ದೇವರಹಿಪ್ಪರಗಿ: ಇದು ಮಕ್ಕಳಹಬ್ಬ, ಮಕ್ಕಳು ಎಂದರೆ ದೇವರ ಸಮಾನ, ಮಕ್ಕಳ ಪರ ಚಿಂತಕರು ಇರುವ ಗ್ರಾಮ ಸ್ವರ್ಗವಾಗುತ್ತದೆ ಎಂದು ಉಜ್ವಲ ಸಂಸ್ಥೆಯ ನಿರ್ದೇಶಕ ವಾಸುದೇವ ತೋಳಬಂದಿ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಉಜ್ವಲ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ ಶಿಕ್ಷಣಯಾತ್ರೆ ಯೋಜನೆ, ಹಾಗೂ ಜಿಲ್ಲಾ ಆಡಳಿತ ಸಹಯೋಗದೊಂದಿಗೆ ಮಂಗಳವಾರ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳು ಗ್ರಾಮ ಮಟ್ಟದ ಪ್ರತಿ ಮಗುವಿಗೆ ದೊರಕಬೇಕು. ಮಕ್ಕಳ ರಕ್ಷಣೆಗಾಗಿ ೧೦೦, ೧೧೨, ೧೦೯೮, ಸಹಾಯವಾಣಿಗಳಿಗೆ ಸಂಪರ್ಕಿಸಬೇಕು. ಗ್ರಾಮ ಪಂಚಾಯತ್ ಮಕ್ಕಳ ಬೇಡಿಕೆಗಳು ತಮ್ಮ ಕ್ರಿಯಾ ಯೋಜನೆಯಲ್ಲಿ ಹಾಕಿ ಪರಿಹಾರ ನೀಡಲು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಸಿಆರ್‌ಸಿ ಮಾಹಾಂತೇಶ ಕಾಳಗಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಮಂಡಿಸುತ್ತಾ, ತಮ್ಮ ಬೇಡಿಕೆಗಳಾದ ಅಂಗನವಾಡಿ ಹಾಗೂ ಶಾಲಾಕಟ್ಟಡ, ಕಿಡಕಿ, ಕಂಪೌಂಡ್, ಗೇಟ್ ರಿಪೇರಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಶೌಚಾಲಯಗಳ ನಿರ್ಮಾಣ, ಸರಕಾರದಿಂದ ಶಾಲೆಗಳಿಗೆ ಕಂಪ್ಯೂಟರ್ ಪೂರೈಕೆ, ಶಾಲೆಗಳಲ್ಲಿ ಗ್ರಂಥಾಲಯ, ವಿದ್ಯುತ್ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಅದಕ್ಕೆ ಗ್ರಾಮ ಪಂಚಾಯತ ಕಾರ್ಯದರ್ಶಿ ಮಲ್ಲು ಜಾವಡಗಿ ಹಿಂದಿನ ವರ್ಷದಲ್ಲಿ ತಮ್ಮ ಪಂಚಾಯಿತಿ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮಾಡಿರುವ ಕೆಲಸಗಳು ವಿವರಿಸಿ, ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಗ್ರಿನ್ ಬೋರ್ಡ ವಿತರಣೆ ಮಾಡಿದರು. ಈ ವರ್ಷದಲ್ಲಿ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುವುದಾಗಿ ತಿಳಿಸಿದರು.
ಉಜ್ವಲ-ಐಎಲ್‌ಪಿ ಯೋಜನೆ ಸಂಯೋಜಕ ಸಾಗರ ಘಾಟಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಸ್.ನ್ಯಾಮಣ್ಣವರ, ಉಪಾಧ್ಯಕ್ಷೆ ರಮಜಾನಬೀ ಕಾಚೂರ, ಸದಸ್ಯರುಗಳಾದ ದೇವಿಂದ್ರ ಬಡಿಗೇರ, ಗೀತಾ ಜಾಲವಾದಿ, ಮಲಕೇಂದ್ರ ಬೈಂದದೊರೆ, ಅನೀಲ ತೆಲಗಾರ, ನಾನಾಗೌಡ ನ್ಯಾಮಣ್ಣವರ, ಚನ್ನು ಅಸ್ಕಿ , ಬಿ.ಬಿ.ಕಿಣಗಿ, ಶ್ರೀಶೈಲ್ ಜೋಗುರ ಮಾಳೇಪ್ಪ ಅಂತರಗೊಂಡ, ಗೌಡು ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

