ಇಂಡಿ: ಪಟ್ಟಣದ ಗುರುಭವನದಲ್ಲಿ ಡಿ. ೩೦ ರಂದು ವಿಶೇಷ ಪಿಂಚಣಿ ಅದಾಲತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಗರಿಕರು ಸಾಕಷ್ಟು ಬಾರಿ ಕಚೇರಿಗಳೀಗೆ ಅಲೆದಾಡುತ್ತಿರುವುದು ಕಂಡು ಬಂದಿದ್ದು ಅವರನ್ನೊಳಗೊಂಡಂತೆ ಪಿಂಚಣಿಗೆ ಅರ್ಹರಾದ ಅಂಗವಿಕಲರು, ವಿಧವೆಯರು, ಭಾಗವಹಿಸಿ ಸ್ಥಳದಲ್ಲೇ ತಮ್ಮ ಸಮಸ್ಯೆ ಪರಿಹರಿಸಲು ಈ ವಿಶೇಷ ಪಿಂಚಣಿ ಅದಾಲತ್ ಹಮ್ಮಿಕೊಂಡಿದೆ ಎಂದು ತಿಳಿಸಿದ ಅವರು ಅದಾಲತ್‌ನಲ್ಲಿ ತಹಸೀಲ್ದಾರ ಬಿ.ಎಸ್. ಕಡಕಬಾವಿ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸುವ ಪಲಾನುಭವಿಗಳು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರಕಾರ್ಡ, ವಯಸ್ಸಿನ ದೃಡಿಕರಣ ಪತ್ರ, ಜನ್ಮ ದಾಖಲೆ, ಬ್ಯಾಂಕ ಪಾಸ ಪುಸ್ತಕ ಅಥವಾ ಅಂಚೆ ಕಛೇರಿಯ ಪಾಸ ಪುಸ್ತಕದೊಂದಿಗೆ ಡಿ.೩೦ ರಂದು ಬೆಳಗ್ಗೆ ೧೦. ಘಂಟೆಗೆ ಗುರುಭವನದಲ್ಲಿ ಹಾಜರಾಗಬೇಕೆಂದು ಕಂದಾಯ ಉಪ ವಿಭಾಗಾಧಿಕಾರಿಗಳು ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
