ವಿಜಯಪುರ: ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಅಕ್ಟೋಬರ್ ೬ ರಂದು ವಿಜಯಪುರ ಜಿಲ್ಲೆಗೆ ಆಗಮಿಸಿ ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದೆ.
ಕೇಂದ್ರ ತಂಡ ಅಕ್ಟೋಬರ್ ೬ ರಂದು ಮಧ್ಯಾಹ್ನ ೩ ಗಂಟೆಗೆ ಅರ್ಜುಣಗಿಗೆ ಆಗಮಿಸಿ ತೊಗರಿ ಹಾಗೂ ಮೆಕ್ಕೆಜೋಳ ಬೆಳೆಗಳನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ ೩-೧೫ಕ್ಕೆ ಅರ್ಜುಣಗಿಯಿಂದ ಹೊರಟು ಮಧ್ಯಾಹ್ನ ೩-೩೦ಕ್ಕೆ ಯಕ್ಕುಂಡಿ ಗ್ರಾಮಕ್ಕೆ ಆಗಮಿಸಿ, ಯಕ್ಕುಂಡಿ ಗ್ರಾಮದಲ್ಲಿ ಕಬ್ಬು ಬೆಳೆ ಹಾಗೂ ಯಕ್ಕುಂಡಿ ಕೆರೆ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ ೩-೪೫ಕ್ಕೆ ಯಕ್ಕುಂಡಿಯಿಂದ ಹೊರಟು ಮಧ್ಯಾಹ್ನ ೪ ಗಂಟೆಗೆ ಬಬಲೇಶ್ವರಕ್ಕೆ ಆಗಮಿಸಿ, ಬಬಲೇಶ್ವರದಲ್ಲಿ ತೊಗರಿ ಬೆಳೆಗಳ ವೀಕ್ಷಣೆ ನಡೆಸಲಿದ್ದಾರೆ. ಸಂಜೆ ೪-೦೫ಕ್ಕೆ ಬಬಲೇಶ್ವರದಿಂದ ಹೊರಟು, ೪-೧೫ಕ್ಕೆ ಸಾರವಾಡ ಗ್ರಾಮದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳ ವೀಕ್ಷಣೆ ಮಾಡಿ, ೪-೩೦ಕ್ಕೆ ಸಾರವಾಡದಿಂದ ಹೊರಟು ೪-೪೦ಕ್ಕೆ ವಿಜಯಪುರಕ್ಕೆ ಆಗಮಿಸಲಿದೆ.
ಸಂಜೆ ೫ ಗಂಟೆಗೆ ವಿಜಯಪುರದಿಂದ ಹೊರಟು ೫-೩೦ಕ್ಕೆ ಹೊರ್ತಿ ಗ್ರಾಮದಲ್ಲಿ ಲಿಂಬೆ ಬೆಳೆ, ಸಜ್ಜೆ ಹಾಗೂ ಮೆಕ್ಕೆ ಜೋಳ ಬೆಳೆಗಳ ವೀಕ್ಷಣೆ ನಡೆಸಿ, ಸಂಜೆ ೫-೪೫ಕ್ಕೆ ಹೊರ್ತಿಯಿಂದ ಹೊರಟು, ೫-೫೦ಕ್ಕೆ ಸಾವಳಸಂಗ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡಿರುವ ಅಮೃತ ಸರೋವರ ಅರಣ್ಯ ಕಾಮಗಾರಿಗಳ ವೀಕ್ಷಣೆ ನಡೆಸಿ, ಸಂಜೆ ೬ ಗಂಟೆಗೆ ಸಾವಳಸಂಗದಿಂದ ಹೊರಟು ೬-೧೦ಕ್ಕೆ ಕಪನಿಂಬರಗಿ ಗ್ರಾಮದಲ್ಲಿ ಕಂಪನಿಂಬರಗಿ ಕೆರೆ ವೀಕ್ಷಣೆ, ಸಂಜೆ ೬-೧೫ಕ್ಕೆ ಕಪನಿಂಬರಗಿಯಿಂದ ಹೊರಟು ವಿಜಯಪುರಕ್ಕೆ ಆಗಮಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
Related Posts
Add A Comment