ವಿಜಯಪುರ: ಜಿಲ್ಲೆಯ ಜಿಲ್ಲಾ ಕಛೇರಿಗಳ ಸಂಕೀರ್ಣ ನಿರ್ಮಾಣ ಮಾಡಲು ಪರಿಷ್ಕೃತ ಅಂದಾಜು 49 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲಾ ಸಂಕೀರ್ಣ ಕಟ್ಟಡದ ನೆಲಮಹಡಿ ಮತ್ತು 1ನೆ ಮತ್ತು 2ನೆ ಮಹಡಿ ಸಿವಿಲ್ ಕಾಮಗಾರಿಗಳ ಜೊತೆಗೆ ಪೀಠೋಪಕರಣಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಒಳಚರಂಡಿ ಮತ್ತು ನೀರು ಸರಬರಾಜು, ವಿದ್ಯುತ್ ಕಾಮಗಾರಿ, ನೀರು ಕೊಯ್ಲು, ಫರ್ನೀಚರ್ ಕಾಮಗಾರಿ, ಬೋರ್ವೆಲ್, ಒಳರಸ್ತೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಅಂದಾಜು 49 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
ಈ ಹಿಂದೆ 3.12.2019 ರಂದು 25 ಕೋಟಿಗಳ ಅಂದಾಜು ವೆಚ್ಚದ ಪಟ್ಟಿಗೆ ಕರ್ನಾಟಕ ಗೃಹ ಮಂಡಳಿಗೆ ನಿರ್ಮಾಣ ಮಾಡಲು ಆದೇಶ ನೀಡಲಾಗಿತ್ತು. ಈಗ ತಿದ್ದುಪಡಿ ಮಾಡಿ ಗೃಹ ಮಂಡಳಿ ಬದಲಾಗಿ ಲೋಕೋಪಯೋಗಿ ಇಲಾಖೆಗೆ ಪರಿಷ್ಕೃತ ಕಾಮಗಾರಿಯನ್ನು ವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಜಿಲ್ಲಾ ಕಛೇರಿಗಳ ಸಂಕೀರ್ಣ ನಿರ್ಮಾಣಕ್ಕೆ ರೂ.೪೯ ಕೋಟಿ ಅನುದಾನ
Related Posts
Add A Comment

