ಸಿಂದಗಿ: ಪಟ್ಟಣದ ಶ್ರೀ ಸಂಗಮೇಶ್ವರ ದೇವರ ಜಾತ್ರಾಮಹೋತ್ಸವ ಅಂಗವಾಗಿ ಜ.೧೯ ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಸಂಗಮೇಶ್ವರ ಹಾಗೂ ಭ್ರಮರಾಂಬಿಕಾ ದೇವಿಯ ಉತ್ಸವ ಮೂರ್ತಿಗಳ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಜರಗುತ್ತದೆ. ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ನೀಲಗಂಗಾದೇವಿ ದೇವಸ್ಥಾನ ಮಾರ್ಗವಾಗಿ ಹಳೆಬಜಾರದಲ್ಲಿನ ಶ್ರೀ ಬಸವಣ್ಣ ದೇವಸ್ಥಾನದವರೆಗೆ ಸಾಗಿ ಪುನಃ ಅದೇ ಮಾರ್ಗವಾಗಿ ದೇವಸ್ಥಾನ ತಲಪುವುದು ಎಂದು ದೇವಸ್ಥಾನದ ಕಮಿಟಿ ಸದಸ್ಯರು ತಿಳಿಸಿದ್ದಾರೆ.
ದೇವಸ್ಥಾನದ ಹಿನ್ನಲೆ: ಐತಿಹಾಸಿಕ ಸಂಗಮೇಶ್ವರ ದೇವಸ್ಥಾನ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದೆ. ಗರ್ಭಗುಡಿಯ ಮೇಲೆ ಕದಂಬ ನಾಗರ ಶೈಲಿಯ ಶಿಖರವಿದೆ. ದೇವಾಲಯದ ಎದುರು ನಿರ್ಮಿಸಿರುವ ಮಂಟಪದಲ್ಲಿ ಶಿವಲಿಂಗಗಳು ಮತ್ತು ನಂದಿಶಿಲ್ಪ ಕಲಾಕೃತಿಗಳಿವೆ. ದೇವಾಲಯದ ಹಿಂಬದಿ ಭ್ರಮರಾಂಬಿಕಾ ಗುಡಿ ಇದೆ. ದೇವಸ್ಥಾನದ ಸುತ್ತಲೂ ವಿಶಾಲವಾದ ಒಳಾಂಗಣ ಇದ್ದು ಇಲ್ಲಿ ಗಣಪತಿ, ಹಿರಿಯೊಡೆಯ ಮಳೆ ಸಂಗಪ್ಪ, ನರಸಿಂಹ ಮತ್ತು ಭನಶಂಕರಿಯ ಚಿಕ್ಕ ಚಿಕ್ಕ ಗುಡಿಗಳಿವೆ. ಒಳ ಗೋಡೆಗೆ ಹೊಂದಿಕೊಂಡಂತೆ ಪಾರ್ವತಿ, ಭೈರವ, ನಾಗ ನಾಗಿಣಿ ಮೊದಲಾದ ವಿಜಯನಗರೋತ್ತರ ಶೈಲಿಯ ಶಿಲ್ಪಗಳಿವೆ.
Subscribe to Updates
Get the latest creative news from FooBar about art, design and business.
Related Posts
Add A Comment

