Author: editor.udayarashmi@gmail.com

ಇಂಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಇಂಗಳಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ರಾಯ ಸಿನಿಖೇಡ ಅವರು ಹೇಳಿದರು.ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನ ಆವರಣದಲ್ಲಿ ನಡೆದ ಗ್ರಾಮ ಪಂಚಾಯತಿಯ ೨೦೨೪-೨೫ನೇ ಸಾಲಿನ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ನಡೆದ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮ ಸಭೆ ಪೂರಕವಾಗಿದೆ. ನರೇಗಾ ಯೋಜನೆಯಡಿಯಲ್ಲಿ ಸಿಗುವ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದು ನಿರ್ಮಾಣ, ಜಾನುವಾರು ಶೆಡ್, ಮೇಕೆ ಶೆಡ್, ಇಂಗು ಗುಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸುವಂತೆ ತಿಳಿಸಿದರು.ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿಬಾಯಿ ಶಿ ದಶವಂತ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಹಸೀನಾ ನೆಗಿನಾಳ, ಬಿಲ್ ಕಲೆಕ್ಟರ್ ಗುರಪ್ಪ ಹಕ್ಕಿ, ಕಾಯಕ ಮಿತ್ರರಾದ ಮಂಗಲ ರಾಹುಲ್ ಉತ್ತರೆ ಗ್ರಾಮಸ್ಥರು ಹಾಗೂ ಸದಸ್ಯರಾದ ಪೈಗಂಬರ್ ಮನೂರ, ಸುನೀಲ ದಶವಂತ, ಯಲಪ್ಪ ಪೂಜಾರಿ, ಶಿವಾನಂದ ಶಿವಗದ್ದಗಿ,…

Read More

ಸಿಂದಗಿ: ಜಗತ್ತಿನ ಮೂಲ ಇಂಜನಿಯರ‍್ಸ ಸೊನ್ನಲಗಿ ಸಿದ್ದರಾಮೇಶ್ವರರ ವಂಶಸ್ಥರ ಭೋವಿ ವಡ್ಡರ ಜನಾಂಗವಾಗಿದೆ. ಇವರ ಮೂಲ ಕಸಬು ಮಣ್ಣು ಹೊರುವುದು, ಕಲ್ಲು ಒಡೆಯುವುದು. ಅದಕ್ಕೆ ಪ್ರಪಂಚದ ಉಗಮವಾಗುವಲ್ಲಿ ಭೋವಿಗಳ ಪಾತ್ರ ಹಿರಿಮೆಯಾದದ್ದು ಎಂದು ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿ, ನಾವೆಲ್ಲರೂ ಭೋವಿ ಜನಾಂಗದವರ ಕಾಯಕವನ್ನು ಕೀಳರಿಮೆಯಿಂದ ನೋಡದೇ ನಾವೆಲ್ಲ ಭೋವಿಗಳು ಎಂದು ಎದೆ ತಟ್ಟಿ ಹೇಳಬೇಕಲ್ಲದೇ ಮೂಲ ಕಸಬನ್ನು ಮರೆಯಬಾರದು ಎಂದರು.ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಶ್ರೇಷ್ಠ ವಚನಕಾರರಾಗಿದ್ದರು. ಅಂತೆಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.ಈ ವೇಳೆ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿದರು.ವೇದಿಕೆಯ ಮೇಲೆ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ…

Read More

ದೇವರಹಿಪ್ಪರಗಿ: ಪಟ್ಟಣದ ಮಹರ್ಷಿ ವಾಲ್ಮೀಕಿ ಅನುದಾನಿತ ಶಾಲೆಯ ಸಹಶಿಕ್ಷಕ ಅರುಣ ಪರಶುರಾಮ ಕೋರವಾರ ಇವರು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಜಿಲ್ಲಾ ಘಟಕ ಕೊಡಮಾಡುವ ಜ್ಯೋತಿಬಾ ಪುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ತೊರವಿ ಗ್ರಾಮದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.೨೧ರಂದು ಜರುಗುವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ಎಸ್.ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅದ್ಧೂರಿ ಪಲ್ಲಕ್ಕಿ ಉತ್ಸವ | ೧೫೦ ಹಂಡೆ ರುಚಿಕಟ್ಟಾದ ಬಜ್ಜಿ ಪಲ್ಯೆ ತಯಾರಿಕೆ | ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಮಣದ ದಿನವೇ ಸೋಮವಾರ ಭಕ್ತರ ದರ್ಶನದಿಂದ ಜಾತ್ರೆವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಜಯಘೋಷಗಳನ್ನು ಕೂಗುತ್ತಾ ಸ್ವಾಗತಿಸಲಾಯಿತು. ಬಳಿಕ ಅಗ್ಗಿ ಹಾಯುವ ಕಾರ್ಯ ಜರುಗಿತು. ದೇವಸ್ಥಾನದ ಆವರಣದಲ್ಲಿ ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಬಾರಿ ೧೫೦ ಹಂಡೆಯ ಬಜ್ಜಿ ಪಲ್ಯೆ ಮಾಡಲಾಯಿತು.ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಭಕ್ತರು:ಈ ಜಾತ್ರೆಯ ವಿಶೇಷವೆಂದರೆ ವಿವಿಧ ಧಾನ್ಯಗಳಿಂದ ತಯಾರಿಸಿದ ಭಜ್ಜಿ ಪಲ್ಯೆ ಮತ್ತು ರೊಟ್ಟಿಗೆ ಭಕ್ತರೆಲ್ಲರೂ ಬಾಯಿ ಚಪ್ಪರಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ ಮಲ್ಲಯ್ಯನ ಏಳ ಕೋಟೆ ಏಳು ಕೋಟೆಯ ಉಗೆ ಎಂದು ಗಂಗಾಧರೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.ಕಮಿಟಿಯ ಭಾಗಪ್ಪಗೌಡ ಪಾಟೀಲ, ಶಾಂತಗೌಡ ಬಿರಾದಾರ, ಗಂಗಾಧರ ಚಿಂಚೊಳ್ಳಿ, ರಮಜಾನಸಾಬ ದುಮ್ಮದ್ರಿ, ಗೌಡಪ್ಪಗೌಡ ಪಾಟೀಲ, ಸಿದ್ದು ಕಡಗಂಚಿ, ಬಸಣ್ಣಸಾಹು ಕಡಗಂಚಿ, ಶಿವಾನಂದ…

Read More

ಸಿಂದಗಿ: ಪಟ್ಟಣದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವ ಅಂಗವಾಗಿ ಜ.೧೯ ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಸಂಗಮೇಶ್ವರ ಹಾಗೂ ಭ್ರಮರಾಂಬಿಕಾ ದೇವಿಯ ಉತ್ಸವ ಮೂರ್ತಿಗಳ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಜರಗುತ್ತದೆ. ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ನೀಲಗಂಗಾದೇವಿ ದೇವಸ್ಥಾನ ಮಾರ್ಗವಾಗಿ ಹಳೆಬಜಾರದಲ್ಲಿನ ಶ್ರೀ ಬಸವಣ್ಣ ದೇವಸ್ಥಾನದವರೆಗೆ ಸಾಗಿ ಪುನಃ ಅದೇ ಮಾರ್ಗವಾಗಿ ದೇವಸ್ಥಾನ ತಲಪುವುದು ಎಂದು ದೇವಸ್ಥಾನದ ಕಮಿಟಿ ಸದಸ್ಯರು ತಿಳಿಸಿದ್ದಾರೆ.ದೇವಸ್ಥಾನದ ಹಿನ್ನಲೆ: ಐತಿಹಾಸಿಕ ಸಂಗಮೇಶ್ವರ ದೇವಸ್ಥಾನ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದೆ. ಗರ್ಭಗುಡಿಯ ಮೇಲೆ ಕದಂಬ ನಾಗರ ಶೈಲಿಯ ಶಿಖರವಿದೆ. ದೇವಾಲಯದ ಎದುರು ನಿರ್ಮಿಸಿರುವ ಮಂಟಪದಲ್ಲಿ ಶಿವಲಿಂಗಗಳು ಮತ್ತು ನಂದಿಶಿಲ್ಪ ಕಲಾಕೃತಿಗಳಿವೆ. ದೇವಾಲಯದ ಹಿಂಬದಿ ಭ್ರಮರಾಂಬಿಕಾ ಗುಡಿ ಇದೆ. ದೇವಸ್ಥಾನದ ಸುತ್ತಲೂ ವಿಶಾಲವಾದ ಒಳಾಂಗಣ ಇದ್ದು ಇಲ್ಲಿ ಗಣಪತಿ, ಹಿರಿಯೊಡೆಯ ಮಳೆ ಸಂಗಪ್ಪ, ನರಸಿಂಹ ಮತ್ತು ಭನಶಂಕರಿಯ ಚಿಕ್ಕ ಚಿಕ್ಕ ಗುಡಿಗಳಿವೆ. ಒಳ ಗೋಡೆಗೆ ಹೊಂದಿಕೊಂಡಂತೆ ಪಾರ್ವತಿ, ಭೈರವ, ನಾಗ ನಾಗಿಣಿ ಮೊದಲಾದ ವಿಜಯನಗರೋತ್ತರ…

Read More

ಸಿಂದಗಿ: ಭಗವಂತನ ಸೇವೆಯನ್ನು ನಿಸ್ವಾರ್ಥ ಭಾವದಿಂದ ಮಾಡಿದಾಗ ಮಾತ್ರ ಆ ದೇವರು ಒಳ್ಳೆಯ ಮಾರ್ಗ ತೋರುತ್ತಾನೆ ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಭಾನುವಾರದಂದು ಪಟ್ಟಣದ ಬಸ್‌ಡಿಪೋ ಬಳಿಯಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೮ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ಹಾಗೂ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಆದ್ಯಾತ್ಮಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು. ತಿಳುವಳಿಕೆಗಾಗಿ ಇಂತಹ ಪುರಾಣ ಪ್ರವಚನ ಸಂತ್ಸಂಗಗಳನ್ನು ಆಲಿಸಬೇಕು. ಈ ಮಾನವ ಜನ್ಮ ಬಲು ದೊಡ್ಡದು ಮತ್ತು ಅಪೂರ್ವವಾಗಿದೆ. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.ಈ ವೇಳೆ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದ ಡಾ.ವಿಜಯಕುಮಾರ ವಾರದ ಮಾತನಾಡಿದರು.ಇದೇ ಸಂದರ್ಭದಲ್ಲಿ ಮಾದನ ಹಿಪ್ಪರಗಾ ಶ್ರೀಮಠದ ಶಾಂತವೀರ ಶಿವಾಚಾರ್ಯರು ಆಶೀರ್ವದಿಸಿದರು. ಸಾನಿಧ್ಯವನ್ನು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸಿಂದಗಿ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ…

Read More

ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು ಪ್ರತಿವರ್ಷ ನೀಡುವ ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಧಾರವಾಡದ ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಅವರಿಗೆ ನೀಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದ್ದಾರೆ.ಪ್ರಶಸ್ತಿಯು ಹತ್ತು ಸಾವಿರ ರೂ.ಗಳ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದ್ದು ಇದೇ ತಿಂಗಳು ೩೦ ರಂದು ಕಡಣಿಯಲ್ಲಿ ನಡೆಯುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಸಂಸ್ಮರಣಾರ್ಥ ಹಮ್ಮಿಕೊಂಡಿರುವ ೩೦ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಸಿಂದಗಿಯ ಸಿ.ಎಂ.ಮನಗೂಳಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಳೆದ ವರ್ಷ ನಿವೃತ್ತಿಯಾಗಿರುವ ಡಾ. ಸಂಗಮನಾಥ ಲೋಕಾಪೂರ ಅವರು ನಾಡಿನ ಹಿರಿಯ ತಲೆಮಾರಿನ ಶ್ರೇಷ್ಠ ಕತೆಗಾರರು, ಕತೆ, ವಿಮರ್ಶೆ, ಸಂಶೋಧನೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಅವರನ್ನು ಅವರ ಒಟ್ಟು ಜೀವಮಾನದ ಸಾಹಿತ್ಯಕ್ಕಾಗಿ ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿಯ ಡಾ. ರಮೇಶ ಕತ್ತಿ ತಿಳಿಸಿದ್ದಾರೆ. ಕಳೆದ ವರ್ಷ…

Read More

– ಮಂಡ್ಯ ಮ.ನಾ.ಉಡುಪ ರೈತನೊಬ್ಬ ದೊಡ್ಡದಾದ ಗೂಳಿಯೊಂದನ್ನು ಸಾಕಿದ್ದ. ಅದು ನೋಡಲು ಬೃಹದಾಕಾರವಾಗಿತ್ತು. ನೋಡಿದವರು ಅದರ ದೇಹ ನೋಡಿ ಭಯಪಡುವ ರೀತಿಯಲ್ಲಿತ್ತು. ನೋಡಲು ಮಾತ್ರ ಭಯಂಕರವಾಗಿದ್ದ ಗೂಳಿ ತುಂಬಾ ಸಾಧು ಸ್ವಭಾವದ್ದಾಗಿತ್ತು.ರೈತ ತನ್ನ ಜಮೀನಿನ ಕೆಲಸ-ಕಾರ್ಯಗಳಿಗೆ ಈ ಗೂಳಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದ. ಗೂಳಿಯೂ ಸಹ ರೈತನ ಜೊತೆಗೆ ಯಾವುದೇ ಮೈಗಳ್ಳತನ ಮಾಡದೇ ಪ್ರಾಮಾಣಿಕವಾಗಿ ದುಡಿಯುತ್ತಿತ್ತು.ಅದೊಂದು ಮದ್ಯಾಹ್ನದ ಸಮಯದಲ್ಲಿ ಗೂಳಿಯನ್ನು ರೈತನು ವಿಶ್ರಾಂತಿಗಾಗಿ ಕೊಟ್ಟಿಗೆಯಲ್ಲಿ ಕಟ್ಟಿದ್ದ. ನೊಣವೊಂದು ಗೂಳಿಯ ಕೊಂಬಿನ ಮೇಲೆ ಬಂದು ಕುಳಿತಿತು. ಸ್ವಲ್ಪ ಸಮಯದ ನಂತರ ನೊಣವು ಹಾರಿಬಂದು ಗೂಳಿಯ ಎದುರಿಗೆ ಬಂದು ಹೇಳಿತು” ನನ್ನ ಕ್ಷಮಿಸು. ನನಗೆ ತಿಳಿಯದೇ ನಿನ್ನ ಕೊಂಬಿನ ಮೇಲೆ ಬಂದು ಕುಳಿತೆ. ಆಮೇಲೆ ತಿಳಿಯಿತು. ನನ್ನ ದೇಹದ ಭಾರದಿಂದಾಗಿ ನಿನಗೆ ನೋವಾಗುತಿದೆಯೆಂದು … “ಅದಕ್ಕೆ ಗೂಳಿ ನಗುತ್ತಾ ಹೇಳಿತು” ಮಿತ್ರಾ ನಿನ್ನಿಂದ ನನಗಾವ ನೋವಾಗಲಿ, ಭಾರವಾಗಲಿ ಆಗಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ನೀನು ನನ್ನ ಕೊಂಬಿನ ಮೇಲೆ ಕುಳಿತುಕೊಂಡ ವಿಚಾರ ನೀ ಹೇಳಿದ ಮೇಲೆ ನನಗೆ…

Read More

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರತಿಜ್ಞೆ! ಬೆಂಗಳೂರು: ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಮತ್ತೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯಿಂದ ಮಾತ್ರ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡರು, ತಮ್ಮ ಕೊನೆಯ ಉಸಿರು ಇರುವವರೆಗೂ ಕಾವೇರಿ ನೀರಿಗಾಗಿ ಹೋರಾಟ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.ಕರ್ನಾಟಕ ಎದುರಿಸುತ್ತಿರುವ ಕಾವೇರಿ ನೀರಿನ ಸಮಸ್ಯೆ ಬಗೆಹರಿಸುವ ಶಕ್ತಿ ಮೋದಿಗೆ ಮಾತ್ರ ಇದೆ ಎಂದರು.ಕಾವೇರಿ ನೀರು ಬಿಡುವಂತೆ ಪ್ರತಿ ವರ್ಷ ತಮಿಳುನಾಡು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತದೆ. ನಮಗೆ ನೀರಿಲ್ಲದಿದ್ದರೂ,ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಕೊಡಿ ಎಂದು ಹೇಳುತ್ತಾರೆ, ನಮ್ಮ ಅಧಿಕಾರಿಗಳು ಎಷ್ಟೇ ವಾದಿಸಿದರೂ ಪ್ರಯೋಜನವಾಗಿಲ್ಲ. ಕಾವೇರಿ ಜಲಾಶಯಗಳಲ್ಲಿ ಎಷ್ಟು ನೀರಿದೆ ಎಂಬುದನ್ನು ನೋಡಲು ಸಿಡಬ್ಲ್ಯುಎಂಎ ಕರ್ನಾಟಕಕ್ಕೆ ಭೇಟಿ ನೀಡಿಲ್ಲ. ಮತ್ತೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಅವರಿಂದ ಮಾತ್ರ ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯ…

Read More