Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮಟ್ಟಿ: ಇಲ್ಲಿಯ ಚಿಮ್ಮಲಗಿ ಭಾಗ-೧ ಎ ಗ್ರಾಮದ ಹನುಮಂತ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲು ತಂದಿದ್ದ ಶಿವನ ಮೂರ್ತಿ, ಬಸವಣ್ಣ ಹಾಗೂ ಗಣಪತಿ ಮೂರ್ತಿಗೆ ಯುವಕನೊಬ್ಬ ಹಾನಿಗೊಳಿಸಿದ ಘಟನೆ ಮಂಗಳವಾರ ಜರುಗಿದೆ. ದೇವಸ್ಥಾನ ಸಮಿತಿಯವರು ಕಳೆದ ಒಂದು ವರ್ಷದ ಹಿಂದೆ ಪ್ರತಿಷ್ಠಾಪನೆಗಾಗಿ ತಂದು ಕೊಠಡಿಯಲ್ಲಿಟ್ಟಿದ್ದ ಈ ಮೂರು ಮೂರ್ತಿಗಳನ್ನು ಅದೇ ಗ್ರಾಮದ ನಿವಾಸಿ ಗೌಸ್ ಪಾಶಾ ಬಂದೇನವಾಜ್ ತೊರವಿ ಬಾಗಿಲು ಮುರಿದು ಕೆಳಕ್ಕೆ ಎಸೆದಿದ್ದಾನೆ. ಅಲ್ಲದೇ ಅದಕ್ಕೆ ಸುತ್ತಿದ್ದ ಬಟ್ಟೆಯನ್ನು ಸುಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪಿಎಸ್ ಐ ಶಿವರಾಜ ಧರಿಗೋಣ ತಿಳಿಸಿದ್ದಾರೆ.ಈ ಮೂರು ಮೂರ್ತಿಗಳು ಅಲ್ಪ ಭಗ್ನಗೊಂಡಿವೆ ಎನ್ನಲಾಗಿದೆ. ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಸೇರಿ ಘಟನೆಯನ್ನು ಖಂಡಿಸಿದರು. ದೇವಸ್ಥಾನ ಸಮಿತಿಯವರು ತಕ್ಷಣವೇ ನಿಡಗುಂದಿ ಪೊಲೀಸರ ಗಮನಕ್ಕೆ ತಂದರು.ಈ ಕುರಿತು ದೇವಸ್ಥಾನ ಸಮಿತಿಯವರು ದೂರು ನೀಡಿದ್ದಾರೆ. ಆರೋಪಿ ಗೌಸ್ ಪಾಶಾ ಬಂದೇನವಾಜ್ ನನ್ನು ಬಂಧಿಸಲಾಗಿದೆ, ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ ನರೇಗಾ ಕೂಲಿಕಾರರಿಗೆ ಕೆಲಸ ನೀಡಲು ಗ್ರಾಮ ಪಂಚಾಯತಿ ಸಿದ್ಧವಾಗಿದ್ದು, ಯಾರು ವಲಸೆ ಹೋಗದೆ ನಿಮ್ಮೂರಲ್ಲೆ ದುಡಿದು ಆರ್ಥಿಕ ಸಾವಲಂಬಿಗಳಾಗಿ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಗಯ್ಯ ಹಿರೇಮಠ ತಿಳಿಸಿದರು.ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಬರಗಾಲ ಪರಿಸ್ಥಿತಿಯಲ್ಲಿ ಬೆಳೆಗಳು ಒಣಗುತ್ತಿದ್ದು, ರೈತರು, ಕೃಷಿ ಕೂಲಿ ಕಾರ್ಮಿಕರು ನಷ್ಟಕ್ಕೆ ಒಳಗುತ್ತಿದ್ದಾರೆ. ಕೃಷಿ ವಲಯದಲ್ಲಿ ಕೆಲಸ ಇಲ್ಲದೆ ಜನರು ಉದ್ಯೋಗ ಹರಸಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ನರೇಗಾ ಕೂಲಿಕಾರರಿಗೆ ಕೆಲಸ ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಅಗತ್ಯ ಕಾಮಗಾರಿಗಳನ್ನು ಗಮನಕ್ಕೆ ತರುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ನರೇಗಾ ಯೋಜನೆಯ ೨೦೨೪-೨೫ ನೇ ಸಾಲಿನ ಕಾರ್ಮಿಕ ಆಯವ್ಯಯ ಕುರಿತು ಚರ್ಚಿಸಿ ಬೇಡಿಕೆಗೆ ಅನುಗುಣವಾಗಿವಾಗಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ತಿಳಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ…
ವಿಜಯಪುರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಸನ್ ೨೦೨೩ರಿಂದ ೨೦೨೮ನೇ ಸಾಲಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆಗೆ ಒಟ್ಟು ೫೫ ನಾಮಪತ್ರಗಳು ಸ್ವೀಕೃತವಾಗಿದ್ದು, ಅಕ್ಟೊಬರ್ ೪ರಂದು ನಾಮಪತ್ರಗಳನ್ನು ಪರಿಶೀಲಿಸಲಾಗಿ, ಒಟ್ಟು ೪೩ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣಾಧಿಕಾರಿಗಳಾದ ವಿಜಯಪುರ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ವಿಜಯಪುರ: ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಅಕ್ಟೋಬರ್ ೬ ರಂದು ವಿಜಯಪುರ ಜಿಲ್ಲೆಗೆ ಆಗಮಿಸಿ ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದೆ.ಕೇಂದ್ರ ತಂಡ ಅಕ್ಟೋಬರ್ ೬ ರಂದು ಮಧ್ಯಾಹ್ನ ೩ ಗಂಟೆಗೆ ಅರ್ಜುಣಗಿಗೆ ಆಗಮಿಸಿ ತೊಗರಿ ಹಾಗೂ ಮೆಕ್ಕೆಜೋಳ ಬೆಳೆಗಳನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ ೩-೧೫ಕ್ಕೆ ಅರ್ಜುಣಗಿಯಿಂದ ಹೊರಟು ಮಧ್ಯಾಹ್ನ ೩-೩೦ಕ್ಕೆ ಯಕ್ಕುಂಡಿ ಗ್ರಾಮಕ್ಕೆ ಆಗಮಿಸಿ, ಯಕ್ಕುಂಡಿ ಗ್ರಾಮದಲ್ಲಿ ಕಬ್ಬು ಬೆಳೆ ಹಾಗೂ ಯಕ್ಕುಂಡಿ ಕೆರೆ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ ೩-೪೫ಕ್ಕೆ ಯಕ್ಕುಂಡಿಯಿಂದ ಹೊರಟು ಮಧ್ಯಾಹ್ನ ೪ ಗಂಟೆಗೆ ಬಬಲೇಶ್ವರಕ್ಕೆ ಆಗಮಿಸಿ, ಬಬಲೇಶ್ವರದಲ್ಲಿ ತೊಗರಿ ಬೆಳೆಗಳ ವೀಕ್ಷಣೆ ನಡೆಸಲಿದ್ದಾರೆ. ಸಂಜೆ ೪-೦೫ಕ್ಕೆ ಬಬಲೇಶ್ವರದಿಂದ ಹೊರಟು, ೪-೧೫ಕ್ಕೆ ಸಾರವಾಡ ಗ್ರಾಮದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳ ವೀಕ್ಷಣೆ ಮಾಡಿ, ೪-೩೦ಕ್ಕೆ ಸಾರವಾಡದಿಂದ ಹೊರಟು ೪-೪೦ಕ್ಕೆ ವಿಜಯಪುರಕ್ಕೆ ಆಗಮಿಸಲಿದೆ.ಸಂಜೆ…
ವಿಜಯಪುರ: ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಅಕ್ಟೋಬರ್ ೬ ರಂದು ವಿಜಯಪುರ ಜಿಲ್ಲೆಗೆ ಆಗಮಿಸಿ ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದೆ.ಕೇಂದ್ರ ತಂಡ ಅಕ್ಟೋಬರ್ ೬ ರಂದು ಮಧ್ಯಾಹ್ನ ೩ ಗಂಟೆಗೆ ಅರ್ಜುಣಗಿಗೆ ಆಗಮಿಸಿ ತೊಗರಿ ಹಾಗೂ ಮೆಕ್ಕೆಜೋಳ ಬೆಳೆಗಳನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ ೩-೧೫ಕ್ಕೆ ಅರ್ಜುಣಗಿಯಿಂದ ಹೊರಟು ಮಧ್ಯಾಹ್ನ ೩-೩೦ಕ್ಕೆ ಯಕ್ಕುಂಡಿ ಗ್ರಾಮಕ್ಕೆ ಆಗಮಿಸಿ, ಯಕ್ಕುಂಡಿ ಗ್ರಾಮದಲ್ಲಿ ಕಬ್ಬು ಬೆಳೆ ಹಾಗೂ ಯಕ್ಕುಂಡಿ ಕೆರೆ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ ೩-೪೫ಕ್ಕೆ ಯಕ್ಕುಂಡಿಯಿಂದ ಹೊರಟು ಮಧ್ಯಾಹ್ನ ೪ ಗಂಟೆಗೆ ಬಬಲೇಶ್ವರಕ್ಕೆ ಆಗಮಿಸಿ, ಬಬಲೇಶ್ವರದಲ್ಲಿ ತೊಗರಿ ಬೆಳೆಗಳ ವೀಕ್ಷಣೆ ನಡೆಸಲಿದ್ದಾರೆ. ಸಂಜೆ ೪-೦೫ಕ್ಕೆ ಬಬಲೇಶ್ವರದಿಂದ ಹೊರಟು, ೪-೧೫ಕ್ಕೆ ಸಾರವಾಡ ಗ್ರಾಮದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳ ವೀಕ್ಷಣೆ ಮಾಡಿ, ೪-೩೦ಕ್ಕೆ ಸಾರವಾಡದಿಂದ ಹೊರಟು ೪-೪೦ಕ್ಕೆ ವಿಜಯಪುರಕ್ಕೆ ಆಗಮಿಸಲಿದೆ.ಸಂಜೆ…
ವಿಜಯಪುರ: ವಿಜಯಪುರ ಜಿಲ್ಲೆಗೆ ಅಕ್ಟೋಬರ್ ೬ ರಂದು ಕೇಂದ್ರ ಬರ ಅಧ್ಯಯನ ತಂಡ ಆಗಮಿಸಲಿರುವ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬಬಲೇಶ್ವರ ತಾಲೂಕಿನ ಅರ್ಜುಣಗಿ, ಸಾರವಾಡ ಹಾಗೂ ಬಬಲೇಶ್ವರ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿದರು.ಅರ್ಜುಣಗಿ ಗ್ರಾಮದಲ್ಲಿ ತೊಗರಿ ಬೆಳೆ, ಯಕ್ಕುಂಡಿ ಗ್ರಾಮದಲ್ಲಿ ಕಬ್ಬು ಬೆಳೆ ಹಾನಿ ಪರಿಶೀಲಿಸಿ, ನಂತರ ಯಕ್ಕುಂಡಿ ಕೆರೆ ವೀಕ್ಷಣೆ ಮಾಡಿದರು.ಬಬಲೇಶ್ವರದಲ್ಲಿ ಮಳೆಯಿಲ್ಲದೇ ಹಾಳಾದ ತೊಗರಿ ಬೆಳೆ ಹಾಗೂ ಸಾರವಾಡದಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಬೆಳೆಗಳ ವೀಕ್ಷಣೆ ಮಾಡಿ, ಸಾರವಾಡ ಗ್ರಾಮದಲ್ಲಿ ಎನ್‌ಆರ್‌ಇಜಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಬಬಲೇಶ್ವರ ತಹಶೀಲ್ದಾರ ಸಂತೋಷ ಮ್ಯಾಗೇರಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ದೇವರಹಿಪ್ಪರಗಿ: ಬರಗಾಲ ನಿರ್ವಹಣೆಗೆ ತಾಲ್ಲೂಕಿನ ಎಲ್ಲ ಪಂಚಾಯಿತಿಗಳ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಜರುಗಿದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವರಹಿಪ್ಪರಗಿ ತಾಲ್ಲೂಕು ಸಹ ಬರಗಾಲಪೀಡಿತ ಎಂದು ಘೋಷಣೆಯಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು.ಚಾಲ್ತಿ ಇಲ್ಲದ ಜಾಬ್‌ಕಾರ್ಡ್ಗಳನ್ನು ಸಕ್ರೀಯ ಮಾಡಿಸುವುದು, ಜಾಬ್‌ಕಾರ್ಡ್ ಮಾಡುವುದು, ನರೇಗಾ ಯೋಜನೆ ಅಡಿ ಗೆಳೆಯರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ಒದಗಿಸುವುದು, ಗ್ರಾಮಕಾಯಕ ಮಿತ್ರ, ತಾಂಡ ರೋಜ್‌ಗಾರ್ ಮಿತ್ರ ಅಡಿ ಮನೆಮನೆಗೆ ಭೇಟಿ ನೀಡಿ ಕೆಲಸದ ಬೇಡಿಕೆಯನ್ನು ಪಡೆದು ಜನರಿಗೆ ಕೆಲಸ ನೀಡುವಲ್ಲಿ ನೆರವಾಗಬೇಕು ಎಂದರು. ಅಲ್ಲದೆ ಸಕಾಲ, ಪಂಚಾಯಿತಿಗಳಲ್ಲಿ ಇ ಅಟೆಂಡೆನ್ಸ್, ಕೆಲಸವನ್ನು ಮಾಡಲು ಪಿಡಿಓಗಳಿಗೆ ತಿಳಿಸಿದರು.ಸಹಾಯಕ ನಿರ್ದೇಶಕ(ನರೇಗಾ) ಶಾಂತಗೌಡ ನ್ಯಾಮಣ್ಣವರ, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ ಪವಾರ, ತಾಲ್ಲೂಕು ತಾಂತ್ರಿಕ ಸಂಯೋಜಕ ಶಿವಶರಣ ವಂದಗನೂರ, ಜಿ.ಎಸ್.ರೋಡಗಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ,…
ದೇವರಹಿಪ್ಪರಗಿ: ಮತಕ್ಷೇತ್ರದಲ್ಲಿ ಬರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದ್ದು, ರೈತರು, ಜಾನುವಾರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಅನೂಕೂಲ ಕಲ್ಪಿಸಲಾಗುತ್ತಿದೆ. ಕ್ಷೇತ್ರದ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ತಿಳಿಸಿದ್ದಾರೆ.ಬುಧವಾರ ಶಾಸಕರ ಕಚೇರಿ ಮೂಲಕ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮತಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ಮಾತನಾಡಿ, ಕಳೆದ ಬಾರಿ ಹಲವು ಕೆರೆಗಳಿಗೆ ನೀರು ಹರಿದು ಹೊಗಿರುವುದಿಲ್ಲ. ಆದ ಕಾರಣ ಈ ಬಾರಿ ದೇವರಹಿಪ್ಪರಗಿ ಮತಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೆರೆಗಳ ತುಂಬುವ ವಿಷಯಕ್ಕಾಗಿ ಅಬಕಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ. ತಿಮ್ಮಾಪೂರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಖುದ್ದಾಗಿ ಭೇಟಿಯಾಗಿ ಒತ್ತಡ ಹಾಕಲಾಗಿದೆ. ಸಚಿವರು ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಪ್ರತಿದಿನ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ನಿರಂತರ…
ವಿಜಯಪುರ: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ದಿ ಆರ್ಥಿಕ ನೆರವು ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಬ್ಯಾಂಕುಗಳ ಸಹಯೋಗದೊಂದಿಗೆ ನೇರ ಸಾಲ ಯೋಜನೆ, ಸ್ವಾವಲಂಬಿ ಸಾರತಿ ಯೋಜನೆ, ವಿದೇಶ ವ್ಯಾಸಂಗ ಯೋಜನೆಯಡಿ ಸೇವಾಸಿಂಧು ಪೋರ್ಟ್ಲ್ : https://www.sevasindhu.karnataka.gov.in ಮೂಲಕ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯಡಿ ಸೌಲಭ್ಯ ಪಡೆಯಲು ಕೌಶಲ್ಯ ಕರ್ನಾಟಕ ತಂತ್ರಾಂಶ (https://www.kaushalkar.com) ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅರ್ಜಿದಾರರು ದಿನಾಂಕ : ೩೦-೧೦-೨೦೨೩ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಶೈಕ್ಷಣಿಕ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ : https://www.kvcdcl.karnataka.gov.in ಅಥವಾ ಸಹಾಯವಾಣಿ…
ವಿಜಯಪುರ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಶ್ರೀ ಶಹಜೀರಾಜೇ ಸಮೃದ್ದಿ ಯೋಜನೆ (ಸ್ವಯಂ ಉದ್ಯೊಗ ನೇರ ಸಾಲ ಮತ್ತು ಸಹಾಯಧನ), ಜೀಜಾವು-ಜಲಭಾಗ್ಯ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಮರಾಠ ಮಿಲ್ಟಿಹೋಟೆಲ್ ಯೋಜನೆ, ಸ್ವಯಂ ಉದ್ಯೋಗ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆಯಡಿ ಸೇವಾಸಿಂಧು ಪೋರ್ಟ್ಲ್ : https://www.sevasindhu.karnataka.gov.in ಮೂಲಕ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯಡಿ ಸೌಲಭ್ಯ ಪಡೆಯಲು ಕೌಶಲ್ಯ ಕರ್ನಾಟಕ ತಂತ್ರಾಂಶ(https://www.kaushalkar.com) ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅರ್ಜಿದಾರರು ದಿನಾಂಕ : ೩೦-೧೦-೨೦೨೩ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ : https://www.kmcdc.karnataka.gov.in ಹಾಗೂ ಸಹಾಯವಾಣಿ ೮೮೬೭೫೩೭೭೯೯, ದೂ:೦೮೦-೨೯೯೦೩೯೯೪ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಭಾವಿಕಟ್ಟಿ…
