Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಗೆ (ಜಿಎಲ್‌ಬಿಸಿ) ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತೀವ್ರ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆ, ಚೆಕ್‌ಡ್ಯಾಂ ಗಳನ್ನು ತುಂಬಿಸಲು ಕಳೆದ ಒಂದು ವಾರದಿಂದ ಇಲ್ಲಿನ ಜಿಎಲ್‌ಬಿಸಿ ಕಾಲುವೆಯ ಮೂಲಕ ನೀರು ಹರಿಸಲಾಗುತಿದ್ದು, ಬೀಳಗಿ ಭಾಗದಲ್ಲಿ ನೀರು ಪೋರೈಕೆಯಾಗುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಹಲವು ಕೆರೆಗಳು ಭರ್ತಿಯಾಗಿವೆ ಇನ್ನು ಕೆಲವು ಕೆರೆಗಳಿಗೆ ನೀರು ಪೋರೈಕೆಯಾಗುತ್ತಿಲ್ಲ ರಾಯಭಾಗ ಭಾಗದಿಂದ ಈ ಭಾಗಕ್ಕೆ ನೀರು ಸಮರ್ಪಕವಾಗಿ ಬರುತ್ತಿಲ್ಲ ಹೀಗಾಗಿ ಬೀಳಗಿ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಹಲವು ರೈತರು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು.ನೀರು ತಲುಪಿದ ಭಾಗದಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ ತಲುಪದ ಕಡೆ ಮಾತ್ರ ನೀರು ಹರಿಸುವಂತೆ ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಸೂಚಿಸಿದರು. ನೀರು ನಿಲ್ಲಿಸಿದರೆ ರೈತರು ಒಪ್ಪುವುದಿಲ್ಲ ಇದರಿಂದ…
ದೇವರಹಿಪ್ಪರಗಿ: ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಿರಂತರ ಶೋಷಣೆಯಾಗುತ್ತಿದ್ದು, ಮಕ್ಕಳ ಹಕ್ಕುಗಳ ಪಾಲನೆಯಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿಅಧಿಕಾರಿ ಎಸ.ಎ.ಕೊರವಾರ ಹೇಳಿದರು.ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ “ಶಿಕ್ಷಣ ಯಾತ್ರೆ“ ಯೋಜನೆ ಹಾಗೂ ಜಿಲ್ಲಾ ಆಡಳಿತ ಸಹಯೋಗದಲ್ಲಿ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳ ರಕ್ಷಣೆಗಾಗಿ ಇರುವ ನಂಬರ ೧೦೦, ೧೧೨, ೧೦೯೮, ಸಹಾಯವಾಣಿ ಹಾಗೂ ತಮ್ಮ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ಕೋರವಾರ ವೈದ್ಯಾಧಿಕಾರಿ ಸಿದ್ದಪ್ಪ ಚೀರಣಕಲ್ಲ, ಸಿಆರ್‌ಪಿ ಕೆ.ಎಸ.ವಾಲಿಕಾರ, ನಿಲಯಪಾಲಕಿ ಎನ್.ಎಮ್ ದಫೇದಾರ, ಮುಖ್ಯಗುರು ಡಿ.ಎ.ಇನಾಮದಾರ, ಮಕ್ಕಳಿಗೆ ಇರುವ ಸೌಲಭ್ಯಗಳು ಮತ್ತು ಮಕ್ಕಳ ಕಾನೂನುಗಳ ಕುರಿತು ಮಾಹಿತಿ ನೀಡಿದರು.ವೇದಿಕೆಯಲ್ಲಿ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಮಂಡಿಸಿ, ಕುಡಿಯುವ ನೀರು, ರಸ್ತೆ, ಕಾಲುವೆಗೆ ತಂತಿ ಬೇಲಿ, ಹಳ್ಳಕೆ ಸೇತುವೆ, ಬಸ್ಸಿನ ವೇಳೆ ಬದಲಾವಣೆ, ಅಂಗನವಾಡಿ…
ಮುದ್ದೇಬಿಹಾಳ : ಪಟ್ಟಣದ ಬಸವ ನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ಅಯೋಧ್ಯಾ ನಗರಿಯಿಂದ, ಶ್ರೀ ರಾಮದೇವಾಲಯದ ಉದ್ಘಾಟನೆಯ ಆಹ್ವಾನಾರ್ಥವಾಗಿ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಕಲಶಾರ್ಚನೆ ಮತ್ತು ಕರೆಯೋಲೆ ಕಾರ್ಯಕ್ರಮ ಯಶ್ವಸ್ವಿಯಾಗಿ ನಡೆಯಿತು.ಈ ವೇಳೆ ತಾಲೂಕ ಕೆ.ಕೆ.ಒ ಅಧ್ಯಕ್ಷ ಯಶವಂತ ಕಲಾಲ, ತಾಲೂಕಾ ಕೆ.ಕೆ.ಎಮ್.ಪಿ ಅಧ್ಯಕ್ಷ ಶಿವಾಜಿ ವಿಜಾಪೂರ, ವಿ.ಎಚ್.ಪಿ ಅಧ್ಯಕ್ಷ ಎಸ್.ಡಿ.ರಾಂಪೂರ, ತಾಲೂಕಾ ಅಕ್ಷತಾ ಅಭಿಯಾನ ಪ್ರಮುಖ ಪ್ರಭು ಕಡಿ, ಶಿಕ್ಷಕ ರಾಮಚಂದ್ರ ಹೆಗಡೆ, ಎಮ್.ಪಿ.ದಂಡಾವತಿ, ಕುಬೇರ ಮಿರಜಕರ, ಶಸಾಪ ಅಧ್ಯಕ್ಷರಾದ ಬಸವರಾಜ ನಾಲತವಾಡ, ನಿವೃತ್ತ ಗುರುಮಾತೆಯವರಾದ ಶಾಂತಾ ಭಟ್ಟ, ಲಕ್ಷ್ಮೀ ಬಾಯಿ ತಾಡಪತ್ರೆ, ಲೀಲಾ ಭಟ್ಟ, ರಾಘವ ಘಾಟಗಿ, ಯಶೋಧರ ಮಿರಜಕರ, ಲಕ್ಷ್ಮೀ ಬಡಿಗೇರ, ಇಂದು ನಾಯಕ, ಶಂಕರ ಡಂಬಳ, ಹಣಮಂತ ನಲವಡೆ, ಶ್ರೀಕಾಂತ ಹಿರೇಮಠ, ವಿನಾಯಕ ಘಾಟಗೆ, ಗುರಪ್ಪ ತಾಡಪತ್ರಿ ಸೇರಿದಂತೆ ಮತ್ತೀತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಬಿಡುಗಡೆ ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ನೇತೃತ್ವದಲ್ಲಿ ಸೋಮವಾರ ರಾತ್ರಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪಟಾಕ್ಷಿ ಸಿಡಿಸಿ, ಸಿಹಿ ಹಂಚಿ ಸಂತಸ ಪಟ್ಟರು.ಈ ಸಂದರ್ಭದಲ್ಲಿ ಅಶೋಕ ಹಾರಿವಾಳ ಮಾತನಾಡಿ, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಈಚೆಗೆ ನಾರಾಯಣಗೌಡ ಅವರ ನೇತೃತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆದಿತ್ತು. ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ೨೯ ಜನರನ್ನು ಏಕಾಏಕಿ ಬಂಽಸಲಾಗಿತ್ತು. ಇದೀಗ ಅವರಿಗೆ ಬಿಡುಗಡೆ ಭಾಗ್ಯ ದೊರೆತಿರುವುದು ನಮ್ಮ ಎಲ್ಲ ಕಾರ್ಯಕರ್ತರಿಗೆ ಸಂತಸ ತಂದಿದೆ. ನಮ್ಮ ಸಂಘಟನೆಯ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ನಾರಾಯಣಗೌಡ ಅವರಿಗೆ ಯಾವಾಗಲೂ ನಮ್ಮ ಕಾರ್ಯಕರ್ತರು ಬೆಂಬಲವಾಗಿ ಇರುತ್ತಾರೆ ಎಂದರು.ಈ ಸಂದರ್ಭದಲ್ಲಿ ಬಸವರಾಜ ಹೂಗಾರ, ರವಿ ಗೊಳಸಂಗಿ, ಸುರೇಶ…
ಬಸವನಬಾಗೇವಾಡಿ: ಅಖಂಡ ತಾಲೂಕಿನಲ್ಲಿರುವ ಶಿಶುಪಾಲನಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಇಲಾಖೆಯ ಮಾರ್ಗಸೂಚಿ ಕಾರ್ಯನಿರ್ವಹಿಸುವ ಜೊತೆಗೆ ಮಕ್ಕಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ್ ಹನಗಂಡಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಸೋಮವಾರ ಆಯೋಜಿಸಿದ್ದ ಅಖಂಡ ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವನಬಾಗೇವಾಡಿ, ನಿಡಗುಂದಿ ಮತ್ತು ಕೊಲ್ಹಾರ ತಾಲೂಕಿನ 27 ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು. ಮಕ್ಕಳ ಆರೈಕೆದಾರರ ತರಬೇತಿ ಪಡೆದು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.ತರಬೇತಿ ಪಡೆದ ತಾವೆಲ್ಲರೂ ಇಲಾಖೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು. ಶಿಶುಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕು. ಮಕ್ಕಳ ಆಹಾರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಅಖಂಡ ತಾಲೂಕಿನ ಕೂಸಿನ ಮನೆಗಳು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಶ್ರಮಿಸಬೇಕೆಂದು ಕರೆ ನೀಡಿದರು.ತಾ.ಪಂ.ಸಹಾಯಕ ನಿರ್ದೇಶಕ (ಮನರೇಗಾ) ಪ್ರಕಾಶ್ ದೇಸಾಯಿ ಅವರು ಮಾತನಾಡಿದರು.ಕೊಲ್ಹಾರ ತಾಪಂ ಐಇಸಿ ಸಂಯೋಜಕ ಸಂತೋಷ ಹರಿಜನ ಅವರು…
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ರಾಂಪೂರ (ಪಅ) ನಿಮಪೋ ವೃತ್ತದಡಿ ಬರುವ ಇಂಡಿ ಶಾಖಾ ಕಾಲುವೆ ಹಾಗೂ ಇಂಡಿ ಏತ ನೀರಾವರಿ ಕಾಲುವೆಗಳಡಿ ಬರುವ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗಳನ್ನು ಸಂರಕ್ಷಿಸಲು ಜ.೮ ರಿಂದ ೧೧ ರವರೆಗೆ ನೀರು ಹರಿಸಲಾಗುವುದು ಎಂದು ಕೆಬಿಜೆಎನ್‌ಎಲ್ ರಾಂಪೂರ ವೃತ್ತದ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಅವರು ತಿಳಿಸಿದ್ದಾರೆ.ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರೂ ಆದ ಕೃಷ್ಣಾ ಮೇಲ್ಕಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಹಾಗೂ ಅಚ್ಚು ಕಟ್ಟು ಪ್ರದೇಶದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ರೈತ ಮುಖಂಡರೊಂದಿಗೆ ಜ.೬ ರಂದು ನಡೆದ ವಿಡಿಯೋ ಸಂವಾದ ಸಭೆಯ ನಿರ್ಣಯದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನಾರಾಯಣಪುರ ಜಲಾಶಯದಿಂದ ೦೩ ದಿನ ನೀರನ್ನು ಹರಿಸಲು ನೀಡಿದ ನಿರ್ದೇಶನದಂತೆ ಕಾಲುವೆ ಮೂಲಕ ೨.೭೫ ಟಿಎಂಸಿ ನೀರನ್ನು ಹರಿಸಲಾಗುವುದು.ಈ ಅವಧಿಯಲ್ಲಿ ಕಾಲುವೆ ಚಾಜಲ ಗೇಟ್‌ಗಳಿಗೆ ಹಾನಿ ಮಾಡುವುದು, ಎಸ್ಕೇಪ್ ಮೂಲಕ ಹಳ್ಳಕ್ಕೆ ನೀರು ಹರಿಸುವುದು,…
ವಿಜಯಪುರ: ಗ್ರಾಹಕರು ತಮ್ಮ ಹಕ್ಕಿನ ಬಗ್ಗೆ ಅರಿವು ಹೊಂದಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಗಳು ಗ್ರಾಹಕರ ಹಕ್ಕುಗಳು ಮತ್ತು ಕಾನೂನುಗಳ ಅರಿವು ಮೂಡಿಸಬೇಕು ಎಂದು ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಸ್ ಕುಂದರ್ ಅವರು ಹೇಳಿದರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ವಿಜಯಪುರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ -೨೦೨೩ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲರೂ ಗ್ರಾಹಕ ಕಾನೂನು…
ವಿಜಯಪುರ: ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜಾನುವಾರಗಳ ಪ್ರದರ್ಶನ ನಡೆಯಲಿದ್ದು, ರೈತರು ತಮ್ಮ ಜಾನುವಾರುಗಳನ್ನು ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರೆಯಲ್ಲಿ ಪ್ರದರ್ಶಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ಕರೋನಾ ಮಹಾಮಾರಿಯಿಂದ ಜಾನುವಾರಗಳ ಜಾತ್ರೆ ನಡೆದಿರಲಿಲ್ಲ. ಹಾಗಾಗಿ ಈ ವರ್ಷ ಜಾನುವಾರು ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ರೈತರು ತಮ್ಮ ಜಾನುವಾರುಗಳನ್ನು ಪ್ರದರ್ಶಿಸಬಹುದಾಗಿದ್ದು, ಉತ್ತಮ ಜಾನುವಾರಗಳಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ತೊರವಿಯಲ್ಲಿ ಜ.೧೦ರಿಂದ ೧೮ರವರೆಗೆ ಜರುಗುವ ಸಂಕ್ರಮಣ ಸಿದ್ದೇಶ್ವರ ಜಾನುವಾರು ಜಾತ್ರೆ ವಿಜಯಪುರ: ಪ್ರತಿ ವರ್ಷದಂತೆ ವಿಜಯಪುರ ತಾಲೂಕಿನ ತೊರವಿಯಲ್ಲಿ ಜ.೧೦ರಿಂದ ೧೮ರವರೆಗೆ ಜರುಗುವ ಸಂಕ್ರಮಣ ಸಿದ್ದೇಶ್ವರ ಜಾನುವಾರು ಜಾತ್ರೆಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವಂತೆ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಿದ್ದೇಶ್ವರ ಜಾನುವಾರು ಜಾತ್ರೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಾನುವಾರು ಜಾತ್ರೆಯಲ್ಲಿ ಗಡಿ ಭಾಗವಾಗಿರುವುದರಿಂದ ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ರೈತರು, ಜಾನುವಾರುಗಳು ಆಗಮಿಸಲಿರುವುದರಿಂದ ಸೂಕ್ತ ಲಸಿಕಾಕರಣ, ಜಾತ್ರೆಯಲ್ಲಿ ಭಾಗವಹಿಸಿದ ರೈತರಿಗೆ ನಿರಂತರವಾಗಿ ಕುಡಿಯುವ ನೀರಿನ ವ್ಯವಸ್ಥೆ, ಜಾತ್ರೆ ಸ್ಥಳದಲ್ಲಿ ಸ್ವಚ್ಚತೆ, ಒಂದು ವಾರಗಳ ಕಾಲಕ್ಕೂ ಹೆಚ್ಚಿನ ದಿನ ಜಾತ್ರೆ ನಡೆಯುವುದರಿಂದ ಸಮರ್ಪಕ ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಯಾವುದೇ ಅಡೆ-ತಡೆವಾಗದಂತೆ ನೋಡಿಕೊಂಡು ವ್ಯವಸ್ಥಿತವಾಗಿ ಜಾತ್ರೆ ಆಯೋಜಿಸುವಂತೆ ಅವರು ಸೂಚನೆ ನೀಡಿದರು.ಜಾತ್ರೆಯಲ್ಲಿ ಅಂದಾಜು…
ಸಿಂದಗಿ: ಪಟ್ಟಣದಲ್ಲಿ ಶ್ರೀ ಶಿವದಾಸಿಮಯ್ಯ ಶಿವಶಿಂಪಿ ಸಮುದಾಯ ಸಭಾಭವನ ನಿರ್ಮಾಣಗೊಳ್ಳಲು ರಾಜ್ಯ ಸರ್ಕಾರದಿಂದ ೨೫ ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ಲೋಣಿ ಲೇಔಟ್‌ದಲ್ಲಿ ಸೋಮವಾರ ಶ್ರೀ ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘದಿಂದ ನಡೆದ ಸಭಾಭವನದ ಮತ್ತುಕಾರ್ಯಾಲಯದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.ಸಣ್ಣ ಸಣ್ಣ ಸಮುದಾಯಗಳು ಯಾವತ್ತು ನಾವು ಸಣ್ಣ ಸಮುದಾಯದವರು ಎಂದು ಭಾವಿಸಿಕೊಳ್ಳಬಾರಾದು ಸಣ್ಣ ಸಮುದಾಯದಲ್ಲಿಯೆ ಅತ್ಯಂತ ಮಹತ್ತರವಾದ ಪ್ರತಿಭೆಗಳಿರುತ್ತವೆ. ಅಂತಹ ಸಮುದಾಯಗಳನ್ನು ಶಿಕ್ಷಣ, ಸಾಮಾಜಿಕ, ಆರೋಗ್ಯವಾಗಿ ಮತ್ತು ಎಲ್ಲ ರೀತಿಗಳಲ್ಲಿ ಅಭಿವೃದ್ದಿ ಪಡಿಸುವ ಕನಸನ್ನು ಹೊತ್ತುಕೊಂಡಿದ್ದೇನೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದ ಅವರು ನಮ್ಮ ತಂದೆಯ ಕಾಲದಿಂದಲೂ ಶಿವಶಿಂಪಿ ಸಮುದಾಯ ನಮ್ಮ ಮನೆತನದ ಮೇಲೆ ಅತಿಯಾದ ಗೌರವವನ್ನಿಟ್ಟುಕೊಂಡಿದೆ ಆ ಸಮುದಾಯಕ್ಕೆ ನಾವು ಸದಾಋಣಿಯಾಗಿರುತ್ತೇವೆ ಎಂದರು.ಸಮುದಾಯದ ಪ್ರಮುಖ ಪ್ರಭುಲಿಂಗ ಲೋಣಿ, ಸಮಾಜದ ಉಪಾಧ್ಯಕ್ಷ ಡಾ.ವಿಶ್ವರಾಧ್ಯ ಶಿವಶಿಂಪಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಬಂಡೆಪ್ಪ ಲೋಣಿ, ಅಧ್ಯಕ್ಷ ಅಶೋಕ ಲೋಣಿ,…
