ಸಿಂದಗಿ: ಜಗತ್ತಿನ ಮೂಲ ಇಂಜನಿಯರ‍್ಸ ಸೊನ್ನಲಗಿ ಸಿದ್ದರಾಮೇಶ್ವರರ ವಂಶಸ್ಥರ ಭೋವಿ ವಡ್ಡರ ಜನಾಂಗವಾಗಿದೆ. ಇವರ ಮೂಲ ಕಸಬು ಮಣ್ಣು ಹೊರುವುದು, ಕಲ್ಲು ಒಡೆಯುವುದು. ಅದಕ್ಕೆ ಪ್ರಪಂಚದ ಉಗಮವಾಗುವಲ್ಲಿ ಭೋವಿಗಳ ಪಾತ್ರ ಹಿರಿಮೆಯಾದದ್ದು ಎಂದು ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿ, ನಾವೆಲ್ಲರೂ ಭೋವಿ ಜನಾಂಗದವರ ಕಾಯಕವನ್ನು ಕೀಳರಿಮೆಯಿಂದ ನೋಡದೇ ನಾವೆಲ್ಲ ಭೋವಿಗಳು ಎಂದು ಎದೆ ತಟ್ಟಿ ಹೇಳಬೇಕಲ್ಲದೇ ಮೂಲ ಕಸಬನ್ನು ಮರೆಯಬಾರದು ಎಂದರು.
ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಶ್ರೇಷ್ಠ ವಚನಕಾರರಾಗಿದ್ದರು. ಅಂತೆಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಈ ವೇಳೆ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿದರು.
ವೇದಿಕೆಯ ಮೇಲೆ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ಕೃಷಿ ಅದಿಕಾರಿ ಡಾ.ಎಚ್.ವೈ.ಸಿಂಗೆಗೋಳ, ಸರಕಾರಿ ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಭೋವಿ ಸಮಾಜದ ತಾಲೂಕಾದ್ಯಕ್ಷ ಪಂಡಿತ ಯಂಪೂರೆ, ಸುನಂದಾ ಯಂಪುರೆ ವೇದಿಕೆ ಮೇಲಿದ್ದರು.
ಕಂದಾಯ ಇಲಾಖೆಯ ಆಯ್.ಎ.ಮಕಾಂದಾರ, ಜಿ.ಎಸ್.ರೋಡಗಿ, ಇಂದ್ರಾಬಾಯಿ ಬಳಗಾನೂರ, ಎಸ್.ಎಂ.ತಾರನಾಳ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಸೈನಾಬಿ ಮಸಳಿ, ವರ್ಷಾ ಪಾಟೀಲ, ಶ್ರೀನಿವಾಸ ಓಲೇಕಾರ, ಸಾಯಬಣ್ಣ ದೇವರಮನಿ, ಕೊಳ್ಳಪ್ಪ ಚಾಕರೆ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ಭೀಮಣ್ಣ ಬಂಡಿವಡ್ಡರ, ರವಿ ಚಾಕರೆ, ತಿರುಪತಿ ಬಂಡಿವಡ್ಡರ, ರವಿ ವಡ್ಡರ, ಮುತ್ತು ಆಲಕುಂಟೆ, ಪ್ರವೀಣ ಯಂಪೂರೆ, ಪರಶುರಾಮ ಯಂಪೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಂಡಿತ ಯಂಪೂರೆ ಸ್ವಾಗತಿಸಿದರು. ಪ್ರಾಧ್ಯಾಪಕ ಮಹಾಂತೇಶ ನೂಲಾನವರ ನಿರೂಪಿಸಿದರು. ಸುನಂದಾ ಯಂಪೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮುತ್ತಪ್ಪ ಪಾತ್ರೋಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

