Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮.ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಕಾಲವೊಂದಿತ್ತು, ಆದರೆ ಇದು ಇಂದು ಬದಲಾಗಿದ್ದು, ‘ಉದ್ಯೋಗಂ ಸರ್ವ ಲಕ್ಷಣಂ’ ಎಂದು ಬದಲಾಗಿದೆ ಎಂದರೆ ತಪ್ಪಾಗದು. ಏಕೆಂದರೆ ಇಂದು ಉದ್ಯೋಗವು ಕೇವಲ ಪುರುಷರಿಗಷ್ಟೇ ಅಲ್ಲದೇ ಮಹಿಳೆಯರಿಗೂ ಅತ್ಯಂತ ಅನಿವಾರ್ಯವಾಗಿದೆ. ಉದ್ಯೋಗವೇನೋ ಎಲ್ಲರಿಗೂ ಬೇಕು ಆದರೆ ಉದ್ಯೋಗದ ಆಳವನ್ನು ಮತ್ತು ಉದ್ಯೋಗದಾತನ ಆಶಯಗಳನ್ನು ಅರಿತು ಕೆಲಸ ಮಾಡುವ ಕೆಲಸಗಾರರು ಎಷ್ಟು ಮಂದಿ ಇದ್ದಾರೆ ಎಂದು ವ್ಯವಸ್ಥೆಯ ಒಳಗೆ ಅಧ್ಯಯನ ಏನಾದರೂ ಮಾಡಿದರೆ ಸಿಗುವ ಉತ್ತರವು ನಿರಾಶಾದಾಯಕ ಆಗಿರಬಹುದು.ಏಕೆಂದರೆ ಎಲ್ಲರಿಗೂ ಉದ್ಯೋಗ ಅತ್ಯಂತ ಅಗತ್ಯವಾಗಿ ಬೇಕು, ಉದ್ಯೋಗದಾತನು ನೀಡುವ ಸಂಬಳವಂತೂ ಬೇಕೇ ಬೇಕು, ಆದರೆ ಉದ್ಯೋಗದಾತನು ನೀಡುವ ಸಂಬಳಕ್ಕೆ ನೀಡುವ ಕೆಲಸದ ರೂಪದ ಪ್ರತಿಫಲದ ಕುರಿತು ಯೋಚಿಸುವವರು ತೀರಾ ವಿರಳ. ಸಾಮಾನ್ಯವಾಗಿ ಕೆಲಸಗಾರರಲ್ಲಿ ಪ್ರತಿದಿನವೂ ಬೆಳಗಾಗಿ ಮಧ್ಯಾಹ್ನವಾದರೆ ಸಾಕು, ಸಂಜೆಯಾದರೆ ಸಾಕಪ್ಪಾ ಎನ್ನುವ ಮನೋಭಾವ ಇರುತ್ತದೆ. ಬೆಳಗಿನಿಂದ ಸಂಜೆಯ ನಡುವಿನ…
ಲೇಖನ.- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಾಹರಣೆಗೆ ದಿನಪತ್ರಿಕೆ ಯಶಸ್ಸನ್ನು ಬಯಸದವರು ಯಾರೂ ಇಲ್ಲ. ಎಲ್ಲರೂ ಅದರ ಹಿಂದೆ ಬೀಳುತ್ತಾರೆ. ಅದಕ್ಕೆಲ್ಲ ಏನೆಲ್ಲ ಮಾಡಲು ಸಿದ್ಧರಿರುತ್ತಾರೆ. ಆದರೆ ಯಶಸ್ಸು ಕೇವಲ ಕೆಲವರ ಜೀವನದಲ್ಲಿ ಹಾಸು ಹೊಕ್ಕಾದಂತೆ ಕಾಣಿಸುತ್ತದೆ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಹಾಗಾಗಿ ಯಶಸ್ಸಿನ ರಹಸ್ಯವೇನು ಎಂಬುದು ಸಾವಿರಾರು ಜನರ ತಲೆಯನ್ನು ಕೊರೆಯುತ್ತಲೇ ಇರುತ್ತದೆ. ನಮ್ಮ ತಯಾರಿ ಅಂದರೆ ಸಿದ್ಧತೆಯು ನಮ್ಮ ಯಶಸ್ಸನ್ನು ಗಮನಾರ್ಹವಾಗಿ ರೂಪಿಸುತ್ತದೆ. ಅಂದರೆ ಯಶಸ್ವಿ ಜನರು ಶಿಸ್ತುಬದ್ಧ ಸಿದ್ಧತೆಯೊಂದಿಗೆ ಗೆಲುವಿನ ದಾರಿಯನ್ನು ಕಂಡುಕೊಂಡಿರುತ್ತಾರೆ. ಮತ್ತು ಅದೇ ಹಾದಿಯಲ್ಲಿ ಮುಂದುವರೆಯುತ್ತಾರೆ. ಹೀಗಾಗಿ ಅವರು ಮುಖ್ಯವಾಹಿನಿಯಲ್ಲಿ ಮಿಂಚುತ್ತಿರುತ್ತಾರೆ.ಸಿದ್ಧತೆ ಬೇಕು ‘ಅವಕಾಶಗಳು ಬರುವುದು ಅದೃಷ್ಟದಿಂದಲ್ಲ. ಸಿದ್ಧತೆ ಮತ್ತು ಅವಕಾಶಗಳು ಭೇಟಿಯಾದಾಗ ಯಶಸ್ಸು ಸಿಗುತ್ತದೆ.’ ಎಂಬ ಸಾರ್ವಕಾಲಿಕ ಸತ್ಯ ಜೀವನದಲ್ಲಿ ವೃತ್ತಿಯಲ್ಲಿ ಅಥವಾ ಓದಿನಲ್ಲಿ ಯಶಸ್ಸು ಕಾಣಲು ಕೇವಲ ಪ್ರತಿಭೆ ಸಾಲದು; ಅದಕ್ಕೆ ಸರಿಯಾದ ಸಿದ್ಧತೆ ಬೇಕೇಬೇಕು. ಸಿದ್ಧತೆಯಿಲ್ಲದೆ ಯಶಸ್ಸು ಕೇವಲ ಕಾಕತಾಳೀಯ. ಆದರೆ ಸಿದ್ಧತೆಯೊಂದಿಗಿನ ಸಾಧನೆ ಸ್ಥಿರವಾಗಿರುತ್ತದೆ.ಸಿದ್ಧತೆ ಎಂದರೇನು?ಸಿದ್ಧತೆ ಎಂದರೆ ಒಂದು…
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಅನೇಕ ಸಮಸ್ಯೆಗಳಿದ್ದು ಅಂತಹ ಸಮಸ್ಯೆಗಳನ್ನು ಆಯೋಗವು ಗಂಭೀರವಾಗಿ ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಅವರು ಹೇಳಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭೂವ್ಯಾಜ್ಯ, ಅಟ್ರಾಸಿಟಿ, ನಕಲಿ ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಗಣಿಸಲು ಅಧಿಕಾರಿಗಳು ಆಯೋಗದ ಜೊತೆಗೂಡಿ ಸರಿಪಡಿಸಬೇಕು. ಈ ಕಾರ್ಯವನ್ನು ರಾಜ್ಯಾದ್ಯಾಂತ ಚುರುಕುಗೊಳಿಸಲಾಗುವುದು ಎಂದರು.ಪ್ರಕರಣಗಳ ವಿಳಂಬಕ್ಕೆ ಕಾರಣ ಸಂಪೂರ್ಣ ಅವಲೋಕನ ಮಾಡಿಕೊಂಡು ಸಮತೋಲನ ವಹಿಸಿ ಫಲಾನುಭವಿಗಳಿಗೆ ನ್ಯಾಯ ಕಲ್ಪಿಸಬೇಕು ಎಂದರು. ಈಗಾಗಲೇ3850 ಪ್ರಕರಣಗಳ ಕಾರ್ಯ ನಡೆದಿದೆ.…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ).ವಿಜಯಪುರ ಉದಯರಶ್ಮಿ ದಿನಪತ್ರಿಕೆ ಖ್ಯಾತ ನೃತ್ಯಗಾರ ಮಾರ್ಥಾ ಗ್ರಹಾಂ ಅವರು “ನೃತ್ಯವು ಆತ್ಮದ ಗುಪ್ತ ಭಾಷೆ” ಎಂದು ಹೇಳಿದ್ದಾರೆ. ಅದರು ವ್ಯಕ್ತಿಯ ಮನದಲ್ಲಿನ ಆಂತರಿಕ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಸಾಧನವೆಂದು ಹೇಳಬಹುದು. ಈ ಜಗತ್ತಿನಲ್ಲಿ ಅದೇಷ್ಟೋ ಕಲಾ ಪ್ರೇಮಿಗಳಿಗೆ ನೃತ್ಯವೇ ಜೀವಾಳ. ನೃತ್ಯ ಎನ್ನುವುದು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರಬಹುದು. ಆದರೆ ಅದರಿಂದ ಹೊರ ಹೊಮ್ಮುವ ಭಾವನೆ ಮತ್ತು ಮನಸ್ಸಿಗೆ ಮುದ ನೀಡುವ ಶಕ್ತಿಯೊಂದೇ ಎಂದು ಹೇಳಬಹುದು. ಈ ಸುಂದರ ಕಲಾ ಪ್ರಕಾರವನ್ನು ಆಚರಿಸಲು ಮತ್ತು ಜಾಗತಿಕವಾಗಿ ಇತರ ನೃತ್ಯ ಪ್ರಕಾರಗಳನ್ನು ಪೋಷಿಸಲು ಪ್ರತಿವರ್ಷ ಏಪ್ರೀಲ್ ೨೯ ರಂದು ಅಂತರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನದ ಆಚರಣೆಯ ಮೂಲಕ ನಮ್ಮ ಕಲೆ-ಸಂಸ್ಕೃತಿಯನ್ನು ಎತ್ತಿ ಹಿಡಿದು ಗೌರವಿಸಿ, ಉತ್ತೇಜಿಸುವುದು ಮತ್ತು ನೃತ್ಯ ಕಲೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ನೃತ್ಯದ ಹಲವಾರು ಪ್ರಕಾರಗಳು, ಅದರ ಮೌಲ್ಯ ಮತ್ತು ನೃತ್ಯದಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು. ಪ್ರಪಂಚದಾದ್ಯಂತ ನಡೆಯುವ…
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಂದ ದಾಳಿ | ಮೂವರ ಬಂಧನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನ್ನ ಭಾಗ್ಯ ಯೋಜನೆಯಡಿ ಅಕ್ರಮ ಅಕ್ಕಿ ಸಾಗಣೆ ಪತ್ತೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿ ಅವರಿಂದ ಪಡಿತರ ಅಕ್ಕಿ ವಶಪಡಿಸಿಕೊಂಡ ಘಟನೆ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಹೋಟೆಲ್ ಸಾಹಿಲ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಮಹಾಂತೇಶ ಹನಮಪ್ಪ ಬಾಲಕನವರ, ಹನುಮೇಶ್ ದೊಡ್ಡಬಸಪ್ಪ ಗೋನಾಳ ಎಂಬುವರ ವಿರುದ್ಧ ವಿಜಯಪುರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅನ್ನಭಾಗ್ಯ ಯೋಜನೆಯಡಿ ಹಂಚಲ್ಪಡುವ ಅಕ್ಕಿ ಅಕ್ರಮ ಸಾಗಣೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಅಕ್ಕಿ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅರೋಪಿಗಳಿಂದ 32850 ಕೆಜಿ ಅಕ್ಕಿ ಹಾಗೂ ಲಾರಿ ವಶಪಡಿಸಿಕೊಂಡಿದ್ದಾರೆ.ದಾಳಿಯಲ್ಲಿ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ,ಎ ಎಸ್ ಐ ಆರ್. ಎನ್. ಪರಗುಳಿ, ಸಿಬ್ಬಂದಿ ಬಸವರಾಜ ಅಂಬಿಗೇರ ಪಾಲ್ಗೊಂಡಿದ್ದರು ಎಂದು ಆಹಾರ ಇಲಾಖೆಯಉಪ…
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಜಾ, ಪ.ಪಂಗಡದ ಹಲವಾರು ವಸತಿ ಶಾಲೆ ಮತ್ತು ನಿಲಯಗಳ ಸಮಸ್ಯೆಗಳ ಪಜಾ, ಪಪಂ ವರ್ಗಗಳ ಮಕ್ಕಳಿರುವ ಹಾಸ್ಟೇಲ್ ನಲ್ಲಿ ಬೇರೆಯವರು ವಾಸವಿದ್ದು, ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಬೇರೆಯವರು ಉಳಿದುಕೊಳ್ಳದಂತೆ ನೋಡಿಕೊಳ್ಳಲು ಜಂಟಿ ಸಮಿತಿ ಮೂಲಕ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದರು.ನಕಲಿ ಜಾತಿ ಪ್ರಮಾಣ ಪತ್ರದ ದುರ್ಬಳಕೆ ಗಂಭೀರವಾಗಿ ಪರಿಗಣಿಸಿದ್ದು, ನಕಲಿ ಜಾತಿ ಪ್ರಮಾಣ ಪತ್ರ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶಗಳನ್ನು ಪರಿಶೀಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಪಜಾ, ಪಂಗಡದ ವಿವಿಧ ನಿಗಮಕ್ಕೆ ಅನುದಾನ ಒದಗಿಸಕು…
ವಿಜಯಪುರದಲ್ಲಿ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಷ್ಟೋ ವರುಷಗಳಿಂದ ಜಾರಿಯಾಗದ ಒಳ ಮೀಸಲಾತಿಯನ್ನು ಯಾವ ಸಮಾಜಕ್ಕೂ ಅನ್ಯಾಯ ಮಾಡದೇ ಅತ್ಯಂತ ವೈಜ್ಞಾನಿಕವಾಗಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕೇವಲ ಬಿಜೆಪಿ ಭರವಸೆ ನೀಡುತ್ತಲೇ ಹೋಯಿತು, ಅಧಿಕಾರಕ್ಕೆ ಬಂದರೂ ಒಳಮೀಸಲಾತಿ ಜಾರಿಗೊಳಿಸಲಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ, ಬಲಗೈ ಸಮುದಾಯಕ್ಕೆ ಶೇ.5.5, ಎಡಗೈ ಸಮುದಾಯಕ್ಕೆ ಶೇ.5.5. ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.4.5 ಮೀಸಲಾತಿ ಕಲ್ಪಿಸಲಾಗಿದೆ, ಅಲೆಮಾರಿ ಸಮುದಾಯಕ್ಕೂ ಅನ್ಯಾಯವಾಗದ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿದೆ, ಅಲೆಮಾರಿ ಸಮುದಾಯಕ್ಕೂ ನ್ಯಾಯ ದೊರಕಬೇಕು ಎಂಬುದು ನಮ್ಮ ನಿಲುವು ಕೂಡಾ ಹೌದು, ರೋಸ್ಟರ್ ಸಹ ವೈಜ್ಞಾನಿಕವಾಗಿ ಪ್ರಕ್ರಿಯೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದರು.ಎಸ್‌ಇಟಿ-ಟಿಎಸ್‌ಪಿ ಎಂಬ ವಿಶೇಷ ಯೋಜನೆಯನ್ನು ರೂಪಿಸಿದ್ದೆ ಕಾಂಗ್ರೆಸ್ ಸರ್ಕಾರ,…
ಮಾಹಿತಿ ಹಕ್ಕು ಕಾಯ್ಕೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ರಾಜಶೇಖರ ಎಸ್. ಅವರು ಮೇ 2 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಜಿಲ್ಲೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಅಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ನಡೆಯಲಿರುವ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವರು.ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ಕೆಯ ಕುರಿತು ಜಾಗೃತಿ ಕಾರ್ಯಕ್ರಮ ನಡಯಲಿದೆ.ಹಾಗಾಗಿ ಜಿಲ್ಲೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.ಬದಲಿಗೆ ಯಾವುದೇ ಪ್ರತಿನಿಧಿ ಕಳುಹಿಸದೇ ತಾವುಗಳು ಖುದ್ದಾಗಿ ಹಾಜರಿರಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತಿ ಉತ್ಸವ ಅಂಗವಾಗಿ ಬಬಲೇಶ್ವರ ತಾಲೂಕಿನ ಜಂಬಗಿ ಎಚ್. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಮಂಗಳವಾರ ಶ್ರೀ. ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ ಹಾಗೂ ಜಂಬಗಿಯ ಡಾ. ಬಾಬಾಸಾಹೇಬ ಅಂಬೇಡ್ಕರ ತರುಣ ಸಂಘ ಜಂಬಗಿ ಎಚ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ನಡೆಯಿತು.25ನೇ ಏಪ್ರಿಲ್ 1970ರಲ್ಲಿ ಅಂದಿನ ಮೈಸೂರು ರಾಜ್ಯದ ಪೌರಾಡಳಿತ ಸಚಿವ ಬಿ. ಎಂ. ಪಾಟೀಲ ಅವರು ಈ ಶಾಲೆಯನ್ನು ಉದ್ಘಾಟಿಸಿದ್ದು ಇಂದು ಶತಮಾನೋತ್ಸವ ದಿನದಂದು ಈ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದು ಗಮನಾರ್ಹವಾಗಿತ್ತು. ಈಗ ಈ ಶತಮಾನದ ಈ ಶಾಲೆಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಿ.ಎಸ್.ಆರ್ ಅನುದಾನದಲ್ಲಿ ಹೊಸದಾಗಿ ಕೊಠಡಿಗಳು, ಶೌಚಾಲಯ ಹಾಗೂ…
