Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕ್ರಾಂತಿಕಾರಕ ಕವಿ ಸಾಹಿತಿ ಡಾ.ಬುದ್ದಣ್ಣ ಹಿಂಗಮಿರೆ

ಎಸ್ಟಿ (ನಾಯಕ) ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ

ಸುಡುವ ಸೂರ್ಯನಿಗೊಂದು ಪತ್ರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಕ್ಕಳೇ ಪ್ರಭುದ್ದ ಭಾರತದ ಆಸ್ತಿ :ಪಿಎಸೈ ಮಹೇಶ ಸಂಕ
(ರಾಜ್ಯ ) ಜಿಲ್ಲೆ

ಮಕ್ಕಳೇ ಪ್ರಭುದ್ದ ಭಾರತದ ಆಸ್ತಿ :ಪಿಎಸೈ ಮಹೇಶ ಸಂಕ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಇಂದಿನ ಮಕ್ಕಳೇ ಶಕ್ತಿ, ಪ್ರಭುದ್ಧ ಭಾರತದ ನಿಜವಾದ ಆಸ್ತಿ. ಅವರಲ್ಲಿ ಅಡಗಿರುವ ಪ್ರತಿಭೆ, ಕನಸುಗಳು ಮತ್ತು ಪರಿಶ್ರಮವೇ ನಾಳೆಯ ದೇಶದ ದಿಕ್ಕನ್ನು ನಿರ್ಧರಿಸುತ್ತವೆ. ಸರಿಯಾದ ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಪ್ರೋತ್ಸಾಹ ದೊರೆತರೆ, ಅವರು ಕೇವಲ ತಮ್ಮ ಭವಿಷ್ಯವನ್ನಷ್ಟೇ ಅಲ್ಲ, ರಾಷ್ಟ್ರದ ಭವಿಷ್ಯವನ್ನೂ ಹೊಳೆಯುವಂತೆ ಮಾಡುತ್ತಾರೆ ಎಂದು ಪಿಎಸೈ ಮಹೇಶ ಸಂಕ ಹೇಳಿದರು.
ನಗರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಯುವ ಬ್ರಿಗೇಡ್ ಆಯೋಜಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ ರ ೧೩೫ ನೇ ಜಯಂತ್ಯೋತ್ಸವದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪುಸ್ತಕ ವಿತರಣೆ ಮಾಡಿ ಅವರು ಮಾತನಾಡಿದರು.
“ಮಕ್ಕಳನ್ನು ಕೇವಲ ಪಾಠಪುಸ್ತಕಗಳಿಗೆ ಸೀಮಿತಗೊಳಿಸದೇ, ಅವರಲ್ಲಿರುವ ಸೃಜನಶೀಲತೆ ಮತ್ತು ಹೊಣೆಗಾರಿಕೆಯನ್ನು ಬೆಳೆಸುವುದು ಅತ್ಯಂತ ಮುಖ್ಯ. ಇಂದಿನ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಿದರೆ, ಪ್ರಭುದ್ಧ ಮತ್ತು ಶಕ್ತಿಶಾಲಿ ಭಾರತ ನಿರ್ಮಾಣ ಸಾಧ್ಯ. ಎಂದು ಹೇಳಿದರು. ಉದ್ಘಾಟಕರಾಗಿ ನಗರ ಪಾಲಿಕೆ ಸದಸ್ಯ ಕುಮಾರ ಗಡಗಿ ಮಾತನಾಡಿ, ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಪಾಲಕರು ಬಿತ್ತಬೇಕು. ಅವರ ಕನಸಿಗೆ ಸಾಕಾರಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಯುವ ಲೇಖಕ ಕಿರಣ ಕಾಳೆ ಡಾ.ಅಂಬೇಡ್ಕರ ನಡೆದು ಬಂದು ಹಾದಿ ಹಾಗೂ ಅವರ ಸಂವಿಧಾನ ಆಶಯಗಳ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಮಲ್ಲಿಕಾರ್ಜುನ ನಾಯ್ಕೋಡಿ ಮಾತನಾಡಿ, ಅಂಬೇಡ್ಕರ ಅವರ ಆಶಯದಂತೆ ನಾವೆಲ್ಲರೂ ಜಾತಿ ಭೇದ ಮರೆತು ಬಾಳಿದರೆ ವಿಶ್ವ ಗುರು ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಪ್ರಶಾಂತ ಕಾಂಬ್ಳೆ, ಮಲಕು ಬ್ಯಾಲ್ಯಾಳ, ಅನೀಲ ಬ್ಯಾಲ್ಯಾಳ, ಶ್ರೀಧರ ಹಾಲ್ಯಾಳ, ಯುವ ಬಿಗ್ರೇಡನ ರಾಜ್ಯಾಧ್ಯಕ್ಷ ವಿರೇಶ ವಾಲಿಕಾರ, ಸಂತೋಷ ಕಾಂಬ್ಳೆ , ಮುತ್ತು ಅಗಸರ, ಸಂತೋಷ ಅಂಜುಟಗಿ ಪ್ರವಿಣ ಕಾಂಬ್ಕೇ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ವಿಜುಗೌಡ ಕಾಳಶೆಟ್ಟಿ ನಿರೂಪಿಸಿದರು.
ಶರದ ವಂದಿಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕ್ರಾಂತಿಕಾರಕ ಕವಿ ಸಾಹಿತಿ ಡಾ.ಬುದ್ದಣ್ಣ ಹಿಂಗಮಿರೆ

ಎಸ್ಟಿ (ನಾಯಕ) ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ

ಸುಡುವ ಸೂರ್ಯನಿಗೊಂದು ಪತ್ರ

ಸರ್ಕಾರದ ಸಾಧನೆಗೆ ಮತದಾರರ ಮನ್ನಣೆ :ಸಚಿವ ಶಿವಾನಂದ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕ್ರಾಂತಿಕಾರಕ ಕವಿ ಸಾಹಿತಿ ಡಾ.ಬುದ್ದಣ್ಣ ಹಿಂಗಮಿರೆ
    In ವಿಶೇಷ ಲೇಖನ
  • ಎಸ್ಟಿ (ನಾಯಕ) ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ಸುಡುವ ಸೂರ್ಯನಿಗೊಂದು ಪತ್ರ
    In ವಿಶೇಷ ಲೇಖನ
  • ಸರ್ಕಾರದ ಸಾಧನೆಗೆ ಮತದಾರರ ಮನ್ನಣೆ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ಮೇ.೨೪ ರಂದು ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
    In (ರಾಜ್ಯ ) ಜಿಲ್ಲೆ
  • ಮಕ್ಕಳೇ ಪ್ರಭುದ್ದ ಭಾರತದ ಆಸ್ತಿ :ಪಿಎಸೈ ಮಹೇಶ ಸಂಕ
    In (ರಾಜ್ಯ ) ಜಿಲ್ಲೆ
  • ಪ.ಬಂಗಾಳದಲ್ಲಿ ಬಿಜೆಪಿ ಗೆಲುವು: ಕಾರ್ಯಕರ್ತರಲ್ಲಿ ಹೆಚ್ಚಿದ ಆತ್ಮವಿಶ್ವಾಸ
    In (ರಾಜ್ಯ ) ಜಿಲ್ಲೆ
  • ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿ ಮಹಾಗುರುಗಳಿಗಿದೆ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳಲ್ಲಿ ಕುಂಠಿತವಾಗುತ್ತಿರುವ ಕ್ರೀಡಾಸಕ್ತಿ :ಬಿರಾದಾರ
    In (ರಾಜ್ಯ ) ಜಿಲ್ಲೆ
  • ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸೇತುಬಂಧ ಸಹಕಾರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.