ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಸಿಬಿಎಸ್‌ಇ ಶಾಲೆಯ ಆವರಣದಲ್ಲಿರುವ ನಂದೀಶ್ವರ ರಂಗ ಮಂದಿರದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿಯವರ ೧೫೬ ನೇ ಜಯಂತಿ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ಪ್ರವಚನದಲ್ಲಿ ಸೋಮವಾರ ಸಂಜೆ ವಿರಾಗಿ ಚಲನಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಸೆಪ್ಟಂಬರ್ ೨೪ರಿಂದ ಪ್ರತಿನಿತ್ಯ ಸಂಜೆ ೭ ಗಂಟೆಗೆ ಉಪ್ಪಿನಬೇಟಗೇರಿಯ ಕುಮಾರವಿರುಪಾಕ್ಷ ಸ್ವಾಮೀಜಿಯವರಿಂದ ಹಾನಗಲ್ಲ ಕುಮಾರ ಸ್ವಾಮೀಜಿಯವರ ಜೀವನ ದರ್ಶನ ಪ್ರವಚನ ನಡೆಯುತ್ತಿದೆ. ಪ್ರವಚನ ಮಂಗಲ ಸಮಾರಂಭದ ಮುನ್ನ ದಿನ ಸೋಮವಾರ ಪ್ರವಚನ ಮುಕ್ತಾಯವಾದ ನಂತರ ವಿರಾಗಿ ಚಲನಚಿತ್ರದ ಪ್ರದರ್ಶನವನ್ನು ಸಚಿವ ಶಿವಾನಂದ ಪಾಟೀಲ ಸೇರಿದಂತೆ ಅನೇಕ ಗಣ್ಯರು, ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಜನರು ವೀಕ್ಷಿಸಿದರು.
ಹಾನಗಲ್ಲ ಕುಮಾರ ಸ್ವಾಮೀಜಿಯವರ ಜೀವನಾಧಾರಿತ ಚಲನಚಿತ್ರ ವಿರಾಗಿ ಚಲನಚಿತ್ರವು ರಾತ್ರಿ ೯ ಗಂಟೆಗೆ ಆರಂಭವಾಗಿ ತಡ ರಾತ್ರಿ ೧೨ ಗಂಟೆಯ ನಂತರ ಮುಕ್ತಾಯವಾಗಿತ್ತು. ಸಚಿವ ಶಿವಾನಂದ ಪಾಟೀಲರು ಪ್ರವಚನ ನಡೆಯುವ ವೇಳೆಯಲ್ಲಿ ಆಗಮಿಸಿ ಚಲನಚಿತ್ರ ವೀಕ್ಷಿಸಿದರು. ಇವರೊಂದಿಗೆ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷ ಬೀಳಗಿಯ ಗುರುಪಾದೇಶ್ವರ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯರು, ಸದಾಶಿವ ಸ್ವಾಮೀಜಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರೀಗಳು, ಹಿರಿಯರಾದ ಸಂಗಪ್ಪ ಅಡಗಿಮನಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಶೇಖರ ಗೊಳಸಂಗಿ, ಎಂ.ಜಿ.ಆದಿಗೊಂಡ, ಬಸವರಾಜ ಹಾರಿವಾಳ, ರವಿ ರಾಠೋಡ, ಎಸ್.ಜಿ.ಪಾಟೀಲ, ಎಸ್.ಎಸ್.ಹಿರೇಮಠ, ಎಚ್.ಬಿ.ಬಾರಿಕಾಯಿ,ಪ್ರಭಾಕರ ಖೇಡದ, ಶಿವು ಮಡಿಕೇಶ್ವರ, ಕೊಟ್ರೇಶಿ ಹೆಗ್ಡಾಳ, ಎಂ.ಬಿ.ತೋಟದ ಅನೇಕರು ಇದ್ದರು.
Related Posts
Add A Comment