ಸಿಂದಗಿ: ಆನೆಕಾಲು ರೋಗ ನಿರ್ಮೂಲನೆ ಮಾಡುವಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿ ಬಹಳ ಮುಖ್ಯ ಎಂದು ಆಲಮೇಲ ತಹಶೀಲ್ದಾರ್ ಸುರೇಶ ಚಾವಲರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜರುಗಿದ ಆನೆಕಾಲು ರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಔಷಧಿ ನುಂಗಿಸುವ ತಾಲೂಕು ಮಟ್ಟದ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಿ ತಾಲೂಕನ್ನು ಆನೆಕಾಲು ರೋಗದಿಂದ ಮುಕ್ತಗೊಳಿಸಬೇಕು. ಡಿಇಸಿ ಮಾತ್ರೆಯನ್ನು ಎಲ್ಲಾ ಮುಖ್ಯೋಪಾಧ್ಯಾಯರು ಶಾಲೆಯ ಮಕ್ಕಳಿಗೆ ನುಂಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ವ್ಯಾಪ್ತಿಯಲ್ಲಿ ಆನೇಕಲ್ ರೋಗದ ಬಗ್ಗೆ ಮಾಹಿತಿ ತಿಳಿಸುವಂತೆ ವಿಶ್ವ ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು. ಗ್ರಾಮ ಪಂಚಾಯಿತ್ ಹಾಗೂ ಪುರಸಭೆ ಮಟ್ಟದಲ್ಲಿ ಕಸ ವಿಲೇವಾರಿ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೇಡ್ ೨ ತಹಶೀಲ್ದಾರ್ ಆಯ್.ಜೆ.ಬಳಗಾನೂರ ಮಾತನಾಡಿ, ಎಲ್ಲಾ ಹಂತದ ಅಧಿಕಾರಿಗಳು ಈಗಿನಿಂದಲೇ ಸಭೆ, ತಿಳಿವಳಿಕೆ ಶಿಬಿರಗಳನ್ನು ಆಯೋಜಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಯವರು ಆಂದೋಲನ ರೂಪದಲ್ಲಿ ಜಾಗೃತಿ ಮೂಡಿಸಬೇಕು. ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಆನೆಕಾಲು ರೋಗ ಮುಕ್ತ ತಾಲೂಕನ್ನಾಗಿಸೋಣ ಎಂದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ಎ.ಎ. ಮಾಗಿ ಮಾತನಾಡಿದರು.
ಈ ವೇಳೆ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಮಾತನಾಡಿದರು.
ಈ ವೇಳೆ ಸಂತೋಷ ಕಾಳಶೆಟ್ಟಿ, ಪುರಸಭೆಯ ನಬಿರಸೂಲ್ ಉಸ್ತಾದ, ಪ್ರಭುಲಿಂಗ ಜಂಗಿನಮಠ, ಮಹಾಲಿಂಗ ಫಕೀರಪೂರ, ವಿರೇಂದ್ರ ಪವಾಡೆ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

