ಸಿಂದಗಿ: ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿಯು ಸಂವಿಧಾನ ಬದ್ದವಾಗಿ ರಾಜ್ಯದ ಮಹಿಳೆಯರ ಮೇಲೆ ನಡೆಯುವ ಅನ್ಯಾಯ ಮತ್ತು ಅತ್ಯಾಚಾರಗಳ ಶೋಷಣೆ ದೌರ್ಜನ್ಯ ವಿರುದ್ದ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಡುವುದರೊಂದಿಗೆ ಸಂಘಟನೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೀಲಮ್ಮ ಯಡ್ರಾಮಿ, ಉಪಾಧ್ಯಕ್ಷರನ್ನಾಗಿ ಸುಷ್ಮಿತಾ ವಾಂಡಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸುಭದ್ರ ಮೇಲಿನಮನಿ, ಸಂ.ಕಾರ್ಯದರ್ಶಿಯನ್ನಾಗಿ ಶಾರದಾ ಮಂಗಳೂರ, ಖಜಾಂಚಿಯಾಗಿ ಅನುಸೂಯಾ ಪರಗೊಂಡ, ಜಯಶ್ರಿ ನಾಟೀಕಾರ, ಪುಷ್ಪಾ ಹಿರೇಮಠ, ಅನ್ನಪೂರ್ಣಾ ದೇವಕರ್, ಗೌಶಿಯಾ ಸಿಕ್ಕಲಗಾಋ ಅವರನ್ನು ಕಾರ್ಯಕಾರಿ ಮತ್ತು ಜಿಲ್ಲಾ ಸದಸ್ಯರಾಗಿ ಆಯ್ಕೆಮಾಡಲಾಗಿದೆ.
ರಾಜ್ಯಾಧ್ಯಕ್ಷೆ ಜಗದೇವಿ ಹೆಗಡೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಬಾಯಿ ಕಟ್ಟಿಮನಿ ಆದೇಶದ ಮೇರೆಗೆ ಈ ನೇಮಕ ಮಾಡಲಾಗಿದೆ.
Related Posts
Add A Comment