ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ವಾರ್ಡ್ ನಂ. ೭ರ ಕಾಂಗ್ರೆಸ್ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಬುಧವಾರ ಜರುಗಿದ ಉಪಚುನಾವಣೆಯ ಮತದಾನ ಶೇ.೮೮ ರಷ್ಟು ಆಗುವ ಮೂಲಕ ಬಹುತೇಕ ಶಾಂತಿಯುತವಾಗಿ ನಡೆಯಿತು.
ಮತದಾನವು ಪಟ್ಟಣದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕೋಣೆ ಸಂಖ್ಯೆ-೨ ರಲ್ಲಿ ನಡೆಯಿತು.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಲೀಂ ಮಕಾನದಾರ, ಬಿಜೆಪಿ ಪಕ್ಷದಿಂದ ಬಸಗೊಂಡಪ್ಪ ಮುತ್ತಪ್ಪನ್ನವರ, ಜೆಡಿಎಸ್ ಪಕ್ಷದಿಂದ ಸಾಹೇಬಫಯಾಬ ತೆಲಸಂಗ, ಪಕ್ಷೇತರರಾಗಿ ವಾಯದಬಾನು ಮಕಾನದಾರ ಸ್ಪರ್ಧಾಕಣದಲ್ಲಿದ್ದಾರೆ. ವಾರ್ಡ್ ನಂ.೭ರಲ್ಲಿ ೨೬೭ ಪುರುಷ ಮತದಾರರು, ೨೬೨ ಮಹಿಳಾ ಮತದಾರರು ಸೇರಿ ಒಟ್ಟು ೫೨೯ ಮತದಾರರಿದ್ದಾರೆ. ಇಂದು ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ೨೩೮ ಪುರುಷ ಮತದಾರರು, ೨೨೯ ಮಹಿಳಾ ಮತದಾರರು ಸೇರಿ ಒಟ್ಟು ೪೬೭ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಈ ಉಪಚುನಾವಣೆಯ ಮತದಾನ ಎಣಿಕೆ ಬಸವನಬಾಗೇವಾಡಿಯ ತಹಸೀಲ್ದಾರ ಕಚೇರಿಯಲ್ಲಿ ಡಿ.೩೦ ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿ.ಬಿ.ಪಾಟೀಲ ಮಾಹಿತಿ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment
