ಇಂಡಿ: ಇಂಡಿ ಜಿಲ್ಲೆ ಮಾಡಲು ಆಗ್ರಹಿಸಿ ಪಟ್ಟಣದ ಮತ್ತು ತಾಲೂಕಿನ ವಿವಿಧ ಮುಸ್ಲಿಂ ಧರ್ಮಗುರುಗಳು ಸಭೆ ಸೇರಿ ನಂತರ ಮಿನಿ ವಿಧಾನಸೌಧ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.
ಮಿನಿ ವಿಧಾನಸೌಧದಲ್ಲಿ ಧರ್ಮ ಗುರು ಮೌಲಾನಾ ಶಾಕೀರ ಹುಸೇನ ಕಾಶ್ಮಿ ಮಾತನಾಡಿ, ಇಂಡಿ ತಾಲೂಕು ಬರಗಾಲ ತಾಲೂಕು ಎಂದು ಹಣೆ ಪಟ್ಟಿ ಇದೆ. ನಂಜುಡಪ್ಪನವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ರಾಜ್ಯದಲ್ಲಿ ಮೂರನೆಯ ಸ್ಥಾನದಲ್ಲಿದ್ದು ಜಿಲ್ಲೆಯಾದರೆ ಮಾತ್ರ ಪ್ರಗತಿ ಹೊಂದಲಿದೆ ಎಂದರು.
ಧರ್ಮ ಗುರುಗಳಾದ ಮೌಲಾನಾ ಜಿಯಾ ಉಲ್ ಹಕ್ ಉಮರಿ, ಮುಫ್ತಿ ಅಬ್ದುಲ್ ರಹಿಮಾನ ಅರಬ, ಮೌಲಾನಾ ಅಲ್ಲಾಬಕ್ಷ ಉಜ್ಜನಿ, ಹಾಫೀಜ್ ಮೊಹಮ್ಮದ್ ಭಾಷಾ ಬಾಗವಾನ, ಹಾಫೀಜ್ ಫಿರೋಜ್ ಬಾಗವಾನ, ಹಾಫೀಜ್ ಅಬ್ದುಲ್ ಅಝೀಜ್ ಪೈಝಿ ಇನಾಮದಾರ, ಹಾಫೀಜ್ ಮಹಿಬೂಬ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಷನ್ ಅಧ್ಯಕ್ಷ ಮಹಮ್ಮದ ಅಸ್ಪಕ್ ಕೊಂಕಣಿ, ಕಾರ್ಯದರ್ಶಿ ಬಾದಶಹಾ ಬೋರಾಮಣಿ, ಸದಸ್ಯ ಮೈನುದ್ದೀನ್ ಶೇಖ, ಸಮಾಜ ಸೇವಕರಾದ ಹಸನ್ ಮುಜಾವರ, ಮೌಲಾನಾ ದಾದಾಹಾಯತ ನಾಯಿಕೊಡಿ, ಹುಸೇನ್ ಭಾಷಾ ಮಿರಜಕರ ಹಾಗೂ ಇಂಡಿ ತಾಲೂಕಿನ ಎಲ್ಲ ಗ್ರಾಮಗಳ ಮುಸ್ಲಿಂ ಧರ್ಮ ಗುರುಗಳು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

