Author: editor.udayarashmi@gmail.com

“ಇವನಾರವ ಇವನಾರವ ಎಂದೆನ್ನದೆ, ಇವ ನಮ್ಮವ ಇವ ನಮ್ಮವ..” ಎಂದೆನ್ನುತ ಸರ್ವರನ್ನೂ ಅಪ್ಪಿಕೊಳ್ಳುವ ಸಹೃದಯತೆಯ ಧೀಮಂತ ಉದಯರಶ್ಮಿ ದಿನಪತ್ರಿಕೆ ಪಾದರಸದಂತೆ ಓಡಾಟ, ಸ್ನೇಹ ಪರತೆ, ಚಾಣಾಕ್ಷ ಮುನ್ನಡೆ, ಸಾಮಾಜಿಕ ಬದ್ಧತೆಯ ಅವಿಶ್ರಾಂತ ಕೆಲಸಗಾರ ಮಲ್ಲನಗೌಡ ಬಸನಗೌಡ ಪಾಟೀಲ್ ರವರು.ಮಾಜಿ ಸಚಿವ, ಶಿಕ್ಷಣ ಪ್ರೇಮಿ, ಸೋಲರಿಯದ ಸರದಾರ ನಿರಂತರ 25ವರ್ಷಗಳ ಕಾಲ ಕರ್ನಾಟಕ ಶಾಸನ ಸಭೆ ಸದಸ್ಯರಾಗಿದ್ದ ದಿ.ಬಿ.ಎಂ.ಪಾಟೀಲ್‍ರ ಜೇಷ್ಠ ಸುಪುತ್ರರಾಗಿರುವ ಎಂ.ಬಿ.ಪಾಟೀಲ್ ವಿಜಯಪುರದಲ್ಲಿ 7 ಅಕ್ಟೋಬರ 1964 ರಂದು ಜನಿಸಿ, ಬೆಂಗಳೂರು, ವಿಜಯಪುರದಲ್ಲಿ ತಮ್ಮ ಶಿಕ್ಷಣ ಪಡೆದು 1991 ರಲ್ಲಿ ಆಗ ತಾನೇ ಬಿ.ಇ. ಸಿವಿಲ್ ಪದವಿ ಪಡೆದ ನವತರುಣ.ತಂದೆಯವರ ಅಕಾಲಿಕ ನಿಧನದ ನಂತರ ಅವರು ಮುನ್ನಡೆಸಿದ ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿಕೊಂಡು ಹಾಗೂ ತಂದೆಯವರ ನಿಧನದ ಹಿನ್ನಲೆಯಲ್ಲಿ ತೆರವಾದ ತಿಕೋಟಾ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ತಮ್ಮ 26ನೇ ವಯಸ್ಸಿನಲ್ಲಿ (1991-1994) ಶಾಸಕರಾದರು. ನಂತರ 1998 ರಲ್ಲಿ ವಿಜಯಪುರದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡರು.2004ರಲ್ಲಿ ತಿಕೋಟಾ ಕ್ಷೇತ್ರದಿಂದ…

Read More

ಲೇಖನ- ಮ.ನಾ.ಉಡುಪಮಂಡ್ಯ ಉದಯರಶ್ಮಿ ದಿನಪತ್ರಿಕೆ ತಮಿಳುನಾಡಿನ ರಾಜಕಾರಣದ ನಾಡಿಮಿಡಿತವನ್ನು ಅರಿತವರಿಗೆ ಒಂದು ವಿಷಯ ಸ್ಪಷ್ಟ. ಇಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಅಸ್ಮಿತೆಗೆ, ಪ್ರಾದೇಶಿಕ ಭಾವನೆಗಳಿಗೆ ಹೆಚ್ಚಿನ ಮನ್ನಣೆ. ದ್ರಾವಿಡ ಚಳವಳಿಯ ಬೇರುಗಳು ಇನ್ನೂ ಗಟ್ಟಿಯಾಗಿರುವ ಈ ನೆಲದಲ್ಲಿ, ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ, ‘ದೆಹಲಿ ಪಕ್ಷ’ ಎಂಬ ಹಣೆಪಟ್ಟಿಯಿಂದ ಹೊರಬರುವುದು ಸುಲಭವಲ್ಲ. ಈ ಕಹಿ ಸತ್ಯ ಬಿಜೆಪಿ ಹೈಕಮಾಂಡ್‌ಗೂ ಚೆನ್ನಾಗಿ ಗೊತ್ತಿದೆ. ಅಣ್ಣಾಮಲೈ ಅವರಿಗೂ ಗೊತ್ತಿದೆ.ಈ ಹಿನ್ನೆಲೆಯಲ್ಲಿ ಕೆ. ಅಣ್ಣಾಮಲೈ ಅವರ ರಾಜೀನಾಮೆಯನ್ನು ಕೇವಲ ‘ವೈಯಕ್ತಿಕ ನಿರ್ಧಾರ’ ಎಂದು ನೋಡಿದರೆ ಅದು ರಾಜಕೀಯ ಅಜ್ಞಾನವಾಗುತ್ತದೆ. ಇದು ದೂರದೃಷ್ಟಿಯ, ಲೆಕ್ಕಾಚಾರದ ನಡೆ. ಬಿಜೆಪಿಗೆ ತಮಿಳುನಾಡಿನಲ್ಲಿ ನೇರವಾಗಿ ಅಧಿಕಾರದ ಗದ್ದುಗೆ ಏರುವುದು ಸದ್ಯಕ್ಕೆ ಕನಸಿನ ಮಾತು ಎಂಬುದನ್ನು ಅರಿತ ನಾಯಕತ್ವ, ಪರೋಕ್ಷ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ಎಂಬುದು ಸ್ಪಷ್ಟ. ಪ್ರಾದೇಶಿಕ ಮುಖವಾಡ, ರಾಷ್ಟ್ರೀಯ ಲಾಭಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಪರೋಕ್ಷ ಆಶೀರ್ವಾದ ಇಲ್ಲದೆ ಅಣ್ಣಾಮಲೈ ಅವರಂಥ ಪ್ರಬಲ ನಾಯಕ ಬಿಜೆಪಿ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಸುಖದ ಕಡಲಲಿ ಹೊರಟರೆ ಕಷ್ಟದಲೆಗಳು ಎದುರಾಗುವುದೆ? ನೋವಿನ ಮಳೆಯಲಿ ನೆನೆದು ಹೋದರೆ ನಾಳಿನ ಹಗಲು ಮೂಡುವುದೇ? ಇವು ಕವಿ ಕೆಎಸ್‌ಎನ್‌ರವರ ಕವಿತೆಯ ಸುಂದರ ಸಾಲುಗಳು ಬದುಕಿನ ಸತ್ಯವನ್ನು ಅತ್ಯಂತ ಮಾರ್ಮಿಕವಾಗಿ ಉಲ್ಲೇಖಿಸಿವೆ. ಬದುಕು ನಿತ್ಯವೂ ನಮಗೆ ಹೊಸ ಹೊಸ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಅಷ್ಟೆ ಅಲ್ಲ ಅದು ನಾವು ಕಲಿಯುವವರೆಗೂ ಬಿಡದೇ ಇರುವ ಗುರು. ಕಷ್ಟಗಳೇ ಹೆಚ್ಚು ಕಲಿಸುತ್ತೇವೆ ಎಂಬುದು ಅಚ್ಚರಿಯೆನಿಸಿದರೂ ನಂಬಲೇಬೇಕು. ಕಷ್ಟಗಳಿಲ್ಲದೇ ಸುಖದ ಸವಿ ತಿಳಿಯಲು ಸಾಧ್ಯವಿಲ್ಲ. ಇದನ್ನೇ ಸಮಾಜ ಸೇವಕಿ ಸುಧಾ ಮೂರ್ತಿ. ‘ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಆ ಕಷ್ಟಗಳನ್ನು ನಾವು ಹೇಗೆ ಎದುರಿಸುತ್ತೇವೆ ಮತ್ತು ಅದರಿಂದ ಏನು ಕಲಿಯುತ್ತೇವೆ ಎಂಬುದು ಮುಖ್ಯ.’ ಎಂದಿದ್ದಾರೆಹೂ ನಗೆಇವತ್ತೇನೋ ಹೀಗಾಯ್ತು. ನಾಳೆ ಆದರೂ ಚೆನ್ನಾಗಿರುತ್ತದೆ ಅಂದರೆ ಮತ್ತೆ ಯಾವುದಾದರೊಂದು ಸಮಸ್ಯೆ ಒಕ್ಕರಿಸಿಕೊಂಡೇ ಬಿಡುತ್ತದೆ. ದಿನಾಲೂ ತೊಂದರೆ ತಾಪತ್ರಯಗಳು ಇದ್ದೇ ಇರುತ್ತವೆ. ಈ ಕಷ್ಟದ ಹಾದಿಯಲ್ಲಿ ಸುಖದ ಬದುಕನ್ನು…

Read More

ವಿಜಯಪುರದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ನಿಮಿತ್ತ ಸೈಕ್ಲಿಂಗ್ ಜಾಥಾ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿತ್ಯ ಸೈಕಲ್ ಓಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ರಾಜ್ಯ ಸೈಕ್ಲಿಂಗ್ ಅಸೋಸಿಯೇನ್ ಅಧ್ಯಕ್ಷರಾದ ರಾಜು ಬಿರಾದಾರ ಹೇಳಿದರು.ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ವಿಶಾಲ್ ಸೈಕಲ್ ಮಹಾಲ್ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.೧೮೬೮ರಲ್ಲಿ ಸೈಕ್ಲಿಂಗ್ ಕ್ರೀಡೆಯಾಗಿ ಪರಿವರ್ತನೆಯಾಗಿ ಭಾರತದೇಶಕ್ಕೆ ೧೯೩೮ ರಲ್ಲಿ ಪಾದಾರ್ಪಣೆಯಾಯಿತು. ಬಳಿಕ ೭೦ ರ ದಶಕದಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸೈಕ್ಲಿಂಗ್ ಕ್ರೀಡೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿತು. ಇದರಿಂದಾಗಿ ಅವಿಭಜಿತ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್ಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾರೆ.ಈ ಕ್ರೀಡೆ ಕೇವಲ ಸೈಕ್ಲಿಸ್ಟ್ಗಳಿಗೆ ಮಾತ್ರವಲ್ಲ. ಜನಸಾಮಾನ್ಯರು ಸೈಕಲ್ ನಿತ್ಯ ಬಳಸಬಹುದಾಗಿದೆ. ನಿತ್ಯ ಸೈಕಲ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಾಸೋಹ ಮತ್ತು ಪರೋಪಕಾರ ಮಾಡುವುದರ ಮೂಲಕ ತಂದೆ ತಾಯಿ,ಗುರು ಹಿರಿಯರ ಋಣಭಾರದಿಂದ ಸ್ವಲ್ಪಮಟ್ಟಿನ ಮುಕ್ತಿ ಪಡೆಯಬಹುದು. ಶರಣರು ಕಲಿಸಿಕೊಟ್ಟ ದಾಸೋಹ ಸಂಸ್ಕ್ರತಿಯಿಂದ ಜ್ಞಾನಾಭಿವೃದ್ಧಿಯಾಗುವುದಲ್ಲದೆ ವರ್ಗಭೇದವಳಿದು ಶಾಂತಿ ನೆಮ್ಮದಿಗಳು ನೆಲೆಸುತ್ತವೆ.ಆಗ ಬದುಕು ಸುಂದರವಾಗುವುದೆಂದು ಪ್ರೊ.ಬಸವರಾಜ ಕಡ್ಡಿಯವರು ಹೇಳಿದರು.ಅವರು ನಗರದ ವೀರಶೈವ ಲಿಂಗಾಯತ ಮಹಾಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಲಿಂ.ಪಾರ್ವತಿ ಗುರುಪಾದಪ್ಪ ಕೋರಿ ಅವರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ವಿ.ಸಿ.ನಾಗಠಾಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಡಾ.ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.ವೇದಿಕೆಯ ಮೇಲಿದ್ದ ಈಶ್ವರಪ್ಪ ಕೋರಿ, ಕೋರಿ ಜಗದೀಶ ಮತ್ತು ಶರಣಪ್ಪ ಮಾತನಾಡಿದರು.ಈರಣ್ಣ ತೊಂಡಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮ.ಗು.ಯಾದವಾಡ ವಂದಿಸಿದರು.ಕಾರ್ಯಕ್ರಮದಲ್ಲಿ ದೊಡ್ಡಣ್ಣ ಬಜಂತ್ರಿ, ಶಶಿಕಾಂತ ಸಾತಿಹಾಳ, ಸುಜಾತಾ ಪಾಟೀಲ, ಎಸ್.ಎಸ್.ಪಾಟೀಲ, ಪ್ರೊ.ಬಿ.ಜಗದೀಶ, ಎಸ್,ಬಿ. ದೊಡಮನಿ ದಂಪತಿಗಳು , ಎಸ್.ವಾಯ್.ಗದಗ, ನೂತನ ಬ್ಯಾಕೋಡ, ಮುಂತಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಂಬಾಕು ವಿರೋಧಿ ದಿನದ ಅಂಗವಾಗಿ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಘಟಕ-I ಮತ್ತು ಘಟಕ-II ನೇತೃತ್ವದಲ್ಲಿ ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಮತ್ತು ತಂಬಾಕು ಮುಕ್ತ ಜೀವನಶೈಲಿಯನ್ನು ಪ್ರೋತ್ಸಾಹಿಸಲು ವಿಶೇಷ ಜಾಗೃತಿ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಪ್ರೊ.ಮಿಲನ್ ರಾಥೋಡ್ ಹಾಗೂ ಡಾ.ತರನ್ನುಮ್ ಜಬೀನ್ ಖಾನ್ ಮಾತನಾಡಿ, ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಜೀವಕ್ಕೆ ಅಪಾಯವೇ ಹೆಚ್ಚು. ತಂಬಾಕಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದರಿಂದ ನಾವೆಲ್ಲ ತಂಬಾಕು ಸೇವನೆ ಮಾಡಬಾರದು. ಪ್ರತಿಯೊಬ್ಬರ ಉತ್ತಮ ಆರೋಗ್ಯ ಸ್ವಾಸ್ತ್ಯ ಸಮಾಜದ ಹೆಗ್ಗುರುತು ಎಂದರು.ತಂಬಾಕಿನ ಅಂಶ ಹೃದಯ ಸಂಬಂಧಿ ರೋಗಕ್ಕೂ ಕಾರಣವಾಗುತ್ತದೆ. ಆ ಹಿನ್ನೆಲೆ ವಿದ್ಯಾರ್ಥಿಗಳು ತಂಬಾಕಿನ ಅಪಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಬೇಕು ಎಂದು ಹೇಳಿದರು.

Read More

ವಿಜಯಪುರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ | ಜಾಗೃತಿ ಜಾಥಾ | ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಅರವಿಂದ್ ಹಾಗರಗಿ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವಜನತೆ ದುಶ್ಚಟಗಳಿಂದ ದೂರವಿರಬೇಕು, ತಂಬಾಕು ಸೇವನೆ ಸೇವನೆ ತ್ಯಜಿಸಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಅರ್ಯದರ್ಶಿ ಅರವಿಂದ್ ಎಸ್. ಹಾಗರಗಿ ಹೇಳಿದರು. ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಕಲಬುರಗಿಯ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ವಿಜಯಪುರದ ನಾಗೂರ್ ನರ್ಸಿಂಗ್ ಕಾಲೇಜು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ದೇಶದ ಭವಿಷ್ಯ. ಯುವಜನತೆ ಯಾವುದೇ ಕಾರಣಕ್ಕೂ ಧೂಮಪಾನ,…

Read More

ಮೊದಲ ಪುಟ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಿದ್ದುಪಡಿ ಮಾಡಲಾದ ಹೊಸ ಮಾರ್ಗಸೂಚಿಯನ್ವಯ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ “ಪೂರ್ಣಾವಧಿ/ಅರೆಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ/ ಸ್ಥಾನಿಕ ಸಂಪಾದಕರ/ ಮುಖ್ಯಸ್ಥರ ಶಿಫಾರಸ್ಸು ಪತ್ರ ಮತ್ತು ಸೇವಾ ಪ್ರಮಾಣ ಪತ್ರವನ್ನು ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ https://sevasindhu.karnataka.gov.in ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.೨೦೨೫ರ ಸೆಪ್ಟೆಂಬರ್ ೧೨ರ ನಂತರ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಮತ್ತೊಮ್ಮೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಈ ಹಿಂದೆ ಇದ್ದ ಮಾರ್ಗಸೂಚಿಯಲ್ಲಿ ೧೧ ತಿಂಗಳ ವೇತನ ಪತ್ರ ಸಲ್ಲಿಸಬೇಕು ಎಂಬ ಷರತ್ತನ್ನು ಸಡಿಲಿಸಿ. ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ, ಸ್ಥಾನಿಕ ಸಂಪಾದಕರ/ಮುಖ್ಯಸ್ಥರ ಶಿಫಾರಸ್ಸು ಪತ್ರವನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ನೂತನ ಡಿಡಿಪಿಯು ಆಗಿ ಆಧಿಕಾರ ಸ್ವೀಕರಿಸಿದ ಶ್ರೀಯುತ ಕೆ ಎ ಉಪ್ಪಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಚಾರ್ಯ ರವಿಕುಮಾರ ಗುಮಶೆಟ್ಟಿ,ಉಪನ್ಯಾಸಕ ಬಿ ಎಂ ಕುಂಭಾರ, ದ್ವಿದಸ ಈರಣ್ಣ ಝಳಕಿ ಸೇರಿದಂತೆ ಇತರರು ಇದ್ದರು.

Read More