ದೇವರಹಿಪ್ಪರಗಿ: ಕ್ರೀಡೆ ಹಾಗೂ ಕ್ರೀಡಾಪಟುಗಳ ಉತ್ಸಾಹದ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯಾಗಾರ ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್.ಚವ್ಹಾಣ ಹೇಳಿದರು.
ಪಟ್ಟಣದ ಡಿಬಿಇ ಸಂಸ್ಥೆಯ ಸುಭಾಶ್ಚಂದ್ರ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ದೈಹಿಕ ಶಿಕ್ಷಣ ವಿಷಯ ವೇದಿಕೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ದೈಹಿಕ ಶಿಕ್ಷಕರಿಗೆ ಈ ಕಾರ್ಯಾಗಾರ ನೆರವಾಗಬಲ್ಲದು. ಯಾವುದೇ ಕಾರಣಕ್ಕೂ ದೈಹಿಕ ಶಿಕ್ಷಕರು ಹಿಂಜರಿಯದೇ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಮುಖ್ಯಗುರು ಬಿ.ಎಸ್.ತೇಲಿ ಮಾತನಾಡುತ್ತಾ, ದೈಹಿಕ ಶಿಕ್ಷಕ ನಗುತ್ತಾ ಇದ್ದರೆ ಇಡೀ ಶಾಲೆ ನಗುತ್ತದೆ. ಆದ್ದರಿಂದ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಹುಮ್ಮಸ್ಸು, ಉಲ್ಲಾಸದಿಂದ ಪಾಲ್ಗೊಳ್ಳಲು ಕ್ರಮವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಆಗಮಿಸಿದ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ ಬಿರಾದಾರ, ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್.ಚವ್ಹಾಣ, ಮಂಜು ಕುಂಬಾರ, ಸಂತೋಷ ಅಂಗಡಿ ಹಾಗೂ ಎಂ.ಎಸ್.ಬಿರಾದಾರ ಇವರನ್ನು ಸನ್ಮಾನಿಸಲಾಯಿತು.
ವಿಷಯ ವೇದಿಕೆಯ ಅಧ್ಯಕ್ಷ ಆರ್.ಎಮ್.ಬಿರಾದಾರ, ದೈಹಿಕಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಎಮ್. ಕೆಂಭಾವಿ, ಆಯ್.ಎ.ಸಿಪಾಯಿ(ಕಲಕೇರಿ), ಆರ್.ಪಿ.ಪಡೇಕನೂರ(ತಿಳಗೂಳ), ಬಿ.ಎಸ್.ಅರಳಗುಂಡಗಿ (ಸೋಮಜ್ಯಾಳ), ಡಿ.ಬಿ.ವಡ್ಡೋಡಗಿ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

