Author: editor.udayarashmi@gmail.com

ಇಂಡಿ: ಇಂಡಿ ಜಿಲ್ಲೆ ಮಾಡಲು ಆಗ್ರಹಿಸಿ ಪಟ್ಟಣದ ಮತ್ತು ತಾಲೂಕಿನ ವಿವಿಧ ಮುಸ್ಲಿಂ ಧರ್ಮಗುರುಗಳು ಸಭೆ ಸೇರಿ ನಂತರ ಮಿನಿ ವಿಧಾನಸೌಧ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.ಮಿನಿ ವಿಧಾನಸೌಧದಲ್ಲಿ ಧರ್ಮ ಗುರು ಮೌಲಾನಾ ಶಾಕೀರ ಹುಸೇನ ಕಾಶ್ಮಿ ಮಾತನಾಡಿ, ಇಂಡಿ ತಾಲೂಕು ಬರಗಾಲ ತಾಲೂಕು ಎಂದು ಹಣೆ ಪಟ್ಟಿ ಇದೆ. ನಂಜುಡಪ್ಪನವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ರಾಜ್ಯದಲ್ಲಿ ಮೂರನೆಯ ಸ್ಥಾನದಲ್ಲಿದ್ದು ಜಿಲ್ಲೆಯಾದರೆ ಮಾತ್ರ ಪ್ರಗತಿ ಹೊಂದಲಿದೆ ಎಂದರು.ಧರ್ಮ ಗುರುಗಳಾದ ಮೌಲಾನಾ ಜಿಯಾ ಉಲ್ ಹಕ್ ಉಮರಿ, ಮುಫ್ತಿ ಅಬ್ದುಲ್ ರಹಿಮಾನ ಅರಬ, ಮೌಲಾನಾ ಅಲ್ಲಾಬಕ್ಷ ಉಜ್ಜನಿ, ಹಾಫೀಜ್ ಮೊಹಮ್ಮದ್ ಭಾಷಾ ಬಾಗವಾನ, ಹಾಫೀಜ್ ಫಿರೋಜ್ ಬಾಗವಾನ, ಹಾಫೀಜ್ ಅಬ್ದುಲ್ ಅಝೀಜ್ ಪೈಝಿ ಇನಾಮದಾರ, ಹಾಫೀಜ್ ಮಹಿಬೂಬ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಷನ್ ಅಧ್ಯಕ್ಷ ಮಹಮ್ಮದ ಅಸ್ಪಕ್ ಕೊಂಕಣಿ, ಕಾರ್ಯದರ್ಶಿ ಬಾದಶಹಾ ಬೋರಾಮಣಿ, ಸದಸ್ಯ ಮೈನುದ್ದೀನ್ ಶೇಖ, ಸಮಾಜ ಸೇವಕರಾದ ಹಸನ್ ಮುಜಾವರ,…

Read More

ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆಯಾಗುವಂತೆ ಮತ್ತು ಅಖಂಡ ಇಂಡಿ ಸಿಂದಗಿ ತಾಲ್ಲೂಕುಗಳನ್ನು ೩೭೧ (ಜೆ) ಗೆ ಸೇರಿಸಬೇಕು. ಮತ್ತು ಫೆಬ್ರವರಿ ತಿಂಗಳಲ್ಲಿ ಮಂಡಿಸುವ ಬಜೆಟ್‌ನಲ್ಲಿ ಈ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಒತ್ತಾಯಿಸಿ ಕರವೇ ಕಾರ‍್ಯಕರ್ತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ಕರವೇ ತಾಲೂಕಾಧ್ಯಕ್ಷ ಶಿವಾನಂದ ಮಲಕಗೊಂಡ, ಫಯಾಜ ಬಾಗವಾನ, ಸದ್ದಾಂ ಆಲಗೂರ, ಅಶೋಕ ಭೂಸನೂರ, ಬಸವರಾಜ ಮಾರಲಭಾವಿ, ಸುನಿಲ್ ಮಾಗಿ ಮಾತನಾಡಿ, ಇಂಡಿ ಕೇಂದ್ರ ಸ್ಥಾನವಾಗಿಟ್ಟುಕೊಂಡು ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಬೇಕು. ಈಗಾಗಲೆ ಇಂಡಿಯಲ್ಲಿ ಉಪವಿಭಾಗವಿದ್ದು ಬಹುತೇಕ ಜಿಲ್ಲಾ ಮಟ್ಟದ ಕಚೇರಿಗಳು ಕರ‍್ಯ ನಿರ್ವಹಿಸುತ್ತಿವೆ. ಅಲ್ಲದೆ ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣದ ವ್ಯವಸ್ಥೆ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕುಗಳ ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲ್ಲೂಕಿನವರಿಗೆ ಬಂದು ತಮ್ಮ ಕೆಲಸ ಕಾರ‍್ಯ ಮುಗಿಸಿಕೊಂಡು ಹೋಗಲು ಅನುಕೂಲವಾಗುತ್ತದೆ…

Read More

ಇಂಡಿ: ರಾಜ್ಯದಲ್ಲಾಗುವ ಪ್ರತಿಯೊಂದು ಅನ್ಯಾಯದ ಕಾರ‍್ಯಗಳಿಗೆ ಧ್ವನಿ ಎತ್ತುವ ಕಾರ‍್ಯ ಮೊದಲು ಮಾಡುವುದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ‍್ಯಕರ್ತರು ಎಂದು ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಹೇಳಿದರು.ಗುರುವಾರ ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಂಘಟನಾ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.ಕನ್ನಡ ನಾಡು-ನುಡಿಗೆ ಅನ್ಯಾಯವಾಗುತ್ತದೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ಕರವೇ ಕಾರ‍್ಯಕರ್ತರು ಆಕ್ರೋಶಗೊಂಡು ಹೋರಾಟಕ್ಕೆ ಇಳಿಯುತ್ತಾರೆ. ಹಲವು ರಾಜಕಾರಣಿಗಳು ಹೋರಾಟ ಹತ್ತಿಕ್ಕುವ ಕೆಲಸಗಳನ್ನೂ ಮಾಡುತ್ತಾರೆ. ಕರವೇ ಕಾರ‍್ಯಕರ್ತರ ಬಂಧನವೂ ಆಗುತ್ತದೆ. ಆದರೂ ಹೋರಾಟ ನಿಲ್ಲಲ್ಲ. ಈ ನಾಡು ನುಡಿಗಾಗಿ ಕರವೇ ಕಾರ‍್ಯಕರ್ತರು ಜೀವ ನೀಡಲು ಸಹ ಮುಂದಾಗುತ್ತಾರೆ ಎಂದರು.ಅನ್ಯಾಯದ ವಿರುಧ್ಧ ಹೋರಾಡಲು ಕರವೇ ಕಾರ‍್ಯಕರ್ತರು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾಗುತ್ತದೆ. ನಾರಾಯಣಗೌಡ್ರು ಹಾಗೂ ಪ್ರವೀಣಶೆಟ್ಟಿ ಅವರ ಸಂಘಟನೆಗಳು ಎರಡಿರಬಹುದು ಆದರೆ ಇಬ್ಬರ ಆಶಯ ಒಂದೇ ಆಗಿದೆ. ಆ ದಿಸೆಯಲ್ಲಿ ಮೊದಲು ನಾವೆಲ್ಲ ಸಂಘಟಿತರಾಗಬೇಕಾಗಿದೆ. ಅಕ್ರಮ ಮರಳು ಗಣಿಗಾರಿಕೆ, ನಾಡದ್ರೋಹಿ ಹೇಳಿಕೆ ಕೊಡುವವರಿಗೆ,…

Read More

ಇಂಡಿ: ವಿಶೇಷಚೇತನ ಮಕ್ಕಳು ದೈವೀಪ್ರೀಯ ಮಕ್ಕಳಾಗಿದ್ದಾರೆ. ಪಾಲಕರು ವಿಶೇಷ ಚೇತನ ಮಕ್ಕಳನ್ನು ಕಾಳಜಿಯಿಂದ ಕಾಣಬೇಕು. ಸರಕಾರ ನೀಡಿದ ಸಾಧನೆ ಸಲಕರಣೆಗಳನ್ನು ವಿಕಲಚೇತನ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಮನವಿ ಮಾಡಿದರು.ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ ೨೦೨೩-೨೪ ನೇ ಸಾಲಿನ ವಿಕಲಚೇತನ ಮಕ್ಕಳ ಸಾಧನ ಸಲಕರಣೆಗಳ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಪೋಷಕರು ತಮ್ಮ ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡಿ ಈ ಮಕ್ಕಳು ಮುಖ್ಯವಾಹಿನಿ ಬರುವಂತೆ ಮಾಡಬೇಕು. ಸರ್ಕಾರದ ವ್ಯವಸ್ಥೆ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಹಯೋಗದಿಂದ ಸಲಕರಣೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.ಬಿಇಓ ಟಿ.ಎಸ್ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಆರ್. ನಡಗಡ್ಡಿ, ವಿಕಲಚೇತನರ ಜಿಲ್ಲಾ ನೋಡೆಲ್ ಅಧಿಕಾರಿ ಸಂಭಾಜಿ, ಮಾತನಾಡಿದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವೀದ್ ಮೋಮಿನ್, ಯಮನಾಜಿ ಸಾಳುಂಕೆ, ವಿಠ್ಠಲಗೌಡ ಬಿರಾದಾರ, ಆಯ್.ಜಿ. ಆಳೂರ, ಬಿ.ಐ. ಗೊರನಾಳ ನಿರೂಪಿಸಿ, ವಂದಿಸಿದರು.

Read More

ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಶುಕ್ರವಾರ ಆಗಮಿಸಿದ ಪದಾಧಿಕಾರಿಗಳು, ದೇವರಹಿಪ್ಪರಗಿ ತಾಲ್ಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ ೩೦ ಕಿ.ಮೀಗಳ ಸನಿಹದಲ್ಲಿದೆ. ಅಲ್ಲದೇ ತಾಲ್ಲೂಕಿನ ಬಹುತೇಕ ವ್ಯಾಪಾರ, ವಹಿವಾಟು ವಿಜಯಪುರದೊಂದಿಗಿದೆ. ಈಗ ಕೆಲವು ರಾಜಕೀಯ ನಾಯಕರು, ಸಂಘಟನೆಗಳ ಪ್ರಮುಖರು ಇಂಡಿ ಜಿಲ್ಲಾ ಕೇಂದ್ರ ಸೃಜಿಸುವ ಕುರಿತು ತಮ್ಮ ಹೇಳಿಕೆಗಳನ್ನು ನೀಡುವಾಗ ದೇವರಹಿಪ್ಪರಗಿ ತಾಲ್ಲೂಕು ಸೇರಿಸುವ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದು ವಾಸ್ತವಿಕತೆಗೆ ದೂರವಾಗಿದೆ. ಸರ್ಕಾರ ಇಂಥವರ ಯಾವ ಹೇಳಿಕೆಗಳನ್ನು ಪರಿಗಣಿಸದೇ, ತಾಲ್ಲೂಕಿನ ಜನತೆಯ ಅಭಿಪ್ರಾಯ, ಭೌಗೋಳಿಕ ವಿಚಾರಗಳನ್ನು ಪರಿಗಣಿಸಿ ನಮ್ಮ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಡಿ ಮುಂದುವರೆಸಬೇಕು ಎಂದರು.ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಕಾಶೀನಾಥ ಸಾಲಕ್ಕಿ, ಕೆ.ಎಸ್.ಕೋರಿ, ಕಾಶೀನಾಥ ಕೋರಿ, ಸದಾನಂದ ಪಟ್ಟಣಶೆಟ್ಟಿ, ರಾಜು ಕೋರಿ, ಸಚೀನ್ ಕೋರಿ ಹಾಗೂ ಇತರರು ಇದ್ದರು.

Read More

ದೇವರಹಿಪ್ಪರಗಿ: ಕ್ರೀಡೆ ಹಾಗೂ ಕ್ರೀಡಾಪಟುಗಳ ಉತ್ಸಾಹದ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯಾಗಾರ ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್.ಚವ್ಹಾಣ ಹೇಳಿದರು.ಪಟ್ಟಣದ ಡಿಬಿಇ ಸಂಸ್ಥೆಯ ಸುಭಾಶ್ಚಂದ್ರ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ದೈಹಿಕ ಶಿಕ್ಷಣ ವಿಷಯ ವೇದಿಕೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಲ್ಲೂಕಿನ ದೈಹಿಕ ಶಿಕ್ಷಕರಿಗೆ ಈ ಕಾರ್ಯಾಗಾರ ನೆರವಾಗಬಲ್ಲದು. ಯಾವುದೇ ಕಾರಣಕ್ಕೂ ದೈಹಿಕ ಶಿಕ್ಷಕರು ಹಿಂಜರಿಯದೇ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ ಮುಖ್ಯಗುರು ಬಿ.ಎಸ್.ತೇಲಿ ಮಾತನಾಡುತ್ತಾ, ದೈಹಿಕ ಶಿಕ್ಷಕ ನಗುತ್ತಾ ಇದ್ದರೆ ಇಡೀ ಶಾಲೆ ನಗುತ್ತದೆ. ಆದ್ದರಿಂದ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಹುಮ್ಮಸ್ಸು, ಉಲ್ಲಾಸದಿಂದ ಪಾಲ್ಗೊಳ್ಳಲು ಕ್ರಮವಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಆಗಮಿಸಿದ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ ಬಿರಾದಾರ, ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್.ಚವ್ಹಾಣ, ಮಂಜು ಕುಂಬಾರ, ಸಂತೋಷ ಅಂಗಡಿ ಹಾಗೂ ಎಂ.ಎಸ್.ಬಿರಾದಾರ ಇವರನ್ನು ಸನ್ಮಾನಿಸಲಾಯಿತು.ವಿಷಯ ವೇದಿಕೆಯ ಅಧ್ಯಕ್ಷ ಆರ್.ಎಮ್.ಬಿರಾದಾರ, ದೈಹಿಕಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಎಮ್. ಕೆಂಭಾವಿ, ಆಯ್.ಎ.ಸಿಪಾಯಿ(ಕಲಕೇರಿ), ಆರ್.ಪಿ.ಪಡೇಕನೂರ(ತಿಳಗೂಳ), ಬಿ.ಎಸ್.ಅರಳಗುಂಡಗಿ (ಸೋಮಜ್ಯಾಳ), ಡಿ.ಬಿ.ವಡ್ಡೋಡಗಿ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.

Read More

ತಿಕೋಟಾ: ಮಕ್ಕಳ ಆರೈಕೆ ಮಾಡುವ ಕೂಸಿನ ಮನೆಗಳು ಬಡವರು, ಕೂಲಿಕಾರರು, ರೈತರ ಮಕ್ಕಳಿಗೆ ಅನುಕೂಲವಾಗಲಿದ್ದು, ಅವುಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಾಲ್ಲೂಕ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಹೇಳಿದರು.ಪಟ್ಟಣದ ತಾಲ್ಲೂಕ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಕೂಸಿನ ಮನೆ ಆರೈಕೆದಾರರ ಎರಡನೇ ಹಂತದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.ಕೂಸಿನ ಮನೆ ಆರೈಕೆದಾರರು ತರಬೇತಿ ಪಡೆದು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದೊಳಗಿನ ಮಕ್ಕಳಿಗೆ ಆರೈಕೆ ಮಾಡುವ ಉದ್ದೇಶದಿಂದ ಕೂಸಿನ ಮನೆ ಎಂಬ ಶೀರ್ಷಿಕೆಯಡಿ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ.ಕೂಸಿನ ಮನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವಂತೆ ನೋಡಿಕೊಳ್ಳಬೇಕು. ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ. ಮಕ್ಕಳ ಪಾಲಕರಿಗೆ ಪ್ರತಿದಿನ ನೆಮ್ಮದಿಯಿಂದ ಕೆಲಸ ಮಾಡಲು ಸಹಾಯಕವಾಗುತ್ತದೆ. ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೆ ಕೂಸಿನ ಮನೆ ವರವಾಗಿದೆ. ಅದರಲ್ಲಿ ಕೆಲಸ ಮಾಡಲು ಅವಕಾಶ…

Read More

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಕವಟಗಿ ರಾಜ್ಯ 19 ವರ್ಷದೊಳಗಿನ ಬಾಲಕಿಯರ ಫುಟಬಾಲ್ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.ಪದವಿ ಪೂರ್ವ ಶಿಕ್ಷಣ ಇಲಾಖೆಯ ಬಾಲಕಿಯರ 19 ವಯೋಮಿತಿಯ 67ನೆಯ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಜನೇವರಿ 6 ರಿಂದ ಜನೇವರಿ 11ರ ವರೆಗೆ 2024 ರ ವರೆಗೆ ಪಂಜಾಬಿನ ಲುಧಿಯಾನ ಜಿಲ್ಲೆಯಲ್ಲಿ ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ಬಾಲಕಿಯರ ತಂಡಕ್ಕೆ ರಾಧಿಕಾ ಕವಟಗಿ ಆಯ್ಕೆಯಾಗಿ ಹೆಮ್ಮೆ ತಂದಿದ್ದಾರೆ.ವಿದ್ಯಾರ್ಥಿನಿಯ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೋಟ್ನಾಳ, ಆಡಳಿತಾಧಿಕಾರಿ ಬಿ. ಆರ್. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.ಈ ಮಧ್ಯೆ ಸೋಮವಾರ ವಿದ್ಯಾರ್ಥಿನಿ ರಾಧಿಕಾ ಕವಟಗಿ ಅವರನ್ನು ಕಾಲೇಜಿನಲ್ಲಿ ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ, ದೈಹಿಕ ಉಪನಿರ್ದೇಶಕ ಕೈಲಾಸ ಹಿರೇಮಠ, ಪ್ರಾಚಾರ್ಯ ಸಿ. ಬಿ. ಪಾಟೀಲ, ದೈಹಿಕ ಶಿಕ್ಷಕ…

Read More

ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಸಹಕಾರಿ ಸಂಘಗಳ ಆಡಳಿತ ಮಂಡಳಿ ಮತ್ತು ಸಾಲ ಪಡೆಯುವ ಗ್ರಾಹಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಬ್ಯಾಂಕುಗಳು ಹೆಚ್ಚಿನ ಅಭಿವೃದ್ಧಿಯಾಗಲು ಸಾಧ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಇಂದು ಗುರುವಾರ ಬಬಲೇಶ್ವರ ತಾಲೂಕಿನ ಕೊಡಬಾಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ರೈತರಿಗೆ ಭೂಮಿ, ನೀರು, ವಿದ್ಯುತ್ ಅತ್ಯಗತ್ಯ. ಅಲ್ಲದೇ, ಕಷ್ಟದ ಸಂದರ್ಭಗಳಲ್ಲಿ ಅವರಿಗೆ ಸಾಲ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಪ್ರಮುಖವಾಗಿರುತ್ತದೆ. ಉಳ್ಳವರ ಜೊತೆಗೆ ಬಡವರಿಗೆ, ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಸಂಸ್ಥೆಗಳು ಮಾಡಬೇಕು. ಅದೇ ರೀತಿ, ಸಾಲ ಪಡೆಯುವ ಗ್ರಾಹಕರೂ ಕೂಡ ಶ್ರದ್ಧೆಯಿಂದ ಸಾಲ ಮರು ಪಾವತಿಸಬೇಕು. ಆಗ ಮಾತ್ರ ಹಣಕಾಸು ಸಂಸ್ಥೆಗಳು…

Read More

ಮುದ್ದೇಬಿಹಾಳ: ಅಮರಶಿಲ್ಪಿ ಜಕಣಾಚಾರಿ ಅವರು ಶಿಲ್ಪ ಕಲೆಗೆ ನೀಡಿದ ಕೊಡುಗೆ ಅಪಾರವಾದದ್ದು. ಇದು ಸೂರ್ಯ ಚಂದ್ರರು ಇರುವವರೆಗೆ ಅಮರವಾಗಿರುತ್ತದೆ ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಅಮರ ಶಿಲ್ಪಿ ಚಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಅಮರ ಶಿಲ್ಪಿ ಜಕಣಾಚಾರಿ ಅವರು ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ. ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಗತ್ತಿನ ಅದ್ಭುತ ಶಿಲ್ಪಗಳ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಕಲ್ಲಿನಲ್ಲಿ ಕೆತ್ತಿದ ಬೆಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ. ಮಾಡುವ ಕೆಸದ ಬಗ್ಗೆ ತಿಳುವಳಿಕೆ, ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಸಾಧಕರನ್ನು ಸ್ಮರಣೆ ಮಾಡಿದರಷ್ಟೇ ಸಾಲದು ಅವರ ಗುಣ…

Read More