ಎಕ್ಸಲಂಟ್ ಕಾಲೇಜಿನಲ್ಲಿ ನಡೆದ ಬ್ರಿಡ್ಜ್ಕೋರ್ಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ ಜುನಗೊಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೇತುಬಂಧ ಕಾರ್ಯಕ್ರಮವು ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸನ್ನದ್ದಗೊಳಿಸುತ್ತದೆ. ನಿಮ್ಮ ಬದುಕಿನಲ್ಲಿರುವ ನಿರಾಸೆಯ ಸಂಹಾರವಾಗಿ ಸಾಧನೆಯ ಸಾಕಾರ ಮಾಡಿಸುತ್ತದೆ ಎಂದು ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಸಲಾಗಿದ್ದ ೨೦೨೬-೨೭ ನೇ ಸಾಲಿಗೆ ದಾಖಲಾತಿ ಪಡೆದುಕೊಂಡ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಬ್ರಿಡ್ಜಕೋರ್ಸ ಉದ್ಘಾಟನೆ ಹಾಗೂ ಶಾರದಾಮಾತೆಯ ಪೂಜಾ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು; ಸೇತು ಬಂದ ಕಾರ್ಯಕ್ರಮವು ಇಂದಿನ ಕ್ಷಣಗಳನ್ನು ಮುಂದಿನ ಬದುಕಿನೊಂದಿಗೆ ಬೆಸೆಯುವ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತವಾದ ಅಂತಃಶಕ್ತಿಯನ್ನು ಜಾಗೃತಗೊಳಿಸಿ ವಿಜ್ಞಾನ ವಿಭಾಗದಲ್ಲಿ ಬರುವ ಸವಾಲುಗಳನ್ನು ಎದುರಿಸುವುದಕ್ಕೆ ತಯಾರು ಮಾಡುವ ಗರಡಿ ಮನೆಯಾಗಿದೆ ಎಂದರು.
ಶೈಕ್ಷಣಿಕ ಸಂಯೋಜಕ ಹಾಗೂ ಗಣಿತ ವಿಭಾಗದ ಮುಖ್ಯಸ್ಥ ಮಂಜುನಾಥ ತುಮ್ಮರಮಟ್ಟಿ ಮಾತನಾಡಿದರು.
ಲಾಂಗ್ ಟರ್ಮ ವಿಭಾಗದ ಶೈಕ್ಷಣಿಕ ಸಂಯೋಜಕ ಯಗ್ನೇಶ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರೇವಣಸಿದ್ದಪ್ಪ ರಾಜಾಪೂರ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಭು ರೇಷ್ಮೆ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ ನಿಂಬಿಕಾಯಿ, ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ್, ಹಿಂದಿ ವಿಭಾಗದ ಮುಖ್ಯಸ್ಥೆ ನೇತ್ರಾವತಿ ಕನಮಡಿ ಉಪಸ್ಥಿತರಿದ್ದರು.
ಸೌಜನ್ಯಾ ಚಿಣ್ಣನಗೌಡರ್ ಪ್ರಾರ್ಥಿಸಿದರು, ಆಂಗ್ಲ ಉಪನ್ಯಾಸಕ ಮುಸ್ತಾಕ್ ಮಲಘಾಣ ನಿರೂಪಿಸಿದರು.

