Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನೀಟ್ ಪರೀಕ್ಷೆ ವಿರೋಧಿ ಪ್ರತಿಭಟನೆಗೆ ಡಿಎಸ್ಸೆಸ್ ಬೆಂಬಲ

ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ತಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಲ ಮರು ಪಾವತಿಯಿಂದ ಬ್ಯಾಂಕುಗಳ ಅಭಿವೃದ್ಧಿ ಸಾಧ್ಯ
(ರಾಜ್ಯ ) ಜಿಲ್ಲೆ

ಸಾಲ ಮರು ಪಾವತಿಯಿಂದ ಬ್ಯಾಂಕುಗಳ ಅಭಿವೃದ್ಧಿ ಸಾಧ್ಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ

ವಿಜಯಪುರ: ಸಹಕಾರಿ ಸಂಘಗಳ ಆಡಳಿತ ಮಂಡಳಿ ಮತ್ತು ಸಾಲ ಪಡೆಯುವ ಗ್ರಾಹಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಬ್ಯಾಂಕುಗಳು ಹೆಚ್ಚಿನ ಅಭಿವೃದ್ಧಿಯಾಗಲು ಸಾಧ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇಂದು ಗುರುವಾರ ಬಬಲೇಶ್ವರ ತಾಲೂಕಿನ ಕೊಡಬಾಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ರೈತರಿಗೆ ಭೂಮಿ, ನೀರು, ವಿದ್ಯುತ್ ಅತ್ಯಗತ್ಯ. ಅಲ್ಲದೇ, ಕಷ್ಟದ ಸಂದರ್ಭಗಳಲ್ಲಿ ಅವರಿಗೆ ಸಾಲ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಪ್ರಮುಖವಾಗಿರುತ್ತದೆ. ಉಳ್ಳವರ ಜೊತೆಗೆ ಬಡವರಿಗೆ, ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಸಂಸ್ಥೆಗಳು ಮಾಡಬೇಕು. ಅದೇ ರೀತಿ, ಸಾಲ ಪಡೆಯುವ ಗ್ರಾಹಕರೂ ಕೂಡ ಶ್ರದ್ಧೆಯಿಂದ ಸಾಲ ಮರು ಪಾವತಿಸಬೇಕು. ಆಗ ಮಾತ್ರ ಹಣಕಾಸು ಸಂಸ್ಥೆಗಳು ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ. ಸಹಕಾರಿ ಮತ್ತು ಖಾಸಗಿ ಸೇರಿದಂತೆ ಯಾವುದೇ ಹಣಕಾಸು ಸಂಸ್ಥೆಗಳು ಯಶಸ್ವಿಯಾಗಬೇಕಾದರೆ ಅಲ್ಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಾಮಾಣಿಕವಾಗಿ ಪರಿಶ್ರಮ ಪಡಬೇಕು. ಸಮನ್ವಯದಿಂದ ವ್ಯವಹಾರ ನಿರ್ವಹಣೆ ಮಾಡಬೇಕು. ಶ್ರೀ ಲಕ್ಷ್ಮಿ ವೆಂಕಟೇಶ ಸೌಹಾರ್ದ ಸಹಕಾರಿ ಸಂಘದ ಪದಾಧಿಕಾರಿಗಳ ಸಾಮರ್ಥ್ಯ ಅಗಾಧವಾಗಿದೆ. ಈ ಸಂಘದಿಂದ ರೈತರಿಗೆ, ಜನರಿಗೆ ಮತ್ತು ಬ್ಯಾಂಕಿಗೆ ಒಳ್ಳೆಯದಾಗಲಿ. ಹೋಬಳಿ ಮಟ್ಟದಲ್ಲಿ ದೊಡ್ಡ ಹೆಸರು ಮಾಡುವಂತಾಗಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೀಳಗಿ ಶಾಸಕ ಜೆ. ಟಿ. ಪಾಟೀಲ, ಮರೆಗುದ್ದಿ ದಿಗಂಬರೇಶ್ವರ ಸಂಸ್ಥಾನಮಠದ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿ, ಮಮದಾಪುರ ವಿರಕ್ತಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ, ಕೊಡಬಾಗಿಯ ಮಹಾದೇವಯ್ಯ ಶಂ. ಹಿರೇಮಠ, ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಲ. ಕೋನಪ್ಪನವರ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ, ಖಾದಿ ಮತ್ತು ಗ್ರಾಮೋದ್ಯೋಗ ಜಿಲ್ಲಾಧ್ಯಕ್ಷ ಬಾಪುಗೌಡ ಬಿ. ಪಾಟೀಲ ಶೇಗುಣಶಿ, ನಿರ್ದೇಶಕ ಎಚ್. ಬಿ. ಹರನಟ್ಟಿ, ಜಿ. ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಮುಖಂಡರಾದ ಗೋವಿಂದಪ್ಪ ಹರನಟ್ಟಿ, ಕೃಷ್ಣಾಜಿ ಕುಲಕರ್ಣಿ, ಬಿ. ಡಿ. ಪಾಟೀಲ, ಕೆ. ಎಚ್. ಮುಂಬಾರೆಡ್ಡಿ, ಶಿವನಗೌಡ ಪಾಟೀಲ, ಸಿ. ಎಚ್. ಲೆಂಡಿ, ಮುತ್ತಪ್ಪ ಶಿವಣ್ಣವರ, ಉಮೇಶ ಮಲ್ಲಣ್ಣವರ, ಮುತ್ತನಗೌಡ ಪಾಟೀಲ, ಮಹಾದೇವಪ್ಪ ಮಧರಖಂಡಿ, ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು, ಸಲಹಾ ಮಂಡಳಿ ಸದಸ್ಯರು ಸೇರಿದಂತೆ ನಾನಾ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನೀಟ್ ಪರೀಕ್ಷೆ ವಿರೋಧಿ ಪ್ರತಿಭಟನೆಗೆ ಡಿಎಸ್ಸೆಸ್ ಬೆಂಬಲ

ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ತಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ

ಬಿಎಲ್ಡಿಇ ಎಸ್.ಎಸ್.ಎಂ ಕಾಲೇಜ‌ ಆಫ್ ಫಾರ್ಮಸಿಗೆ ೨ನೇ ಸ್ಥಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನೀಟ್ ಪರೀಕ್ಷೆ ವಿರೋಧಿ ಪ್ರತಿಭಟನೆಗೆ ಡಿಎಸ್ಸೆಸ್ ಬೆಂಬಲ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ತಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • 13 ವರ್ಷ ಕಳೆದರೂ ನೀರಿಲ್ಲ: ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರ ಆಕ್ರೋಶ ಸ್ಫೋಟ
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ಎಸ್.ಎಸ್.ಎಂ ಕಾಲೇಜ‌ ಆಫ್ ಫಾರ್ಮಸಿಗೆ ೨ನೇ ಸ್ಥಾನ
    In (ರಾಜ್ಯ ) ಜಿಲ್ಲೆ
  • ಜು.೨೭ ರಂದು ಡಾ.ಹಳಕಟ್ಟಿ, ಬಂಥನಾಳ ಶ್ರೀ & ಬಂಗಾರಮ್ಮ ಸ್ಮರಣೆ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ :ಎಂಎಲ್ಸಿ ಸುನೀಲಗೌಡ
    In (ರಾಜ್ಯ ) ಜಿಲ್ಲೆ
  • ಯುವಕರ ನ್ಯಾಯಯುತ ಹೋರಾಟ ಗೌರವಿಸಿ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ
    In ವಿಶೇಷ ಲೇಖನ
  • “ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ
    In ವಿಶೇಷ ಲೇಖನ
  • ‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.