Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನ್ಯಾಯಬೆಲೆ ಅಂಗಡಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ದಿಢೀರ್ ದಾಳಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಪಾಟೀಲ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಿಂದಗಿ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೫೮, ಸೋಂಪುರ ರಸ್ತೆ ಹಾಗೂ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೫೬ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ವಿತರಿಸಲಾಗುವ ಪಡಿತರ ಅಕ್ಕಿಯ ತೂಕದ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಕೆಲವು ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ೪ರಿಂದ ೫ ಕೆ.ಜಿ.ವರೆಗೆ ಕಡಿಮೆ ತೂಕದಲ್ಲಿ ಅಕ್ಕಿ ನೀಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲೇ ತೂಕದ ಪ್ರಮಾಣವನ್ನು ಪರಿಶೀಲಿಸಿ ಪಡಿತರ ಪಡೆಯಲು ಬಂದಿದ್ದ ಗ್ರಾಹಕರಿಂದಲೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.ಅಂಗಡಿಯಲ್ಲಿದ್ದ ಅಕ್ಕಿಯ ದಾಸ್ತಾನು, ವಿತರಣಾ ಪ್ರಮಾಣ, ದಾಖಲೆಗಳು ಹಾಗೂ ತೂಕದ ಸಾಧನಗಳನ್ನು ಪರಿಶೀಲಿಸಿ,…
ರಾಜ್ಯ ಸರ್ಕಾರದಿಂದ ಅವಳಿ ತಾಲೂಕುಗಳ ರೈತರಿಗೆ ಅನ್ಯಾಯ | ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ಮತ್ತು ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸದೆ ರಾಜ್ಯ ಸರ್ಕಾರ ಅವಳಿ ತಾಲೂಕುಗಳ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ತಾಲೂಕಿನ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳಿಗೆ ಅಗತ್ಯ ಪ್ರಮಾಣದ ಮಳೆಯಾಗದೆ ಕೃಷಿ ಉತ್ಪಾದನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ರೈತರಿಗೆ ಬರ ಪರಿಹಾರ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳ ಅಗತ್ಯವಿದೆ. ಬರಗಾಲದ ಪರಿಸ್ಥಿತಿ ಇದ್ದರೂ ಸಿಂದಗಿ ಮತ್ತು ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸರ್ಕಾರದ ಈ ನಡೆಯಿಂದ ಅವಳಿ ತಾಲೂಕಿನ ಸಾವಿರಾರು ರೈತರಿಗೆ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ…
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ೧೩ ತಾಲೂಕುಗಳಲ್ಲಿಯೂ ಬರ ತಾಂಡವವಾಡುತ್ತಿದೆ, ಆದರೆ ಸರ್ಕಾರ ಮಾತ್ರ ಕೇವಲ ಮೂರು ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಿದೆ, ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಅಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲು ಸರ್ಕಾರದ ಬಳಿ ದುಡ್ಡಿಲ್ಲವೇ? ಸರ್ಕಾರದ ಖಜಾನೆ ಖಾಲಿಯಾಗಿರುವುದು ಖಾತ್ರಿಯಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ, ಇಂಡಿ, ಚಡಚಣ, ತಾಳಿಕೋಟೆ ಹೀಗೆ ಎಲ್ಲ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ, ಬೆಳೆದ ಬೆಳೆ ಕೈಗೆ ಬಾರದೇ ರೈತ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ, ಮೊನ್ನೆ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ ಅವರು ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಸರ್ಕಾರದ ಬಳಿ ದುಡ್ಡಿನ ಕೊರತೆ ಇಲ್ಲ ಎಂದು ವಿಧಾನಸೌಧದಲ್ಲಿ…
ಲೇಖನ- ಸಂತೋಷ ಬಗಲಿ,ಸಾಮಾಜಿಕ ಚಿಂತಕರು & ಹವ್ಯಾಸಿ ಬರಹಗಾರರುವಿಜಯಪುರ ಉದಯರಶ್ಮಿ ದಿನಪತ್ರಿಕೆ ಭಾರತವು ಹಬ್ಬಗಳ ನಾಡು. ಇಲ್ಲಿನ ಪ್ರತಿಯೊಂದು ಹಬ್ಬವೂ ಕೇವಲ ಆಚರಣೆಗೆ ಸೀಮಿತವಾಗದೆ, ಮಾನವೀಯ ಮೌಲ್ಯಗಳು, ಕುಟುಂಬ ಸಂಬಂಧಗಳು, ಸಂಸ್ಕೃತಿ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುವ ಮಹತ್ವದ ಸಂದೇಶವನ್ನು ಹೊತ್ತಿದೆ. ಅಂತಹ ಪವಿತ್ರ ಹಬ್ಬಗಳಲ್ಲಿ ರಕ್ಷಾ ಬಂಧನ ಅತ್ಯಂತ ವಿಶೇಷವಾದದ್ದು. ಸಹೋದರ–ಸಹೋದರಿಯರ ಪ್ರೀತಿ, ವಿಶ್ವಾಸ, ಆತ್ಮೀಯತೆ ಮತ್ತು ಪರಸ್ಪರ ರಕ್ಷಣೆಯ ಭಾವನೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಭಾರತೀಯ ಸಂಸ್ಕೃತಿಯ ಭಾವನಾತ್ಮಕ ಶ್ರೀಮಂತಿಕೆಗೆ ಜೀವಂತ ಸಾಕ್ಷಿಯಾಗಿದೆ.ರಕ್ಷಾ ಬಂಧನ ಎಂದರೆ ಕೇವಲ ಸಹೋದರಿಯೊಬ್ಬಳು ಸಹೋದರನ ಕೈಗೆ ರಾಖಿ ಕಟ್ಟುವ ಆಚರಣೆ ಮಾತ್ರವಲ್ಲ. ಇದು “ನಿನ್ನ ಸುಖ–ದುಃಖಗಳಲ್ಲಿ ನಾನು ನಿನ್ನೊಂದಿಗೆ ಇದ್ದೇನೆ; ನಿನ್ನ ಗೌರವ, ಸುರಕ್ಷತೆ ಮತ್ತು ಸಂತೋಷಕ್ಕಾಗಿ ನಾವು ಪರಸ್ಪರ ಬದ್ಧರಾಗಿದ್ದೇವೆ” ಎಂಬ ಆಳವಾದ ಭಾವನೆಯ ಸಂಕೇತವಾಗಿದೆ.ರಕ್ಷಾ ಬಂಧನದ ಅರ್ಥವೇನು?‘ರಕ್ಷಾ’ ಎಂದರೆ ರಕ್ಷಣೆ, ಸುರಕ್ಷತೆ ಮತ್ತು ಕಾಳಜಿ. ‘ಬಂಧನ’ ಎಂದರೆ ಬಾಂಧವ್ಯ ಅಥವಾ ಸಂಬಂಧ. ಹೀಗಾಗಿ ರಕ್ಷಾ ಬಂಧನ ಎಂದರೆ ಪ್ರೀತಿ ಮತ್ತು…
ಅಣ್ಣ–ತಂಗಿಯರ ಬಾಂಧವ್ಯದ ಭಾವಲೋಕ, ಪರಂಪರೆ ಮತ್ತು ಇಂದಿನ ವಾಸ್ತವಿಕತೆ ಲೇಖನ- ಪ್ರಶಾಂತ ಕುಲಕರ್ಣಿ.ಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿ. ವಿಜಯಪುರ ಜಿಲ್ಲೆPh :9845442237 ಉದಯರಶ್ಮಿ ದಿನಪತ್ರಿಕೆ ಕೆಲವು ಸಂಬಂಧಗಳು ಮಾತುಗಳಿಂದ ಅರ್ಥವಾಗುವುದಿಲ್ಲ; ಅವುಗಳನ್ನು ಅನುಭವಿಸಬೇಕು. ಕೆಲವು ಬಂಧಗಳಿಗೆ ಸಾಕ್ಷಿ ಬೇಕಾಗುವುದಿಲ್ಲ; ಅವುಗಳ ಅಸ್ತಿತ್ವವೇ ಒಂದು ಭರವಸೆ. ಅಂತಹ ಅಪೂರ್ವ ಬಂಧಗಳಲ್ಲಿ ಅಣ್ಣ–ತಂಗಿಯರ ಸಂಬಂಧವೂ ಒಂದು. ಬಾಲ್ಯದ ನಗು, ತುಂಟಾಟ, ಸಣ್ಣಪುಟ್ಟ ಮುನಿಸು, ಜಗಳ, ಹಂಚಿಕೊಂಡ ಸಂತೋಷ, ಕಣ್ಣೀರಿನ ಕ್ಷಣಗಳು, ಪರಸ್ಪರರ ಕಾಳಜಿ—ಇವೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು ಬದುಕಿನ ವಿವಿಧ ಹಂತಗಳಲ್ಲಿ ಸಾಗುವ ಈ ಸಂಬಂಧಕ್ಕೆ ರಕ್ಷಾ ಬಂಧನ ಒಂದು ಸುಂದರವಾದ ಭಾವನಾತ್ಮಕ ಅಭಿವ್ಯಕ್ತಿ.ರಕ್ಷಾ ಬಂಧನ ಎಂದರೆ ಕೇವಲ ಮಣಿಕಟ್ಟಿಗೆ ಕಟ್ಟುವ ರಾಖಿಯಲ್ಲ. ಅದು ಒಂದು ಸಂಬಂಧದ ನೆನಪು. ಒಂದು ನಂಬಿಕೆಯ ಸಂಕೇತ. ಒಂದು ಭರವಸೆಯ ಬಂಧ. ತಂಗಿ ಅಣ್ಣನ ಕೈಗೆ ರಾಖಿ ಕಟ್ಟುವ ಕ್ಷಣದಲ್ಲಿ ಅವಳ ಕೈಯಲ್ಲಿ ಇರುವ ದಾರಕ್ಕಿಂತ ಅವಳ ಹೃದಯದಲ್ಲಿರುವ ಭಾವನೆಯೇ ಮುಖ್ಯವಾಗುತ್ತದೆ. ಆ ದಾರದಲ್ಲಿ ಪ್ರೀತಿ ಇದೆ, ಕಾಳಜಿ ಇದೆ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಕ್ಕಿ ಮಾಫಿಯಾ ಕುರಿತು ವರದಿ ಮಾಡಿದ್ದ ವಿಜಯಪುರ ಜಿಲ್ಲಾ ವರದಿಗಾರ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿರುವ ಘಟನೆ ಖಂಡಿಸಿ ಸಿಂದಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಪತ್ರಕರ್ತರ ಸುರಕ್ಷತೆ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ತಹಶೀಲ್ದಾರ್ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿ, ಅಕ್ರಮ ಹಾಗೂ ಭ್ರಷ್ಟಾಚಾರದ ಕುರಿತು ವರದಿ ಮಾಡುವುದು ಪತ್ರಕರ್ತರ ವೃತ್ತಿಪರ ಕರ್ತವ್ಯವಾಗಿದೆ. ಆದರೆ, ಪತ್ರಕರ್ತರಿಗೆ ಜೀವ ಬೆದರಿಕೆ ಹಾಕುವುದು, ಅವರ ಮೇಲೆ ಹಲ್ಲೆ ನಡೆಸುವುದು ಖಂಡನೀಯ. ಇಂತಹ ಘಟನೆಗಳು ಪತ್ರಿಕಾ ಸ್ವಾತಂತ್ರ‍್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈಗಾಗಲೇ ಬಂಧಿಸಲಾಗಿರುವ ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪತ್ರಕರ್ತರು ಯಾವುದೇ ಭಯ,…
ಬರಗಾಲ ಪಟ್ಟಿಯಿಂದ ಸಿಂದಗಿ–ಆಲಮೇಲ ಕೈಬಿಟ್ಟಿದ್ದಕ್ಕೆ ಮಾಜಿ ಶಾಸಕ ರಮೇಶ ಭೂಸನೂರ ತೀವ್ರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬರಗಾಲ ಪಟ್ಟಿಯಿಂದ ಸಿಂದಗಿ ಹಾಗೂ ಆಲಮೇಲ ಅವಳಿ ತಾಲೂಕುಗಳನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿ ಶಾಸಕ ರಮೇಶ ಭೂಸನೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭೀಕರ ಬರಗಾಲದಿಂದ ರೈತರ ಮೊಗದ ಹರ್ಷ ಕಸಿದುಕೊಂಡಿದೆ. ಇಂತಹ ಸಂದರ್ಭದಲ್ಲಿ ಬರಗಾಲ ಪಟ್ಟಿಯಿಂದ ಅವಳಿ ತಾಲೂಕುಗಳನ್ನು ಕೈಬಿಟ್ಟಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಈ ಮಲತಾಯಿ ಧೋರಣೆ ಸರಿಯಲ್ಲ ಎಂದು ಕಿಡಿಕಾರಿದರು.ಸರ್ಕಾರ ಕೇವಲ ಕಚೇರಿ ವರದಿಗಳಿಗೆ ಸೀಮಿತವಾಗದೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ಸಿಂದಗಿ, ಆಲಮೇಲ ತಾಲೂಕುಗಳ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಕೂಡಲೇ ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ತೀವ್ರ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕಲಾವಿದರ ಅಮೃತ ಹಸ್ತದಿಂದ ತಯಾರಿಸಲ್ಪಡುವ ಗಣಪತಿ ಮೂರ್ತಿಗಳು ಬಸವ ಹಸಿರು ಬಳಗದ ಭಕ್ತಿ, ಕಲೆಯ ಸಂಕೇತವಾಗಿವೆ ಎಂದು ಹೂವಿನಹಿಪ್ಪರಗಿ ಚಿತ್ರಕಲಾ ಶಾಲೆಯ ಪ್ರಾಚಾರ್ಯ ರಮೇಶ ಸಾಸನೂರ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ಜರುಗಿದ ದೃಶ್ಯಬಿಂಬ ಕಲಾ ಪ್ರತಿಷ್ಠಾನ ವಿಜಯಪುರ ಹಾಗೂ ಬಸವ ಹಸಿರು ಬಳಗ ಸಹಯೋಗದ ‘ಅಮೃತ ಹಸ್ತದ ಮಣ್ಣಿನ ಗಣೇಶ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಣ್ಣಿನ ಗಣಪ ನೀರಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ ಇದಕ್ಕಾಗಿ ವಿವಿಧ ಜಿಲ್ಲೆಗಳಿಂದ ಕಲಾಕಾರರು ಬಂದಿದ್ದಾರೆ. ನೆಲ, ಜಲ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಜೊತೆಗೆ ಮಣ್ಣಿನ ಗಣೇಶನ ಮೂರ್ತಿಗಳು ಪರಿಸರ ರಕ್ಷಣೆಗೂ ಮಹತ್ವದ ಕೊಡುಗೆಗಳಾಗಿವೆ ಎಂದರುಬಸವ ಹಸಿರು ಬಳಗದ ಗೌರವಾಧ್ಯಕ್ಷ ಎಸ್.ಎಸ್.ಗಡೇದ, ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಓಪಿ ಗಣಪನ ಮೂರ್ತಿ ನೀರಲ್ಲಿ ಕರಗದು, ಅದಕ್ಕೆ ಹಾಕಲಾದ ವಿವಿಧ ರಾಸಾಯನಿಕ ಬಣ್ಣಗಳಿಂದ ಸೀಸ, ಪಾದರಸದಂತಹ ಅಪಾಯಕಾರಿ ವಸ್ತುಗಳು ನೀರಿನಲ್ಲಿ ಸೇರಿ, ನೀರು ಸೇವನೆ ಮಾಡುವ ಮನುಷ್ಯನಿಗೂ ಅದರಲ್ಲಿ ವಾಸ ಮಾಡುವ ಜಲಚರಗಳಿಗೂ ಅಪಾಯ ತರುತ್ತದೆ.…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಹಾಗೂ ದೇವರಹಿಪ್ಪರಗಿ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ನಡೆದ ೮ನೇ ದಿನದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಭೇಟಿ ನೀಡಿ ಧರಣಿ ಕೊನೆಗೊಳಿಸಲು ಮನವಿ ಮಾಡಿದರು.ಪಟ್ಟಣದ ಅಂಬೇಡ್ಕರ್ ವೃತ್ತದ ಧರಣಿ ಸ್ಥಳಕ್ಕೆ ಗುರುವಾರ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಎಡಿ ಶಿವಾನಂದ ಮೂಲಿಮನಿ, ಪಿಡಿಓ ಕಾಶೀನಾಥ ಕಡಕಭಾವಿ, ಸಹಾಯಕ ಯೋಜನಾ ನಿರ್ದೇಶಕ ಶ್ರೀನಿವಾಸ ಪವಾರ, ವಿಷಯ ನಿರ್ವಾಹಕ ಜಿ.ರೋಡಗಿ ಆಗಮಿಸಿ ಧರಣಿ ಕೈಬಿಡಲು ವಿನಂತಿಸಿದರು.ಈ ಸಂದರ್ಭದಲ್ಲಿ ಡಿಎಸ್‌ಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಮ್ಮ ಬೇಡಿಕೆಗಳು ಇಡೇರುವವರೆಗೆ ಹೋರಾಟ ನಿರಂತರ ಎಂದು ಹೇಳಿದರು.ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಸಂಘಟನಾ ಸಂಚಾಲಕ ಬಸವರಾಜ ಇಂಗಳಗಿ, ಶ್ರೀಕಾಂತ ಬಜಂತ್ರಿ, ಆಕಾಶ ಕೊಂಬಿನ, ಪ್ರಶಾಂತ ದೊಡಮನಿ, ರಮೇಶ ಬನ್ಸೋಡೆ, ಯಮನಪ್ಪ ಭೂತಾಳಿ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ, ಐಸಿಡಿಎಸ್ ಪೋಷಣ ಸಂಯೋಜಕ ಸೇರಿ ನಿರ್ಗತಿಕ ಕೇಂದ್ರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಸಿಂದಗಿಯಿಂದ ವಿಜಯಪುರಕ್ಕೆ ತೆರಳುವ ಮಾರ್ಗಮಧ್ಯೆದ ಪಡಗಾನೂರ ಕ್ರಾಸ್ ಹತ್ತಿರ ನಿರ್ಗತಿಕ ಮಹಿಳೆಯೊಬ್ಬರನ್ನು ಏಕಾಂಗಿಯಾಗಿ ಅಲೆಯುತ್ತಿರುವುದನ್ನು ಕಂಡು ಸಿಂದಗಿ ತಾಲ್ಲೂಕು ಐಸಿಡಿಎಸ್ ಪೋಷಣ ಸಂಯೋಜಕ ಪ್ರಮೋದ ಬೆಳಗಾವಿ ಮಹಿಳೆಯ ಪರಿಸ್ಥಿತಿ ಅವಲೋಕಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ೧೧೨ ಗೆ ಕರೆ ಮಾಡಿ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಮಹಿಳೆಯನ್ನು ರಕ್ಷಣೆ ಮಾಡಿದರು. ನಂತರ ನಿರ್ಗತಿಕರ ಕೇಂದ್ರದ ಸಿಬ್ಬಂದಿಗೆ ಸಂಪರ್ಕಿಸಿ ಸುರಕ್ಷಿತವಾಗಿ ಕೇಂದ್ರಕ್ಕೆ ಕಳಿಸಿದರು.ಪೊಲೀಸ್ ಸಿಬ್ಬಂದಿ ಪ್ರಕಾಶ ಭುಯ್ಯಾರ, ಜಹಾಂಗೀರ ಅವುಟಿ, ಮಳಸಿದ್ಧ ಬೋರಗಿ, ಪಾಷಾ ಜಮಾದಾರ, ಜಕ್ಕಪ್ಪ ಉಪ್ಪಲದಿನ್ನಿ, ಸುನೀಲ ನಾಯ್ಕೋಡಿ ಇದ್ದರು.
