Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಶಾಸಕ ಅಶೋಕ ಮನಗೂಳಿ ಅವರಿಗೆ ಗೋಲಗೇರಿ ತಳವಾರ ಸಮಾಜದ ವತಿಯಿಂದ ಸನ್ಮಾನ ಗೋಲಗೇರಿ: ಗ್ರಾಮದಲ್ಲಿ ತಳವಾರ ಸಮಾಜದ ವತಿಯಿಂದ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಮನಗೂಳಿ ಅವರು, ತಳವಾರ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ದವಿರುವುದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ತಳವಾರ ಸಮಾಜದ ಗೋಲಗೇರಿ ಗ್ರಾಮದಲ್ಲಿ ಇರುವ ಬಹಳ ವರ್ಷದ ಬೇಡಿಕೆ ಯಾಗಿದ್ದ ಈರಣ್ಣ ಮುತ್ಯಾ ಗುಡಿಯ ಕಟ್ಟಡದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವು ಹತ್ತಿ, ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ವಿಜುಗೌಡ ಕರ್ನಾಳ, ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ, ಮಂಜುನಾಥ ನಾಯ್ಕೋಡಿ, ರಮೇಶ ತಳವಾರ, ಮಲ್ಲಣ್ಣ ನಾಯ್ಕೋಡಿ, (ಬೆಂಗಳೂರು), ರಾಜು ಯಂಕಂಚಿ, ಚಂದ್ರಾಮ ನಾಯ್ಕೋಡಿ, ಸಿದ್ದಪ್ಪ ನಾಯ್ಕೋಡಿ, ಭಾಗಪ್ಪ ಕೊಂಡಗೂಳಿ, ಭೀಮಣ್ಣ ತಳವಾರ, ಮಲ್ಲಪ್ಪ ನಾಯ್ಕೋಡಿ, ರಾವುತಪ್ಪ ಮಾಗಣಗೇರಿ, ಮಹಾಂತೇಶ ನಾಯ್ಕೋಡಿ, ರಾವುತ್ ನಾಯ್ಕೋಡಿ ಇದ್ದರು.
ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದಲಾಗುತ್ತಿರುವ ವಿದ್ಯಮಾನಗಳಿಗೆ ತಕ್ಕಂತೆ ಶಿಕ್ಷಕರು ನಿರಂತರ ಜ್ಞಾನಾರ್ಜನೆ ಮಾಡುತ್ತ ಆದರ್ಶ ಶಿಕ್ಷಕರಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ನಗರದ ಕಂದಗಲ ಹನಮಂತರಾಯ ರಂಗಮಂದಿರದಲ್ಲಿ ಆದರ್ಶ ಶಿಕ್ಷಕರ ವೇದಿಕೆ ಮತ್ತು ಜಿಲ್ಲಾ ಯುವ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ನಡೆದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಗಾಟಿಸಿ ಅವರು ಮಾತನಾಡಿದರು.ದೇಶ ಮತ್ತು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯವಾಗಿದೆ. ಶಿಕ್ಷಕರು ಆದರ್ಶರಾಗಿರಬೇಕು. ಇದರಿಂದ ಸ್ಪೂರ್ತಿ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತಾರೆ. ನಮ್ಮ ಅಜ್ಜ ತಿಕೋಟಾದ ಎ. ಟಿ. ಪಾಟೀಲರು ರಾಷ್ಟ್ರ ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಅಲ್ಲದೇ, ತರಗತಿಗಳಿಗೆ ಗೈರು ಹಾಜರಾದ ತಮ್ಮ ಸ್ವಂತ…
ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನ ಉದ್ಘಾಟಿಸಿ ಸಚಿವ ಎಂ.ಬಿ.ಪಾಟೀಲ ಭರವಸೆ ವಿಜಯಪುರ: ರೇಡಿಯಾಲಾಜಿಸ್ಟ್ ಗಳ ಸಮಸ್ಯೆಗಳ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದ್ದಾರೆ.ನಗರದ ಬಿ. ಎಲ್. ಡಿ. ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ರೇಡಿಯಾಲಾಜಿಸ್ಚ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಂಘಟನೆಯವರು ಮಾಡಿರುವ ಮನವಿಯ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.ಜನರಿಗೆ ಕೈಗೆಟಕುವಂತೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ವೈದ್ಯರ ಸತತವಾಗಿ ನಡೆಸುತ್ತಿರುವ ಪ್ರಯತ್ನ ಗಮನಾರ್ಹವಾಗಿದೆ. ರೇಡಿಯಾಲಜಿ ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ಇಂಟರವೆನ್ಶನಲ್ ರೇಡಿಯಾಲಜಿ ಶಸ್ತಚಿಕಿತ್ಸೆಗಳಲ್ಲಿ ಕ್ರಾಂತಿಕಾರಿ ತಂದಿದೆ.…
ವಿಜಯಪುರ: ಶ್ರೇಷ್ಠ ವಿಜ್ಞಾನಿ ಡಾ. ಕುಶಾಲ ದಾಸ ಅವರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಫಿಜಿಯಾಲಜಿ ವಿಭಾಗದ ಡಿಸ್ಟಿಂಗ್ವಿಷ್ಡ್ ಚೇರ್ ಪ್ರೊಫೆಸರ್ ಡಾ. ಕುಶಾಲ ಕೆ. ದಾಸ್ ಅವರಿಗೆ ರಾಜ್ಯ ಸರಕಾರ ವಿಕಲಚೇತನರ ಕ್ಷೇತ್ರದಲ್ಲಿನ ಸೇವೆಗಾಗಿ ರಾಜ್ಯ ಮಟ್ಟದ ವೈಯಕ್ತಿಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ವಿವಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಕುಶಾಲ ಕೆ. ದಾಸ ಅವರನ್ನು ಸನ್ಮಾನಿಸಿ ಸಚಿವರು ಮಾತನಾಡಿದರು.ಡಾ. ಕುಶಾಲ ಕೆ. ದಾಸ ತಮ್ಮ ಕೆಲಸ ಕಾರ್ಯಗಳ ಮೂಲಕ ಬಿ.ಎಲ್.ಡಿ.ಇ ಸಂಸ್ಥೆಗೆ ಬೆನ್ನೆಲುಬಾಗಿದ್ದಾರೆ. ಸಂಶೋಧನೆಗಳ ಸಾಧನೆಯ ಮೂಲಕ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ನ್ಯೂನ್ಯತೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಸಮಸ್ಯೆಗಳನ್ನು ಮೆಟ್ಟಿ ನಿಂತು ಅವರು ಮಾಡಿರುವ ಸಾಧನೆಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಸದಾ…
Udayarashmi kannada daily newspaper
ವಿಜಯಪುರ: ಜಿಲ್ಲೆಯ ಜಿಲ್ಲಾ ಕಛೇರಿಗಳ ಸಂಕೀರ್ಣ ನಿರ್ಮಾಣ ಮಾಡಲು ಪರಿಷ್ಕೃತ ಅಂದಾಜು 49 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲಾ ಸಂಕೀರ್ಣ ಕಟ್ಟಡದ ನೆಲಮಹಡಿ ಮತ್ತು 1ನೆ ಮತ್ತು 2ನೆ ಮಹಡಿ ಸಿವಿಲ್ ಕಾಮಗಾರಿಗಳ ಜೊತೆಗೆ ಪೀಠೋಪಕರಣಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಒಳಚರಂಡಿ ಮತ್ತು ನೀರು ಸರಬರಾಜು, ವಿದ್ಯುತ್ ಕಾಮಗಾರಿ, ನೀರು ಕೊಯ್ಲು, ಫರ್ನೀಚರ್ ಕಾಮಗಾರಿ, ಬೋರ್ವೆಲ್, ಒಳರಸ್ತೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಅಂದಾಜು 49 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.ಈ ಹಿಂದೆ 3.12.2019 ರಂದು 25 ಕೋಟಿಗಳ ಅಂದಾಜು ವೆಚ್ಚದ ಪಟ್ಟಿಗೆ ಕರ್ನಾಟಕ ಗೃಹ ಮಂಡಳಿಗೆ ನಿರ್ಮಾಣ ಮಾಡಲು ಆದೇಶ ನೀಡಲಾಗಿತ್ತು. ಈಗ ತಿದ್ದುಪಡಿ…
ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ | ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಇಂದು ಮಧ್ಯಾಹ್ನದವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.85 ವರ್ಷದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪುತ್ರ ವಿನೋದ್ ರಾಜ್ ಅವರನ್ನು ಲೀಲಾವತಿ ಅಗಲಿದ್ದಾರೆ. ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ನಾಳೆ ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದೆ.1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕನ್ನಡ ದಿಗ್ಗಜ ನಟರಾಟ ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದವರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.ಲೀಲಾವತಿ ಅವರು ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದು ಕನ್ನಡದ ಕಂದ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ ಎಚ್ ಕೆ* ಬೆಂಗಳೂರು ಇದೊಂದು ಗ್ರಾಫಿಕ್ ಅನಿಮೇಷನ್ ರೀತಿಯ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕಲೆ.. ಇದರ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಹ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಆತಂಕಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಾಕಷ್ಟು ಜನ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ.. ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಗಾಗಿ ಒಂದಷ್ಟು ಸಾಮಾನ್ಯ ಮಾಹಿತಿ.. ಡೀಪ್ ಪೇಕ್ ಎಂಬ ಪದದ ಕನ್ನಡ ಅನುವಾದ ಅಥವಾ ಸಾರಾಂಶ ಆಳವಾದ ವಂಚನೆ ಎನ್ನಬಹುದು ಅಥವಾ ತೀವ್ರ ಭ್ರಮೆ ಅಥವಾ ನಕಲಿ ಛಾಯೆ ಅಥವಾ ಸತ್ಯದಂತೆ ಕಾಣುವ ಸುಳ್ಳು ಎಂದಾಗಬಹುದು ಅಥವಾ ಇದಕ್ಕಿಂತ ಉತ್ತಮ ಅನುವಾದ ಇದ್ದರೆ ತಿಳಿಸಿ.. ಈ ತಂತ್ರಜ್ಞಾನದ ಬಗ್ಗೆ ಒಂದಷ್ಟು ಜನರಿಗೆ ಸ್ವಲ್ಪ ಆತಂಕ ಶುರುವಾಗಿದೆ. ಇದೊಂದು ಉತ್ತಮ ಕಲೆಯೂ ಹೌದು. ಈ ತಂತ್ರಜ್ಞಾನ ಉಪಯೋಗಿಸಿ ತುಂಬಾ ಕೆಟ್ಟ ಸಂದೇಶಗಳನ್ನು, ನಿಂದನೆಗಳನ್ನು, ಭ್ರಮೆಗಳನ್ನು, ನೈತಿಕತೆಯನ್ನು, ವೈಯಕ್ತಿಕ ಚಿತ್ರಣವನ್ನು, ವ್ಯಕ್ತಿತ್ವವನ್ನು ಪ್ರಸಾರ ಮಾಡಬಹುದು ಮತ್ತು ನಾಶ…
ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಹೋರಾಟ | ರುಪ್ಸಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ ಪಾಟೀಲ ಸುದ್ದಿಗೋಷ್ಠಿ ಆಲಮಟ್ಟಿ: ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ದಿಂದ ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆಗೆ ಆಗ್ರಹಿಸಿ ಒಂದು ದಿನದ ಹೊರಾಟವನ್ನು ಡಿ.೧೧ರಂದು ಬೆಳಗಾಂವಿಯ ಸುವರ್ಣಸೌಧದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ ಪಾಟೀಲ ಹೇಳಿದರು.ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.೧೯೯೫ರ ನಂತರದ ರಾಜ್ಯದಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು, ಖಾಸಗಿ ಶಾಲೆಗಳಲ್ಲಿ ಶೇಕಡಾ ೨೫%ರಷ್ಟು ಆರ್.ಟಿ.ಇ ಮಕ್ಕಳ ದಾಖಲಾತಿಯನ್ನಯ ಮರು ಸ್ಥಾಪಿಸುವ ಕುರಿತು ಹಾಗೂ ಪ್ರಸ್ತುತ ನೀಡುತ್ತಿರುವ ೧೬,೦೦೦ ವೆಚ್ಚವನ್ನು ೩೫,೦೦೦ ರೂಗಳಿಗೆ ವಿಸ್ತರಿಸಬೇಕು ಎಂದರು.ಖಾಸಗಿ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ನವೀಕರಣವನ್ನು ೧೦ ವರ್ಷಗಳ ಅವಧಿಗೆ ನಿಗದಿ ಪಡಿಸುವ ಹಾಗೂ ಖಾಸಗಿ ಶಾಲೆಗಳಿಗೆ ನವೀಕರಣ ಸಂದರ್ಭದಲ್ಲಿ ಕೇಲುವ ಫೈರ್ ಸೇಪ್ಟಿ ಹಾಗೂ ಕಟ್ಟಡ ಭದ್ರತಾ ಪ್ರಮಾಣ ಪತ್ರಗಳಲ್ಲಿ ರಿಯಾಯಿತಿ…
ವೀಣಾಂತರಂಗ- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ರಸ್ತೆಯ ತಿರುವಿನಲ್ಲಿ ಕೈಕಾಲು ಗಟ್ಟಿಮುಟ್ಟಾಗಿದ್ದ ಓರ್ವ ಮನುಷ್ಯ ಭಿಕ್ಷೆ ಬೇಡುತ್ತಿದ್ದ. ಭಿಕ್ಷೆ ಹಾಕದೆ ಮುಂದೆ ಹೋಗುತ್ತಿದ್ದ ಜನರನ್ನು ಹೀಯಾಳಿಸುತ್ತಾ, ಈ ಜಗತ್ತನ್ನು ಪಾಪಿಗಳ ಲೋಕವೆಂದು ಕೊಂಚ ಮಾತ್ರದ ಕನಿಕರವೂ ಇಲ್ಲದ ಜನರೆಂದು ಎಲ್ಲರನ್ನೂ ದೂಷಿಸುತ್ತಾ ಗೊಣಗುತ್ತ ಕುಳಿತಿದ್ದನು. ತನ್ನನ್ನು ತಾನು ಕನಿಕರದ, ಅಪಹಾಸ್ಯದ, ಅವಜ್ಞೆಯ ವಸ್ತುವನ್ನಾಗಿಸಿಕೊಂಡು ಭಿಕ್ಷೆ ಬೇಡುತ್ತಿದ್ದ ಆತನದು ಹೀನಾಯ ಪರಿಸ್ಥಿತಿ. ಸ್ವಯಂಕೃತ ಅಪರಾಧ,!! ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಿಕೊಳ್ಳದ ಮಗುವೊಂದು ಪರೀಕ್ಷಾ ಮೇಲ್ವಿಚಾರಕರ ಮತ್ತು ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಶಿಕ್ಷಕರ ಗುಂಪನ್ನು ಹೀಯಾಳಿಸುವುದು, ಶಾಲೆಯ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸದಿದ್ದರೆ ಶಾಲೆಯಲ್ಲಿ ಭೇದ ಭಾವ ಮಾಡುವರೆಂಬ ಆರೋಪ ಮಾಡುವ ಹಲವಾರು ಜನ ನಮ್ಮ ಸಮಾಜದಲ್ಲಿ ಇರುತ್ತಾರೆ. ಕೆಲವೊಮ್ಮೆ ಅವರ ಆಪಾದನೆಗಳು ನಿಜವಾದರೂ ಬಹಳಷ್ಟು ಬಾರಿ ಈ ಮಾತುಗಳಲ್ಲಿ ಹುರುಳಿರುವುದಿಲ್ಲ. ಅಂತಹವರಿಗೆ ನೀವೇನಾದರೂ ತಿಳಿಯ ಹೇಳ ಹೊರಟರೆ ನಿಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ. ಅವರದು ಒಂದು ರೀತಿಯ ಅರೆಬೆಂದ ಪರಿಸ್ಥಿತಿ. ಪೂರ್ತಿ ತಿಳಿದವರಿಗೆ…
