ಚಡಚಣ : ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಮ್ಮನವರ ಕನಸಿನ ಕೂಸಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಲೋಣಿ ಬಿ.ಕೆ ವಲಯದ, ಲೋಣಿ ಬಿ.ಕೆ ಗ್ರಾಮದ ನಿರ್ಗತಿಕರಾದ ದುಂಡವ್ವ ತೇಲಿ ಮತ್ತು ದ್ರೌಪದಿ ತಳವಾರ ಇಬ್ಬರು ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಮತ್ತು ಪ್ರತಿ ತಿಂಗಳು ಮಾಶಾಸನ ವಿತರಣೆ, ಮತ್ತು ಮನೆ ಕಟ್ಟಿ ಕೊಡುವುದರಮುಖೇನ ಅದೇ, ನಿರ್ಗತಿಕರಿಗೆ ದಿನ ಬಳಕೆ ವಸ್ತುಗಳಾದ ಹಾಸಿಗೆ, ದಿಂಬು, ಪೌಷ್ಟಿಕ ಆಹಾರ ಕಿಟ್, ಬಟ್ಟೆ, ಸಾಮಗ್ರಿಗಳನ್ನು ಪ್ರತಿ ವರ್ಷ ವಿತರಣೆ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ವಿತರಣೆ ಮಾಡಲಾಗುತಿದ್ದು ವಲಯದ ಮೇಲ್ವಿಚಾರಕರಾದ ಮಹಾಂತೇಶ ವ್ಹಿ.ಎ. ಅವರು ಕಿಟ್ ವಿತರಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಲೋಣಿ ಗ್ರಾಮದ ಗಣ್ಯರಾದ ಕೆ.ಎಸ್.ಪಾಟೀಲ, ಒಕ್ಕೂಟದ ಅಧ್ಯಕ್ಷರು ಲಕ್ಷ್ಮಿ ಕಾಪಸೆ, ಸೇವಾಪ್ರತಿನಿಧಿ ಸಂಗೀತ ಉಟಗಿ ಸಿಎಸ್‌ಸಿ ಸೇವಾದಾರರು ಸಾಹೇರಬಾನು ಶೇಕ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
Related Posts
Add A Comment

