Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಮಹಾನಗರ ಪಾಲಿಕೆ ವಾರ್ಡ್ ನಂ.35ರ ಕೌಜಲಗಿ ತಾಂಡಾದಲ್ಲಿ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.46 ರಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಉದ್ಘಾಟಿಸಿದರು.ನಂತರ ಅಲ್ಲಿನ ನಿವಾಸಿಗಳ ಅಹವಾಲು ಆಲಿಸಿದರು. ಕೆಲ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕರೆ ಸರಿಪಡಿಸಲು ಸೂಚಿಸಿದರು. ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಕುರಿಯವರ, ಮುಖಂಡರಾದ ರಾಜಕುಮಾರ ರಾಠೋಡ, ವಿಠ್ಠಲ ನಾಯಕ, ಉಮಾಜಿ ನಾಯಕ, ಜಗನ್ನಾಥ ರಾಠೋಡ, ಶಿವಾಜಿ ಚವ್ಹಾಣ, ಆನಂದ ಹಂಜಿ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ನಿವಾಸಿಗಳು ಇದ್ದರು.
ಇಂಡಿ: ಫಲಾನುಭವಿಗಳ ಪಟ್ಟಿ ತಡೆಯುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಒತ್ತಾಯಿಸಿದ್ದಾರೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯತಿಯಲ್ಲಿ ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ತಡವಲಗಾ ಗ್ರಾಮ ಪಂಚಾಯತಿಗೆ 50 ಮನೆಯ ಗುರಿ ನೀಡಲಾಗಿದೆ. ಆದ್ರೇ, ಗ್ರಾಮ ಪಂಚಾಯತಿ ಸದಸ್ಯ ರಾಮನಗೌಡ ಪಾಟೀಲ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಹೊಸಮನಿ ಅವರ ಖೊಟ್ಟಿ ಸಹಿ ಮಾಡಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷ ಹೊಸಮನಿ ಮನವಿ ಸಲ್ಲಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿರುವ ಹಾರ್ವರ್ಡ ಪಿ.ಯು ಸೈನ್ಸ್ ಕಾಲೇಜಿನಲ್ಲಿ ಡಿ.೨೮ ರ ಬೆಳಿಗ್ಗೆ ೧೦:೩೦ ಕ್ಕೆ ದತ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಚನ್ನಣ್ಣ ಬಸವಂತ್ರಾಯ ದೇಸಾಯಿ(ಮಡಿಕೇಶ್ವರ) ಇವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ದತ್ತಿ ದಾನಿಗಳಾಗಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಧಾರವಾಡದ ಉಪ್ಪಿನ ಬೆಟಗೇರಿಯ ಮೂರುಸಾವಿರ ಮಠದ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಅನುಭಾವ ನೀಡಲಿದ್ದಾರೆ. ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆಂಚಿ ಬಸವಭಾವ ಪೂಜೆ ನೆರವೇರಿಸಲಿದ್ದು, ತಾ.ಶ.ಸಾ.ಪ ಅಧ್ಯಕ್ಷ ಬಸವರಾಜ ನಾಲತವಾಡ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಎಸ್.ಬಿ.ಬಾಚಿಹಾಳ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಉದ್ಯಮಿಗಳಾದ ಸುಧೀರ ನಾವದಗಿ, ಶರಣು ಸಜ್ಜನ, ಪುರಸಭೆ ಸದಸ್ಯ ವಿರೇಶ ಹಡಲಗೇರಿ ಸೇರಿದಂತೆ ಮತ್ತೀತರರು ಆಗಮಿಸಲಿರುವದಾಗಿ ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ನಾಡಿನಲ್ಲಿ ನಡೆಯುವ ಜಾತ್ರೆ-ಉತ್ಸವಗಳು ಜನರಲ್ಲಿ ಭಕ್ತಿ ಹೆಚ್ಚಿಸಲು ಪೂರಕವಾಗಿವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸಂಜೆ ಜಾತ್ರಾಮಹೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಜಗತ್ತು ವೈಜ್ಞಾನಿಕವಾಗಿ ಮುಂದುವರಿದರೂ ಆಧ್ಯಾತ್ಮಿಕ ಶಕ್ತಿಯಿಂದ ನಮ್ಮ ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬಹುದು. ಯಾವುದೇ ಕಾಯಕ ಮಾಡಿದರೂ ಭಗವಂತನ ಮೇಲೆ ಭಕ್ತಿ ಬೆಳೆಸಿಕೊಂಡರೆ ತಾವು ಮಾಡುವ ಕಾಯಕ ಉತ್ತಮವಾಗಿ ಸಾಗುತ್ತದೆ. ಗೌರಿ-ಶಂಕರ ಜಾತ್ರೆಯು ವರ್ಷದಿಂದ ವರ್ಷಕ್ಕೆ ಸಡಗರ, ಸಂಭ್ರಮದಿಂದ ಆಚರಣೆಯಾಗುತ್ತಿರುವುದು ಸಂತಸದಾಯಕ ಸಂಗತಿ. ಜಾತ್ರೆಗಳಿಂದ ಜನರಲ್ಲಿ ದೈವ ಭಕ್ತಿ ಬರುವ ಜೊತೆಗೆ ನಾವೆಲ್ಲರೂ ಒಂದು ಎಂಬ ಭಾವ ಬರುತ್ತದೆ ಎಂದರು.ಸಾನಿಧ್ಯ ವಹಿಸಿದ್ದ ವಿರಕ್ತಮಠ ಸಿದ್ದಲಿಂಗ ಸ್ವಾಮೀಜಿ, ಪ್ರವಚನಕಾರ ಹೊಳಲು ವಿರಕ್ತಮಠದ ಚನ್ನಬಸವ ದೇವರು, ವಿಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಶ್ರೀಕಾಂತ ಪಟ್ಟಣಶೆಟ್ಟಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ,…
ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಗೌರಿ ಶಂಕರ ಜಾತ್ರೆ ಬುಧವಾರ ವಿಜೃಂಭಣೆಯಿಂದ ಜರುಗಿತು.ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದ ನಂತರ ಮಹಿಳೆಯರು ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಗ್ರಾಮದ ಗೌರಿಶಂಕರ ಕಲಾತಂಡದಿಂದ ಮೋಡಿಕಾರ ಆಟ ನಡೆದ ನಂತರ ದ್ಯಾಮವ್ವನ ಸೋಗು, ಶಿವರಾಯನ ಸೋಗು, ಕಳ್ಳ ಬೇಡನ ಸೋಗು, ವಿವಿಧ ಹಾಸ್ಯ ಮನರಂಜನೆ ಸೋಗುಗಳು ಜರುಗಿದವು.ಸಂಜೆ ಶಿವ, ಗೌರಿ, ಗಂಗೆ ಮೂರ್ತಿಗಳ ಮೆರವಣಿಗೆಯು ಡೊಳ್ಳು ಕುಣಿತ, ಗೊಂಬೆ ಕುಣಿತ, ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗಂಗ ಸ್ಥಳಕ್ಕೆ ಕಳುಹಿಸಲಾಯಿತು. ರಾತ್ರಿ ಸಿಡಿದೆದ್ದ ಸೂರ್ಯ ಚಂದ್ರ ನಾಟಕ ಪ್ರದರ್ಶನಗೊಂಡಿತು.ಮೆರವಣಿಗೆಯಲ್ಲಿ ಶಾಂತಗೌಡ ಹೊಸಳ್ಳಿ, ಹಣಮಂತ ಹಾಲಿಹಾಳ, ಸಂಗಯ್ಯ ಮಠ, ಶಾಂತಗೌಡ ಓದಿ, ದೇವೇಂದ್ರ ಗೋನಾಳ, ಶ್ರೀಶೈಲಗೌಡ ಹೊಸಳ್ಳಿ, ಗೋಪಾಲ ಕನಸೆ, ಸೋಮನಗೌಡ ಪಾಟೀಲ, ಪ್ರಶಾಂತ ಛಲವಾದಿ, ಅಶೋಕ ಛಲವಾದಿ, ಅಲ್ಲಾಭಕ್ಷ ಮಕಾನದಾರ, ಗುರುನಾಥ ದಳವಾಯಿ, ಮುತ್ತುರಾಜ ಹಾಲಿಹಾಳ, ಶರಣಗೌಡ ಚೌಧರಿ, ಮಾಂತೇಶ ಹಾಲಿಹಾಳ, ರಾಮನಗೌಡ ಬಿರಾದಾರ, ಮಹದೇವಪ್ಪ ಮಾದರ,…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂ. ೭ರ ಕಾಂಗ್ರೆಸ್ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಬುಧವಾರ ಜರುಗಿದ ಉಪಚುನಾವಣೆಯ ಮತದಾನ ಶೇ.೮೮ ರಷ್ಟು ಆಗುವ ಮೂಲಕ ಬಹುತೇಕ ಶಾಂತಿಯುತವಾಗಿ ನಡೆಯಿತು.ಮತದಾನವು ಪಟ್ಟಣದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕೋಣೆ ಸಂಖ್ಯೆ-೨ ರಲ್ಲಿ ನಡೆಯಿತು.ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಲೀಂ ಮಕಾನದಾರ, ಬಿಜೆಪಿ ಪಕ್ಷದಿಂದ ಬಸಗೊಂಡಪ್ಪ ಮುತ್ತಪ್ಪನ್ನವರ, ಜೆಡಿಎಸ್ ಪಕ್ಷದಿಂದ ಸಾಹೇಬಫಯಾಬ ತೆಲಸಂಗ, ಪಕ್ಷೇತರರಾಗಿ ವಾಯದಬಾನು ಮಕಾನದಾರ ಸ್ಪರ್ಧಾಕಣದಲ್ಲಿದ್ದಾರೆ. ವಾರ್ಡ್ ನಂ.೭ರಲ್ಲಿ ೨೬೭ ಪುರುಷ ಮತದಾರರು, ೨೬೨ ಮಹಿಳಾ ಮತದಾರರು ಸೇರಿ ಒಟ್ಟು ೫೨೯ ಮತದಾರರಿದ್ದಾರೆ. ಇಂದು ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ೨೩೮ ಪುರುಷ ಮತದಾರರು, ೨೨೯ ಮಹಿಳಾ ಮತದಾರರು ಸೇರಿ ಒಟ್ಟು ೪೬೭ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.ಈ ಉಪಚುನಾವಣೆಯ ಮತದಾನ ಎಣಿಕೆ ಬಸವನಬಾಗೇವಾಡಿಯ ತಹಸೀಲ್ದಾರ ಕಚೇರಿಯಲ್ಲಿ ಡಿ.೩೦ ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿ.ಬಿ.ಪಾಟೀಲ ಮಾಹಿತಿ ನೀಡಿದರು.
ಬಸವನಬಾಗೇವಾಡಿ: ವಿಜಯಪುರದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಜ.೨ ಕ್ಕೆ ಲಿಂಗ್ಯೆಕ್ಯರಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸಿದ್ದೇಶ್ವರರ ಭಾವಚಿತ್ರ ನೀಡುವ ಮೂಲಕ ತಾವು ಗುರುನಮನ ಸಲ್ಲಿಸುತ್ತಿರುವುದಾಗಿ ವಿಜಯಪುರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಹೇಳಿದರು.ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ, ತಾಲೂಕು ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘಕ್ಕೆ ಬುಧವಾರ ಪೂಜ್ಯ ಸಿದ್ದೇಶ್ವರರ ಭಾವಚಿತ್ರ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಶತಮಾನದ ಸಂತ, ದಾರ್ಶನಿಕರಾಗಿದ್ದ ಪೂಜ್ಯ ಸಿದ್ದೇಶ್ವರರು ನಡೆದು ಬಂದ ದಾರಿ, ಅವರ ತತ್ವ-ಸಂದೇಶಗಳು ಎಂದಿಗೂ ಎಲ್ಲರಿಗೂ ಆದರ್ಶ, ಮಾರ್ಗದರ್ಶಿಯಾಗಿದೆ. ಜ.೨ ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಗುರುನಮನ ನಡೆಯುತ್ತಿದೆ. ಅಂದು ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿಯೂ ಗುರುನಮನ ನಡೆಯುವ ಸಂದರ್ಭದಲ್ಲಿ ಪೂಜ್ಯ ಸಿದ್ದೇಶ್ವರರ ಭಾವಚಿತ್ರ ಇದ್ದರೆ ಒಳ್ಳೆಯದು ಅನ್ನುವ ದೃಷ್ಟಿಕೋನದಿಂದ ತಾವು ಜಿಲ್ಲೆಯ ೩ ಸಾವಿರ ಶಾಲೆಗಳಿಗೆ, ಎಲ್ಲ ತಾಲೂಕಿನ ಶಿಕ್ಷಣ ಇಲಾಖೆಯ ಕಚೇರಿಗೆ…
ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಬುಧವಾರ ಪಿಂಚಣಿ ದಿನಾಚರಣೆ ಕಾರ್ಯಕ್ರಮ ಜರುಗಿತು.ಹೂವಿನಹಿಪ್ಪರಗಿ ನಾಡಕಚೇರಿಯ ಉಪತಹಸೀಲ್ದಾರ ಎಸ್.ಕೆ.ಪಾಟೀಲ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಪಿಂಚಣಿ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಮನಸ್ವಿನಿ, ವಿಧವಾ ವೇತನ, ಸಂದ್ಯಾಸುರಕ್ಷಾ, ವಿಕಲಚೇತನ, ವೃದ್ಯಾಪ್ಯ ವೇತನ ಸೇರಿದಂತೆ ವಿವಿಧ ಪಿಂಚಣಿಗೆ ಅರ್ಹ ಫಲಾನುಭವಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಅರ್ಜಿ ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಪಿಂಚಣಿ ಪಡೆಯಲು ಗ್ರಾಮ ವನ್ ಕೇಂದ್ರಗಳಲ್ಲಿಯೂ ಅರ್ಹ ಫಲಾನುಭವಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂದು ಜರುಗಿದ ಪಿಂಚಣಿ ದಿನಾಚರಣೆಯಲ್ಲಿ ಹನ್ನೊಂದು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು. ಮುಂದಿನ ದಿನಗಳಲ್ಲಿ ಅವರಿಗೆ ಮಂಜೂರಾತಿ ಆದೇಶಗಳನ್ನು ನೀಡಲಾಗುತ್ತಿದೆ. ಇಂದು ಹಿಂದೆ ಅರ್ಜಿ ಸಲ್ಲಿಸಿದ ಮೂರು ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಶರಣಮ್ಮ ಕುಂಬಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೂವಿನಹಿಪ್ಪರಗಿ ಕಂದಾಯ ನಿರೀಕ್ಷಕ ವ್ಹಿ.ಜಿ.ಸಿಂದಗಿ,…
ಬಸವನಬಾಗೇವಾಡಿ: ಪಟ್ಟಣದ ಗೌರಿಶಂಕರ ದೇವಸ್ಥಾನದ ಜಾತ್ರೆಯಂಗವಾಗಿ ಬುಧವಾರ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಭ್ರಮದಿಂದ ಜರುಗಿತು.ಜಾತ್ರೆಯಂಗವಾಗಿ ಗೌರಿಶಂಕರ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿಷ್ಠಾಪಿಸಲಾಗಿರುವ ಗೌರಿ, ಶಿವ, ಗಂಗೆ, ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.ಅಲಂಕೃತಗೊಂಡಿದ್ದ ಗರ್ಭಗುಡಿಯ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸಿದರು. ಕೆಲವರು ಗೌರಿಗೆ ಉಡಿ ತುಂಬಿದರು.ಮಧ್ಯಾನ್ಹ ಪಟ್ಟಣದ ಮಾರುತಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಜೆ ಗೌರಿಶಂಕರ ದೇವಸ್ಥಾನಕ್ಕೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಡೊಳ್ಳಿನ ಮೇಳ, ಹಲಗೆ ನಾದ ಸೇರಿದಂತೆ ವಿವಿಧ ವಾದ್ಯಗಳ ತಾಳಕ್ಕೆ ಜನರು ಹೆಜ್ಜೆ ಹಾಕಿ ಸಂಭ್ರಮ ಪಟ್ಟರು. ದ್ಯಾಮವ್ವ ಸೋಗು ಸಾಗುವ ಮಾರ್ಗ ಎರಡು ಬದಿಗಳಲ್ಲಿ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ನಿಂತು ಮೆರವಣಿಗೆಯನ್ನು ವೀಕ್ಷಿಸಿದರು.ಈ ಸಲ ಹಣಮಂತ ಕಾಮನಕೇರಿ ದ್ಯಾಮವ್ವನ ಸೋಗು ಹಾಕಿದ್ದರು. ಇವರಿಗೆ ಅಪ್ಪಾಶಿ ಮಟ್ಯಾಳ ಸಾಥ್ ನೀಡಿದರು. ದ್ಯಾಮವ್ವನ ಸೇವಕಿಯರಾಗಿ ಕಿರಣ ಕಾಮನಕೇರಿ, ಸಮರ್ಥ ಯರನಾಳ…
ದೇವರಹಿಪ್ಪರಗಿ: ಇದು ಮಕ್ಕಳಹಬ್ಬ, ಮಕ್ಕಳು ಎಂದರೆ ದೇವರ ಸಮಾನ, ಮಕ್ಕಳ ಪರ ಚಿಂತಕರು ಇರುವ ಗ್ರಾಮ ಸ್ವರ್ಗವಾಗುತ್ತದೆ ಎಂದು ಉಜ್ವಲ ಸಂಸ್ಥೆಯ ನಿರ್ದೇಶಕ ವಾಸುದೇವ ತೋಳಬಂದಿ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಉಜ್ವಲ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ ಶಿಕ್ಷಣಯಾತ್ರೆ ಯೋಜನೆ, ಹಾಗೂ ಜಿಲ್ಲಾ ಆಡಳಿತ ಸಹಯೋಗದೊಂದಿಗೆ ಮಂಗಳವಾರ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳು ಗ್ರಾಮ ಮಟ್ಟದ ಪ್ರತಿ ಮಗುವಿಗೆ ದೊರಕಬೇಕು. ಮಕ್ಕಳ ರಕ್ಷಣೆಗಾಗಿ ೧೦೦, ೧೧೨, ೧೦೯೮, ಸಹಾಯವಾಣಿಗಳಿಗೆ ಸಂಪರ್ಕಿಸಬೇಕು. ಗ್ರಾಮ ಪಂಚಾಯತ್ ಮಕ್ಕಳ ಬೇಡಿಕೆಗಳು ತಮ್ಮ ಕ್ರಿಯಾ ಯೋಜನೆಯಲ್ಲಿ ಹಾಕಿ ಪರಿಹಾರ ನೀಡಲು ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಸಿಆರ್‌ಸಿ ಮಾಹಾಂತೇಶ ಕಾಳಗಿ ಅವರು ಮಾತನಾಡಿದರು.ವೇದಿಕೆಯಲ್ಲಿ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಮಂಡಿಸುತ್ತಾ, ತಮ್ಮ ಬೇಡಿಕೆಗಳಾದ ಅಂಗನವಾಡಿ ಹಾಗೂ ಶಾಲಾಕಟ್ಟಡ, ಕಿಡಕಿ, ಕಂಪೌಂಡ್, ಗೇಟ್ ರಿಪೇರಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಶೌಚಾಲಯಗಳ ನಿರ್ಮಾಣ, ಸರಕಾರದಿಂದ ಶಾಲೆಗಳಿಗೆ ಕಂಪ್ಯೂಟರ್…
