ಸಿಂದಗಿ: ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಅದು ಹೆಚ್.ಐ.ವಿ/ ಏಡ್ಸ್. ಇದು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ ಎಂದು ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ ನರಗೋದಿ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮ ಪಂಚಾಯತ್ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ವಿಜಯಪುರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ, ಯಂಕಂಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಹಮ್ಮಿಕೊಂಡ ಎಚ್ಐವಿ ಏಡ್ಸ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಒಳ್ಳೆಯ ವಾತಾವರಣದ ಜೊತೆಗೆ ಶುದ್ಧವಾದ ಕುಡಿಯುವ ನೀರು ಮತ್ತು ಗ್ರಾಮದ ಎಲ್ಲಾ ಸಾರ್ವಜನಿಕರಿಗೆ ಆರೋಗ್ಯದಿಂದ ರೋಗ ಮುಕ್ತ ಗ್ರಾಮವನ್ನು ಮಾಡಲು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯಯವರು ಒಂದುಗೂಡಿ ಕೆಲಸ ನಿರ್ವಹಿಸಿದಾಗ ಮಾತ್ರ ನಿಯಂತ್ರಣ ಮಾಡಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಎಂ.ಪಿ ಸಾಗರ್ ಮಾತನಾಡಿದರು.
ಈ ವೇಳೆ ಯಂಕಂಚಿ ಗ್ರಾಮದ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಂಕಂಚಿ ಗ್ರಾಮ ಪಂಚಾಯತ್ ಸದಸ್ಯರಾದ ಬಸವರಾಜ್ ಅಳ್ಳಗಿ, ಲಕ್ಷ್ಮಿ ಶಂಕನಳ್ಳಿ, ಗುರುಬಾಯಿ ದೊಡಮನಿ, ಶೈಲಾಶ್ರೀ ತಳಗೇರಿ, ರಮೇಶ್ ತಳಗೇರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಹೊನ್ನಲು ಅಂಗನವಾಡಿ ಶಿಕ್ಷಕಿ ಕೆ.ಪಿ ಸಜ್ಜನ, ಆಶಾ ಕಾರ್ಯಕರ್ತೆ ಎಸ್.ಕೆ.ಸುಂಬಡ, ಎಸ್.ಎಸ್ ಕಾಳೆ, ಎಸ್.ಆರ್ ಮುಲ್ಲಾ, ಎಸ್.ಜಿ. ಕನಸೇ, ಬಿ.ಎಂ ಪಾಟೀಲ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಯಂಕಂಚಿ ಗ್ರಾಮದ ಗುರು ಹಿರಿಯರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

