ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಸಿ ನೆಟ್ಟು ಬೆಳೆಸುವ ಕಾರ್ಯ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಿ ಪರಿಸರ ಸಮತೋಲನಕ್ಕೆ ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು.
ಪರಿಸರ ದಿನಾಚರಣೆ ಕೇವಲ ಇಂದಿನ ದಿನ ನೆಪ ಮಾತ್ರಕ್ಕೆ ಆಚರಿಸದೇ ನಮ್ಮ ಉಳಿವಿಗಾಗಿ ಅಳವಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಗಿಡ ಮರಗಳ ಬೆಳೆಸುವುದರ ಮೂಲಕ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಬದ್ಧರಾಗೋಣ ಎಂದರು.
ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲ ಮಾತನಾಡಿ, ಹಸಿರೇ ಉಸಿರು. ನಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಗಾಗಿ ನಾವೆಲ್ಲ ಸಸಿಗಳನ್ನು ನೆಟ್ಟು, ನಾಡನ್ನು ಹಸಿರಾಗಿಸೋಣ ಎಂದರು.
ಪಟ್ಟಣದ ಪಂಚಾಯಿತಿ ಸಿಬ್ಬಂದಿ ಆವರಣದಲ್ಲಿ ೧೦ಕ್ಕೂ ಹೆಚ್ಚು ಸÀಸಿ ನೆಟ್ಟು ನೀರುಣಿಸಿದರು. ನಂತರ ಪಟ್ಟಣದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸಸಿ ನೆಟ್ಟು ಪೋಷಿಸಿ ಬೆಳೆಸುವ ನಿರ್ಧಾರ ಕೈಗೊಳ್ಳಲಾಯಿತು.
ಸೋಮು ದೇವೂರ, ವಿನೋದ ಚವ್ಹಾಣ, ಮಕಬೂಲ್ ಬಾಗವಾನ, ಶಂಕರಗೌಡ ಪಾಟೀಲ, ಪಂಚಾಯಿತಿ ಸಿಬ್ಬಂದಿ ಪ್ರವೀಣ ಹಿರೇಮಠ, ಬಂದಗಿಸಾಬ್ ಮಂಡೆ, ಎಸ್.ಎಸ್.ಪೂಜಾರಿ, ಸೋಮು ಭೋವಿ, ಅಂಬರೀಷ್ ನಾಲತವಾಡ, ಮಾರ್ತಾಂಡ ಗುಡಿಮನಿ, ಹಾಗೂ ಸಾರ್ವಜನಿಕರು ಇದ್ದರು.

