ವಿಜಯಪುರ: ವಿಜಯಪುರ ಜಿಲ್ಲೆಗೆ ಅಕ್ಟೋಬರ್ ೬ ರಂದು ಕೇಂದ್ರ ಬರ ಅಧ್ಯಯನ ತಂಡ ಆಗಮಿಸಲಿರುವ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬಬಲೇಶ್ವರ ತಾಲೂಕಿನ ಅರ್ಜುಣಗಿ, ಸಾರವಾಡ ಹಾಗೂ ಬಬಲೇಶ್ವರ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿದರು.
ಅರ್ಜುಣಗಿ ಗ್ರಾಮದಲ್ಲಿ ತೊಗರಿ ಬೆಳೆ, ಯಕ್ಕುಂಡಿ ಗ್ರಾಮದಲ್ಲಿ ಕಬ್ಬು ಬೆಳೆ ಹಾನಿ ಪರಿಶೀಲಿಸಿ, ನಂತರ ಯಕ್ಕುಂಡಿ ಕೆರೆ ವೀಕ್ಷಣೆ ಮಾಡಿದರು.
ಬಬಲೇಶ್ವರದಲ್ಲಿ ಮಳೆಯಿಲ್ಲದೇ ಹಾಳಾದ ತೊಗರಿ ಬೆಳೆ ಹಾಗೂ ಸಾರವಾಡದಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಬೆಳೆಗಳ ವೀಕ್ಷಣೆ ಮಾಡಿ, ಸಾರವಾಡ ಗ್ರಾಮದಲ್ಲಿ ಎನ್‌ಆರ್‌ಇಜಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಬಬಲೇಶ್ವರ ತಹಶೀಲ್ದಾರ ಸಂತೋಷ ಮ್ಯಾಗೇರಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Related Posts
Add A Comment