Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬೂದಿಹಾಳ ಡೋಣ(ದೇವರಹಿಪ್ಪರಗಿ): ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ದೇವೂರ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಬೂದಿಹಾಳ ಡೋಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಜರುಗಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದದು ಎಂದರು.ಕೆರೂಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್.ಎಸ್.ಸಾತಿಹಾಳ ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನಾ ಕಾರ್ಯಕ್ರಮ ಜರುಗುತ್ತಿರುವು ಅತ್ಯಂತ ಶ್ಲಾಘನೀಯ ಎಂದರು.ಶಿಕ್ಷಕರಾದ ಜಿ.ಬಿ.ಹೊಕ್ಕುಂಡಿ, ಶೇಖಸಾಬ್ ಪಾನಪರೋಶ, ಎನ್.ಎಸ್.ಸಜ್ಜನ, ಪಿ.ಸಿ.ತಳಕೇರಿ, ಆರ್.ಜಿ.ಬನಸಿ, ಬಿ.ಎಂ.ಕಠಾರೆ, ಶಿವನಗೌಡ ಪಾಟೀಲ, ವಿ.ಎಸ್.ಅಗ್ನಿ, ಪಿ.ಎಸ್.ಓತಿಹಾಳ, ಎಸ್.ಎಸ್.ಇನಾಮದಾರ, ಜಿ.ಎ.ಪಾಟೀಲ, ಎಂ.ಎನ್.ಮಯೂರ, ಪಿ.ಆಯ್.ಕಾಳೆ, ಶಕುಂತಲಾ ಗುಬ್ಬೇವಾಡ ಮಾತನಾಡಿದರು. ಎಸ್‌ಡಿಎಮ್‌ಸಿ ಅಧ್ಯಕ್ಷ ಗುರುಬಾಳಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಭೂದಾನಿ ದಿ.ಬಸವಂತ್ರಾಯಗೌಡ ಬಿರಾದಾರ ಹಾಗೂ…
ದೇವರ ಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದು ದೇವರ ಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಹೇಳಿದರು.ಸಿಂದಗಿ ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಅಖಂಡ ಸಿಂದಗಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ಹಮ್ಮಿಕೊಂಡ ೨೦೨೫-೨ ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ತಂದೆ-ತಾಯಿ ಹಾಗೂ ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ನಾಗರತ್ನ ಅಶೋಕ ಮನಗೂಳಿ ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮತ್ತು ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.…
ಉದಯರಶ್ಮಿ ದಿನಪತ್ರಿಕೆ ಅಥಣಿ: ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸುವುದು ನಮ್ಮ ಜವಾಬ್ದಾರಿ ಎಂಬ ಧ್ಯೇಯದೊಂದಿಗೆ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಹೇಳಿದರು.ಅವರು ಪಟ್ಟಣದ ವಿಕ್ರಮಪೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ,ಈ ಶಾಲೆಯಲ್ಲಿ ಎಲ್ ಕೆಜಿ, ಯುಕೆಜಿ, ಯಿಂದ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿದ್ದು 5 ನೇ ತರಗತಿಯಿಂದ ಇಂಗ್ಲಿಷ್ ಭಾಷೆಯಲ್ಲಿದ್ದು ಅದೇ ರೀತಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಕನ್ನಡ ಬೋಧನೆ ಇದ್ದು ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಗ್ರಂಥಾಲಯ ಉಚಿತ ಆರೋಗ್ಯ ಸೇವೆ ಉಚಿತ ಪಠ್ಯಪುಸ್ತಕ ಸಮವಸ್ತ್ರ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಪ್ರತಿ ತಿಂಗಳು ಪಾಲಕ ಹಾಗೂ ಶಿಕ್ಷಕರ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಭೂಮಿಕಾ ವಿದ್ಯಾಸಂಸ್ಥೆಯಿಂದ ರವಿವಾರ ಆಯೋಜಿಸಲಾಗಿದ್ದ ಪ್ರತಿಭಾ ಪರೀಕ್ಷೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದು ತಮ್ಮ ಪ್ರತಿಭೆ ಪ್ರದರ್ಶಿಸಿದರು.ಭೂಮಿಕಾ ರೆಸಿಡೆನ್ಸಿಯಲ್ ಸ್ಕೂಲ್‌ನ ಆವರಣದಲ್ಲಿ ಮೂರರಿಂದ ಹತ್ತನೇ ತರಗತಿಯ ಕನ್ನಡ ಹಾಗೂ ಇಂಗ್ಲಿಷ್ ಮಾದ್ಯಮದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಥಮಸ್ಥಾನ ಪಡೆದ ಪ್ರತೀ ತರಗತಿಯ ವಿದ್ಯಾರ್ಥಿಗಳಿಗೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರರಿಂದ ಉಚಿತ ಸೈಕಲ್ ಹಾಗೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪ್ರತೀ ತರಗತಿಯ ತಲಾ ಹತ್ತು ವಿದ್ಯಾರ್ಥಿಗಳಿಗೆ ಒಟ್ಟು ಮೂವತ್ತೆರಡು ಲಕ್ಷ ಐವತ್ತು ಸಾವಿರ ರೂ.ಗಳ ಬಹುಮಾನ ಹಾಗೂ ಶಿಷ್ಯವೇತನ ನೀಡಲಾಗುವುದೆಂದು ಸಂಸ್ಥೆಯ ಸಂಸ್ಥಾಪಕ ಮುತ್ತು ಢವಳೇಶ್ವರ ಘೊಷಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಧರ್ಮಪತ್ನಿ ಕವಿತಾ ಸಿದ್ದು ಕೊಣ್ಣೂರ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುವ ಸೈಕಲ್‌ಗಳನ್ನು ಅನಾವರಣಗೊಳಿಸಿದರು.
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ೧೯೪೪ ರಲ್ಲಿ ಪಂಚಾಕ್ಷರಿ ಗವಾಯಿಗಳು ಚಕ್ಕಡಿಯಲ್ಲಿಯೇ ಸಂಚಾರಿ ಸಂಗೀತ ಸೇವಾ ಕಾರ್ಯಕ್ರಮವನ್ನು ನಡೆಸುತ್ತಾ ಚಕ್ಕಡಿಯಲ್ಲಿ ತಂಬೂರಿ, ತಬಲಾ ಸಂಗೀತ ನಾದಕ್ಕೆ ತಕ್ಕಂತಿರುವ ಈ ಎಲ್ಲ ಸಲಕರಣೆಗಳನ್ನಿಟ್ಟುಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತಾ ಸಾಗಿದ ಸಂಗೀತ ಪ್ರೇಮಿಗಳು ಸಂಗೀತ ನಾದವನ್ನು ಕೇಳಿ ದೌಡಾಯಿಸಿ ಆ ಕಾರ್ಯಕ್ರಮವನ್ನು ವೀಕ್ಷಿಸಲು ಈ ಹಿಂದೆ ಆಗಮಿಸುವ ಕಾರ್ಯವೂ ಸಹ ನಡೆಯುತ್ತಿತ್ತೆಂದು ಖ್ಯಾತ ಗವಾಯಿಗಳಾದ ಬಿ.ಎಸ್. ಸಾಲಿಮಠ ಅವರ ಪುತ್ರ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಾಶೀನಾಥ ಪಿ ಸಾಲಿಮಠ ಅವರು ನುಡಿದರು.ರವಿವಾರರಂದು ಎ.ಎಸ್. ವಠಾರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಬಸವ ಸಮೀತಿಯ ಪ್ರಣಾಂಗಳದಲ್ಲಿ ಏರ್ಪಡಿಸಲಾದ ಪಿ.ಎ. ಸಾಲಿಮಠ ಗವಾಯಿಗಳ ೨೨ ನೇಯ ಹಾಗೂ ಶ್ರೀ ಎ.ಎಸ್. ವಠಾರ ಗುರುಗಳ ೮ ನೇ ಸ್ಮರಣೋತ್ಸವ ಅಂಗವಾಗಿ ಏರ್ಪಡಿಸಲಾದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಬಿ.ಎಸ್. ಸಾಲಿಮಠ ಗುರುಗಳು ಪಂಚಾಕ್ಷರಿ ಗವಾಯಿಗಳೊಂದಿಗೆ ಅವರೂ ಕೂಡಾ ಸಂಗೀತದ ಸಂಚಾರಿ ಚಕ್ಕಡಿಯಲ್ಲಿ ಕುಳಿತು ಸಂಗೀತ ಸೇವೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾಜ್ಯದಲ್ಲಿಯೇ ದಾಖಲೆ ಆಗುವ ರೀತಿಯಲ್ಲಿ ಜನಸ್ತೋಮ ಸೇರಿ ಅನಾವರಣ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭರವಸೆ ನೀಡಿದರು.ನಗರದ ಅಹಿಲ್ಯಾಬಾಯಿ ಹೋಳ್ಕರ್ ವೃತ್ತದಲ್ಲಿ ರವಿವಾರ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಹಿಂದೂ ಧರ್ಮ ರಕ್ಷಕಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಇತಿಹಾಸ ರಾಜ್ಯದಲ್ಲಿಯೂ ಪ್ರಚುರಪಡಿಸಲು ಅವರ ವೃತ್ತ ಸೇರಿದಂತೆ ಅನೇಕ ಮಹಾಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ನಾಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ವೃತ್ತಗಳ ಸ್ಥಾಪನೆ, ರಸ್ತೆಗಳಿಗೆ ಹೆಸರು ನಾಮಕರಣ ಮಾಡಲಾಗಿದೆ. ರಾಯಣ್ಣನವರ ಮೂರ್ತಿ ಬಾಕಿಯಿದ್ದು, 2027ರ ಅಗಸ್ಟ್ 15 ರಂದು ಅದನ್ನೂ ಮಾಡುವುದಾಗಿ ತಿಳಿಸಿದರು.ಭಾರತದ ಇತಿಹಾಸದಲ್ಲಿ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರು ನಡೆಸಿದ 35 ವರ್ಷಗಳ ಸುಧೀರ್ಘ ಆಡಳಿತ ಕಾಲವನ್ನು ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅಹಿಲ್ಯಾಬಾಯಿ ಅವರು ಸಮರ್ಥ ಆಡಳಿತಗಾರರಾಗಿದ್ದರು. ಮಹಿಳಾ ಸಬಲೀಕರಣಕ್ಕೆ ಒತ್ತು…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭ ಹಾಗೂ ಮೇಗಾ ಪೋಷಕರ ಸಭೆ ವಿಜೃಂಭಣೆಯಿಂದ ಆಚರಿಸಲಾಯಿತು.ಮೊದಲ ದಿನವೇ ಶಾಲೆಯು ಮದುವಣಗಿತ್ತಿಯಂತೆ ಬಣ್ಣ ಬಣ್ಣದ ಬಲೂನ್, ರಿಬ್ಬನ್, ಹೂ-ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಶಾಲೆಯ ಆವರಣದಲ್ಲಿ ಚಿಣ್ಣರು ಹೊಸ ಬಟ್ಟೆ ತೊಟ್ಟು ಅತೀ ಉತ್ಸಾಹದಿಂದ ಓಡಾಡುತ್ತಿದ್ದು ಕಂಡು ಬಂತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಶ್ರೀಶೈಲಪ್ಪ ಜೋಗೂರ ಹೊಸದಾಗಿ ಶಿಶುವಿಹಾರ ಹಾಗೂ ಒಂದನೆಯ ತರಗತಿಗೆ ದಾಖಲಾತಿ ಆದ ಸುರಕ್ಷಾ ರಾಜಶೇಖರ ಅಲೋಣಿ ಹಾಗೂ ಅನುಷ್ಕಾ ವಿಲಾಸ ಅಲೋಣಿ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್ ಬುಕ್, ಕಂಪಾಸ್ ಪೆಟ್ಟಿಗೆ ಹಾಗೂ ಪಠ್ಯಪುಸ್ತಕ ಉಚಿತವಾಗಿ ಕೊಡಮಾಡುವ ಮುಖಾಂತರ ಸ್ವಾಗತಿಸಿದರು. ಶಿಕ್ಷಕವೃಂದದವರು ಎಲ್ಲಾ ಮಕ್ಕಳ ಮೇಲೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಮಕ್ಕಳಿಗೆ ಸ್ವಾಗತಿಸಿದರು.ಈ ವೇಳೆ ಮಾತನಾಡಿದ ಜೋಗೂರವರು ಉಜ್ವಲ ಭವಿಷ್ಯ, ಉಜ್ವಲ ಕಲಿಕೆ ಎಂಬ ಹೊಸ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಶಾಲಾ ಪ್ರಾರಂಬೋತ್ಸವವು ಅತ್ಯಂತ ವಿಜೃಂಭಣೆಯಿಂದ ಉಚಿತ…
ಉದಯರಶ್ಮಿ ದಿನಪತ್ರಿಕೆ ಅಥಣಿ: ಜೂನ್ 3 ರಂದು ರಚನೆಯಾಗಲಿರುವ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.ಡಾ. ಡಿ.ಜಿ. ಸಾಗರ ಅವರ ಆದೇಶದ ಮೇರೆಗೆ ಸೋಮವಾರ ಅಥಣಿ ನಗರದ ಜತ್ತ ರಸ್ತೆಯ ಜ್ಯೋತಿಭಾ ಫುಲೆ ವೃತ್ತದಲ್ಲಿ ದಸಂಸ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ ಹಾಗೂ ಸಂಜಯ ತಳವಲಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಡಾ. ಎಚ್.ಸಿ. ಮಹಾದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ದಲಿತ ಹಿಂದುಳಿದ ವರ್ಗಗಳ ಪರವಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹೀಗಾಗಿ ಹೊಸ ಸಂಪುಟದಿಂದ ಅವರನ್ನು ಕೈಬಿಡಬಾರದು ಎಂದು ಒತ್ತಾಯಿಸಿದರು.ದಸಂಸ ಅಥಣಿ ಸಂಚಾಲಕ ರವಿ ಕಾಂಬಳೆ ಮಾತನಾಡಿದರು.ಈ ಸಂದರ್ಭದಲ್ಲಿ ಪಾಂಡುರಂಗ ಕಾಂಬಳೆ, ಸಂತೋಷ ಗಸ್ತಿ, ರಮೇಶ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿಬಿಎಸ್‌ಇ) ಶಾಲೆಯಲ್ಲಿ ಸೋಮವಾರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಿತು.ಮಕ್ಕಳು ಶಾಲಾ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ಅವರನ್ನು ಬೋಧಕರು ಮತ್ತು ಬೋಧಕರ ಹೊರತಾದ ಸಿಬ್ಬಂದಿ ವೈಭವದಿಂದ ಸ್ವಾಗತಿಸಿ, ಪ್ರತಿ ಮಗುವಿಗೂ ಶುಭಾಶಯ ಪತ್ರವನ್ನು ನೀಡಿ ಕರತಾಡನದ ಮೂಲಕ ಎಲ್ಲರನ್ನು ಬರಮಾಡಿಕೊಂಡರು. ಈ ವೇಳೆ ಎಲ್ಲ ತರಗತಿಗಳನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು.ಪ್ರಾರ್ಥನಾ ಸಭೆಯ ವೇದಿಕೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಮತ್ತು ನೂತನ ಉಪಪ್ರಾಚಾರ್ಯೆ ವಸುಧಾ ನಾರ್ವೆಕರ್ ಅವರು ಮಕ್ಕಳಿಂದ ದೀಪ ಹಚ್ಚಿಸುವ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅದ್ದೂರಿಯ ಚಾಲನೆ ನೀಡಿದರು.ಸಂಗೀತ ಶೀಕ್ಷಕಿ ಸಂತೋಷಿ ಕುಸೂರ ಸರಸ್ವತಿ ಭಜನೆಯನ್ನು ಹಾಡಿದರು. ಸಾಂಸ್ಕೃತಿಕ ಕಾರ್ಯ ಸಂಯೋಜಕಿ ಫರಾ ಜಾಗಿರದಾರ ಸ್ವಾಗತಿಸಿದರು. ಶಾಲೆಗೆ ಹೊಸದಾಗಿ ಆಗಮಿಸಿದ ಪ್ರತಿ ಶಿಕ್ಷಕರನ್ನು ವಿಶೇಷ ರೀತಿಯಲ್ಲಿ ಪರಿಚಯಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ನೂತನ ಉಪಪ್ರಾಚಾರ್ಯೆ ವಸುಧಾ ನಾರ್ವೇಕರ, ಮುಂದಿನ ಶೈಕ್ಷಣಿಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಥೈರಾಯ್ಡ್ ಕಾಯಿಲೆಯನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ಗಿರೀಶ ಕುಲ್ಲೊಳ್ಳಿ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ವಿಜಯಪುರದ ಕೆ. ಸಿ. ಪಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಥೈರಾಯ್ಡ್ ಗ್ರಂಥಿ ರೋಗಗಳ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಥೈರಾಯ್ಡ್ ಮಾನವ ದೇಹದಲ್ಲಿನ ಅತಿದೊಡ್ಡ ನಿರ್ನಾಳ ಗ್ರಂಥಿಯಾಗಿದ್ದು, ಇಡೀ ದೇಹದ ಚಯಾಪಚಯ ಕ್ರಿಯೆ ಮತ್ತು ನಾನಾ ಶಾರೀರಿಕ ಕಾರ್ಯಗಳನ್ನು ನಿಯಂತ್ರಿಸುವ ಮಹತ್ವದ ಪಾತ್ರ ವಹಿಸುತ್ತದೆ.ಲ. ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ಏರುಪೇರಾದಾಗ ಹೈಪೊ ಅಥವಾ ಹೈಪರ್ ಥೈರಾಯ್ಡಿಸಮ್ ಉಂಟಾಗಿ ಕುತ್ತಿಗೆಯ ಮುಂಭಾಗದಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೆಲವೊಮ್ಮೆ ಅನುವಂಶಿಕವಾಗಿಯೂ ಇದು ಬರಬಹುದು ಎಂದು ಅವರು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಡಾ. ಶೃತಿ ಶೀಳೀನ,…
