Author: editor.udayarashmi@gmail.com

ದಾಖಲಾತಿ ನೀಡಲು ಕಾರ್ಯದರ್ಶಿ ಮೀನಾಮೇಷ | ಕೋರ್ಟ್ ಮೊರೆಹೋಗಲು ನಿರ್ದೇಶಕ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಅರ್ಹ ಅಂತಿಮ ಮತದಾರರ ಪಟ್ಟಿಯಿಂದ ನನ್ನನ್ನುಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಹುಮತದಿಂದ ನನ್ನನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಕಳುಹಿಸಿದರೂ ನಡವಳಿಯಲ್ಲಿ ಸದಸ್ಯತ್ವ ಸಂಬಂಧ ಪೂರ್ಣವಾಗಿ ಬರೆದಿಲ್ಲ, ಮಧ್ಯದಲ್ಲಿ ಹೆಸರು ಸೇರಿಸಲಾಗಿದೆ ಎಂಬ ಕುಂಟು ನೆಪವೊಡ್ಡಿ ಕಾರ್ಯದರ್ಶಿ ಬಿ.ಎನ್ ನಿಂಗರಾಜುರವರು ನನ್ನನ್ನ ಅನರ್ಹಗೊಳಿಸಲಾಗಿದೆ ಎಂದು ಸೂಚನಾ ಫಲಕದಲ್ಲಿ ಪ್ರಕಟಿಸಿದ್ದಾರೆ ಎಂದು ನಿರ್ದೇಶಕ ಎಂ.ಡಿ. ಮಂಚಯ್ಯ ಆರೋಪ ಮಾಡಿದ್ದಾರೆ.ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು ನಡಾವಳಿ ಅರ್ಜಿ ಭರ್ತಿ ಮಾಡಿರುವವವರು ಕಾರ್ಯದರ್ಶಿಗಳು. ಇದರಲ್ಲಿ ನನ್ನ ತಪ್ಪು ಏನಿದೆ?. ನಡವಳಿಯಲ್ಲಿ ಏನು ತಪ್ಪಾಗಿ ಬರೆಯಲಾಗಿದೆ ಸೇರಿದಂತೆ ಜುಲೈ ನಾಲ್ಕರಂದು ಕಚೇರಿಗೆ ಬಂದು ಚುನಾವಣೆಗೆ ಬೇಕಾದ ಪೂರಕ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲ್ಲೂಕಿನ ಕೋಟ್ಯಾಳ ಗ್ರಾಮದ ಸರ್ಕಾರಿ ಶಾಲೆಯ ನೂತನ, ಸುಸಜ್ಜಿತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದು ಗ್ರಾಮಸ್ತರಲ್ಲಿ ಸಂತಸ ತರಿಸಿದೆ.ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಶನ್‌ ನ ಸಿಎಸ್ಆರ್ ಅನುದಾನದಡಿ, ಸುಮಾರು ₹3.25 ಕೋಟಿ ವೆಚ್ಚದಲ್ಲಿ 7,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಹಾಗೂ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ, 800 ಚದರ ಅಡಿ ವಿಸ್ತೀರ್ಣದ ಹಳೆಯ ಶಾಲಾ ಕಟ್ಟಡಕ್ಕೂ ಪುನಶ್ಚೇತನ ನೀಡಿ, ಸಂಪೂರ್ಣ ಶೈಕ್ಷಣಿಕ ಆವರಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಲ್ಲಿ ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಸ್ಟೇಮ್’ಲ್ಯಾಬ್ ಹಾಗೂ ‘ನಲಿ-ಕಲಿ’ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ.ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಪೂರಕವಾಗಿ 135 ಹೊಸ ಪೀಠೋಪಕರಣಗಳು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ.ಕೋಟ್ಯಾಳದಲ್ಲಿಯೇ…

Read More

ಲೇಖನ- ಡಾ. ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಒಂದು ಇಮೇಲ್, ಒಂದು ಸಭೆ, ಕೆಲವು ನಿಮಿಷಗಳ ಸಂಭಾಷಣೆ.. ನಂತರ ಒಂದು ವಾಕ್ಯ “ನಿಮ್ಮ ಸೇವೆ ಇನ್ನು ಮುಂದೆ ಅಗತ್ಯವಿಲ್ಲ.”ಅಷ್ಟರಲ್ಲೇ ವರ್ಷಗಳ ಪರಿಶ್ರಮ, ಕನಸುಗಳು ಮತ್ತು ಭದ್ರತೆಯ ಭಾವನೆ ಕುಸಿದು ಹೋಗುತ್ತದೆ. ಉದ್ಯೋಗ ಕಳೆದುಕೊಳ್ಳುವುದು ಕೇವಲ ಆದಾಯವನ್ನು ಕಳೆದುಕೊಳ್ಳುವುದಲ್ಲ. ಅದು ಆತ್ಮವಿಶ್ವಾಸಕ್ಕೂ, ಭವಿಷ್ಯದ ಯೋಜನೆಗಳಿಗೂ, ಕುಟುಂಬದ ನೆಮ್ಮದಿಗೂ ದೊಡ್ಡ ಸವಾಲಾಗಬಹುದು.ಆದರೆ ಒಂದು ಸಂಗತಿ ನೆನಪಿರಲಿ. Layoff ನಿಮ್ಮ ಸಾಮರ್ಥ್ಯದ ತೀರ್ಪಲ್ಲ. ಅದು ಕಂಪನಿಯ ವ್ಯವಹಾರಿಕ ನಿರ್ಧಾರ.ಇತಿಹಾಸವನ್ನು ನೋಡಿದರೆ, ಅನೇಕ ಯಶಸ್ವಿ ಉದ್ಯಮಿಗಳು, ಸಂಶೋಧಕರು ಮತ್ತು ನಾಯಕರು ತಮ್ಮ ಬದುಕಿನಲ್ಲಿ ಒಂದು ಹಂತದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ. ಆ ಹಿನ್ನಡೆಯೇ ಅವರನ್ನು ಹೊಸ ದಾರಿಯತ್ತ ಕರೆದೊಯ್ದಿದೆ. ಆದ್ದರಿಂದ, ಈ ಕ್ಷಣವನ್ನು ಅಂತ್ಯವೆಂದು ನೋಡಬೇಡಿ, ಹೊಸ ಆರಂಭವೆಂದು ನೋಡಿ.ನಿಮ್ಮ ನಿಜವಾದ ಸಂಪತ್ತು ಉದ್ಯೋಗವಲ್ಲನಿಮ್ಮ ನಿಜವಾದ ಸಂಪತ್ತು ನಿಮ್ಮ ಕೌಶಲ್ಯ, ಅನುಭವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಕಲಿಯುವ ಮನೋಭಾವ ಮತ್ತು ಶಿಸ್ತು. ಕಂಪನಿಯು ನಿಮ್ಮ…

Read More

ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ | ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಗಣತಿ ನಮೂನೆ ಭರ್ತಿ ಮಾಡುವ ಸಂದರ್ಭ ಮಾಹಿತಿ ದಾಖಲಿಸುವಾಗ ಬಹು ಎಚ್ಚರಿಕೆ ವಹಿಸಬೇಕು. ಪ್ರಸ್ತುತ ಮತದಾರರ ಕುಟುಂಬದ ಮಾಹಿತಿಯನ್ನು ತಪ್ಪಾಗಿ ನಮೂದಿಸದಾಗದಂತೆ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-೨೦೨೬ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.ಮಾಹಿತಿ ನಮೂದಿಸುವಾಗ ಯಾವುದೇ ಅನಗತ್ಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು. ಗಣತಿ ನಮೂನೆಯ ಎರಡನೇ ಕಾಲಂನ ಎರಡನೇ ಪಟ್ಟಿಯಲ್ಲಿ ಕೇವಲ ೨೦೦೨ರ ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನೇ ದಾಖಲಿಸಬೇಕು. ಒಂದು ವೇಳೆ ೨೦೦೨ರ ಮಾಹಿತಿಯು ಲಭ್ಯವಿಲ್ಲದಿದ್ದರೆ ಆ ಕಾಲಂ ಅನ್ನು ಖಾಲಿ ಬಿಡಬೇಕು. ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದರು.ಗಣತಿ ನಮೂನೆಗಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬-೨೭ನೇ ಸಾಲಿನಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ಆದರೆ, ಈ ಸರ್ಕಾರದ ಆದೇಶ ಹೊರಬರುವ ಮುನ್ನವೇ ಕೆಲವು ವಿದ್ಯಾರ್ಥಿಗಳು ಹಣ ಪಾವತಿಸಿ ಬಸ್ ಪಾಸ್ ಪಡೆದಿದ್ದು, ಅಂತಹ ವಿದ್ಯಾರ್ಥಿಗಳಿಗೆ ಅವರು ಪಾವತಿಸಿದ ಮೊತ್ತವನ್ನು ಮರುಪಾವತಿಸಲು ಇದೀಗ ಕ್ರಮ ಕೈಗೊಳ್ಳಲಾಗಿದೆ.​ಈಗಾಗಲೇ ಬಸ್ ಪಾಸ್‌ಗಾಗಿ ಹಣ ಪಾವತಿಸಿರುವ ಅರ್ಹ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಬಸ್ ಪಾಸ್ ಕೌಂಟರ್‌ಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಲಭ್ಯವಿರುವ ಅಧಿಕೃತ ಲಿಂಕ್ ಬಳಸಿ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಮರುಪಾವತಿಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ​ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಸರಿಯಾಗಿ ನಮೂದಿಸಬೇಕಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳ ಸೂಕ್ತ ಪರಿಶೀಲನೆಯ ನಂತರ, ವಿದ್ಯಾರ್ಥಿಗಳು ಪಾವತಿಸಿದ್ದ ಬಸ್ ಪಾಸ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ (ಡಿಬಿಟಿ) ಮಾಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಒಂದು ದಿನದ ಉದ್ಯಮಶೀಲತಾ ಅರಿವು ಕಾರ್ಯಕ್ರಮಜು. ೭ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಉದ್ಯಮಶೀಲತೆ, ಸ್ಥಾಪಿಸಬಹುದಾದ ಉದ್ಯಮಗಳು, ಕೈಗಾರಿಕಾ ಇಲಾಖೆ ಮತ್ತು ಬ್ಯಾಂಕಿನಿಂದ ದೊರೆಯುವ ಸಹಾಯ ಮತ್ತು ಯಶಸ್ವಿ ಉದ್ಯಮದಾರರೊಂದಿಗೆ ಚರ್ಚೆ ಏರ್ಪಡಿಸಲಾಗುವುದು. ಆಸಕ್ತರು ಮೊಬೈಲ್ ಸಂಖ್ಯೆ: ೯೧೦೮೭೧೬೬೧೮ ಹಾಗೂ ೮೭೬೨೪೮೩೪೭೮ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಸಿಡಾಕ್‌ನ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬-೨೭ನೇ ಸಾಲಿನಲ್ಲಿ ಯುಪಿಎಸ್‌ಸಿ ಮುಖ್ಯ ಪರೀಕ್ಷಾ ತರಬೇತಿ ಪಡೆಯಲು ಅಲ್ಪ ಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ತರಬೇತಿ ನೀಡಲಾಗುವುದು. ಈ ತರಬೇತಿಗೆ ಅಲ್ಪ ಸಂಖ್ಯಾತರ ಸಮುದಾಯದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಜು.೧೦ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ), ಅಭ್ಯರ್ಥಿಯು ಯುಪಿಎಸ್‌ಸಿ ೨೦೦೬-೨೭ನೇ ಸಾಲಿನ ಅಧಿಸೂಚನೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಈ ಅರ್ಹತೆಗಳಿರುವ ಅರ್ಜಿದಾರರು ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಾಲತಾಣ :mehttps://dom.karnataka.gov.in/ Googlelink ttps://forms.gle/hjnh&Hwp@uTHyYme ಇಲ್ಲಿ ಲಭ್ಯವಿರುವ ಅರ್ಜಿ ನಮೂನೆಯಲ್ಲಿ ಮಾರ್ಗ ಸೂಚಿಗಳನ್ನಯ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಜಯಪುರ ಕಚೇರಿಗೆ ಮತ್ತು ಅಲ್ಪ ಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಮಾಹಿತಿಯನ್ನು ಪಡೆಯಬಹುದು ಹಾಗೂ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ :೮೨೭೭೭೯೯೯೯೦ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸತತ ೨೪ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಎಮ್‌ಎಸಿಪಿ ನಾಯಕ ಸುಭೇದಾರನಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಹಂಚಲಿ ಗ್ರಾಮಕ್ಕೆ ಆಗಮಿಸುತ್ತಿರುವ ಕಾಶೀರಾಯ ಕಾಮನಕೇರಿ ಇವರ ಸ್ವಾಗತ ಹಾಗೂ ಸನ್ಮಾನ ಸಮಾರಂಭ ಇಂದು (ಭಾನುವಾರ) ಜರುಗಲಿದೆ.ತಾಲ್ಲೂಕಿನ ಹಂಚಲಿ ಗ್ರಾಮದ ಹನುಮಾನ ದೇವಸ್ಥಾನ ಆವರಣದಲ್ಲಿ ಮಧ್ಯಾನ್ಹ ೨ ಘಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ತಾಳಿಕೋಟಿ ಖಾಸ್ಗತೇಶ್ವರಮಠದ ಸಿದ್ಧಲಿಂಗ ದೇವರು, ಬೋರಗಿ ಪುರದಾಳಮಠದ ಮಹಾಲಿಂಗೇಶ್ವರ ಸ್ವಾಮೀಜಿ ಹಾಗೂ ಸ್ಥಳೀಯ ಶರಣಯ್ಯ ಮಠ ವಹಿಸಲಿದ್ದಾರೆ.ತಹಶೀಲ್ದಾರ ವಿನಯಾ ಹೂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಉಪನ್ಯಾಸ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮದ ಪಂಚಾಯಿತಿ ಸದಸ್ಯರು, ಹಿರಿಯರು ಭಾಗವಹಿಸಲಿದ್ದಾರೆ ಎಂದು ಮಾಜಿ ಸೈನಿಕರ ಸಂಘ ಹಾಗೂ ಕಾರ್ಗಿಲ್ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜೀವನದ ಮೌಲ್ಯಗಳ ಮೂಲಕ ಆತ್ಮವಿಶ್ವಾಸ ಬೆಳೆಸಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು ಅರ್ಥಾತ ಗುರುಗಳು ಎಂದು ನಿವೃತ್ತ ತಹಶೀಲ್ದಾರ ಆರ್.ಆರ್,ಮಣೂರ ಹೇಳಿದರು.ಪಟ್ಟಣದ ಗೆಳೆಯರ ಬಳಗದಿಂದ ಶನಿವಾರ ಬಿಎಲ್‌ಡಿಇ ಸಂಸ್ಥೆಯ ದೇವರಹಿಪ್ಪರಗಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ೩೯ ವರ್ಷಗಳ ಹಿಂದೆ ನಿವೃತ್ತರಾದ ಬಿ.ಎಸ್.ಪಾಟೀಲ (ಜಾಲವಾದ)ರವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾನವನ ಜೀವನದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈಗಲೂ ತಮ್ಮ ೯೯ ನೇ ವಯಸ್ಸಿನಲ್ಲಿ ಚಟುವಟಿಕೆಯಿಂದ ಇದ್ದು ಎಲ್ಲರಿಗೂ ಮಾರ್ಗದರ್ಶನ ನೀಡುವ ಗುರುಗಳ ಸಾಧನೆ ನಿಜವಾಗಿಯೂ ಇಂದಿನ ಎಲ್ಲರಿಗೂ ಆದರ್ಶಪ್ರಾಯ ಎಂದರು.ಸನ್ಮಾನಿತ ಬಿ.ಎಸ್.ಪಾಟೀಲ ಶಿಕ್ಷಕರು ಮಾತನಾಡಿ, ತಾವು ಕಲಿಸಿದ ವಿದ್ಯಾರ್ಥಿಗಳು ಇಂದು ತಾವು ಸಹ ನಿವೃತ್ತರಾಗಿ ನಂತರ ನಿವೃತ್ತ ಗುರುವನ್ನು ಸನ್ಮಾನಿಸಿದ್ದು ಇದು ಅತ್ಯಂತ ಸಂತೋಷಕರ ಹಾಗೂ ವಿರಳ ಸಂದರ್ಭ. ಇದು ಎಲ್ಲರಿಗೂ ದೊರೆಯದು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.ಬಸವಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ನಿವೃತ್ತ ನೌಕರರ ಸಂಘದ ತಾಲ್ಲೂಕು…

Read More