ಆಲಮಟ್ಟಿ: ಇಲ್ಲಿಯ ಚಿಮ್ಮಲಗಿ ಭಾಗ-೧ ಎ ಗ್ರಾಮದ ಹನುಮಂತ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲು ತಂದಿದ್ದ ಶಿವನ ಮೂರ್ತಿ, ಬಸವಣ್ಣ ಹಾಗೂ ಗಣಪತಿ ಮೂರ್ತಿಗೆ ಯುವಕನೊಬ್ಬ ಹಾನಿಗೊಳಿಸಿದ ಘಟನೆ ಮಂಗಳವಾರ ಜರುಗಿದೆ.
ದೇವಸ್ಥಾನ ಸಮಿತಿಯವರು ಕಳೆದ ಒಂದು ವರ್ಷದ ಹಿಂದೆ ಪ್ರತಿಷ್ಠಾಪನೆಗಾಗಿ ತಂದು ಕೊಠಡಿಯಲ್ಲಿಟ್ಟಿದ್ದ ಈ ಮೂರು ಮೂರ್ತಿಗಳನ್ನು ಅದೇ ಗ್ರಾಮದ ನಿವಾಸಿ ಗೌಸ್ ಪಾಶಾ ಬಂದೇನವಾಜ್ ತೊರವಿ ಬಾಗಿಲು ಮುರಿದು ಕೆಳಕ್ಕೆ ಎಸೆದಿದ್ದಾನೆ. ಅಲ್ಲದೇ ಅದಕ್ಕೆ ಸುತ್ತಿದ್ದ ಬಟ್ಟೆಯನ್ನು ಸುಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪಿಎಸ್ ಐ ಶಿವರಾಜ ಧರಿಗೋಣ ತಿಳಿಸಿದ್ದಾರೆ.
ಈ ಮೂರು ಮೂರ್ತಿಗಳು ಅಲ್ಪ ಭಗ್ನಗೊಂಡಿವೆ ಎನ್ನಲಾಗಿದೆ. ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಸೇರಿ ಘಟನೆಯನ್ನು ಖಂಡಿಸಿದರು. ದೇವಸ್ಥಾನ ಸಮಿತಿಯವರು ತಕ್ಷಣವೇ ನಿಡಗುಂದಿ ಪೊಲೀಸರ ಗಮನಕ್ಕೆ ತಂದರು.
ಈ ಕುರಿತು ದೇವಸ್ಥಾನ ಸಮಿತಿಯವರು ದೂರು ನೀಡಿದ್ದಾರೆ. ಆರೋಪಿ ಗೌಸ್ ಪಾಶಾ ಬಂದೇನವಾಜ್ ನನ್ನು ಬಂಧಿಸಲಾಗಿದೆ, ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Posts
Add A Comment