಯಾಪ್ತಿಯ ಕೃಷಿಕರ ತಾಕುಗಳಿಗೆ ತೆರಳಿ ಹತ್ತಿ ,ಕಬ್ಬು ಸೂರ್ಯಕಾಂತಿ,ತೊಗರಿ ಸೇರಿದಂತೆ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದ ಬಳಿಕ ಅವರು ಮಾತನಾಡಿದರು. ಬಿತ್ತಿದ ಬೆಳೆಗಳು…

Read More

ರೈತರ ಸಂಕಷ್ಟಕ್ಕೆ ಸ್ಪಂದಿಸಿ ಶೀಘ್ರ ಪರಿಹಾರ ಕ್ರಮದ ಭರವಸೆ ನೀಡಿದ ಸಚಿವ ಎಂ.ಬಿ. ಪಾಟೀಲ್ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲೆಯಾದ್ಯಂತ ಎದುರಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಪರಿಸ್ಥಿತಿ ಖುದ್ದು ವೀಕ್ಷಿಸಲು ಭಾನುವಾರ ಭೇಟಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ನೆರವು ಒದಗಿಸುವ ಸಕಾರಾತ್ಮಕ ಭರವಸೆ ನೀಡಿದ್ದಾರೆ. ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರ ಅವಲೋಕನಾ ಪ್ರವಾಸ ಕೈಗೊಂಡ ಸಚಿವರು, ಹಿಟ್ಟಿನಹಳ್ಳಿ ವ್ಯಾಪ್ತಿಯ ಕೃಷಿಕರ ತಾಕುಗಳಿಗೆ ತೆರಳಿ ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದರು.​ಮಳೆ ಅಭಾವದಿಂದಾಗಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಬಿತ್ತನೆ ಮಾಡಿದ ಪೈರು ಒಣಗುತ್ತಿರುವುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಸಚಿವರು, ಸ್ಥಳದಲ್ಲಿದ್ದ ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಬೆಳೆ ಹಾನಿ ಸಮಗ್ರ ಮಾಹಿತಿ ಪಡೆದುಕೊಂಡರು.​ರೈತರ ಅಹವಾಲುಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಸಚಿವ ಡಾ. ಎಂ.ಬಿ. ಪಾಟೀಲ್…

Read More

ವಿಜಯಪುರದಲ್ಲಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂಗಾರು ಮಳೆ ಕೊರತೆಯಿಂದಾಗಿ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಗರದಲ್ಲಿ ಅಗತ್ಯ ಕುಡಿಯುವ ನೀರನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಂಡು ನಿಯಮಿತ ತೆರಿಗೆ ವಸೂಲಿ ಹಾಗೂ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಭಾನುವಾರ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಕ್ಕೆ ಸರಬರಾಜು ಮಾಡುವ ಕುಡಿಯುವ ನೀರು ಸ್ವಚ್ಛ ಹಾಗೂ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಮುಂಗಾರು ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಅಗತ್ಯ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.ಕುಡಿಯುವ ನೀರು ಸಮಸ್ಯೆ ಉಲ್ಬಣಿಸಬಾರದು. ಅದಕ್ಕೆ ಅಗತ್ಯ…

Read More