ವಿಜಯಪುರ: ನವರಾತ್ರಿ ಹಬ್ಬದ ನಾಲ್ಕನೆಯ ದಿನವಾದ ಬುಧವಾರ ನಗರದ ಸಿಲ್ಕಸಿಟಿ ಬಡಾವಣೆಯ ಮಹಿಳೆಯರು ಮಹಾಲಕ್ಷ್ಮಿ ಹಾಗೂ ಅಂಬಾಭವಾನಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ವನಿತೆಯರೆಲ್ಲ ತಾಯಿ ಚಾಮುಂಡೇಶ್ವರಿಯ ನಾಲ್ಕನೆಯ ದಿನದ ಸ್ವರೂಪವಾದ ದೇವಿ ಕೂಷ್ಮಾಂಡ ವಸ್ತ್ರವರ್ಣವಾದ ನೀಲಿ ವಸ್ತ್ರಧಾರಿಗಳಾಗಿ ನವರಾತ್ರೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.
ಶೈಲಾ ಮಣೂರ, ಕಸ್ತೂರಿ ಶಹಾಪೇಟಿ, ಶಿಖಾಮಂಜರಿ ದಾಸ್, ಸಂಜೀವಿನಿ ಬೋರಾಡೆ, ಪಂಕಜಾ ಅಂಕಲಗಿ, ಸ್ನೇಹಾ ಪಾಟೀಲ, ಭಾಗ್ಯ ಶಹಾಪೇಟಿ, ಸವಿತಾ ತೇರದಾಳ, ನೀಲಾ ಪಾಟೀಲ, ಜ್ಯೋತಿ ಪಾಟೀಲ ಸೇರಿದಂತೆ ಹಲವರಿದ್ದರು.
Related Posts
Add A Comment