ಚಿಮ್ಮಡ: ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಗೆ (ಜಿಎಲ್‌ಬಿಸಿ) ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೀವ್ರ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆ, ಚೆಕ್‌ಡ್ಯಾಂ ಗಳನ್ನು ತುಂಬಿಸಲು ಕಳೆದ ಒಂದು ವಾರದಿಂದ ಇಲ್ಲಿನ ಜಿಎಲ್‌ಬಿಸಿ ಕಾಲುವೆಯ ಮೂಲಕ ನೀರು ಹರಿಸಲಾಗುತಿದ್ದು, ಬೀಳಗಿ ಭಾಗದಲ್ಲಿ ನೀರು ಪೋರೈಕೆಯಾಗುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಹಲವು ಕೆರೆಗಳು ಭರ್ತಿಯಾಗಿವೆ ಇನ್ನು ಕೆಲವು ಕೆರೆಗಳಿಗೆ ನೀರು ಪೋರೈಕೆಯಾಗುತ್ತಿಲ್ಲ ರಾಯಭಾಗ ಭಾಗದಿಂದ ಈ ಭಾಗಕ್ಕೆ ನೀರು ಸಮರ್ಪಕವಾಗಿ ಬರುತ್ತಿಲ್ಲ ಹೀಗಾಗಿ ಬೀಳಗಿ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಹಲವು ರೈತರು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು.
ನೀರು ತಲುಪಿದ ಭಾಗದಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ ತಲುಪದ ಕಡೆ ಮಾತ್ರ ನೀರು ಹರಿಸುವಂತೆ ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಸೂಚಿಸಿದರು. ನೀರು ನಿಲ್ಲಿಸಿದರೆ ರೈತರು ಒಪ್ಪುವುದಿಲ್ಲ ಇದರಿಂದ ಸಮಸ್ಯೆಯಾಗಿದೆಯಂದು ಅಧಿಕಾರಿಗಳು ಮನವರಿಗೆ ಮಾಡಿದರು.
ಬೀಳಗಿ ಕೊಣೆಯ ಭಾಗದವರೆಗೆ ಸಮರ್ಪಕ ನೀರು ಪೋರೈಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳಬೇಕು ಅವಶ್ಯವೆನಿಸಿದರೆ ಇತರೆ ಇಲಾಖೆಗಳ ಸಹಕಾರ ಪಡೆದು ಎಲ್ಲ ಭಾಗಗಳ ಕೆರೆ, ಬಾಂದಾರ ಭರ್ತಿಯಾಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಸೂಚಿಸಿದರು,
ನೀರಾವರಿ ಇಲಾಖೆಯ ಬೆಳಗಾವಿ ಉತ್ತರ ಭಾಗದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಆರ್. ರಾಠೋಡ, ಜಮಖಂಡಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ ಗಿಡದಪ್ಪನವರ, ಘಟಪ್ರಭಾ ಕಾರ್ಯ ನಿರ್ವಾಹಕ ಅಧಿಕಾರಿ ನಾಗೇಶ ಕೋಲಕರ, ಜಮಖಂಡಿಯ ಶ್ರೀಶೈಲ ಕಲ್ಯಾಣಿ, ಬೀಳಗಿಯ ಎಚ್. ಆರ್. ಮಾರಡ್ಡಿ ಹಾಗೂ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ, ಕಾಂಗ್ರೆಸ್ ಧುರೀಣ ಸಿದ್ದು ಕೋಣ್ಣೂರ, ಮಲ್ಲಪ್ಪಾ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಉಮೇಶ ಪೂಜಾರಿ, ಅಶೋಕ ಧಡೂತಿ, ಕಿರಣ ಕರಲಟ್ಟಿ, ಸೇರಿದಂತೆ ರೈತ ಪ್ರಮುಖರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

