Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಯ್ ನುಡಿ ದಿನ ನಿತ್ಯ ನಡೆಯುವ ಸನ್ನಿವೇಶಗಳಿಗೆ ಅನುಗುಣವಾಗಿ ನಾವು ಸಂತಸ ದುಃಖ ಅನುಭವಿಸುವುದು ಸಾಮಾನ್ಯ. ನನ್ನ ಭಾವನೆಗಳು ನನ್ನ ಹಿಡಿತದಲ್ಲಿಲ್ಲ. ಸದಾ ಹೊರಗಿನ ಪರಿಸ್ಥಿತಿಗಳಿಗೆ ಉದ್ರೇಕಿತನಾಗಿ ನಡೆದುಕೊಳ್ಳುತ್ತೇನೆ. ಸ್ನೇಹಿತರನ್ನು ಹಿತೈಷಿಗಳನ್ನು ವಿನಾಕಾರಣವಾಗಿ ದುರುಪಯೋಗಪಡಿಸಿಕೊಂಡು ವೈರಿಗಳಾಗಿ ಪರಿವರ್ತನೆಗೊಳಿಸುತ್ತೇನೆ. ಎನ್ನುವ ವ್ಯಕ್ತಿಗಳ ಸಂಖ್ಯೆಯೇ ಜಾಸ್ತಿ. ಸಾಮಾನ್ಯರಿಗೂ ಅಸಾಮಾನ್ಯರಿಗೂ ಇರುವ ಮುಖ್ಯ ವ್ಯತ್ಯಾಸವೇ ಭಾವನೆಗಳ ನಿರ್ವಹಣೆ. ಮಾನವ ಮತ್ತು ಇತರ ಪ್ರಾಣಿಗಳ ನಡುವಿರುವ ಅತಿ ದೊಡ್ಡ ವ್ಯತ್ಯಾಸಗಳಲ್ಲಿ ಭಾವನೆಗಳ ಉಪಸ್ಥಿತಿಯೇ ಮಹತ್ವದ್ದಾಗಿದೆ. ಭಾವಜೀವಿಯಾದ ಮಾನವನಿಗೆ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅಷ್ಟೇನು ಸುಲಭದ ಕೆಲಸವಲ್ಲ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಸತ್ಯ. ಹಾಗೆಂದ ಮಾತ್ರಕ್ಕೆ ಭಾವನೆಗಳನ್ನು ಹಿಡಿತದಲ್ಲಿಡುವುದು ಅಸಾಧ್ಯವಾದ ಕಾರ್ಯ ಎಂದೇನಿಲ್ಲ. ಭಾವನೆಗಳ ನಿರ್ವಹಣೆಯಿಂದ ಸದಾ ಸುಖವಾಗಿ ಲವಲವಿಕೆಯಿಂದ ಇರಬಹದು ಎಂಬುದನ್ನು ಈಗಾಗಲೇ ಅನೇಕ ಮಹನೀಯರು ಸಾಬೀತು ಪಡಿಸಿದ್ದಾರೆ. ಇಂದಿನ ಒತ್ತಡ ತುಂಬಿದ ಬದುಕಿನಲ್ಲಿ ನಿಸ್ಸಾರವಾದ ಭಾವನೆಗಳ ಚೇತನಗೊಳಿಸುವ ಜೀವನ ಧಾರೆಗಳು ಯಾವುವು ಎಂದು ಎಷ್ಟೋ ಸಲ ಹುಡುಕುತ್ತಿರುತ್ತೇವೆ. ಅದಕ್ಕೆ ಕೆಲ ಸರಳ ಸಲಹೆಗಳು ಇಲ್ಲಿವೆ.ಮನಸ್ಸನ್ನು ತಿಳಿಗೊಳಿಸಿಈಗಿನ…
ವಿಜಯಪುರ: ಕಾಲುವೆಗಳು ರೈತರ ಆಸ್ತಿ. ನೀರಿಗಾಗಿ ಯಾರೂ ಅವುಗಳನ್ನು ಒಡೆದು ಹಾನಿ ಮಾಡಬಾರದು ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.ವಿಜಯಪುರದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮದ ವತಿಯಿಂದ 2022-23ನೇ ವರ್ಷದ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ವೈಯಕ್ತಿಕ ಕೊಳವೆ ಭಾವಿ ಕೊರೆದು, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು. ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶ ಹೆಚ್ಚಾಗುತ್ತಿದ್ದು, ಹೊಸದಾಗಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲು ಸುಮಾರು 50 ಅರ್ಜಿಗಳು ಬಂದಿವೆ. ಇನ್ನು ಮುಂದೆ ಹೊಲಗಾಲುವೆಗಳ ನಿರ್ಮಾಣ ಕಾರ್ಯವೂ ಆರಂಭವಾಗಲಿದ್ದು, ನೀರಾವರಿ ಪ್ರದೇಶ ವಿಸ್ತರಣೆಯಾಗಲಿದೆ. ಆದ್ದರಿಂದ ಯಾರೂ ಕಾಲುವೆಗಳನ್ನು ಒಡೆದು ನೀರು ಪಡೆಯಬಾರದು. ಕಾಲುವೆಗಳು ರೈತರ ಆಸ್ತಿಯಾಗಿದ್ದು, ಅವುಗಳ ರಕ್ಷಣೆಯೂ ರೈತರಿಗೆ ಸೇರಿದೆ. ರೈತರ ಭೂಮಿಯಲ್ಲಿ ಬಂಗಾರಂಥ ಬೆಳೆ ಬೆಳೆಯಲು ನೀರು ಅಗತ್ಯವಾಗಿದೆ. ಕಾಲುವೆಗಳನ್ನು ಹಾಳು ಮಾಡಿದರೆ, ರೈತರಿಗೆ ನಷ್ಟವಾಗಲಿದೆ. ನೀರು…
ಬಿಎಲ್ಡಿಇ ಡೀಮ್ಡ್ ವಿವಿ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯರ ಶ್ರಮ ಸಾರ್ಥಕ ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.ಬುಧವಾರ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳು ಮತ್ತು ಜನಪರ ಆರೋಗ್ಯ ಸೇವೆಗಳ ಮೂಲಕ ಜನರನ್ನು ತಲುಪುತ್ತಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಸಚಿವರಾದ ಶ್ರೀ ಎಂ. ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆಯ ಜನ ಚಿಕಿತ್ಸೆಗಳಿಗಾಗಿ ಬೇರೆ ಊರಿಗೆ ತೆರಳುವುದು ತಪ್ಪಬೇಕು. ಮಹಾನಗರಗಳಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಜಿಲ್ಲೆಯ ಜನ ನಮ್ಮ ಆಸ್ಪತ್ರೆಯಲ್ಲಿಯೇ ಪಡೆಯುವಂತಾಗಲು ಎಲ್ಲ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸಿದ್ದಾರೆ. ಇದು ರೋಗಿಗಳ ಪಾಲಿಗೆ ವರದಾನವಾಗಿದೆ ಎಂದು ಅವರು ಹೇಳಿದರು.ಇದರಿಂದಾಗಿ ಈ…
ಊಟಕ್ಕೆಂದು ಹೋದ ಸ್ನೇಹಿತರು ಮಸಣ ಸೇರಿದರು | ರಸ್ತೆ ಬದಿ ನಿಂತವರಿಗೆ ಅಪ್ಪಳಿಸಿದ ಯಮಸ್ವರೂಪಿ ಲಾರಿ ವಿಜಯಪುರ: ಹೈವೇ ಪಕ್ಕ ನಿಂತವರ ಮೇಲೆ ಲಾರಿಯೊಂದು ಹಾಯ್ದು ಹೋಗಿರುವ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಬೈಕ್ ಸವಾರರು ಅಸುನೀಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 52 ಟೋಲ್ ನಾಕಾದ ಬಳಿ ಈ ದಾರುಣ ಘಟನೆ ಜರುಗಿದೆ.ಮೃತ ಯುವಕರನ್ನು ನಗರದ ವಜ್ರ ಹನುಮಾನ ನಗರದ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ( 26), ಪ್ರವೀಣ ಪಾಟೀಲ್ (31) ಹಾಗೂ ಸುನೀಲ ತಂದೆ ಪ್ರಭು ಖಾನಾಪೂರ (26 ) ಎಂದು ಗೊತ್ತಾಗಿದೆ.ಈ ನಾಲ್ವರೂ ಮೃತ ಯುವಕರು ಸ್ನೇಹಿತರಾಗಿದ್ದು ಊಟಕ್ಕೆಂದು ನಗರದ ಹೊರವಲಯದ ಹೊಟೇಲಿಗೆಂದು ತೆರಳಿ ಬೈಕ್ ಸಮೇತ ಹೈವೇ ಪಕ್ಕ ರಸ್ತೆ ಬದಿಗೆ ನಿಂತಾಗ ಯುವಕರ ಮೇಲೆ ವೇಗವಾಗಿ ಬಂದ ಲಾರಿಯೊಂದು ಇವರಿಗೆ ಡಿಕ್ಕಿಯಾದ ಪರಿಣಾಮ ಇವರೆಲ್ಲ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.ಅಪಘಾತದಲ್ಲಿ…
ವಿಜಯಪುರ: ನವರಾತ್ರಿ ಹಬ್ಬದ ನಾಲ್ಕನೆಯ ದಿನವಾದ ಬುಧವಾರ ನಗರದ ಸಿಲ್ಕಸಿಟಿ ಬಡಾವಣೆಯ ಮಹಿಳೆಯರು ಮಹಾಲಕ್ಷ್ಮಿ ಹಾಗೂ ಅಂಬಾಭವಾನಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ವನಿತೆಯರೆಲ್ಲ ತಾಯಿ ಚಾಮುಂಡೇಶ್ವರಿಯ ನಾಲ್ಕನೆಯ ದಿನದ ಸ್ವರೂಪವಾದ ದೇವಿ ಕೂಷ್ಮಾಂಡ ವಸ್ತ್ರವರ್ಣವಾದ ನೀಲಿ ವಸ್ತ್ರಧಾರಿಗಳಾಗಿ ನವರಾತ್ರೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.ಶೈಲಾ ಮಣೂರ, ಕಸ್ತೂರಿ ಶಹಾಪೇಟಿ, ಶಿಖಾಮಂಜರಿ ದಾಸ್, ಸಂಜೀವಿನಿ ಬೋರಾಡೆ, ಪಂಕಜಾ ಅಂಕಲಗಿ, ಸ್ನೇಹಾ ಪಾಟೀಲ, ಭಾಗ್ಯ ಶಹಾಪೇಟಿ, ಸವಿತಾ ತೇರದಾಳ, ನೀಲಾ ಪಾಟೀಲ, ಜ್ಯೋತಿ ಪಾಟೀಲ ಸೇರಿದಂತೆ ಹಲವರಿದ್ದರು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಈಗಲೂ ಅಸ್ತಿತ್ವದಲ್ಲಿರುವ ಒಂದು ವೃತ್ತಿ ಅಥವಾ ಹೊಟ್ಟೆ ಪಾಡಿನ ಮಾರ್ಗ..ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ.ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ವೇಶ್ಯಾ ವೃತ್ತಿಯನ್ನು ಅತ್ಯಂತ ಕೆಟ್ಟ ಕೀಳು ವೃತ್ತಿ ಅಥವಾ ದಂಧೆ ಎಂದು ಭಾವಿಸಲಾಗುತ್ತದೆ. ( ವಾಸ್ತವದಲ್ಲಿ ಮತ್ತು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡರೆ ಅದು ನಿಜವಲ್ಲ. ಅದು ಬೇರೆ ವಿಷಯ ) ಆದರೆ ಅದಕ್ಕಿಂತಲೂ ಅತ್ಯಂತ ನೀಚ ವೃತ್ತಿಯೊಂದಿದೆ. ಇದು ಮಾನವೀಯ ಸಂಬಂಧಗಳ ಎಲ್ಲಾ ಮಿತಿಯನ್ನು ದಾಟಿ ಲೆಕ್ಕಕ್ಕೆ ಸಿಗುವುದಿಲ್ಲ. ಅಸಹ್ಯ ಎಂದು ಕರೆಯಬಹುದಾದ ವೃತ್ತಿ ಇದು.ಆಳ್ಕಟಿಗಳು ಅಥವಾ ಪಿಂಪಗಳು ಅಥವಾ ತಡೆಹಿಡುಕರು ಅಥವಾ ಮಾಮಾಗಳು ಎಂದು ಲೋಕಾಭಿರಾಮವಾಗಿ ಕರೆಯಲಾಗುವ ಜನರು ಮಾಡುವ ವೃತ್ತಿಯೇ ಇದು.ಮನುಷ್ಯರನ್ನು, ಅವರ ದೇಹವನ್ನು, ಅವರ ಭಾವನೆಗಳನ್ನು, ಅವರ ನಂಬಿಕೆಗಳನ್ನು, ಅವರ ಸಂಬಂಧಗಳನ್ನು, ಸಮಾಜದ ಮೌಲ್ಯಗಳನ್ನು ಮಾರಾಟ ಮಾಡಿ ಜೀವನ…
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿಕೆ ಗುತ್ತಿಗೆದಾರರ ಶೇ.75ರಷ್ಟು ಬಿಲ್ ಬಾಕಿ ಬಿಡುಗಡೆಗೆ ಮನವಿ | ಅಂಬಿಕಾಪತಿ ಮೇಲಿನ ಆರೋಪ ಸುಳ್ಳು | ಬಿಲ್ ಪೇಮೆಂಟ್‌ನಲ್ಲಿ ಅವ್ಯವಹಾರ ಬೆಂಗಳೂರು: ಈ ಸರಕಾರದಲ್ಲೂ ಭ್ರಷ್ಟಾಚಾರ ಇದೆ, ಇಲ್ಲ ಎಂದರೆ ನನ್ನಂತಹ ಮೂರ್ಖ ಇನ್ನೊಬ್ಬನಿಲ್ಲ. ಭ್ರಷ್ಟಾಚಾರ ಇಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಅದನ್ನು ತಡೆಗಟ್ಟಬೇಕು ಎಂದು ಹೇಳಿದ್ದೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಲ್ಲಿ ಭ್ರಷ್ಟಾಚಾರ ಇದೆ. ಆದರೆ, ಅದು ಅಷ್ಟಾಗಿ ಕಂಡುಬರುತ್ತಿಲ್ಲ ಎಂದರು.ಬಿಬಿಎಂಪಿಯ ಬಾಕಿ ಬಿಲ್ ವಿಚಾರ ಮಾತ್ರ ಸದ್ಯಕ್ಕೆ ಮಾತನಾಡಿದ್ದೇವೆ. ಶೇ.75ರಷ್ಟು ಬಿಲ್ ಬಾಕಿ ಬಿಡುಗಡೆ ಮಾಡಲು ಹೇಳಿದ್ದೇವೆ. ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಮಿಷನ್ ವಿಚಾರ ತನಿಖೆ ಮಾಡಿ ಎಂದಿದ್ದೇವೆ. ಶೇ.80ಕ್ಕಿಂತ ಹೆಚ್ಚು ಸಿನಿಯಾರಿಟಿ ಮೇಲೆ ಪೇಮೆಂಟ್ ಮಾಡುವ ಭರವಸೆ ಕೊಟ್ಟಿದ್ದಾರೆ. ಅಧಿಕಾರಿಗಳ ಮೇಲಿನ ಕಮಿಷನ್…
ಮಾದ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯ ವಿರುದ್ಧ ಪತ್ರಕರ್ತರಿಂದ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಹೋರಾತ್ರಿ ಪ್ರತಿಭಟನೆ ನವದೆಹಲಿ: ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ತಕ್ಷಣ ಮಧ್ಯಪ್ರವೇಶಿಸುವಂತೆ ಮಾದ್ಯಮ ಸಂಸ್ಥೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಮಾದ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯ ವಿರುದ್ಧ ಪತ್ರಕರ್ತರು ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಕೂಡ ನಡೆಸಿದ್ದಾರೆ.ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಅಸೋಸಿಯೇಷನ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಡಿಜಿಪಬ್, ಫಾರಿನ್ ರೆಸ್ಪಾಂಡೆಂಟ್ ಕ್ಲಬ್, ವೆಟರನ್ ಜರ್ನಲಿಸ್ಟ್ ಗ್ರೂಪ್ ಮತ್ತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿವೆ. ವಾಕ್ ಸ್ವಾತಂತ್ರ್ಯ, ಉದ್ಯೋಗ ಮತ್ತು ನಮಗೆ ನೀಡಿರುವ ಸಂವಿಧಾನದತ್ತ ಸ್ವಾತಂತ್ರ್ಯಗಳನ್ನು ರಕ್ಷಿಸಲು ರಾಷ್ಟ್ರಪತಿಗಳ ಮಧ್ಯಸ್ಥಿಕೆಯನ್ನು ಅವರು ಕೋರಿದ್ದಾರೆ.ಇಂದು ಭಾರತದಲ್ಲಿ ಸ್ವತಂತ್ರ ಮಾಧ್ಯಮಗಳು ಎದುರಿಸುತ್ತಿರುವ ಅಭೂತಪೂರ್ವ ಪರಿಸ್ಥಿತಿ ಬಗ್ಗೆ ರಾಷ್ಟ್ರಪತಿಗಳ ಗಮನ ಸೆಳೆಯಲಾಗಿದೆ.…
ಬೆಂಗಳೂರು: ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಬಾಕಿ ವೇತನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ರಾಜ್ಯದಾದ್ಯಂತ ಬಹುತೇಕ ತಾಲೂಕುಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಣ ಬಿಡುಗಡೆಗೆ ಆಗ್ರಹಿಸಲಾಗಿದೆ.ಈ ಸಂಬಂಧ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್ ಅವರಿಗೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಪತ್ರ ಬರೆದಿದ್ದಾರೆ. 2023ರ ಆ.29ರಿಂದ ಕರ್ನಾಟಕಕ್ಕೆ ವೇತನ ಬಿಡುಗಡೆ ಬಾಕಿಯಿದೆ. ಇದರ ಮೌಲ್ಯ 478.46 ಕೋಟಿ ರೂಪಾಯಿಗಳಾಗಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್‌ಗೆ, ಸೆ. 24 ರಂದು ಬರೀ 1.55 ಕೋಟಿ ರೂ. ಕೊನೆಯ ಬಾರಿಗೆ ವೇತನ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ.ಕರ್ನಾಟಕದ ಗ್ರಾಮೀಣಾಭಿವೃದ್ಧಿ ಕಮಿಷನ್ ಈಗಾಗಲೇ ಪ್ರಸಕ್ತ ಮತ್ತು ಹಿಂದಿನ ವರ್ಷದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವಾರ್ಷಿಕ ಲೆಕ್ಕಪರಿಶೋಧನೆಯ ಅಂಕಿ ಅಂಶಗಳನ್ನು ಸಲ್ಲಿಸಿದೆ ಎಂದು ಮುಖ್ಯ ಕಾರ್ಯದರ್ಶಿ ತಮ್ಮ…
ಆತ್ಮೀಯ ಸಹೋದರ ಸ್ನೇಹಿತ, ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರ್ಗಿ ಜಿಲ್ಲಾಧ್ಯಕ್ಷ ಶ್ರೀ ಬಾಬುರಾವ ಯಡ್ರಾಮಿ ಅವರು ನಾಡಿನ ಪ್ರತಿಷ್ಠಿತ ದಿನಪತ್ರಿಕೆ ’ವಿಜಯವಾಣಿ’ ಪತ್ರಿಕೆಯ ಕಲಬುರ್ಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿರುವುದು ಸಂತಸ ಮತ್ತು ಹೆಮ್ಮೆಯ ಸಂಗತಿ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆಪ್ತಬಂಧು ಬಾಬುರಾವ ಯಡ್ರಾಮಿ ಅವರಿಗೆ ’ಉದಯರಶ್ಮಿ’ ಪತ್ರಿಕಾ ಬಳಗದಿಂದ ಅಭಿಮಾನದ ಅಭಿನಂದನೆಗಳು. ಇಂದುಶೇಖರ ಮಣೂರಸಂಪಾದಕರು, ’ಉದಯರಶ್ಮಿ’ ದಿನಪತ್ರಿಕೆಜಿಲ್ಲಾ ಉಪಾಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ
