ದೇವರಹಿಪ್ಪರಗಿ: ಬರಗಾಲ ನಿರ್ವಹಣೆಗೆ ತಾಲ್ಲೂಕಿನ ಎಲ್ಲ ಪಂಚಾಯಿತಿಗಳ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಜರುಗಿದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವರಹಿಪ್ಪರಗಿ ತಾಲ್ಲೂಕು ಸಹ ಬರಗಾಲಪೀಡಿತ ಎಂದು ಘೋಷಣೆಯಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಚಾಲ್ತಿ ಇಲ್ಲದ ಜಾಬ್‌ಕಾರ್ಡ್ಗಳನ್ನು ಸಕ್ರೀಯ ಮಾಡಿಸುವುದು, ಜಾಬ್‌ಕಾರ್ಡ್ ಮಾಡುವುದು, ನರೇಗಾ ಯೋಜನೆ ಅಡಿ ಗೆಳೆಯರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ಒದಗಿಸುವುದು, ಗ್ರಾಮಕಾಯಕ ಮಿತ್ರ, ತಾಂಡ ರೋಜ್‌ಗಾರ್ ಮಿತ್ರ ಅಡಿ ಮನೆಮನೆಗೆ ಭೇಟಿ ನೀಡಿ ಕೆಲಸದ ಬೇಡಿಕೆಯನ್ನು ಪಡೆದು ಜನರಿಗೆ ಕೆಲಸ ನೀಡುವಲ್ಲಿ ನೆರವಾಗಬೇಕು ಎಂದರು. ಅಲ್ಲದೆ ಸಕಾಲ, ಪಂಚಾಯಿತಿಗಳಲ್ಲಿ ಇ ಅಟೆಂಡೆನ್ಸ್, ಕೆಲಸವನ್ನು ಮಾಡಲು ಪಿಡಿಓಗಳಿಗೆ ತಿಳಿಸಿದರು.
ಸಹಾಯಕ ನಿರ್ದೇಶಕ(ನರೇಗಾ) ಶಾಂತಗೌಡ ನ್ಯಾಮಣ್ಣವರ, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ ಪವಾರ, ತಾಲ್ಲೂಕು ತಾಂತ್ರಿಕ ಸಂಯೋಜಕ ಶಿವಶರಣ ವಂದಗನೂರ, ಜಿ.ಎಸ್.ರೋಡಗಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಎಂಐಎಸ್ ಸಂಯೋಜಕ ಆದಣ್ಣ ಹೊಸಮನಿ, ಭೀಮರಾಯ ಭಾವಿಕಟ್ಟಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಓ, ಬೇರ್‌ಪೂಟ್ ಟೆಕ್ನಿಷಿಯನ್, ಗ್ರಾಮ ಕಾಯಕ ಮಿತ್ರ, ತಾಂಡಾ ರೋಜಗಾರ್ ಮಿತ್ರ ಹಾಗೂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
ಚಾಲ್ತಿ ಇಲ್ಲದ ಜಾಬ್‌ಕಾರ್ಡ್ಗಳನ್ನು ಸಕ್ರೀಯಗೊಳಿಸಿ :ಭಾರತಿ ಚೆಲುವಯ್ಯ
Related Posts
Add A Comment