Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ದಿನಬಳಕೆಯ, ಐಶಾರಾಮಿ ವಸ್ತುಗಳು ಸೇರಿದಂತೆ ವಾಹನಗಳ ಬೆಲೆಗಳು ಗಗನಕ್ಕೇರಿರುವದನ್ನು ನಾವು ನೀವೆಲ್ಲ ಕಂಡಿದ್ದೇವೆ. ಆದರೆ ಸಾಕು ಪ್ರಾಣಿಗಳ ಬೆಲೆಗಳು ಕೂಡ ಮೂರು ಪಟ್ಟು ಹೆಚ್ಚಾಗಿರುವುದು ರೈತರಿಗೆ ಖುಷಿ ತಂದಿದೆ.ಹೌದು, ಇಲ್ಲೊಂದು ಹೋರಿ ಬರೊಬ್ಬರಿ ರೂ.೫.೧೦ ಲಕ್ಷಕ್ಕೆ ಮಾರಾಟವಾಗಿ ರಾಜ್ಯದ ಗಮನ ಸೆಳೆದಿದೆ.ಮುದ್ದೇಬಿಹಾಳ ತಾಲೂಕಿನ ಚೊಂಡಿ ಗ್ರಾಮದ ಹೋರಿ ಇಷ್ಟೊಂದು ಬೆಲೆಗೆ ಮಾರಾಟವಾಗಿ ರಾಜ್ಯದ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.ಸಾಮಾನ್ಯವಾಗಿ ಕಟ್ಟುಮಸ್ತಾದ ಒಂದು ಹೋರಿ ೪೦ ಸಾವಿರದಿಂದ ೧ ಲಕ್ಷದವರೆಗಿನ ಬೆಲೆಗೆ ಮಾರಾಟವಾಗುತ್ತದೆ. ಅಬ್ಬಬ್ಬಾ ಅಂದ್ರೆ ೧.೫೦ ಲಕ್ಷ ರೂಪಾಯಿಗೆ ರೈತರು ಮಾರಾಟ ಮಾಡುತ್ತಾರೆ. ಆದರೆ ಈ ಹೋರಿ ಬರೋಬ್ಬರಿ ರೂ.೫.೧೦ ಲಕ್ಷ ರೂಪಾಯಿಗೆ ಮಾರಾಟವಾಗಿದ್ದು ಅಚ್ಚರಿ ಮೂಡಿಸಿದೆ.ಈ ಹೋರಿ ಖಿಲಾರಿ ತಳಿಯ ಜವಾರಿ ಹೋರಿ. ತಾಲೂಕಿನ ಚೊಂಡಿ ಗ್ರಾಮದ ರೈತ ಶಿವಪ್ಪ ಕುಂಟೋಜಿ ಅವರಿಗೆ ಸೇರಿದ್ದ ಈ ಹೋರಿಗೆ ಈಪಾಟಿ ಬೆಲೆ ಬಂದಿದ್ದು ಶಿವಪ್ಪ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿವಪ್ಪನ ಮೂಲ ಕಸುಬು ವ್ಯವಸಾಯ. ಮೊದಲಿನಿಂದಲೂ ಚಿಕ್ಕ ಚಿಕ್ಕ…
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ ೨೩ ರಂದು ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮೊದಲನೇ ಮಹಡಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿ ಆಚರಣೆಯ ಕುರಿತು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಅ.೨೩ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ೯-೩೦ಕ್ಕೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಭಾವಚಿತ್ರ ಮೆರವಣಿಗೆ, ಬೆಳಿಗ್ಗೆ ೧೦:೩೦ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ, ವೇದಿಕೆ ಅಲಂಕಾರ, ಜಯಂತಿ ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಆಹ್ವಾನ, ರಾಣಿ ಚನ್ನಮ್ಮ ಕುರಿತು ಉಪನ್ಯಾಸ ಸೇರಿದಂತೆ ವೇದಿಕೆ ಕಾರ್ಯಕ್ರಮಕ್ಕೆ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಸೇರಿದಂತೆ ಎಲ್ಲ…
ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ವಿಜಯಪುರ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ೯ ಸಕ್ಕರೆ ಕಾರ್ಖಾನೆಗಳು ನವೆಂಬರ್ ೧ರಿಂದಲೇ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ನುರಿಸಿದ ೧೪ ದಿನಗಳಲ್ಲಿ ನಿಗದಿಪಡಿಸಿದ ಎಫ್.ಆರ್.ಪಿ. ದರದಂತೆ ಕಬ್ಬಿನ ಬಿಲ್ ಪಾವತಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಪ್ರಸಕ್ತ ೨೦೨೩-೨೪ ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ, ವ್ಯವಸ್ಥಾಪಕರು, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸರ್ಕಾರವು ನವೆಂಬರ್ ೧ರಿಂದ ನ.೧೫ರೊಳಗೆ ಏಕಕಾಲದಲ್ಲಿ ಪ್ರಾರಂಭಿಸುವಂತೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಪ್ರಸಕ್ತ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು. ರೈತರಿಗೆ ಕಬ್ಬಿನ ಬಿಲ್ ಪಾವತಿಗೆ ವಿಳಂಬ ಮಾಡದೇ ಎಫ್.ಆರ್.ಪಿ. ದರದಂತೆ ನಿಗದಿತ ಅವದಿಯಲ್ಲಿಯೇ ಬಿಲ್ ಪಾವತಿಸುವಂತೆ ಅವರು ಸೂಚನೆ ನೀಡಿದರು.ರೈತರಿಗೆ ಪಾವತಿಸಲಾಗುವ ಎಫ್.ಆರ್.ಪಿ. ದರ ಹಾಗೂ ಕಬ್ಬು ಕಟಾವು ಮತ್ತು ಸರಕು ಸಾಗಾಣಿಕಾ ಮೊತ್ತದ ಕುರಿತು…
ಢವಳಗಿ: ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಖಿಲ ಭಾರತ ಸೇವಾ ಅಡಿಯಲ್ಲಿ ಅಕ್ಟೋಬರ್ 16ರಿಂದ 20 ರವರಿಗೆ ಹೊಸ ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಆರ್.ಡಿ. ಪಿ.ಆರ್ ಇಲಾಖೆಯಿಂದ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಮಡಿವಾಳಪ್ಪ ಕಲ್ಲಪ್ಪ ಗುಡಿಮನಿ ಅವರು ಆಯ್ಕೆ ಆಗಿದ್ದಾರೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಮ್ ಬಿ ಲಾವಣ್ಯ ಅವರು ಆದೇಶ ಹೊರಡಿಸಿದ್ದಾರೆ.
ಕಲಕೇರಿ: ಪ್ರವಾದಿ ಮಹ್ಮದರ ವಾಣಿಯಂತೆ ಮನುಷ್ಯನ ಶ್ರೇಷ್ಟತೆ ಅವನ ನಡತೆಯಲ್ಲಿ ಅಡಗಿದ್ದು, ನನ್ನ ಕೈಯಿಂದ ಮತ್ತು ನಾಲಿಗೆಯಿಂದ ಇನ್ನೊಬ್ಬರಿಗೆ ನೋವುಂಟಾಗಬಾರದು ಈ ನಿಟ್ಟಿನಲ್ಲಿ ಪ್ರವಾದಿ ಮಹ್ಮದರ ಜನ್ಮದಿನದ ಅದ್ದೂರಿ ಆಚರಣೆಗಿಂತ ಅವರ ಅನುಸರಣೆ ಬಹಳ ಮುಖ್ಯ ಎಂಬುದನ್ನು ನಾವು ಅರಿಯಬೇಕು ಹಾಗೂ ತಾಯಿಯ ಸೇವೆ ಮಾಡಿದಾಗ ಮಾತ್ರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪ್ರವಚನಕಾರ ಜನಾಬ ಲಾಲಹುಸೇನಸಾಹೇಬ ಕಂದಗಲ್ ಇಲಕಲ್ ಹೇಳಿದರು.ಗ್ರಾಮದ ಗುರುವೀರಘಂಟೈ ಮಡಿವಾಳೇಶ್ವರರ ದೇವಸ್ಥಾನದ ಮುಂಭಾಗ ಆಯೋಜಿಸಲಾದ ಪ್ರವಾದಿ ಮಹಮ್ಮದರ ಜೀವನ ಚರಿತ್ರೆಯ ಸೀರತ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ತಾರತಮ್ಯ ಭಾವನೆ ತೊರೆದು ನಯವಿನಯದಿಂದ ವರ್ತಿಸಬೇಕು. ಮನುಷ್ಯ ಎಂಬ ನೆಲೆಯಲ್ಲಿ ಎಲ್ಲರನ್ನೂ ಪ್ರೀತಿಸುವಂತ ಔದಾರ್ಯತೆ ನಮ್ಮಲ್ಲಿ ಬರಬೇಕು, ಹೃದಯವಿದ್ದರೆ ಸಾಲದು, ಪ್ರತಿಯೊಬ್ಬರಲ್ಲಿಯೂ ಹೃದಯವಂತಿಕೆ ಇರಬೇಕು ಎಂದು ಹೇಳಿದರು.ಇಂದು ನಾವೆಲ್ಲ ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಮಹಾತ್ಮರನ್ನು ಮತ್ತು ಅವರ ಸಂದೇಶಗಳನ್ನು ಸಂಕುಚಿತಗೊಳಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದು, ದೇವರಿದ್ದಾನೆ ಎಂಬ ವಿಶ್ವಾಸ ಮತ್ತು ದೇವರ ಬಗ್ಗೆ ಭಯ ಭಕ್ತಿಯಿಂದ…
ಮುದ್ದೇಬಿಹಾಳ: ಡೆಂಗ್ಯೂ ತಡೆಗೆ ವ್ಯಾಪಕವಾಗಿ ಮಾಹಿತಿ ನೀಡುವ ಅಗತ್ಯವಿದೆ. ಡೆಂಗ್ಯೂ ಜ್ವರ ವೈರಸ್‌ನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಹೇಳಿದರು.ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಎದುರು ಡೆಂಗ್ಯು ಜಾಗೃತಿ ರಥ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ಡಂಗ್ಯೂ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಈ ಸೊಳ್ಳೆ ಕಚ್ಚಿದ ನಂತರ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವುಕಾಣಿಸುವದು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವದು ಹೀಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇಂತಹ ಯಾವುದೇ ಲಕ್ಷಣಗಳು ಗೋಚರಿಸಿದಾಗ ಮೊದಲು ವೈದ್ಯರನ್ನು ಕಾಣಬೇಕು ಎಂದರು.ಡೆಂಗಿ ಜ್ವರದ ಬಗ್ಗೆ ಜನರಲ್ಲಿ ಅರಿವು…
ಮುದ್ದೇಬಿಹಾಳ: ಚಾಲಕ ನಿಯಂತ್ರಣ ತಪ್ಪಿ ನಾಲ್ಕು ಚಕ್ರದ ಆಟೋ (ಟಾಟಾಏಸ್) ಪಲ್ಟಿಯಾಗಿ ನಾಲ್ವರ ಗಂಭೀರವಾಗಿ ಮತ್ತು ಸುಮಾರು ೧೨ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಜಂಗಮುರಾಳ ಗ್ರಾಮದ ಬಳಿ ನಡೆದಿದೆ.ಗಾಯಾಳುಗಳೆಲ್ಲರೂ ಹೊಲಗಳಲ್ಲಿ ಕೆಲಸ ಮಾಡಲು ಟಾಟಾಏಸ್ ನಲ್ಲಿ ಪ್ರಯಾಣಿಸುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ನಾಲ್ಕು ಜನ ಗಂಭೀರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನೆ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ದೌಡಾಯಿಸಿದ ಕುಂಟೋಜಿಯ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.
ಮುದ್ದೇಬಿಹಾಳ: ಪಟ್ಟಣ ಹಾಗೂ ನಾಲತವಾಡ ಗ್ರಾಮದಲ್ಲಿನ ಅಂಬೇಡ್ಕರ್ ವೃತ್ತವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಮುದ್ದೇಬಿಹಾಳ ಪಟ್ಟಣದ ಪುರಸಭೆ ಎದುರು ಕಾಯ್ದಿರಿಸಿದ ಜಾಗೆಯನ್ನು ದಲಿತರಿಗೆ ಮೀಸಲಿಡಬೇಕು, ಮೀನುಗಾರರ ಸಾಲ ಮನ್ನಾ ಮಾಡಬೇಕು, ಬಾರ್ ಮಾಲೀಕರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕಾಗಿ ಅಮಾನತ್ತುಗೊಂಡಿದ್ದ ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ ಮೇತ್ರಿ ಅವರು ಮರಳಿ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವದು ಕಾನೂನು ಬಾಹಿರವಾಗಿದ್ದು ಇವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು, ತಾಲೂಕಿನ ಗಂಗೂರ ಗ್ರಾಮದ ರಿ.ಸ.ನಂ ೧೧/೨, ೧೧/೩, ೧೧/೪ ಈ ಜಮೀನುಗಳನ್ನು ಮಾದಿಗ ಸಮಾಜದ ಸ್ಮಶಾನಕ್ಕೆ ಸರ್ಕಾರ ಶೀಘ್ರವಾಗಿ ಖರೀದಿಸಿ ಕೊಡಬೇಕು, ಪಟ್ಟಣದಲ್ಲಿ ಡಾ|| ಬಾಬು ಜಗಜೀವನರಾಂ ಮೂರ್ತಿ ಪ್ರತಿಷ್ಠಾಪಿಸಬೇಕೆನ್ನುವ ಹಕ್ಕೊತ್ತಾಯಗಳನ್ನು ಮುಂದಿಟ್ಟು ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಅ.೧೧ ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಡಿಎಸ್‌ಎಸ್ ಮುಖಂಡ ಡಿ.ಬಿ.ಮುದೂರ ಮಾತನಾಡಿ, ತಾಲೂಕಿನ ಗಂಗೂರ ಗ್ರಾಮದ ಮಾದಿಗ ಸಮಾಜದ ಸ್ಮಶಾನ ಭೂಮಿಯನ್ನು ಕೂಡಲೇ ಖರೀದಿಸಿ ಸಮಾಜಕ್ಕೆ ಕೊಡಬೇಕು. ಪಟ್ಟಣದ ಪುರಭೆ ಎದುರು ಇರುವ ಜಾಗೆಯಲ್ಲಿ…
ಸಿಂದಗಿ: ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿಯು ಸಂವಿಧಾನ ಬದ್ದವಾಗಿ ರಾಜ್ಯದ ಮಹಿಳೆಯರ ಮೇಲೆ ನಡೆಯುವ ಅನ್ಯಾಯ ಮತ್ತು ಅತ್ಯಾಚಾರಗಳ ಶೋಷಣೆ ದೌರ್ಜನ್ಯ ವಿರುದ್ದ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಡುವುದರೊಂದಿಗೆ ಸಂಘಟನೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೀಲಮ್ಮ ಯಡ್ರಾಮಿ, ಉಪಾಧ್ಯಕ್ಷರನ್ನಾಗಿ ಸುಷ್ಮಿತಾ ವಾಂಡಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸುಭದ್ರ ಮೇಲಿನಮನಿ, ಸಂ.ಕಾರ್ಯದರ್ಶಿಯನ್ನಾಗಿ ಶಾರದಾ ಮಂಗಳೂರ, ಖಜಾಂಚಿಯಾಗಿ ಅನುಸೂಯಾ ಪರಗೊಂಡ, ಜಯಶ್ರಿ ನಾಟೀಕಾರ, ಪುಷ್ಪಾ ಹಿರೇಮಠ, ಅನ್ನಪೂರ್ಣಾ ದೇವಕರ್, ಗೌಶಿಯಾ ಸಿಕ್ಕಲಗಾಋ ಅವರನ್ನು ಕಾರ್ಯಕಾರಿ ಮತ್ತು ಜಿಲ್ಲಾ ಸದಸ್ಯರಾಗಿ ಆಯ್ಕೆಮಾಡಲಾಗಿದೆ.ರಾಜ್ಯಾಧ್ಯಕ್ಷೆ ಜಗದೇವಿ ಹೆಗಡೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಬಾಯಿ ಕಟ್ಟಿಮನಿ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ.
ಸಿಂದಗಿ: ಪ್ರತಿಭೋತ್ಸವ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸಾಧ್ಯ ಎಂದು ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಜಿಲಾನಿ ನದಾಫ್ ಹೇಳಿದರು.ಪಟ್ಟಣದ ಹೊರವಲಯದ ಕಲಬುರಗಿ ರಸ್ತೆಯಲ್ಲಿರುವ ಲೊಯೋಲ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೊಯೋಲ ಶಾಲೆಯು ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿಭೋತ್ಸವದಲ್ಲಿ ಪ್ರಾಥಮಿಕ ವಿಭಾಗದ ಹಲವಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿ ಬಹುಮಾನವನ್ನು ಗಿಟ್ಟಿಸಿಕೊಂಡಿದ್ದು ಸಂತಸ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಸಿದ್ದು ಕರಿಗೊಂಡ, ಲೊಯೋಲ ಶಾಲೆಯು ಇಂತಹ ವೇದಿಕೆಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಅನುಕೂಲ ಮಾಡಿದೆ ಎಂದು ಹೇಳಿದರು.ಸಮಾರಂಭದಲ್ಲಿ ಫಾದರ್ ಜೀವನ್ ಡಿಸೋಜಾ, ಪ್ರಾಚಾರ್ಯ ಫಾದರ್ ಲ್ಯಾನ್ಸಿ ಫರ್ನಾಂಡಿಸ್, ಸಿಸ್ಟರ್ ಸೋಫಿಯಾ, ರೇಷ್ಮಾ, ವಿದ್ಯಾ, ಸಿದ್ದಪ್ಪ ಎಂ, ಮಂಜುಳಾ, ಪುಷ್ಪಾ, ಲಕ್ಷ್ಮಿ, ಅನಿತಾ, ಸೀಮಾ, ಶಿಲ್ಪಾ ನಿರ್ಣಯಕರಾಗಿ ಕಾರ್ಯ ನಿರ್ವಹಿಸಿದರು.
