ವಿದ್ಯಾರ್ಥಿಗಳಿಗೆ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ ಕಿವಿಮಾತು
ವಿಜಯಪುರ: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕೆ ಸತತ ಓದು, ಪರಿಶ್ರಮ, ನಿರಂತರ ಆಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ ಸಲಹೆ ನೀಡಿದರು.
ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ೨೦೨೩-೨೪ ನೇ ಸಾಲಿನ ಬಿ.ಎ, ಬಿ.ಎಸ್ಸಿ ಮತ್ತು ಬಿ.ಸಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆ ಇದು ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿರುವ ಒಂದು ಹೆಮ್ಮೆಯ ಸಂಸ್ಥೆಯಾಗಿದೆ. ಈ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯವು ಸುಂದರ ಪರಿಸರ, ಅತ್ಯುತ್ತಮ ಮೂಲ ಸೌಕರ್ಯಗಳು, ವ್ಯವಸ್ಥಿತವಾದ ಗ್ರಂಥಾಲಯ, ಆಡಳಿತ ಮಂಡಳಿ, ನುರಿತ ಬೋಧಕ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಮಹಾವಿದ್ಯಾಲಯ ನಮ್ಮದಾಗಿದೆ ಎಂದರು.
ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳು ಇದ್ದು ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಅವಶ್ಯಕವಿರುವ ಮೂಲ ಸೌಕರ್ಯಗಳು ಮಹಾವಿದ್ಯಾಲಯದಲ್ಲಿ ಲಭ್ಯ ಇವೆ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಕಸರತ್ತು ಅವಶ್ಯಕ. ನಮ್ಮ ಮಹಾವಿದ್ಯಾಲಯದಲ್ಲಿ ಕ್ರೀಡಾ ವಿಭಾಗವಿದ್ದು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಸದೃಢತೆ ಕಾಯ್ದುಕೊಳ್ಳಬೇಕು ಎಂದರು.
ಇಲ್ಲಿ ಉತ್ತಮವಾದ ಗ್ರಂಥಾಲಯ ಸೌಲಭ್ಯವಿದ್ದು ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಎಲ್ಲ ಅನುಕೂಲತೆಗಳು ಇಲ್ಲಿದ್ದು ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಹಾಜರಾಗಿ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಮಹಾವಿದ್ಯಾಲಯದ ಆವರಣದಲ್ಲಿ ಮೊಬೈಲ್ ಅನಗತ್ಯವಾಗಿ ಬಳಸದೆ ಉತ್ತಮ ಜ್ಞಾನ ವೃದ್ದಿಸಿಕೊಳ್ಳಬೇಕು. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸಂಪೂರ್ಣ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯ ನಿಮ್ಮೊಂದಿಗಿದೆ. ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ತಿನ ನಿಟ್ಟಿನಲ್ಲಿ ಮಹಾವಿದ್ಯಾಲಯದಲ್ಲಿ ವಿವಿಧ ಕಂಪನಿಗಳಿಂದ ಕ್ಯಾಂಪಸ್ ಡ್ರೈವ್ ನಡೆಸಲಾಗುತ್ತದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಪ್ರೊ,ಎಸ್.ಜಿ.ಜೋಷಿ ವಿಡಿಯೋ ಪ್ರದರ್ಶಿಸಿದರು. ವಿವಿಧ ವಿಭಾಗಗಳ ಅಧಿಕಾರಿಗಳಾದ ಯುಯುಸಿಎಂಎಸ್ ಪ್ರೊ.ಪವನ್ ಮಹಿಂದ್ರಕರ್, ಗ್ರಂಥಾಲಯ ಸವಿತಾ ಕನಕರೆಡ್ಡಿ, ಎನೆಸ್ಸೆಸ್ ಕೃಷ್ಣಾ ಮಂಡ್ಲಾ, ಎನ್‌ಸಿಸಿ ಡಾ.ರಾಮಚಂದ್ರ ನಾಯಕ, ಸ್ಕೌಟ್ಸ್ ಮತ್ತು ಗೈಡ್ಸ್ ಡಾ.ಅನೀಲ.ನಾಯಕ, ಯುಥ್ ರೆಡ್ ಕ್ರಾಸ್ ಮತ್ತು ಕ್ರೀಡೆ ಡಾ.ಅನೀಲಕುಮಾರ, ಪಾಟೀಲ, ಸಂಸ್ಕೃತಿಕ ಪ್ರೊ.ಶ್ರೀದೇವಿ ಬೈರೋಡಗಿ, ಆರ್ಟ್ಸ ವಿಭಾಗಗಳ ಪರಿಚಯ ಡಾ.ಶ್ರೀನಿವಾಸ ದೊಡ್ಡಮನಿ, ವಿಜ್ಞಾನ ವಿಭಾಗಗಳ ಪರಿಚಯ ಪ್ರೊ.ಸ್ವಾತಿ ಪಾಟೀಲ, ಬಿಸಿಎ ವಿಭಾಗದ ಪರಿಚಯವನ್ನು ಪ್ರೊ,ಎಸ್,ಡಿ,ಪಾಟೀಲ, ಮಾಡಿದರು.
ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ ವಂದಿಸಿದರು. ಪ್ರೊ.ಅಶ್ವಿನಿ.ಹಿರೇಮಠ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ, ಉಪಪ್ರಾಚಾರ್ಯ ಪ್ರೊಎ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಮಹಾವಿದ್ಯಾಲಯದ ಎಲ್ಲ ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.