Author: editor.udayarashmi@gmail.com

ವಿಜಯಪುರ: ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕ ಹುದ್ದೆಯನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ ೧೭ರಂದು ಬೆಳಿಗ್ಗೆ ೧೦-೩೦ಕ್ಕೆ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಸಂದರ್ಶನ ಕೊಠಡಿಯಲ್ಲಿ ಆಯೋಜಿಸಲಾದ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿಗಳು ಮತ್ತು ಎರಡು ಭಾವಚಿತ್ರಗಳನ್ನು ಸಂದರ್ಶನದಲ್ಲಿ ಸ್ಥಳದಲ್ಲಿ ಒದಗಿಸುವ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಮಹಾವಿದ್ಯಾಲಯ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Read More

ವಿಜಯಪುರ: ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಆರ್.ರವಿ ಅವರು ಅಕ್ಟೊಬರ್ ೬ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಕ್ಟೋಬರ್ ೫ ರಂದು ರಾತ್ರಿ ೯ಗಂಟೆಗೆ ವಿಜಯಪುರಕ್ಕೆ ಆಗಮಿಸಿ, ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅಕ್ಟೋಬರ್ ೬ ರಂದು ಬೆಳಿಗ್ಗೆ ೧೦ ಗಂಟೆಗೆ ವಿಜಯಪುರ ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ವಿಜಯಪುರದಿಂದ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ನಾಡಿನ ಎಲ್ಲ ಗುರು-ವಿರಕ್ತರು ಒಂದಾಗಿ ಸುಂದರ ಸಮಾಜ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಹಾನಗಲ್ಲ ಕುಮಾರ ಸ್ವಾಮೀಜಿಯವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಶ್ರೀಶೈಲಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮೀಜಿಯವರ ೧೫೬ ನೇ ಜಯಂತಿ ಮಹೋತ್ಸವದಂಗವಾಗಿ ೧೧ ದಿನ ಹಮ್ಮಿಕೊಂಡಿದ್ದ ಕುಮಾರಸ್ವಾಮೀಜಿಯವರ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಗುರು ಪರಂಪರೆ ಶ್ರೇಷ್ಠ, ವಿರಕ್ತ ಪರಂಪರೆ ಶ್ರೇಷ್ಠ, ಬೇರೆ ಪರಂಪರೆ ಶ್ರೇಷ್ಠ ಎಂಬ ಬೇಧ-ಭಾವ ಹೋಗಬೇಕು. ಲಿಂಗಾಯತ-ವೀರಶೈವ ಬೇರೆ ಎಂದು ಕೆಲ ದಿನಗಳ ಹಿಂದೆ ಸಮಾಜದಲ್ಲಿ ಗಾಳಿ ಬೀಸಿತು. ಸಮಾಜದಲ್ಲಿರುವ ಎಲ್ಲ ಬಾಂಧವರು ಒಂದಾಗಿ ಇರಬೇಕೆಂದು ಹಾನಗಲ್ಲ ಕುಮಾರಸ್ವಾಮೀಜಿಯವರು ಕನಸು ಕಂಡಿದ್ದರು. ಇದಕ್ಕಾಗಿ ಅವರು ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ ಸ್ಥಾಪನೆ ಮಾಡಿದ್ದರು. ಅವರು ಸಂಘಟಿತ, ಸದೃಢ ಸಮಾಜ ಇರಬೇಕೆಂಬ ಸದಾಶಯ…

Read More

ಬಸವನಬಾಗೇವಾಡಿ: ಧಾರ್ಮಿಕ ಕ್ಷೇತ್ರದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ. ಕುಮಾರ ಸ್ವಾಮೀಜಿ ಅವರು ಶಿವಯೋಗ ಮಂದಿರ ಸ್ಥಾಪನೆ ಮಾಡುವ ಮೂಲಕ ಅನೇಕ ಮಠಾಧೀಶರನ್ನು ಈ ನಾಡಿಗೆ ನೀಡಿದ್ದಾರೆ. ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಗದಗ, ಡಂಬಳದ ಯಡಿಯೂರು ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಾನಗಲ್ಲ ಕುಮಾರ ಸ್ವಾಮೀಜಿ ಅವರ 156ನೇ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಗುರು ವಿರಕ್ತರನ್ನು ಬೇಸುಗೆ ಮಾಡಿದ ಕುಮಾರ ಸ್ವಾಮೀಜಿಯವರ ಕುರಿತ 10 ದಿನಗಳ ವರೆಗೆ ಪ್ರವಚನ ಮೂಲಕ ಅವರ ಜೀವನ ಸಾಧನೆಗಳನ್ನು ತಿಳಿಸುವ ಕಾರ್ಯ ಪಟ್ಟಣದಲ್ಲಿ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಧಾರ್ಮಿಕ ಕಾರ್ಯದಲ್ಲಿ ತೊಡಗುವಂತೆ ಜಯಂತ್ಯೋತ್ಸವ ಸಮಿತಿಯವರು ಮಾಡಿದ್ದಾರೆ.ಮಹಿಳೆಯಿಂದ ಮನೆಯಲ್ಲಿ…

Read More

ವಿಜಯಪುರ: ಉತ್ತಮ ನಾಳೆಗಾಗಿ ಎಂಟಿ-ಬಯೋಟಿಕ್ಸ್ ಉಳಿಸಿ ಕುರಿತು ಕಾರ್ಯಕ್ರಮ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ 6ರಂದು ಬೆಳಿಗ್ಗೆ 10.45ಕ್ಕೆ ನಡೆಯಲಿದೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣಾ ಸಜ್ಜನ, ಅ. 6 ರಂದು ಶುಕ್ರವಾರ ವೈದ್ಯಕೀಯ ಶಿಕ್ಷಣ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ವಿ. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮಿ ಕಾಖಂಡಕಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

Read More

ವಿಜಯಪುರ: ದೇವರ ಹಿಪ್ಪರಗಿ ಮತಕ್ಷೇತ್ರದ ನಾನಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಚಿಮ್ಮಲಗಿ ಏತ ನೀರಾವರಿ ಯೋಜನೆಯ ನಾಗಠಾಣ ಉಪಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸುವಂತೆ ಕೆಬಿಜೆಎನ್ಎಲ್ ಆಲಮಟ್ಟಿ ಮತ್ತು ರಾಂಪೂರ ವಿಭಾಗದ ಅಧಿಕಾರಿಗಳಿಗೆ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಸೂಚನೆ ನೀಡಿದ್ದಾರೆ.ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ನೇತೃತ್ವದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ನಾನಾ ಗ್ರಾಮಸ್ಥರು ವಿಜಯಪುರದಲ್ಲಿ ಸುನೀಲಗೌಡ ಪಾಟೀಲ ಅವರನ್ನು ಇಂದು ಬುಧವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ದೇವರ ಹಿಪ್ಪರಗಿ, ಹರನಾಳ, ಇಂಗಳಗಿ, ಮುಳಸಾವಲಗಿ, ಕಡ್ಲೇವಾಡ ಪಿ.ಸಿಎಚ್. ಚಿಕ್ಕರೂಗಿ, ಗಂಗನಳ್ಳಿ, ನಿವಾಳಖೇಡ, ಅಂಕಲಗಿ, ಜಂಬಗಿ ಮುಂತಾದ ಗ್ರಾಮಗಳ ಕೆರೆಗಳಿಗೆ ನೀರು ಹರಿಸಬೇಕು. ಇದರಿಂದ ನಮ್ಮ ಭಾಗದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ, ಅಜೀಜ್ ಯಲಗಾರ ಹಾಗೂ ಶಂಕರಗೌಡ ಕೋಟಿಖಾನೆ ಅವರು, ಎಂ.…

Read More

ವ್ಯಂಗೋತ್ಸವ*- ಶ್ರೀನಿವಾಸ ಜಾಲವಾದಿ, ಸುರಪುರ ‘ಏನಪಾ ಚಮ್ಮಕ್ ಚೆಲ್ಲು, ಏನೈತಿ ಹೊಸಾದು?’ ಕೇಳಿದ ಗರಮ್ಯಾ’ಏನೈತಿ? ಕ್ಯಾ ಭೀ ನಹೀ ಹೈ’ ಅಂದ ಗುಂಡ್ಯಾ’ಸುದ್ದಿ ಇರಲಾರದೇ ಇರಾಕ ಆಕೈತೇನು? ನಾವೇನು ಚಂದ್ರನ ಮ್ಯಾಗ ಅದಿವೇನು ಮತ್ತs?’ ಅಂದ ಗರಮ್ಯಾ’ಸುದ್ದಿ ಇರಲಿಲ್ಲಾಂದ್ರs, ನಮ್ಮು ಈ 24×7 ಏನು ಉದ್ದು ಹುರಿತಾವೇನಲೇ?’ ಅಂದ ಕಾಕಾ’ಅವುಕ್ಯಾಕ ಸುದ್ದಿ ಬೇಕು? ಅವು ಒಂದು ಇರಬಿ ಹೋಗಿತ್ತಂದ್ರs ಐದಾರು ಹೆಬ್ಬಾವು ಹೋಗ್ಯಾವು….. ಅಂತ ಬೆಳತನ್ಕ ಒದರಿ ಒದರಿ ಮಂದಿ ತಲಿ ಚಿಟ್ಟ ಹಿಡಸ್ತಾವು ಹೇಂತಿ ಒಯ್ದು’ ಅಂತ ಬೈಯ್ದ ಗುಡುಮ್ಯಾ’ಏ ಹಂಗ ಹೇಳ ಮತ್ತs,ಆ ನ್ಯೂಜ್ ಛಾನೆಲ್ ಆ್ಯಂಕರಗೋಳು ರಾತ್ರಿ ಮಕ್ಕಂಡಾಗ ಕನಸನಾಗನೂ ಹಂಗೇ ಒದರತಿರತಾರಂತಪೋ, ಮೊನ್ನಿ ಒಬ್ಬಕಿ ನಿರೂಪಕಿ ಪತಿ ಇದರ ಸಲಾಗೇ ಬ್ಯಾಸತ್ತು ಕೋರ್ಟಿಗಿ ಡೈವರ್ಸಕ್ಕ ಹಾಕ್ಯಾನಂತಪೋ’ ಅಂತ ಉದ್ಗಾರ ತೆಗೆದ ಬಸ್ಯಾ’ಮನಗಂಡ ಸುಳ್ಳ ಹೇಳ್ತಿ ಬಿಡು ನೀನು’ ಅಂದಳು ನಗುತ್ತ ರಾಣಿ’ಏ ಇಲ್ಲಾ, ಖರೇ ಐತಿ ಈ ಸುದ್ದಿ. ಬೇಕಾದ್ರ ಆ ಛಾನೆಲ್ದವರಿಗೆ ಫೋನ್ ಮಾಡಿ…

Read More

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಸಿಬಿಎಸ್‌ಇ ಶಾಲೆಯ ಆವರಣದಲ್ಲಿರುವ ನಂದೀಶ್ವರ ರಂಗ ಮಂದಿರದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿಯವರ ೧೫೬ ನೇ ಜಯಂತಿ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಸೋಮವಾರ ಸಂಜೆ ವಿರಾಗಿ ಚಲನಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು.ಸೆಪ್ಟಂಬರ್ ೨೪ರಿಂದ ಪ್ರತಿನಿತ್ಯ ಸಂಜೆ ೭ ಗಂಟೆಗೆ ಉಪ್ಪಿನಬೇಟಗೇರಿಯ ಕುಮಾರವಿರುಪಾಕ್ಷ ಸ್ವಾಮೀಜಿಯವರಿಂದ ಹಾನಗಲ್ಲ ಕುಮಾರ ಸ್ವಾಮೀಜಿಯವರ ಜೀವನ ದರ್ಶನ ಪ್ರವಚನ ನಡೆಯುತ್ತಿದೆ. ಪ್ರವಚನ ಮಂಗಲ ಸಮಾರಂಭದ ಮುನ್ನ ದಿನ ಸೋಮವಾರ ಪ್ರವಚನ ಮುಕ್ತಾಯವಾದ ನಂತರ ವಿರಾಗಿ ಚಲನಚಿತ್ರದ ಪ್ರದರ್ಶನವನ್ನು ಸಚಿವ ಶಿವಾನಂದ ಪಾಟೀಲ ಸೇರಿದಂತೆ ಅನೇಕ ಗಣ್ಯರು, ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಜನರು ವೀಕ್ಷಿಸಿದರು.ಹಾನಗಲ್ಲ ಕುಮಾರ ಸ್ವಾಮೀಜಿಯವರ ಜೀವನಾಧಾರಿತ ಚಲನಚಿತ್ರ ವಿರಾಗಿ ಚಲನಚಿತ್ರವು ರಾತ್ರಿ ೯ ಗಂಟೆಗೆ ಆರಂಭವಾಗಿ ತಡ ರಾತ್ರಿ ೧೨ ಗಂಟೆಯ ನಂತರ ಮುಕ್ತಾಯವಾಗಿತ್ತು. ಸಚಿವ ಶಿವಾನಂದ ಪಾಟೀಲರು ಪ್ರವಚನ ನಡೆಯುವ ವೇಳೆಯಲ್ಲಿ ಆಗಮಿಸಿ ಚಲನಚಿತ್ರ ವೀಕ್ಷಿಸಿದರು. ಇವರೊಂದಿಗೆ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷ ಬೀಳಗಿಯ ಗುರುಪಾದೇಶ್ವರ ಶಿವಾಚಾರ್ಯರು,…

Read More

ಆಹಾರವೇ ಔಷಧಿ ಮತ್ತು ಅಡುಗೆ ಮನೆಯೇ ಔಷಧಾಲಯ ಭಾರತೀಯ ಸಂಸ್ಕೃತಿಯಲ್ಲಿ ಅಡುಗೆ ಮನೆಗೆ ವಿಶಿಷ್ಟವಾದ ಸ್ಥಾನ. ಶಡ್ರಸಗಳಾದ ಕ್ಷಾರ, ಲವಣ, ಕಟು, ತಿಕ್ತ,ಮಧುರ, ಆಮ್ಲ ಗಳಿಂದ ಕೂಡಿದ ಭೋಜನ, ಲಂಘನ , ಒಪ್ಪತ್ತು ಊಟ, ಏಕಾದಶಿಯಂತಹ ಆಚರಣೆಗಳು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ಅಡುಗೆ ಮನೆಯ ಒಗ್ಗರಣೆ ಡಬ್ಬಿಯು ಆರೋಗ್ಯದ ಅರಮನೆಯಆಡುಂಬೊಲವಾಗಿದೆ.ಸಾಸಿವೆ…. ಸಾಸಿವೆ ನಮ್ಮ ಒಗ್ಗರಣೆಯ ಪ್ರಮುಖ ವಸ್ತು. ಸಾಸಿವೆ ಇಲ್ಲದ ಒಗ್ಗರಣೆಯನ್ನು ಊಹಿಸಲು ಅಸಾಧ್ಯ. ಆದ್ದರಿಂದಲೇ ಗೌತಮ ಬುದ್ಧನು ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ್ದು.ಸಾಸಿವೆಯು ತೀಕ್ಷ್ಣಗುಣವನ್ನು ಹೊಂದಿದ್ದು ಎಣ್ಣೆಯನ್ನು ಕಾಯಿಸಿ ಸಾಸಿವೆಯನ್ನು ಹಾಕಿದಾಗ ಅದು ಚಟಪಟನೆ ಸಿಡಿಯುತ್ತದೆ. ಹೀಗೆ ಸಿಡಿದಾಗ ಅದರಲ್ಲಿರುವ ತಿಕ್ತ ಗುಣವು ಎಣ್ಣೆಯಲ್ಲಿ ಬಿಡುಗಡೆಯಾಗುತ್ತದೆ. ಈ ರೀತಿ ಸಾಸಿವೆಯು ದೇಹದಲ್ಲಿ ಉಷ್ಣಗುಣವನ್ನು ಹೆಚ್ಚಿಸಿ ದೇಹದ ಶಾಖವನ್ನು ಸಮತೋಲನಗೊಳಿಸುತ್ತದೆ. ಕಡು ಚಳಿಗಾಲವನ್ನು ಹೊಂದಿರುವ ಉತ್ತರ ಭಾರತದ ಹಿಮಾಲಯ ಪ್ರದೇಶಗಳಲ್ಲಿ ಸಾಸಿವೆಯ ಎಣ್ಣೆಯನ್ನೇ ಅಡುಗೆಗೆ ಬಳಸುತ್ತಾರೆ. ಬಿಸಿಲು ಪ್ರದೇಶವಾದ ದಕ್ಷಿಣದ ರಾಜ್ಯಗಳಲ್ಲಿ ಉಪ್ಪಿನಕಾಯಿ, ಮತ್ತಿತರ ಖಾದ್ಯ ಪದಾರ್ಥಗಳು…

Read More

ವಿದ್ಯಾರ್ಥಿಗಳಿಗೆ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ ಕಿವಿಮಾತು ವಿಜಯಪುರ: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕೆ ಸತತ ಓದು, ಪರಿಶ್ರಮ, ನಿರಂತರ ಆಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ ಸಲಹೆ ನೀಡಿದರು.ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ೨೦೨೩-೨೪ ನೇ ಸಾಲಿನ ಬಿ.ಎ, ಬಿ.ಎಸ್ಸಿ ಮತ್ತು ಬಿ.ಸಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.ಬಿ.ಎಲ್.ಡಿ.ಇ ಸಂಸ್ಥೆ ಇದು ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿರುವ ಒಂದು ಹೆಮ್ಮೆಯ ಸಂಸ್ಥೆಯಾಗಿದೆ. ಈ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯವು ಸುಂದರ ಪರಿಸರ, ಅತ್ಯುತ್ತಮ ಮೂಲ ಸೌಕರ್ಯಗಳು, ವ್ಯವಸ್ಥಿತವಾದ ಗ್ರಂಥಾಲಯ, ಆಡಳಿತ ಮಂಡಳಿ, ನುರಿತ ಬೋಧಕ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಮಹಾವಿದ್ಯಾಲಯ ನಮ್ಮದಾಗಿದೆ ಎಂದರು.ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳು ಇದ್ದು ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಅವಶ್ಯಕವಿರುವ ಮೂಲ ಸೌಕರ್ಯಗಳು ಮಹಾವಿದ್ಯಾಲಯದಲ್ಲಿ ಲಭ್ಯ ಇವೆ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಕಸರತ್ತು ಅವಶ್ಯಕ. ನಮ್ಮ…

Read More