Author: editor.udayarashmi@gmail.com

ಕೊಲ್ಹಾರ: ಪ್ರತಿಯೊಬ್ಬ ಮಾನವನು ಸಮಾಜದಲ್ಲಿ ಬದುಕುವಾಗ ಸಂಸ್ಕಾರ, ಸಂಸ್ಕೃತಿ, ಧರ್ಮ ಆಚರಣೆ, ನಡೆ ನುಡಿಯಲ್ಲಿ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಕುಟುಂಬ ವ್ಯವಸ್ಥೆಯನ್ನು ಉತ್ತುಂಗ ಶಿಖರಕ್ಕೆ ಒಯ್ಯುವ ಉದಾತ್ತ ಚಿಂತನೆಯ ಮನೋಭಾವನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬೇಲೂರು & ಕೊಲ್ಹಾರ ಹಿರೇಮಠದ ಪೀಠಾಧೀಕಾರಿ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.ಶುಕ್ರವಾರ ಹಿರೇಮಠದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಇಂದಿನ ಸಮಾಜದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಯುವ ಸಮೂಹ ಮಧ್ಯ ಸೇವನೆ, ಮಾದಕ ದ್ರವ್ಯ, ಬೀಡಿ ಸಿಗರೇಟ ತಂಬಾಕು ಭಂಗಿ ಸೇವನೆ ಮಾಡುವದರ ಜೊತೆಗೆ ವಿವಿಧ ತರಹದ ಜೂಜಾಟಗಳಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಲ್ಲದೇ ಕುಟುಂಬದ ನೆಮ್ಮದಿಯನ್ನು ಕಳೆಯುತ್ತಿರುವದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದರು.ದುಶ್ಚಟಗಳಿಗೆ ಬಲಿಯಾಗಿ ತಾವು ಮಾಡಿದ ದುಡಿಮೆಯ ಹಣ ತಂದೆ ತಾಯಿಗಳ ಕೂಡಿಟ್ಟ ಹಣ ವ್ಯಯವಾಗುವದಲ್ಲದೇ ದೇಹಾರೊಗ್ಯ ಮಾನಸಿಕ ಖಿನ್ನತೆ ಬೌದ್ದಿಕ ಆರೋಗ್ಯವನ್ನು ಕೆಡಿಸಿಕೊಂಡು ಕ್ಷಣ ಕ್ಷಣಕ್ಕೂ ದುಖಃ ಸಂಕಟದ ಯಾತನೆ ಅನುಭವಿಸುವರು. ಅಷ್ಟೇ ಅಲ್ಲದೇ ಮನೆಗಳಿಗೆ ಮಹಾಮಾರಿಯಾಗಿ ಸಮಾಜಕ್ಕೆ…

Read More

ಇಂಡಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಕಾರ್ಯನಿರತ ಪರ್ತಕರ್ತರ ಸಂಘದಿಂದ ಪ್ರತಿಭಟನೆ ಇಂಡಿ: ಇಂಡಿ ಜಿಲ್ಲೆಯಾಗಿ ಪರಿವರ್ತನೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಇಂಡಿಯ ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ನಂತರ ಮಿನಿ ವಿಧಾನಸೌಧ ತಲುಪಿ ಅಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.ಪತ್ರಕರ್ತರಾದ ಅಬುಶಾಮ ಹವಾಲ್ದಾರ, ರಾಜಕುಮಾರ ಚಾಬುಕಸವಾರ, ಶಂಕರಲಿಂಗ ಜಮಾದಾರ ಮಾತನಾಡಿ ೧೯೯೬ ರಲ್ಲಿ ಜೆ.ಎಚ್.ಪಟೇಲ ಮುಖ್ಯಮಂತ್ರಿಗಳಿದ್ದಾಗ ವಿಜಯಪುರ ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟ ಜಿಲ್ಲೆಯಾಗಿ ಮಾಡಿದರು. ಈಗ ಅದೇ ಮಾದರಿಯಲ್ಲಿ ಸಿದ್ದರಾಮಯ್ಯನವರು ಇಂಡಿ ಜಿಲ್ಲೆಯಾಗಿ ಮಾಡಲು ಆಗ್ರಹಿಸಿದರು.ದೇಶದಲ್ಲಿ ಮೊದಲು ಇದ್ದ ರಾಜ್ಯಕ್ಕಿಂತ ಅಭಿವೃದ್ಧಿಗಾಗಿ ಹೆಚ್ಚು ರಾಜ್ಯಗಳನ್ನು ಮಾಡಿದ್ದಾರೆ. ಉತ್ತರಾಂಚಲ,ಛತ್ತಿಸಗಡ,ತೆಲಂಗಾಣ ರಾಜ್ಯಗಳು ಬೇರ್ಪಡೆಯಾದ ನಂತರ ತೀವ್ರ ಅಭಿವೃದ್ದಿ ಕಂಡಿವೆ. ಅದರಂತೆ ಕರ್ನಾಟಕಲ್ಲೂ ಮೊದಲು ಇದ್ದ ಜಿಲ್ಲೆ ಹೆಚ್ಚಿಗೆ ಮಾಡಿ ಬಾಗಲಕೋಟ, ಯಾದಗಿರಿ ಸೇರಿದಂತೆ ಮಾಡಿದ್ದರಿಂದ ಅವು ಹೆಚ್ಚು ಪ್ರಗತಿಯಲ್ಲಿವೆ. ಹೀಗಾಗಿ ಪ್ರಗತಿಯ ದೃಷ್ಠಿಯಿಂದ ಇಂಡಿ ಜಿಲ್ಲೆ ಮಾಡಿದರೆ ಈ ಭಾಗ ಅಭಿವೃದ್ದಿ ಕಾಣಲು ಸಾಧ್ಯ ಎಂದರು.ಉತ್ತರ ಪ್ರದೇಶದಲ್ಲಿ…

Read More

ಇಂಡಿ: ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ ಅದೇ ಗುರುವಿಗೆ ನೀಡುವ ಮಹತ್ವದ ಗುರುಕಾಣಿಕೆ. ಹೆತ್ತ ತಾಯಿ ಹೊತ್ತ ನಾಡನ್ನು ಎಂದೂ ಮರೆಯಬಾರದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ ನಡಗಡ್ಡಿ ಹೇಳಿದರು.ಅವರು ತಾಲೂಕಿನ ತಾಂಬಾ ಗ್ರಾಮದ ಶ್ರೀ ಸಂಗನಬಸವೇಶ್ವರ ಪ್ರೌಢ ಶಾಲೆಯ ೧೯೯೮-೯೯ನೇ ಬ್ಯಾಚಿನ ಹಳೆಯ ವಿದ್ಯಾರ್ಥಿಗಳಿಂದ ಪ್ರೊಜೆಕ್ಟರ್ ಕೊಡುಗೆ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾವುದೇ ಪಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುವ ಗುರುಗಳಿಗಾಗಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿರುವದು ಹಾಗೂ ಪ್ರೊಜೆಕ್ಟರ್ ಕೊಡುಗೆಯಾಗಿ ನೀಡಿರುವದು ಶ್ಲಾಘನಿಯ ಎಂದರು.ಶ್ರೀಶಾಂತೇಶ್ವರ ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ ರೊಟ್ಟಿ ಮಾತನಾಡಿದರು.ನಿವೃತ್ತ ಶಿಕ್ಷಕ ಜೆ.ಆರ್. ಪೂಜಾರಿ, ಶಿಕ್ಷಕಿ ಪಿ.ಬಿ. ಕಾಡಯ್ಯನಮಠ, ಮುಖ್ಯ ಗುರುಗಳಾದ ಎಸ್.ಎಮ್. ಚವ್ಹಾಣ, ಯುವರಾಜ ಪಡಗಣ್ಣವರ, ಜಿ.ಎಸ್. ಹಿರೇಮಠ ಮಾತನಾಡಿದರು.ನಿವೃತ್ತ ಶಿಕ್ಷಕ ಎಸ್.ಸಿ. ನಿಂಬಾಳ ಪ್ರೊಜೆಕ್ಟರ್ ಉದ್ಘಾಟಿಸಿದರು. ಸಂಸ್ಥೆಯ ಚೇರಮನ್ ಈರಣ್ಣ ಕಿಣಗಿ ಅಧ್ಯಕ್ಷತೆವಹಿಸಿದ್ದರು. ಪ್ರಾಚಾರ್ಯ ಸಿ.ಎಸ್. ಕಣಮೇಶ್ವರ, ಮಲಕಪ್ಪ ಸೋಮನಿಂಗ, ಪರಸು ಪಾಟೀಲ, ಬಾಬು ಕನೋಜಿ, ಆಯ್.ಸಿ. ಕಂಬಾರ, ರವಿ…

Read More

ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸೇನೆಯ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷ ಖಾಜು ಹೊಸಮನಿ ಅವರ ನೇತೃತ್ವದಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಇಂಡಿ ತಾಲೂಕು ಅಧ್ಯಕ್ಷರನ್ನಾಗಿ ಮಡೆಪ್ಪ ಚೋರಗಿ ಉಪಾಧ್ಯಕ್ಷರಾಗಿ ಸಂದೀಪ ಕಾಳೆ ಅವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಖಾಜು ಹೊಸಮನಿ, ಅರವಿಂದ ವಠಾರ, ಸುಭಾಸ ತಳವಾರ, ಮಾದೇಶ, ಅಕ್ಷಯ ಹಾದಿಮನಿ, ಸಂತೋಷ ಕಾಳೆ ಮತ್ತಿತರಿದ್ದರು.

Read More

ಇಂಡಿ: ಇಂಡಿ ತಾಲೂಕು ಜಿಲ್ಲೆಯಾಗಿ ಪರಿವರ್ತನೆ ಮಾಡುವ ಕುರಿತು ಅಭಿಪ್ರಾಯ ಸಂಗ್ರಹಿಸಲು ಡಿ. ೩೦ ರಂದು ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ಸಭೆ ಕರೆಯಲಾಗಿದೆ.ಸಭೆಯ ಅಧ್ಯಕ್ಷತೆ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ವಹಿಸುವರು.ಆಸಕ್ತರು, ತಮ್ಮ ಅಭಿಪ್ರಾಯ ತಿಳಿಸಲು ಸಭೆಯಲ್ಲಿ ಪಾಲ್ಗೊಳ್ಳಲು ತಹಸೀಲ್ದಾರ ಬಿ.ಎಸ್.ಕಡಕಬಾವಿ ತಿಳಿಸಿದ್ದಾರೆ.

Read More

ಇಂಡಿ: ಪಟ್ಟಣದ ಗುರುಭವನದಲ್ಲಿ ಡಿ. ೩೦ ರಂದು ವಿಶೇಷ ಪಿಂಚಣಿ ಅದಾಲತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಗರಿಕರು ಸಾಕಷ್ಟು ಬಾರಿ ಕಚೇರಿಗಳೀಗೆ ಅಲೆದಾಡುತ್ತಿರುವುದು ಕಂಡು ಬಂದಿದ್ದು ಅವರನ್ನೊಳಗೊಂಡಂತೆ ಪಿಂಚಣಿಗೆ ಅರ್ಹರಾದ ಅಂಗವಿಕಲರು, ವಿಧವೆಯರು, ಭಾಗವಹಿಸಿ ಸ್ಥಳದಲ್ಲೇ ತಮ್ಮ ಸಮಸ್ಯೆ ಪರಿಹರಿಸಲು ಈ ವಿಶೇಷ ಪಿಂಚಣಿ ಅದಾಲತ್ ಹಮ್ಮಿಕೊಂಡಿದೆ ಎಂದು ತಿಳಿಸಿದ ಅವರು ಅದಾಲತ್‌ನಲ್ಲಿ ತಹಸೀಲ್ದಾರ ಬಿ.ಎಸ್. ಕಡಕಬಾವಿ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸುವ ಪಲಾನುಭವಿಗಳು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರಕಾರ್ಡ, ವಯಸ್ಸಿನ ದೃಡಿಕರಣ ಪತ್ರ, ಜನ್ಮ ದಾಖಲೆ, ಬ್ಯಾಂಕ ಪಾಸ ಪುಸ್ತಕ ಅಥವಾ ಅಂಚೆ ಕಛೇರಿಯ ಪಾಸ ಪುಸ್ತಕದೊಂದಿಗೆ ಡಿ.೩೦ ರಂದು ಬೆಳಗ್ಗೆ ೧೦. ಘಂಟೆಗೆ ಗುರುಭವನದಲ್ಲಿ ಹಾಜರಾಗಬೇಕೆಂದು ಕಂದಾಯ ಉಪ ವಿಭಾಗಾಧಿಕಾರಿಗಳು ಮನವಿ ಮಾಡಿದ್ದಾರೆ.

Read More

ವಿಜಯಪುರ: ನಗರದ ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಕಾರ್ಯಕ್ರಮ ಜ.೨ರಂದು ನಡೆಯುವ ಹಿನ್ನಲೆಯಲ್ಲಿ ಕೃಷ್ಟಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಂದು ಜರುಗುವ ಹತ್ತಿ ಟೆಂಡರ್ ಪ್ರಕ್ರಿಯೆ ಹಾಗೂ ವ್ಯಾಪಾರ ವಹಿವಾಟನ್ನು ನಡೆಸದಿರಲು ವ್ಯಾಪಾರಸ್ಥರು ತೀರ್ಮಾನಿಸಿದ್ದು, ರೈತ ಬಾಂಧವರು ಸಹಕರಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಜಿಲ್ಲಾಡಳಿತ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ವಿಜಯಪುರ: ಜ್ಞಾನಪೀಠ ಪುರಸ್ಕೃತ ಕನ್ನಡದ ಮೊದಲ ಸಾಹಿತಿ, ಕನ್ನಡ ನಾಡು-ನುಡಿಗೆ ತಮ್ಮ ಜೀವನವ ಮುಡಿಪಾಗಿಟ್ಟು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರ ಕವಿ, ವಿಶ್ವ ಮಾನವರಾಗಿ ರಾಷ್ಟ್ರದಲ್ಲಿ ತಮ್ಮ ಸಾಹಿತ್ಯ ಸಂಚಲನದಿಂದ ಮೆರಗು ನೀಡಿ ರಾಷ್ಟ್ರ ಕವಿ ಎನಿಸಿಕೊಂಡವರು ಕುವೆಂಪು ಅವರು ಮಾತ್ರ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, ಕುವೆಂಪು ಅವರು ೨೦ನೇ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದು, ಇಂದಿಗೂ ಅವರ ಸಾಹಿತ್ಯ ಕೃತಿಗಳು ಪ್ರಸ್ತುತದಲ್ಲಿವೆ. ಅವರ…

Read More

ಬ್ರಹ್ಮದೇವನಮಡು: ಹುಟ್ಟುವ ಪ್ರತಿಯೊಂದು ಮಗುವು ವಿಶ್ವ ಮಾನವನೇ, ಆ ನಂತರ ಆ ಮಗುವನ್ನು ಜಾತಿ-ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಎಂದು ಕನ್ನಡ ಶಿಕ್ಷಕಿ ಅನುಸೂಯ ಡೋಮನಾಳ ಹೇಳಿದರು.ಸಿಂದಗಿ ತಾಲೂಕಿನ ಗುಬ್ಬೇವಾಡದ ಮೊರಾಜಿ೯ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೇಂಪು ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.ನೈತಿಕ ವ್ಶಕ್ತಿತ್ವದಿಂದ ಮುಖ್ಶನಾಗಬೇಕೆಂಬ ವಿಶ್ವಮಾನವತೆಯ ಪರಿಕಲ್ಪನೆ ಕುವೆಂಪು ಅವರದಾಗಿತ್ತು ಎಂದರು.ಈ ವೇಳೆ ಶಿಕ್ಷಕರಾದ ಸಂತೋಷ ಬಿರಾದಾರ, ಸುನೀಲ್ ಬಿರಾದಾರ ಸೇರಿದಂತೆ ಶಾಲೆ ಸಿಬ್ಬಂದಿ ವಗ೯ ಇದ್ದರು.ಅಂಬಕ್ಕ ನಾಯ್ಕೋಡಿ ಸ್ವಾಗತಿಸಿದರು. ಇಂಗ್ಲೀಷ್ ಶಿಕ್ಷಕ ನಿಂಗನಗೌಡ ಚಂಗಳಿ ನಿರೂಪಿಸಿದರು, ವಿದ್ಯಾ ಮೇಡ‌ಂ ವಂದಿಸಿದರು.

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಗ್ರಾಮ ಪಂಚಾಯತ ಮಟ್ಟದ ಹೊನ್ನಳ್ಳಿ, ಬ್ರಹ್ಮದೇವನಮಡು, ಖಾನಾಪುರ, ಕರವಿನಾಳ ಶಾಲೆಗಳ ೪,೫,೬ ನೇ ತರಗತಿಗಳ ಮಕ್ಕಳಿಗೆ ಗಣಿತ ಕಲಿಕಾ ಆಂದೋಲನ ಪರೀಕ್ಷೆ ಏಪ೯ಡಿಸಲಾಗಿತ್ತು. ಕಾಂಗ್ರೆಸ್ ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ(ಕರವಿನಾಳ) ಅಧ್ಶಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ಕೇಂದ್ರ ವ್ಶಕ್ತಿ ಪ್ರಕಾಶ ಕಾಂಬಳೆ, ಎಸ್ಡಿಎಂಸಿ ಅಧ್ಶಕ್ಷ ಇಶ್ಮಾಯಿಲ್ ತಂಗಡಗಿ, ಸಂಗನಗೌಡ ಪಾಟೀಲ, ಸಾಹೇಬಪಟೇಲ ಮುರಡಿ ಸೇರಿದಂತೆ ಮತ್ತಿತ್ತರರು ವೇದಿಕೆ ಮೇಲಿ ಇದ್ದರು. ಎನ್.ಆರ್.ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಸ್.ವಾಯ್.ಯಳಸಂಗಿ ಸ್ವಾಗತಿಸಿದರು. ದಸ್ತಗೀರ ಉಸ್ತಾದ ವಂದಿಸಿದರು. ಹೊನ್ನಳ್ಳಿ ಕ್ಲಸ್ಟರ್ ಮಟ್ಟದ ಶಾಲೆಯ ಮುಖ್ಶಗುರುಗಳು, ಶಿಕ್ಷಕರು ಇದ್ದರು.

Read More