Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಭಾಭವಾನಿ ದೇವಸ್ಥಾನದ ಹನ್ನೊಂದನೇ ವಾರ್ಷಿಕೋತ್ಸವದಂಗವಾಗಿ ಗುರುವಾರ ದೇವಸ್ಥಾನ ಆವರಣದಲ್ಲಿ ಅಂಭಾಭವಾನಿ ದೇವಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.ದೇವಸ್ಥಾನದ ವಾರ್ಷಿಕೋತ್ಸವದಂಗವಾಗಿ ಬೆಳಗ್ಗೆ ಅಂಭಾಭವಾನಿ ದೇವಿಗೆ ವಿಶೇಷ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು. ನಂತರ ೧೦೧ ಮಹಿಳೆಯರ ಉಡಿ ತುಂಬಲಾಯಿತು. ದೇವಸ್ಥಾನದ ಆವರಣದಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಜರುಗಿತು. ಜನರು ದೇವಿಗೆ ಕಾಯಿ, ಕರ್ಪೂರ ಅರ್ಪಿಸಿ ದರ್ಶನ ಪಡೆದುಕೊಂಡರು. ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯಮನೂರಿ ಬಿದರಕುಂದಿ, ಶಿವಾಜಿ ಜಗತಾಪ, ಸುರೇಶ ಹಾರಿವಾಳ, ಶಂಕರಗೌಡ ಬಿರಾದಾರ, ಜಟ್ಟಿಂಗರಾಯ ಮಾಲಗಾರ, ಬಸವರಾಜ ಕೋಟಿ, ರವಿ ಚಿಕ್ಕೊಂಡ, ಅಂಬೋಜಿ ಪವಾರ ಬಸವರಾಜ ಬಿಜಾಪುರ, ಭೀಮಶಿ ಶಿಂಧೆ, ಶಶಿ ದೇವಕರ, ಶಿವು ಚವ್ಹಾಣ, ರಮೇಶ ಮೋರೆ, ತುಕಾರಾಂ ಪವಾರ, ಬಾಲಚಂದ್ರ ಚಿಂಚೋಳಿ, ಮಾರುತಿ ಘಾಟಗೆ, ಶಿವಾಜಿ ರಜಪೂತ, ಭೀಮಶಿ ರಜಪೂತ, ರಾಜು ಬಿಜಾಪುರ, ಪರಶು ಪವಾರ, ಮುರುಗೇಶ ಮಸಬಿನಾಳ, ಶಾಂತಾಬಾಯಿ ಬಿಜಾಪುರ, ತುಳಜಾಬಾಯಿ ದೇವಕರ, ರೇಣುಕಾ ಬಿದರಕುಂದಿ, ಸುಮಿತ್ರಾ ಬಿದರಕುಂದಿ,…

Read More

ಸಿಂದಗಿ: ಸನಾತನ ಹಿಂದೂ ಧರ್ಮದ ಅನುಯಾಯಿಗಳು ಶ್ರೀರಾಮ ಸೇವೆ ಮಾಡುತ್ತಲೇ ಇರಬೇಕು ಎಂದು ಭೀಮಾಶಂಕರ ಶ್ರೀಮಠದ ದತ್ತಪಯ್ಯ ಮಹಾರಾಜರು ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಅಕ್ಷತಾ ಕಳಸ ವಿತರಣಾ ಶ್ರೀರಾಮ ರಥದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿಂದಗಿ ತುಂಬದ ಬಿಂದಗಿ ಎಂಬಂತೆ ಹಿರಿಯರಿಂದ ಒಳ್ಳೆಯ ಸಂಸ್ಕಾರ ಪಡೆದುಕೊಂಡು ಬಂದಿದ್ದಾರೆ. ನಾವು ನಮ್ಮ ಬೆಳವಣಿಗೆಗಾಗಿ ಸಂಘಟಿತರಾಗಬೇಕು ಎಂದರು.ಈ ವೇಳೆ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮಂತ್ರಾಕ್ಷತೆಯನ್ನೇ ಕಳುಹಿಸಿದ ಉದ್ದೇಶ ಏನೆಂದರೆ ಹೂವು ಕಳಿಸಿದರೆ ಬಾಡಿ ಹೋಗುತ್ತೆ, ಆದರೆ ಅಕ್ಷತೆ ಸರ್ವಕಾಲಕ್ಕೂ ಬಾಡಲೂ ಸಾಧ್ಯವಿಲ್ಲ ಅದು ಶ್ರೇಷ್ಠವಾದ ಮಂತ್ರಾಕ್ಷತೆಯಾಗಿದೆ ಎಂಬ ಕಾರಣಕ್ಕೆ ಕಳುಹಿಸಿದ್ದಾರೆ. ಜಾತಿ ಮತ ಪಂಥ ಬೇಧ ಭಾವವಿಲ್ಲದೆ ನಾವೆಲ್ಲರೂ ಭಾರತೀಯರು ಎಂದು ಜೀವನ ಸಾಗಿಸೋಣ. ಒಂದಾಗಿರುವ ಭಾವ ನಮ್ಮಲ್ಲಿ ಬೆಳೆಯಲಿ. ಒಂದೇ ಮಾತರಂ ಎಂಬ ಭಾವವನ್ನು ಎಲ್ಲರಲ್ಲಿಯೂ ಮೂಡಿಸೋಣ. ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯ ನಾವು ನೀವೆಲ್ಲ ಮಾಡಬೇಕಾಗಿದೆ ಎಂದರು.ಈ ವೇಳೆ ಬ್ಯಾಡಗಿಹಾಳದ ಶ್ರೀಗಳು,…

Read More

ಸಿಂದಗಿ: ಇಂಡಿ ಉಪವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿ.೨೯ರಂದು ಸಾಯಂಕಾಲ ೫ಗಂಟೆಗೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ತಾಲೂಕಿನ ಜನಪ್ರತಿನಿದಿಗಳು, ಗಣ್ಯರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮಾಧ್ಯಮ ಮಿತ್ರರು ಸದರಿ ಸಭೆಗೆ ಹಾಜರಿರಬೇಕು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ*ಅದೇ ಸಭಾಭವನದಲ್ಲಿ ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆಯಲ್ಲಿ ಸಾಯಂಕಾಲ ೪ಗಂಟೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಕಾರಣ ತಾಲೂಕು ಮಟ್ಟದ ಅಧಿಕಾರಿಗಳು, ಕವಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.

Read More

ಸಿಂದಗಿ: ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕ ಮತ್ತು ಸಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯು ಬಹುದೊಡ್ಡ ಜಿಲ್ಲೆಯಾಗಿದ್ದು, ಈಗ ವಿಭಜಿಸಿ ಒಂದು ಹೊಸ ಜಿಲ್ಲೆಯಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ವಿಜಯಪುರ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಸಿಂದಗಿ ತಾಲೂಕು ಹೊಸ ಜಿಲ್ಲೆಯಾಗಲಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲೆ ಹಾಗೂ ಸಿಂದಗಿ ತಾಲೂಕು ಘಟಕಗಳ ಮೂಲಕ ಅಗ್ರಹಿಸಲಾಗುತ್ತಿದೆ ಎಂದು ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ವಾಯ್.ಸಿ ಮಯೂರ ತಿಳಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಆರ್.ಟಿ.ಓ. ಕಛೇರಿಯಲ್ಲಿ ವಾಹನ ನೊಂದಣಿಯಲ್ಲಿ ಸಿಂದಗಿ ಮುಂದಿದೆ. ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿದೆ. ಈ ಎಲ್ಲಾ ವಿಷಯಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಂದಗಿ ತಾಲೂಕನ್ನು ನೂತನ ಜಿಲ್ಲೆಯಾಗಿ ಸರಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ, ತಾಲೂಕ ಸಂಚಾಲಕ ಶರಣು ಛಲವಾದಿ,…

Read More

ಸಿಂದಗಿ: ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಅದು ಹೆಚ್.ಐ.ವಿ/ ಏಡ್ಸ್. ಇದು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ ಎಂದು ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ ನರಗೋದಿ ಹೇಳಿದರು.ತಾಲೂಕಿನ ಯಂಕಂಚಿ ಗ್ರಾಮ ಪಂಚಾಯತ್ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ವಿಜಯಪುರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ, ಯಂಕಂಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಹಮ್ಮಿಕೊಂಡ ಎಚ್ಐವಿ ಏಡ್ಸ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಒಳ್ಳೆಯ ವಾತಾವರಣದ ಜೊತೆಗೆ ಶುದ್ಧವಾದ ಕುಡಿಯುವ ನೀರು ಮತ್ತು ಗ್ರಾಮದ ಎಲ್ಲಾ ಸಾರ್ವಜನಿಕರಿಗೆ ಆರೋಗ್ಯದಿಂದ ರೋಗ ಮುಕ್ತ ಗ್ರಾಮವನ್ನು ಮಾಡಲು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಆಶಾ ಕಾರ್ಯಕರ್ತರು…

Read More

ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ ಈ ವಿಶೇಷ ಲೇಖನ ವೀಣಾಂತರಂಗ- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ವರ್ಷಗಳ ಹಿಂದೆ ಎಲ್ಲೋ ಓದಿದ ನೆನಪು. ಒಂದೇ ಮನೆಯ ಇಬ್ಬರು ಸಾಹಿತಿ ಸಹೋದರರ ನಡುವೆ ನಡೆದ ಮಾತುಕತೆ. ಅದು ಮಧ್ಯಾಹ್ನದ ಊಟದ ಸಮಯ. ಆ ಮನೆಯ ಯಜಮಾನರು ಅತ್ಯಂತ ವಯೋ ವೃದ್ಧರೂ, ಜ್ಞಾನ ವೃದ್ಧರೂ ಆಗಿದ್ದು ತನ್ನ ಇನ್ನೋರ್ವ ಬರಹಗಾರ ಸಹೋದರನನ್ನು ಕುರಿತು ಶ್ರೀ ರಾಮಾಯಣ ದರ್ಶನಂ ಬರೆದ ಕುವೆಂಪು ಅವರು ಬ್ರಾಹ್ಮಣರು ಇರಬೇಕಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಆ ಕಿರಿಯ ಸಹೋದರ ಇದ್ದರೂ ಇರಬಹುದು ಅಣ್ಣ ಎಂದು ಹೇಳಿದರು. ಆಗ ಅವರೊಂದಿಗೆ ಊಟಕ್ಕೆ ಕುಳಿತಿದ್ದ ಇನ್ನೋರ್ವರು ದಿಗ್ಭ್ರಮೆಯಿಂದ ತಲೆಯೆತ್ತಿ ನೋಡಿದರು. ಅವರನ್ನು ಕಣ್ಣಲ್ಲಿಯೇ ಸಮಾಧಾನಿಸಿದ ಕಿರಿಯ ಸಹೋದರ ಊಟವಾದ ನಂತರ ಹೊರಗೆ ಕರೆದೊಯ್ದರು. ನಿಮ್ಮ ಅನುಮಾನ ನಿಜ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಚಿಸಿದ ಕುವೆಂಪು ಅವರು ಬ್ರಾಹ್ಮಣರು ಎಂದು ಅಣ್ಣನವರೊಂದಿಗೆ ನಾನು ಹೇಳಿದ್ದು ತಪ್ಪು… ಆದರೆ ಈ…

Read More

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಬಿಬಿಎ ವಿಭಾಗವು ಡಿಸೆಂಬರ್ 29 ರಂದು ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮಂಚ್-ಮಚ್ಚಾ ವೃತ್ತಿಪರ ಸ್ಪರ್ಧೆಯನ್ನು ಆಯೋಜಿಸಿದೆ.ಬಿ.ಎಲ್.ಡಿ.ಇ ಸಂಸ್ಥೆಯ ಹೊಸ ಆವರಣದಲ್ಲಿರುವ ಬಿಬಿಎ ಕಾಲೇಜಿನಲ್ಲಿ ಬೆಳಿಗ್ಗೆ 8.30ಕ್ಕೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಆಡಳಿತಾಧಿಕಾರಿ ಪ್ರೊ. ಕೆ. ಜಿ. ಪೂಜಾರಿ ಉಪಸ್ಥಿತರಿರಲಿದ್ದಾರೆ.ಈ ವೃತ್ತಿಪರ ಸ್ಪರ್ಧೆಯಲ್ಲಿ ರ್ಯಾಂಪ್ ವಾಕ್, ಟೀಮ್ ಬಿಲ್ಡಿಂಗ್, ರಸಪ್ರಶ್ನೆ, ಅಡುಗೆ, ಛಾಯಾಚಿತ್ರ ಸ್ಪರ್ಧೆಗಳನ್ನು ನಡೆಸಲಾಗುವುದು. ಇದರಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಒಟ್ಟು ರೂ. 20 ಸಾವಿರ ನಗದು ಬಹುಮಾನ ನೀಡಲಾಗುವುದು. ಇದರಲ್ಲಿ ಭಾಗವಹಿಸುವ ಪಿಯುಸಿ ವಿದ್ಯಾರ್ಥಿಗಳು ಡಿಸೆಂಬರ್ 29 ರಂದು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮಹಾವಿದ್ಯಾಲಯದಲ್ಲಿ ಉಪಸ್ಥಿತರಿಬೇಕು ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ. ವರ್ಷಾ ದೇಸಾಯಿ ಮತ್ತು ಡಾ. ಲಕ್ಷಣ ಪವಾರ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿ ಸಂಯೋಜಕ ಸಲೀಂ ನದಾಫ್ ಮೊ. ಸಂ. 6364559796…

Read More

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಪಾಡಲು ಸದಾ ಬದ್ಧನಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಗುರುವಾರ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ 2023-24ನೇ ವರ್ಷದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಸೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ಹೆಚ್ಚಳಕ್ಕೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದ ಪರಿಣಾಮ ಸರಕಾರ ಸ್ಪಂದಿಸಿದೆ. ಈಗ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಹೊಸದಾಗಿ ತಲಾ 100 ಮನೆಗಳನ್ನು ಮಂಜೂರು ಮಾಡುವಂತೆ ಸದನದ ಒಳಗೆ ವಸತಿ ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ಮನೆಗಳು ಮಂಜೂರಾಗಲಿವೆ ಎಂದು ಅವರು ತಿಳಿಸಿದರು.ಶಾಸಕರ ಮಾದರಿಯಲ್ಲಿ ಗ್ರಾ.ಪಂ ತಾ.ಪಂ, ಜಿ.ಪಂ. ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳಿಗೆ ಬಸ್ ಪಾಸ್ ಸೌಲಭ್ಯ, ಅವರ ವಾಹನಗಳಿಗೆ ಟೋಲ್…

Read More

ನೂತನ (ಸರಕಾರಿ) ಶಿಕ್ಷಕರಿಗೆ ಸಿಂದಗಿ ಮುಸ್ಲಿಂ ಬಾಗವಾನ ಜಮಾತ್ ನಿಂದ ಸನ್ಮಾನ ವಿಜಯಪುರ: ಮಕ್ಕಳಲ್ಲಿ ಅಡಗಿರುವ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಚೆಲ್ಲುವ ಅವಕಾಶ ಪರಮಾತ್ನ ಕರುಣಿಸಿದ್ದಾನೆ. ಪ್ರತಿಯೊಂದು ಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ಭಾವಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಎಂದು ಮುಸ್ಲಿಂ ಬಾಗವಾನ ಜಮಾತ್ ಅಧ್ಯಕ್ಷ ಅಲ್ತಾಫ ಬಾಗವಾನ ನೂತನ ಶಿಕ್ಷಕರಿಗೆ ಸಲಹೆ ನೀಡಿದರು.ಪಟ್ಟಣದಲ್ಲಿ ಮುಸ್ಲಿಂ ಬಾಗವಾನ ಜಮಾತ್ ವತಿಯಿಂದ ನೂತನವಾಗಿ ಸರಕಾರಿ ಶಿಕ್ಷಕರಾಗಿ ಆಯ್ಕೆಯಾದ ಶಿಕ್ಷಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.ಶಾಲೆ ಎಂದರೆ ದೇವಾಲಯ, ಶಿಕ್ಷಕರನ್ನು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ತಮ್ಮನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ ತಮ್ಮ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ಕೂಡಾ ಗುರುತಿಸಿ ಅವರು ಕೂಡಾ ಈ ದೇಶದ ಉನ್ನತ ಹುದ್ದೆಯ ಅಧಿಕಾರಿಯಾಗುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಬೋಧನೆ ಮಾಡಬೇಕು. ದೇಶದಲ್ಲಿ ಹತ್ತು ಹಲವಾರು ಹುದ್ದೆಗಳು ಸಿಗುತ್ತವೆ. ಎಲ್ಲರಿಗೂ ಶಿಕ್ಷಕನಾಗುವ ಅದೃಷ್ಟ ಇರುವುದಿಲ್ಲ. ಆ ಅದೃಷ್ಟ ನಿಮ್ಮ…

Read More