ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಗೌರಿ ಶಂಕರ ಜಾತ್ರೆ ಬುಧವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದ ನಂತರ ಮಹಿಳೆಯರು ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಗ್ರಾಮದ ಗೌರಿಶಂಕರ ಕಲಾತಂಡದಿಂದ ಮೋಡಿಕಾರ ಆಟ ನಡೆದ ನಂತರ ದ್ಯಾಮವ್ವನ ಸೋಗು, ಶಿವರಾಯನ ಸೋಗು, ಕಳ್ಳ ಬೇಡನ ಸೋಗು, ವಿವಿಧ ಹಾಸ್ಯ ಮನರಂಜನೆ ಸೋಗುಗಳು ಜರುಗಿದವು.
ಸಂಜೆ ಶಿವ, ಗೌರಿ, ಗಂಗೆ ಮೂರ್ತಿಗಳ ಮೆರವಣಿಗೆಯು ಡೊಳ್ಳು ಕುಣಿತ, ಗೊಂಬೆ ಕುಣಿತ, ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗಂಗ ಸ್ಥಳಕ್ಕೆ ಕಳುಹಿಸಲಾಯಿತು. ರಾತ್ರಿ ಸಿಡಿದೆದ್ದ ಸೂರ್ಯ ಚಂದ್ರ ನಾಟಕ ಪ್ರದರ್ಶನಗೊಂಡಿತು.
ಮೆರವಣಿಗೆಯಲ್ಲಿ ಶಾಂತಗೌಡ ಹೊಸಳ್ಳಿ, ಹಣಮಂತ ಹಾಲಿಹಾಳ, ಸಂಗಯ್ಯ ಮಠ, ಶಾಂತಗೌಡ ಓದಿ, ದೇವೇಂದ್ರ ಗೋನಾಳ, ಶ್ರೀಶೈಲಗೌಡ ಹೊಸಳ್ಳಿ, ಗೋಪಾಲ ಕನಸೆ, ಸೋಮನಗೌಡ ಪಾಟೀಲ, ಪ್ರಶಾಂತ ಛಲವಾದಿ, ಅಶೋಕ ಛಲವಾದಿ, ಅಲ್ಲಾಭಕ್ಷ ಮಕಾನದಾರ, ಗುರುನಾಥ ದಳವಾಯಿ, ಮುತ್ತುರಾಜ ಹಾಲಿಹಾಳ, ಶರಣಗೌಡ ಚೌಧರಿ, ಮಾಂತೇಶ ಹಾಲಿಹಾಳ, ರಾಮನಗೌಡ ಬಿರಾದಾರ, ಮಹದೇವಪ್ಪ ಮಾದರ, ಅಶೋಕ ಕನಸೆ, ಅವ್ವಣ್ಣ ಓದಿ, ಮುದಕಣ್ಣ ಗೋನಾಳ, ಬಸವರಾಜ ಹಾಲಿಹಾಳ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

