ಬಸವನಬಾಗೇವಾಡಿ: ಅಖಂಡ ತಾಲೂಕಿನಲ್ಲಿರುವ ಶಿಶುಪಾಲನಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಇಲಾಖೆಯ ಮಾರ್ಗಸೂಚಿ ಕಾರ್ಯನಿರ್ವಹಿಸುವ ಜೊತೆಗೆ ಮಕ್ಕಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ್ ಹನಗಂಡಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಸೋಮವಾರ ಆಯೋಜಿಸಿದ್ದ ಅಖಂಡ ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವನಬಾಗೇವಾಡಿ, ನಿಡಗುಂದಿ ಮತ್ತು ಕೊಲ್ಹಾರ ತಾಲೂಕಿನ 27 ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು. ಮಕ್ಕಳ ಆರೈಕೆದಾರರ ತರಬೇತಿ ಪಡೆದು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ತರಬೇತಿ ಪಡೆದ ತಾವೆಲ್ಲರೂ ಇಲಾಖೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು. ಶಿಶುಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕು. ಮಕ್ಕಳ ಆಹಾರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಅಖಂಡ ತಾಲೂಕಿನ ಕೂಸಿನ ಮನೆಗಳು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಶ್ರಮಿಸಬೇಕೆಂದು ಕರೆ ನೀಡಿದರು.
ತಾ.ಪಂ.ಸಹಾಯಕ ನಿರ್ದೇಶಕ (ಮನರೇಗಾ) ಪ್ರಕಾಶ್ ದೇಸಾಯಿ ಅವರು ಮಾತನಾಡಿದರು.
ಕೊಲ್ಹಾರ ತಾಪಂ ಐಇಸಿ ಸಂಯೋಜಕ ಸಂತೋಷ ಹರಿಜನ ಅವರು ಮಾಸ್ಟರ್ ಟ್ರೈನರ್ ಆಗಿ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ನಿಡಗುಂದಿ ತಾಪಂ ಐಇಸಿ ಸಂಯೋಜಕ ದಸ್ತಗೀರ್ ಗುಡಿಹಾಳ, ಬಸವನಬಾಗೇವಾಡಿ ಐಇಸಿ ಸಂಯೋಜಕ ಮಡಿವಾಳಪ್ಪ ಬಿರಾದಾರ ಹಾಗೂ 82 ಜನ ಮಹಿಳಾ ಆರೈಕೆದಾರರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

