ದೇವರಹಿಪ್ಪರಗಿ: ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಿರಂತರ ಶೋಷಣೆಯಾಗುತ್ತಿದ್ದು, ಮಕ್ಕಳ ಹಕ್ಕುಗಳ ಪಾಲನೆಯಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿಅಧಿಕಾರಿ ಎಸ.ಎ.ಕೊರವಾರ ಹೇಳಿದರು.
ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ “ಶಿಕ್ಷಣ ಯಾತ್ರೆ“ ಯೋಜನೆ ಹಾಗೂ ಜಿಲ್ಲಾ ಆಡಳಿತ ಸಹಯೋಗದಲ್ಲಿ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ರಕ್ಷಣೆಗಾಗಿ ಇರುವ ನಂಬರ ೧೦೦, ೧೧೨, ೧೦೯೮, ಸಹಾಯವಾಣಿ ಹಾಗೂ ತಮ್ಮ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಕೋರವಾರ ವೈದ್ಯಾಧಿಕಾರಿ ಸಿದ್ದಪ್ಪ ಚೀರಣಕಲ್ಲ, ಸಿಆರ್‌ಪಿ ಕೆ.ಎಸ.ವಾಲಿಕಾರ, ನಿಲಯಪಾಲಕಿ ಎನ್.ಎಮ್ ದಫೇದಾರ, ಮುಖ್ಯಗುರು ಡಿ.ಎ.ಇನಾಮದಾರ, ಮಕ್ಕಳಿಗೆ ಇರುವ ಸೌಲಭ್ಯಗಳು ಮತ್ತು ಮಕ್ಕಳ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಮಂಡಿಸಿ, ಕುಡಿಯುವ ನೀರು, ರಸ್ತೆ, ಕಾಲುವೆಗೆ ತಂತಿ ಬೇಲಿ, ಹಳ್ಳಕೆ ಸೇತುವೆ, ಬಸ್ಸಿನ ವೇಳೆ ಬದಲಾವಣೆ, ಅಂಗನವಾಡಿ ಹಾಗೂ ಶಾಲಾ ಕಟ್ಟಡ, ಕಿಡಕಿ, ಕಂಪೌಂಡ, ಗೇಟ್ ರಿಪೇರಿ, ಶೌಚಾಲಯಗಳು, ಕಂಪ್ಯೂಟರ್, ಗ್ರಂಥಾಲಯಗಳ ಬೇಡಿಕೆಯಿಟ್ಟರು.
ಜಾಲವಾದ ಗ್ರಾಮ ಪಂಚಾಯಿತಿ ಸಿಬ್ಬಂದಿ ಗುರು ಮ್ಯಾಗೇರಿ ತಮ್ಮ ಪಂಚಾಯಿತಿ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮಾಡಿರುವ ಕೆಲಸಗಳ ಮಾಹಿತಿ ನೀಡಿ, ಈ ವರ್ಷದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಉಜ್ವಲ-ಐಎಲ್‌ಪಿ ಯೋಜನೆ ಸಂಯೋಜಕ ಸಾಗರ ಘಾಟಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಚವ್ಹಾಣ, ಮಾಳಪ್ಪ ನಾಯ್ಕೋಡಿ ಕಾರ್ಯದರ್ಶಿ ಮೈಬೂಬ್ ನಧಾಪ, ಆರೋಗ್ಯ ಇಲಾಖೆಯ ಮಲ್ಲನಗೌಡ ಸಾಲೋಡಗಿ, ಎನ್.ವಿ.ವಿಜ್ಜಿ, ರಾಜೇಶ್ವರಿ ಕನ್ನೋಳ್ಳಿ, ಎಸ್‌ಡಿಎಮ್‌ಸಿ ಅದ್ಯಕ್ಷ ಇಸ್ಮಾಯಿಲ್ ಬಾಗವಾನ, ಐ.ಎಲ್.ಪಿ ಯೋಜನೆಯ ಶಶಿಕಾಂತ ಸುಂಗಠಾಣ ಭಾಗಣ್ಣ ಹಾಳಕಿ, ಬಾಬು ರಾಠೋಡ ಪ್ರಾಥಮಿಕ ಶಾಲೆಮುಖ್ಯಗುರುಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

