ಇಂಡಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಕಾರ್ಯನಿರತ ಪರ್ತಕರ್ತರ ಸಂಘದಿಂದ ಪ್ರತಿಭಟನೆ
ಇಂಡಿ: ಇಂಡಿ ಜಿಲ್ಲೆಯಾಗಿ ಪರಿವರ್ತನೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಇಂಡಿಯ ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ನಂತರ ಮಿನಿ ವಿಧಾನಸೌಧ ತಲುಪಿ ಅಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರಾದ ಅಬುಶಾಮ ಹವಾಲ್ದಾರ, ರಾಜಕುಮಾರ ಚಾಬುಕಸವಾರ, ಶಂಕರಲಿಂಗ ಜಮಾದಾರ ಮಾತನಾಡಿ ೧೯೯೬ ರಲ್ಲಿ ಜೆ.ಎಚ್.ಪಟೇಲ ಮುಖ್ಯಮಂತ್ರಿಗಳಿದ್ದಾಗ ವಿಜಯಪುರ ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟ ಜಿಲ್ಲೆಯಾಗಿ ಮಾಡಿದರು. ಈಗ ಅದೇ ಮಾದರಿಯಲ್ಲಿ ಸಿದ್ದರಾಮಯ್ಯನವರು ಇಂಡಿ ಜಿಲ್ಲೆಯಾಗಿ ಮಾಡಲು ಆಗ್ರಹಿಸಿದರು.
ದೇಶದಲ್ಲಿ ಮೊದಲು ಇದ್ದ ರಾಜ್ಯಕ್ಕಿಂತ ಅಭಿವೃದ್ಧಿಗಾಗಿ ಹೆಚ್ಚು ರಾಜ್ಯಗಳನ್ನು ಮಾಡಿದ್ದಾರೆ. ಉತ್ತರಾಂಚಲ,ಛತ್ತಿಸಗಡ,ತೆಲಂಗಾಣ ರಾಜ್ಯಗಳು ಬೇರ್ಪಡೆಯಾದ ನಂತರ ತೀವ್ರ ಅಭಿವೃದ್ದಿ ಕಂಡಿವೆ. ಅದರಂತೆ ಕರ್ನಾಟಕಲ್ಲೂ ಮೊದಲು ಇದ್ದ ಜಿಲ್ಲೆ ಹೆಚ್ಚಿಗೆ ಮಾಡಿ ಬಾಗಲಕೋಟ, ಯಾದಗಿರಿ ಸೇರಿದಂತೆ ಮಾಡಿದ್ದರಿಂದ ಅವು ಹೆಚ್ಚು ಪ್ರಗತಿಯಲ್ಲಿವೆ. ಹೀಗಾಗಿ ಪ್ರಗತಿಯ ದೃಷ್ಠಿಯಿಂದ ಇಂಡಿ ಜಿಲ್ಲೆ ಮಾಡಿದರೆ ಈ ಭಾಗ ಅಭಿವೃದ್ದಿ ಕಾಣಲು ಸಾಧ್ಯ ಎಂದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಹಲವಾರು ಜಿಲ್ಲೆ, ಬಿಹಾರದಲ್ಲಿ ಸೇರಿದಂತೆ ದೇಶದ ಅನೇಕ ಕಡೆ ಹಲವಾರು ಜಿಲ್ಲೆ ಕೊಡುಗೆ ನೀಡಿದ್ದು ಅದೇ ಮಾದರಿಯಲ್ಲಿ ಇಂಡಿ ಜಿಲ್ಲೆ ಮಾಡಬೇಕೆಂದರು.
ಪತ್ರಕರ್ತರಾದ ಉಮೇಶ ಬಳಬಟ್ಟಿ, ಯಲಗೊಂಡ ಬೇವನೂರ, ಲಕ್ಷಣ ಹಿರೆಕುರಬರ ಲಾಲಸಿಂಗ ರಾಠೋಡ, ನಾಗರಾಜ ಆಸಂಗಿ, ಅಲ್ಲಾಬಕ್ಷ ಗೋರೆ, ಅರವಿಂದ ಖಡೆಖಡೆ, ಸದ್ದಾಂ ಹುಸೇನ ಜಮಾದಾರ, ಅಂಬಣ್ಣ ರಾಂಪೂರ, ಜಹಾಂಗೀರಬಾಷಾ ದೇಸಾಯಿ, ಪ್ರವೀಣ ಮಠ ಮತ್ತಿತರರಿದ್ದರು.

