ಪರಿಸರ ದಿನಾಚರಣೆ | ಆಲಮಟ್ಟಿಯಲ್ಲಿ ಮ್ಯಾರಥಾನ್‌ಗೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಹಾಗೂ ಸುತ್ತಮುತ್ತಲಿನ ಇಡೀ ಪ್ರದೇಶ ಕೆಬಿಜೆಎನ್‌ಎಲ್‌ನ ಅರಣ್ಯ ವಿಭಾಗದ ಕಾರ್ಯಚಟುವಟಿಕೆಯಿಂದ ಹಸಿರೀಕರಣಗೊಂಡಿದೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಹೇಳಿದರು.
ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಂಜೆ ಆಲಮಟ್ಟಿಯ ಅಣೆಕಟ್ಟು ವೃತ್ತದ ಬಳಿ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯೋಜನಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಲಮಟ್ಟಿ ಅಣೆಕಟ್ಟು ವೃತ್ತದಿಂದ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಮ್ಯಾರಥಾನ್ ನಡೆಯಿತು. ಕೆಬಿಜೆಎನ್‌ಎಲ್ ನೌಕರರು, ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ, ಡಿಎಫ್‌ಓ ಎನ್.ಕೆ. ಬಾಗಾಯತ್, ಐ.ಎಲ್. ಕಳಸಾ, ಅಸಿಸ್ಟೆಂಟ್ ಕಮಾಂಡೆಂಟ್ ಈರಪ್ಪ ವಾಲಿ, ಮಹೇಶ ಪಾಟೀಲ, ರವಿ ಚಂದ್ರಗಿರಿಯವರ, ಕೆ.ಜಯಣ್ಣ, ವೈ.ಎಂ. ಪಾತ್ರೋಟ, ಬಿ.ಜಿ. ಬನ್ನೂರ, ಮಹೇಶ ಗಾಳಪ್ಪಗೋಳ, ಪಿ.ಎ. ಹೇಮಗಿರಿಮಠ, ಜಿ.ಎಂ. ಕೊಟ್ಯಾಳ ಮತ್ತಿತರರು ಉಪಸ್ಥಿತರಿದ್ದರು.

