ವಿಜಾಪುರ: ಆಧ್ಯಾತ್ಮಿಕ ಪ್ರವಚನದ ಮೂಲಕ ಭಾವೈಕ್ಯತೆಯನ್ನು, ಕೌಟುಂಬಿಕ ಮೌಲ್ಯಗಳನ್ನು ಬಿತ್ತರಿಸಿದವರು ಶಂಕ್ರಯ್ಯ ಸ್ವಾಮೀಜಿಗಳು. ಧಾರ್ಮಿಕ ಸಮಾಜಕ ಸಾಂಸ್ಕೃತಿಕವಾಗಿ ಅಪಾರವಾದ ಕೊಡುಗೆ ನೀಡಿದ ಶಂಕ್ರಯ್ಯ ಸ್ವಾಮೀಜಿಯವರ ಕುರಿತು ರಚನೆಯಾದ’ ನಿಜ ಜಂಗಮ’ ಅಭಿನಂದನಾಕೃತಿ ಅರ್ಥಪೂರ್ಣ ಮತ್ತು ಮೌಲಿಕ ಕೃತಿಯಾಗಿದೆ ಎಂದು ನಾಗಠಾಣ ಉದಯಲಿಂಗೇಶ್ವರ ಹಿರೇಮಠದ ಪೂಜ್ಯ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ತಿಕೋಟ ತಾಲೂಕಿನ ತಾಜಾಪುರ ತೋಟದ ಆಶ್ರಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜ ಜಂಗಮನ ಅಭಿನಂದನ ಗ್ರಂಥವನ್ನು ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು ದಣಿ ಅರಿಯದ ಸಮಾಜ ಸೇವೆಯಿಂದ ಮಾನವನು ದೇವನಾಗುತ್ತಾನೆ ನಮ್ಮಲ್ಲಿರುವ ಉತ್ತಮ ಗುಣಗಳೇ ನಮ್ಮನ್ನು ಎಚ್ಚರಿಕೆ ತೆಗೆದುಕೊಂಡು ಹೋಗುತ್ತವೆ. ಶಂಕ್ರಯ್ಯ ಸ್ವಾಮೀಜಿಗಳು ನಾಡಿನಾದಂತ ಪ್ರವಚನ ನೀಡಿ ಭಕ್ತರನ್ನು ಉದ್ಧಾರ ಮಾಡಿದರು ಹೋದಲ್ಲ ಭಕ್ತರಿಗೆ ಲಿಂಗಧಾರಣೆ ಪೂಜಾವಿಧಾನವನ್ನು ಕಳಿಸಿಕೊಡುತ್ತಿದ್ದರು.
ನಿಜ ಜಂಗಮ ಅಭಿನಂದನ ಗ್ರಂಥವನ್ನು ಪರಿಚಯಿಸಿದ ಬಬಲೇಶ್ವರ ಶಾಂತವೀರ ಕಾಲೇಜಿನ ರಾಜ್ಯಪ್ರಶಸ್ತಿ ಪುರಸ್ಕೃತ ಮಹಾದೇವ ರೆಬಿನಾಳ ಮಾತನಾಡಿ, ಈ ಗ್ರಂಥದಲ್ಲಿ ಸ್ವಾಮೀಜಿಗಳ ಜೀವನ ಬಾಲ್ಯ ಅವರ ಸಮಾಜ ಸೇವೆ ಮಠಮಾನ್ಯಗಳ ಪರಿಚಯವನ್ನು ಸಮಗ್ರವಾಗಿ ಒಳಗೊಂಡಿದೆ ಎಂದರು.
ಗ್ರಂಥದ ಪ್ರಧಾನ ಸಂಪಾದಕರಾದ ಡಾ. ವಿ. ಡಿ. ಐಹೊಳೆ ಮಾತನಾಡಿ, ಉದಯೋನ್ಮುಖ ಬರಹಗಾರರು ಲೇಖಕರು ಮಾನವಿ ಮೌಲ್ಯಗಳನ್ನು ಹಾಗೂ ಸಮಾಜದ ಸಂಬಂಧಗಳ ಬೆಸೆದವರ ಕುರಿತು ಬರೆಯಬೇಕು. ಅಭಿನಂದನಾ ಗ್ರಂಥ ಸಾಹಿತ್ಯದ ಒಂದು ಭಾಗವಾಗಿದೆ ಕಾಯಕದಲ್ಲಿ ಕೈಲಾಸ ಕಂಡ ಶ್ರೀಗಳ ಕೃತಿ ಅರ್ಥಪೂರ್ಣವಾಗಿದೆ ಎಂದರು.
ಗ್ರಂಥವನ್ನು ಲೋಕಾರ್ಪಣೆಗೊಳಿಸಿದ ಕಣ್ಣೂರು ಹಿರೇಮಠದ ಪೂಜ್ಯ ಸೋಮನಾಥ ಶಿವಾಚಾರ್ಯರು ಮಾತನಾಡಿದರು.
ತಡವಲದ ಹಿರೇಮಠದ ಅಭಿನವ
ರಾಚೋಟೇಶ್ವರ ಸ್ವಾಮೀಜಿಗಳು ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
ಅನುವಾದ್ ಬಾಬುರಾವ ಮಹಾರಾಜರು, ಮುಖಂಡರಾದ ಆರ್ ಜಿ ಯೆರನಾಳ, ಗುರುಲಿಂಗಪ್ಪ ಅಂಗಡಿ, ಡಾ. ಸುರೇಶ ಬಿರಾದಾರ ಮುಂತಾದವರು ವೇದಿಕೆ ಮೇಲಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

