Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಬಿಜೆಪಿಯ ಚುನಾವಣಾ ರಾಜಕೀಯ ಲಾಭದ ಯೋಜನೆ ಆರೋಪ | ಕಾಂಗ್ರೆಸ್ ನಾಯಕರಿಂದ ಆಹ್ವಾನ ತಿರಸ್ಕಾರ ದೆಹಲಿ: ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಸಮಾರಂಭ ಮೋದಿಯವರ ಕಾರ್ಯಕ್ರಮ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.ಭಾರತ್ ಜೋಡೋ ನ್ಯಾಯ ಯಾತ್ರೆಯ ನಡುವೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಜನವರಿ 22ರ ಕಾರ್ಯಕ್ರಮವನ್ನು ನರೇಂದ್ರ ಮೋದಿ ಕಾರ್ಯಕ್ರಮವನ್ನಾಗಿ ರಾಜಕೀಯ ಮಾಡುತ್ತಿದೆ. ಇದು ಆರ್‌ಎಸ್‌ಎಸ್ ಬಿಜೆಪಿ ಕಾರ್ಯವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಅಧ್ಯಕ್ಷರು ಫಂಕ್ಷನ್‌ಗೆ ಹೋಗಲ್ಲ ಎಂದು ಹೇಳಿದರು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.ನಾವು ಎಲ್ಲಾ ಧರ್ಮಗಳು, ಎಲ್ಲಾ ಆಚರಣೆಗಳಿಗೆ ಮುಕ್ತವಾಗಿದ್ದೇವೆ. ಹಿಂದೂ ಧರ್ಮದ ದೊಡ್ಡ ದೊಡ್ಡ ಅಧಿಕಾರಿಗಳು ಸಹ ಜನವರಿ 22ರ ಸಮಾರಂಭದ ಬಗ್ಗೆ ಅವರು(ಮೋದಿ) ಏನು ಯೋಚಿಸುತ್ತಾರೆ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ, ಇದು ರಾಜಕೀಯ ಕಾರ್ಯವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ” ಎಂದು ರಾಹುಲ್ ಗಾಂಧಿ ಹೇಳಿದರು.ಆದ್ದರಿಂದ ಭಾರತದ ಪ್ರಧಾನ ಮಂತ್ರಿಯ…
ವಿಜಾಪುರ: ಆಧ್ಯಾತ್ಮಿಕ ಪ್ರವಚನದ ಮೂಲಕ ಭಾವೈಕ್ಯತೆಯನ್ನು, ಕೌಟುಂಬಿಕ ಮೌಲ್ಯಗಳನ್ನು ಬಿತ್ತರಿಸಿದವರು ಶಂಕ್ರಯ್ಯ ಸ್ವಾಮೀಜಿಗಳು. ಧಾರ್ಮಿಕ ಸಮಾಜಕ ಸಾಂಸ್ಕೃತಿಕವಾಗಿ ಅಪಾರವಾದ ಕೊಡುಗೆ ನೀಡಿದ ಶಂಕ್ರಯ್ಯ ಸ್ವಾಮೀಜಿಯವರ ಕುರಿತು ರಚನೆಯಾದ’ ನಿಜ ಜಂಗಮ’ ಅಭಿನಂದನಾಕೃತಿ ಅರ್ಥಪೂರ್ಣ ಮತ್ತು ಮೌಲಿಕ ಕೃತಿಯಾಗಿದೆ ಎಂದು ನಾಗಠಾಣ ಉದಯಲಿಂಗೇಶ್ವರ ಹಿರೇಮಠದ ಪೂಜ್ಯ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.ತಿಕೋಟ ತಾಲೂಕಿನ ತಾಜಾಪುರ ತೋಟದ ಆಶ್ರಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜ ಜಂಗಮನ ಅಭಿನಂದನ ಗ್ರಂಥವನ್ನು ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು ದಣಿ ಅರಿಯದ ಸಮಾಜ ಸೇವೆಯಿಂದ ಮಾನವನು ದೇವನಾಗುತ್ತಾನೆ ನಮ್ಮಲ್ಲಿರುವ ಉತ್ತಮ ಗುಣಗಳೇ ನಮ್ಮನ್ನು ಎಚ್ಚರಿಕೆ ತೆಗೆದುಕೊಂಡು ಹೋಗುತ್ತವೆ. ಶಂಕ್ರಯ್ಯ ಸ್ವಾಮೀಜಿಗಳು ನಾಡಿನಾದಂತ ಪ್ರವಚನ ನೀಡಿ ಭಕ್ತರನ್ನು ಉದ್ಧಾರ ಮಾಡಿದರು ಹೋದಲ್ಲ ಭಕ್ತರಿಗೆ ಲಿಂಗಧಾರಣೆ ಪೂಜಾವಿಧಾನವನ್ನು ಕಳಿಸಿಕೊಡುತ್ತಿದ್ದರು.ನಿಜ ಜಂಗಮ ಅಭಿನಂದನ ಗ್ರಂಥವನ್ನು ಪರಿಚಯಿಸಿದ ಬಬಲೇಶ್ವರ ಶಾಂತವೀರ ಕಾಲೇಜಿನ ರಾಜ್ಯಪ್ರಶಸ್ತಿ ಪುರಸ್ಕೃತ ಮಹಾದೇವ ರೆಬಿನಾಳ ಮಾತನಾಡಿ, ಈ ಗ್ರಂಥದಲ್ಲಿ ಸ್ವಾಮೀಜಿಗಳ ಜೀವನ ಬಾಲ್ಯ ಅವರ ಸಮಾಜ ಸೇವೆ ಮಠಮಾನ್ಯಗಳ ಪರಿಚಯವನ್ನು ಸಮಗ್ರವಾಗಿ…
ಆಲಮಟ್ಟಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಇದೇ ಜ.೨೦, ೨೧ ಎರಡು ದಿನ, ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸಭಾಭವನದಲ್ಲಿ ಜರುಗಲಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ತಿಳಿಸಿದರು.ಮಂಗಳವಾರ, ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು.ಜ.೨೦ ರಂದು ಬೆಳಿಗ್ಗೆ ೧೧ ಕ್ಕೆ ಅಧ್ಯಯನ ಶಿಬಿರವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ, ರಮೇಶ ಆಸಂಗಿ, ಎಚ್.ಪಿ. ಸುಧಾಮದಾಸ್, ರಾಜು ಅಲಗೂರ, ಶರಣಪ್ಪ ಸುಣಗಾರ, ರಾಜಶೇಖರ ಯಡಹಳ್ಳಿ, ಹಾಸಿಂಪೀರ ವಾಲಿಕಾರ, ವಿಜಯನರಸಿಂಹ, ಸೂಲಿಕಂಟೆ ರಮೇಶ, ಎಸ್.ಎನ್. ಮಲ್ಲಪ್ಪ, ಎಸ್.ವಿಘ್ನೇಷ, ಸತ್ಯ ಭದ್ರಾವತಿ, ಬಸವರಾಜ ಕೌತಾಳ್, ಅಂಬಣ್ಣ ಅರೋಳಿಕರ್ ಆಗಮಿಸಲಿದ್ದಾರೆ.”ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಮತ್ತು ಬೆಳವಣಿಗೆ’ ಮೊದಲ ಗೋಷ್ಠಿಯಲ್ಲಿ ಸಿ.ಕೆ. ಮಹೇಶ ವಿಷಯ ಮಂಡಿಸಲಿದ್ದಾರೆ. ಮಲ್ಲೇಶ್ ಸಜ್ಜನ…
ವ್ಯವಸ್ಥಿತ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ವಿಜಯಪುರ: ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳ ಮೂಲಕ ಚಾಲನೆ ನೀಡಲು ಉದ್ದೇಶಿಸಲಾಗಿರುವ ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ ಜಿಲ್ಲೆಯಲ್ಲಿ ಜನವರಿ ೨೬ ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಭಾರತದ ಸಂವಿಧಾನ ಮತ್ತು ಏಕತೆ ಕಾರ್ಯಕ್ರಮವನ್ನು ಆಚರಿಸುವ ಕುರಿತು ಪ್ರಸ್ತಾಪಿಸಲು ಹಾಗೂ ಏಕಕಾಲದಲ್ಲಿ ರಾಜ್ಯದ ೩೧ ಜಿಲ್ಲೆಗಳಲ್ಲಿ ಆಚರಿಸುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರದ ಮೆರವಣಿಗೆಗೆ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಎರಡೂ ಸ್ತಬ್ಧಚಿತ್ರಗಳು ಜಿಲ್ಲೆಯಾದ್ಯಂತ ೨೭ ದಿನಗಳ ಕಾಲ ಸಂಚರಿಸಲಿವೆ. ಜನವರಿ ೨೬ ರಿಂದ ಫೆಬ್ರವರಿ ೨೩ರವರೆಗೆ ಸ್ತಬ್ಧಚಿತ್ರ ಜಿಲ್ಲೆಯಾದ್ಯಂತ ಸಂಚರಿಸಿ, ಫೆ.೨೩ರಂದು ಬೆಂಗಳೂರಿಗೆ ಎರಡೂ ಸ್ತಬ್ಧಚಿತ್ರಗಳು ತಲುಪಲಿವೆ. ಒಂದು ವಿಜಯಪುರದಿಂದ ಹಾಗೂ ಇನ್ನೊಂದು…
ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಮಾಹಿತಿ ಆಲಮಟ್ಟಿ: ಬದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ ನಾಲ್ಕು ರೈಲು ನಿಲ್ದಾಣಗಳನ್ನು ಅಮೃತ ರೈಲು ಯೋಜನೆಯಡಿ ಸೇರಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿವೆ. ವಿಜಯಪುರ-ಬಾಗಲಕೋಟೆ ರೈಲು ನಿಲ್ದಾಣದ ಆಧುನೀಕರಣ ಮುಕ್ತಾಯ ಹಂತಕ್ಕೆ ಬಂದಿವೆ ಎಂದು ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಸಂಜೀವಕಿಶೋರ ಹೇಳಿದರು.ಆಲಮಟ್ಟಿಯ ರೈಲು ನಿಲ್ದಾಣಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಮೃತ ರೈಲು ನಿಲ್ದಾಣದ ಕಾಮಗಾರಿ, ದ್ವಿಪಥ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.ಗದಗ-ಹೊಟಗಿ ಮಾರ್ಗದ ರೈಲ್ವೆ ಡಬಲಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಬಾಗಲಕೋಟೆ-ವಂದಾಲ ಮಧ್ಯೆ ಮಾತ್ರ ಬಾಕಿಯಿದೆ. ಆಲಮಟ್ಟಿ-ಬಾಗಲಕೋಟೆ ಮಧ್ಯೆ ಮೇ-೨೦೨೪ ಕ್ಕೆ ಪೂರ್ಣಗೊಳ್ಳಲಿದೆ, ಆಲಮಟ್ಟಿ-ವಂದಾಲ ಮಧ್ಯೆ ಬರುವ ಕೃಷ್ಣಾ ನದಿಯ ಸೇತುವೆ ಕಾಮಗಾರಿ ನಡೆದಿದೆ. ಅದು ಬಹುತೇಕ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು. ಆಲಮಟ್ಟಿ-ಗದಗ ಮಧ್ಯೆ ಎಲೆಕ್ಟ್ರಿಫಿಕೇಶನ್ ಕಾಮಗಾರಿಯೂ ಜೂನ್-೨೦೨೪ ಕ್ಕೆ ಪೂರ್ಣಗೊಳ್ಳಲಿದೆ ಎಂದರು.ಆಲಮಟ್ಟಿಯಲ್ಲಿ ಮೂರು…
ಸಿಂದಗಿ: ಆನೆಕಾಲು ರೋಗ ನಿರ್ಮೂಲನೆ ಮಾಡುವಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿ ಬಹಳ ಮುಖ್ಯ ಎಂದು ಆಲಮೇಲ ತಹಶೀಲ್ದಾರ್ ಸುರೇಶ ಚಾವಲರ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜರುಗಿದ ಆನೆಕಾಲು ರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಔಷಧಿ ನುಂಗಿಸುವ ತಾಲೂಕು ಮಟ್ಟದ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಿ ತಾಲೂಕನ್ನು ಆನೆಕಾಲು ರೋಗದಿಂದ ಮುಕ್ತಗೊಳಿಸಬೇಕು. ಡಿಇಸಿ ಮಾತ್ರೆಯನ್ನು ಎಲ್ಲಾ ಮುಖ್ಯೋಪಾಧ್ಯಾಯರು ಶಾಲೆಯ ಮಕ್ಕಳಿಗೆ ನುಂಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ವ್ಯಾಪ್ತಿಯಲ್ಲಿ ಆನೇಕಲ್ ರೋಗದ ಬಗ್ಗೆ ಮಾಹಿತಿ ತಿಳಿಸುವಂತೆ ವಿಶ್ವ ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು. ಗ್ರಾಮ ಪಂಚಾಯಿತ್ ಹಾಗೂ ಪುರಸಭೆ ಮಟ್ಟದಲ್ಲಿ ಕಸ ವಿಲೇವಾರಿ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೇಡ್ ೨ ತಹಶೀಲ್ದಾರ್ ಆಯ್.ಜೆ.ಬಳಗಾನೂರ ಮಾತನಾಡಿ, ಎಲ್ಲಾ ಹಂತದ ಅಧಿಕಾರಿಗಳು ಈಗಿನಿಂದಲೇ ಸಭೆ, ತಿಳಿವಳಿಕೆ ಶಿಬಿರಗಳನ್ನು…
ವಿಜಯಪುರ: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ೨೦೨೨ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಕೃತಿಗಳನ್ನು ಆಹ್ವಾನಿಸಿದೆ.ಪ್ರತಿ ಆಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು ೨೦೨೨ರ ಜನವರಿ ೦೧ ರಿಂದ ೨೦೨೨ರ ಡಿಸೆಂಬರ್ ೩೧ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃಷಿಯಲ್ಲಿ ಪ್ರಥಮ ಮುದ್ರಣ ೨೦೨೨ ಎಂದು ಮುದ್ರಿತವಾಗಿರಬೇಕು.ಆಸಕ್ತರು ತಲಾ ೪ ಪ್ರತಿಗಳನ್ನು ರಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨ ಇವರಿಗೆ ರಿಜಿಸ್ಟರ್ಡ ಅಂಚೆ ಅಥವಾ ಕೊರಿಯರ್ ಮೂಲಕ ಅಥವಾ ಖುದ್ದಾಗಿ ೨೦೨೪ರ ಫೆಬ್ರುವರಿ ೨೦ರೊಳಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೦-೨೨೨೧೧೭೩೦, ೨೨೧೦೬೪೬೦ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ದಂದರಗಿ ಗ್ರಾಮದ ೩೨ ವರ್ಷದ ಲಲಿತಾ ಗಂ.ನಾಗೇಶ ಮೇಲಸಕ್ಕರಿ ಎಂಬ ಮಹಿಳೆ ದಿನಾಂಕ : ೦೨-೧೨-೨೦೨೨ ರಿಂದ ವಿಜಯಪುರ ನಗರದ ಉಪಲಿ ಬುರುಜ್ ಹತ್ತಿರದಿಂದ ಕಾಣೆಯಾಗಿರುವ ಕುರಿತು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಮಹಿಳೆ ಪತ್ತೆಗೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕಾಣೆಯಾಗಿರುವ ಮಹಿಳೆಯು ೫.೪ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿಬಣ್ಣ, ಕನ್ನಡ ಭಾಷೆ ಬಲ್ಲವಳಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಬೂದು ಬಣ್ಣದ ಮತ್ತು ಹಳದಿ ಬಣ್ಣದ ಚೂಡಿದಾರ ಧರಿಸಿದ್ದಳು.ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಪೊಲೀಸ್ ಅಧೀಕ್ಷಕರು ದೂ: ೦೮೩೫೨-೨೫೦೧೫೨, ಜಿಲ್ಲಾ ನಿಸ್ತಂತು ಕಚೇರಿ ದೂ: ೦೮೩೫೨-೨೫೦೮೪೪, ಮಹಿಳಾ ಪೊಲೀಸ್ ಠಾಣೆ ಮೊ: ೯೪೮೦೮೦೪೨೭೦ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ಕಳೆದ ನ.೨ ಕ್ಕೆ ೫೦ ವರ್ಷ ಪೂರ್ಣಗೊಂಡಿರುವ ಶುಭ ಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ-೫೦” ರ “ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ಇದೇ ಜ ೨೭ ರಿಂದ ಫೆ.೧೨ ರವರೆಗೆ ಜಿಲ್ಲೆಯಾದ್ಯಂತ ” ಜ್ಯೋತಿ ಹೊತ್ತ ರಥ ಯಾತ್ರೆ” ನಡೆಯಲಿದ್ದು, ಸಂಭ್ರಮದ ಸ್ವಾಗತಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೆಸ್ವಾನ ಸಭಾಂಗಣದಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜ್ಯೋತಿ ರಥಯಾತ್ರೆಗೆ ಸ್ವಾಗತ ಮತ್ತು ಸಂಚಾರಕ್ಕಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಪ್ರವೇಶಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿವಿಧ ಸ್ಥಳಗಳ ಮೂಲಕ ಕನ್ನಡ ನಾಡು ನುಡಿಯ, ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ಸಾರಿ ಹೇಳುವ ವಿಶೇಷ ಜ್ಯೋತಿ ರಥಯಾತ್ರೆ ಇದಾಗಿದ್ದು, ಆಯಾ…
