Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ರಾಮ ಮಂದಿರ ನಿರ್ಮಾಣ ಕಾರ್ಯದ ಹೋರಾಟದ ಕರ್ಣಧಾರತ್ವ ವಹಿಸಿದ ಹಾಗೂ ಜನಸೇವೆಯನ್ನೇ ತಮ್ಮ ಜೀವನ ಎಂದು ಭಾವಿಸಿದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆಯಾಗಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.ರಾಜಕೀಯ ರಂಗದಲ್ಲಿ ಭೀಷ್ಮ ಪಿತಾಮಹನಂತೆ ಗೋಚರಿಸುವ ಅಪರೂಪದ ವ್ಯಕ್ತಿತ್ವ ಎಲ್.ಕೆ. ಅಡ್ವಾಣಿ ಅವರದ್ದು. ಜನರ ಧ್ವನಿಯಾಗಿ ಸಂಸತ್ ನಲ್ಲಿ ಗುಡುಗುತ್ತಿದ್ದ ಅವರು ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ದಿ.ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಜಿ ಅವರ ಜೋಡಿ ದೇಶದಲ್ಲಿ ಅನುಪಮ ಪ್ರಗತಿಯ ಕ್ರಾಂತಿಯನ್ನೇ ಉಂಟು ಮಾಡಿತು.ಹಿಂದುತ್ವದ ಮೇಲೆ ಅಚಲ ಶ್ರದ್ದೆ, ಜನರ ಮೇಲೆ ಅಪಾರ ಕಳಕಳಿ, ಎಷ್ಟೇ ಕಷ್ಟ ಬಂದರೂ ಛಲದಿಂದ ಹೋರಾಡುವ ಜನನಾಯಕರಾಗಿರುವ ಎಲ್.ಕೆ. ಅಡ್ವಾಣಿ ಒಬ್ಬ ಆದರ್ಶಮಯಿ, ಕರುಣಾಮಯಿ. ರಾಷ್ಟ್ರಕ್ಕೆ ಕೊಡುಗೆ ನೀಡಿದ ಅಡ್ವಾಣಿಜಿ ಅವರು ಒಬ್ಬ ಶ್ರೇಷ್ಠ ರತ್ನ, ಈಗ ಅವರು ಭಾರತ ರತ್ನಕ್ಕೆ ಭಾಜನರಾಗಿರುವುದು ಸಕಲರೂ ಸಂತಸ ಪಡುವ…
ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಗ್ಯಾರಂಟಿ ಎನ್ನದಿರಿ | ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ | ಪತ್ರಕರ್ತರಿಗೆ ರಾಜಕೀಯ ಬೇಡ | ಸುದ್ದಿ ವಸ್ತುನಿಷ್ಠವಾಗಿರಲಿ ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸಿಎಂ ಸಿದ್ಧರಾಮಯ್ಯ ಕರೆ ದಾವಣಗೆರೆ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಬಜೆಟ್‌ನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ೩೮ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಿಮ್ಮೊಂದಿಗೆ ನಾವಿರುತ್ತೇವೆ. ನಾವು ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದನ್ನು ಬರೆಯಿರಿ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದು ಬರೆಯಿರಿ. ಒಳ್ಳೆಯದನ್ನು ಕೆಟ್ಟದ್ದೆಂದು ಬಿಂಬಿಸಬಾರದು ಎಂದು ಸಲಹೆ ನೀಡಿದರು.ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ. ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ…
ಬಸವನಬಾಗೇವಾಡಿ: ಸಂವಿಧಾನ ದಿನಾಚರಣೆ ಅಂಗವಾಗಿ ಫೆಬ್ರುವರಿ ೧೦ ರಿಂದ ೧೪ ರವರೆಗೆ ನಡೆಯುವ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದಚಿತ್ರ ಮೆರವಣಿಗೆಯನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸುವಲ್ಲಿ ಅಧಿಕಾರಿಗಳು ಸನ್ನದರಾಗಬೇಕು ಎಂದು ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಹೇಳಿದರು.ಪಟ್ಟಣದ ನೂತನ ಪುರಸಭೆಯ ಸಭಾಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಫೆ, ೧೦ ರಂದು ಮುತ್ತಗಿ ಗ್ರಾಮಕ್ಕೆ ಆಗಮಿಸುವ ಜಾಗೃತಿ ಜಾಥಾವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವದು ನಂತರ ಯರನಾಳ ಮಾರ್ಗವಾಗಿ ಜಾಗೃತಿ ನಾಲ್ಕು ದಿನಗಳ ಕಾಲ ಜಾಗೃತಿ ಜಾತಾ ತಾಲೂಕಿನ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಂಚರಿಸಲಿದೆ, ಸಂವಿಧಾನ ದಿನಾಚರಣೆ ಪ್ರಯುಕ್ತ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿಶೇಷವಾಗಿ ಪ್ರಬಂದ ಸೇರಿದಂತೆ ವಿವಿಧ ಚಟುವಟಿಕೆಗಳನ್ನ ಏರ್ಪಡಿಸುವ ಮೂಲಕ ಮಕ್ಕಳಿಗೆ ಸಂವಿಧಾನದ ಮಹತ್ವವನ್ನು ತಿಳಿಸಲಾಗುತ್ತದೆ. ಫೆ, ೧೧ ರಂದು ನಡೆಯುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವದು. ಕಾರ್ಯಕ್ರಮದ ಯಶಸ್ವಿಗೆ ತಾಲೂಕಿನಲ್ಲಿ…
’ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ’ – ವಿವೇಕಾನಂದ ಎಚ್.ಕೆ. ಬೆಂಗಳೂರು ಆರ್ಥಿಕ ಮೌಲ್ಯಗಳ ಬೆಳವಣಿಗೆ,ಧಾರ್ಮಿಕ ಮೌಲ್ಯಗಳ ವೃದ್ಧಿ,ರಕ್ಷಣಾ ಮೌಲ್ಯಗಳ ಹೆಚ್ಚಳ,ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ,ವಿದೇಶಗಳಲ್ಲಿ ಭಾರತದ ಬ್ರಾಂಡ್ ಮೌಲ್ಯ ಏರಿಕೆ,. ಸಾಮಾಜಿಕ ಸಾಮರಸ್ಯ ಕುಸಿತ,ಪ್ರಜಾಪ್ರಭುತ್ವದ ಮೌಲ್ಯಗಳ ನಾಶ,ಪ್ರಾಕೃತಿಕ ಸಂಪನ್ಮೂಲಗಳ ದುರುಪಯೋಗ,ರಾಜಕೀಯ ಮತ್ತು ಆಡಳಿತದಲ್ಲಿ ಸೇಡಿನ ಮನೋಭಾವ,ಮಾನವೀಯ ಮೌಲ್ಯಗಳ ಸಂಪೂರ್ಣ ಅಧೋಗತಿ.. ನರೇಂದ್ರ ಮೋದಿಯವರನ್ನು ಮೆಚ್ಚುವವರು ಮೇಲಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ಅವರನ್ನು ಅಭಿವೃದ್ಧಿಯ ಹರಿಕಾರ ಎನ್ನುತ್ತಾರೆ,ಹಾಗೆಯೇ ಅವರನ್ನು ವಿರೋಧಿಸುವವರು ಕೆಳಗಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ವಿನಾಶದ ಮುನ್ಸೂಚನೆ ಎಂದು ಟೀಕಿಸುತ್ತಾರೆ.. ವಾದ – ಪ್ರತಿವಾದ, ಅಂಕಿಅಂಶಗಳನ್ನು ಬಳಸಿಕೊಂಡು ವಿರೋಧಿಸಲು ಅಥವಾ ಸಮರ್ಥಿಸಲು ಸಾಕಷ್ಟು ವಿಷಯಗಳು ಸಿಗುತ್ತದೆ. ಆದರೆ ಅಂತಃಕರಣ ಪೂರ್ವಕವಾಗಿ, ಯಾವುದೇ ಪೂರ್ವಾಗ್ರಹ ಇಲ್ಲದೇ, ಪ್ರಕೃತಿಯ ಮೂಲದಿಂದ, ಭಾರತೀಯ ಮೌಲ್ಯಗಳ ಆಧಾರದ ಮೇಲೆ, ಸಂವಿಧಾನದ ಚೌಕಟ್ಟಿನಲ್ಲಿ, ದೇಶ ಮತ್ತು ಜನರ ಹಿತಾಸಕ್ತಿಗಳನ್ನೇ ಮುಖ್ಯವಾಗಿಸಿ ಚರ್ಚಿಸಿದಾಗ ಸ್ವಲ್ಪಮಟ್ಟಿಗೆ ಸತ್ಯ ಮತ್ತು ವಾಸ್ತವದ ಹತ್ತಿರ ಹೋಗಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಲ್ಲ.…
ರಾಜ್ಯದಲ್ಲಿ ಮೆಲ್ಲನೆ ಬರಗಾಲ ತಲೆದೋರಿದೆ. ಮಳೆ ಬರುವ ಯಾವುದೇ ಸೂಚನೆಗಳು ಇಲ್ಲ. ಹೊಲದಲ್ಲಿನ ಪೈರುಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ರಾಜ್ಯದಲ್ಲಿ ಸುಮಾರು 104 ಕೆರೆಗಳು ಬತ್ತಿ ಹೋಗಿವೆ. ಉತ್ತರ ಕರ್ನಾಟಕದಲ್ಲಿ 56 ಮತ್ತು ದಕ್ಷಿಣ ಭಾಗದಲ್ಲಿ 48 ಕೆರೆಗಳು ಬತ್ತಿ ಹೋಗಿವೆ. ಚಳಿಗಾಲದ ದಿನಗಳಿವು, ಬೇಸಿಗೆ ಇನ್ನೂ ಕಾಲಿಟ್ಟಿಲ್ಲ ಆದರೆ ಈಗಾಗಲೇ ನೀರಿಗಾಗಿ ಹಾಹಾಕಾರ ಪ್ರಾರಂಭವಾಗುತ್ತಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಬಂದೊದಗಿದೆ. ಜನರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ ಇಲ್ಲವೇ ಕಸಾಯಿ ಖಾನೆಗಳಿಗೆ ಅಟ್ಟುತ್ತಿದ್ದಾರೆ. ಖುದ್ದು ಜನರಿಗೇ ನೀರಿಲ್ಲದಿರುವಾಗ ಜಾನುವಾರುಗಳ ಪಾಡು ಕೇಳುವವರಾರು,?? ಪ್ರತಿ ವರ್ಷದಂತೆ ಸರ್ಕಾರ ನೀರಿಗಾಗಿ ವ್ಯವಸ್ಥೆಗಳನ್ನೇನೋ ಮಾಡುತ್ತಿದೆ. ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲು ಹೆಣಗಾಡುತ್ತಿದೆ. ಆದರೆ ಇವೆಲ್ಲ ತಾತ್ಕಾಲಿಕ ಪರಿಹಾರೋಪಾಯಗಳು. ಪ್ರತಿ ವರ್ಷ ಬೇಸಿಗೆ ಶುರುವಾಗುವ ಮುನ್ನವೇ ಜನರು ಎದುರಿಸುವ ಪ್ರಮುಖ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆಯೇ ದೊಡ್ಡದು.ಹಾಗಾದರೆ ನೀರಿನ ಬವಣೆಯನ್ನು ನೀಗಿಸುವ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲವೇ??…
ಗೋಲಗೇರಿ: ರಾಯಚೂರು ಜಿಲ್ಲೆಯ ಸಿರವಾರ್ ಪಟ್ಟಣದಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ ಭಾವಚಿತ್ರಕ್ಕೆ ಆದ ಅಪಮಾನ ಖಂಡಿಸಿ, ಗೋಲಗೇರಿಯಲ್ಲಿ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ(ರಿ) ಹಾಗೂ ಟಿಪ್ಪು ಕ್ರಾಂತಿ ಸೇನೆ(ರಿ) ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗ್ರಾಮ ಲೆಕ್ಕಾಧಿಕಾರಿಗಳ ಮುಖಾಂತರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ರಾಜ್ಯದಿಂದ ಗಡಿ ಪಾರು ಮಾಡುವಂತೆ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಜಿಲ್ಲಾ ಯುವ ಅಧ್ಯಕ್ಷ ಮೋದಿನ್ ಶಾಬಾದಿ ಮಾತನಾಡಿ, ರಾಯಚೂರು ಜಿಲ್ಲೆಯ ಸಿರವಾರ್ ಪಟ್ಟಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ನೀಚ ಮನಸ್ಸಿನ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರುತಳವಾರ ಸಮಾಜದ ಮುಖಂಡ ಮಡಿವಾಳ ನಾಯ್ಕೋಡಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವು.ಹತ್ತಿ, ರವಿರಾಜ ದೇವರಮನಿ, ವಿಜುಗೌಡ ಬಿರಾದಾರ, ಶ್ರೀಶೈಲ ಜಾಲವಾದಿ, ಬಸವರಾಜ ಮಾರಲಭಾವಿ, ಸೈಪನ್ ಕೋರವಾರ, ಅಜೀಜ್ ಭಾಗವಾನ, ಸಲೀಮ್…
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸ್ಪಷ್ಠನೆ ವಿಜಯಪುರ: ಕಾರಜೋಳ ಬಳಿ ಬಾಕಿ ಉಳಿದಿರುವ 500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಭಾರತ ಗ್ರಾಮಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಇದರಿಂದ ಗ್ರಾಮ ಸ್ವರಾಜ್ಯ ಸಾಧ್ಯ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೇಳಿದ್ದರು. ಆವರ ಆಶಯದಂತೆ ನಮ್ಮ ಸರಕಾರ ರೈತರು, ಬಡವರು ಸೇರಿದಂತೆ ಎಲ್ಲ ಜಾತಿವರ್ಗಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಸಮಾಜದ ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ವಿಜಯಪುರ ಜಿಲ್ಲೆ ಮುಂಚೂಣಿಯಲ್ಲಿದೆ. ಗೃಹಲಕ್ಷ್ಮಿ ಯುವನಿಧಿ, ಅನ್ನಭಾಗ್ಯ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ…
Udayarashmi kannada daily newspaper
ದೈಹಿಕ ಶಿಕ್ಷಣ ಹಾಗೂ ಚಿತ್ರಕಲಾ ಶಿಕ್ಷಣ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಕೊಲ್ಹಾರ: ಚಿತ್ರಕಲೆ ಹಾಗೂ ದೈಹಿಕ ಶಿಕ್ಷಣ ಶೈಕ್ಷಣಿಕ ರಂಗದ ಆಧಾರಸ್ತಂಭವಾಗಿದ್ದು ಇವೆರಡು ವಿಷಯಗಳು ಮಕ್ಕಳು ಜ್ಞಾನಾರ್ಜನೆ ಪಡೆಯುವ ಸಮಯದಲ್ಲಿ ಮಹತ್ವದ ಸ್ಥಾನ ಹೊಂದಿವೆ ಎಂದು ಬಸವನ ಬಾಗೇವಾಡಿ ಕ್ಷೇತಶಿಕ್ಷಣಾಧಿಕಾರಿ ವಸಂತ ರಾಠೋಡ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಸಿಕ್ಯಾಬ್ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬ.ಬಾಗೇವಾಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬ.ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಹಾಗೂ ಚಿತ್ರಕಲಾ ಶಿಕ್ಷಣ ಶಿಕ್ಷಕರ ಪುನಶ್ಚೇತನದ ಒಂದು ದಿನದ ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಆಟೋಟಗಳ ಜೊತೆ ಶಿಸ್ತು ಬದ್ಧ ನಿಯಮಗಳ ಜ್ಞಾನದೊಂದಿಗೆ ಸದೃಢ ಆರೋಗ್ಯ ಭಾಗ್ಯ ಕಲ್ಪಿಸುವ ದಿವ್ಯ ಶಕ್ತಿ ದೈಹಿಕ ಶಿಕ್ಷಣ ಹೊಂದಿದ್ದರೆ, ಚಿತ್ರಕಲೆ ಕಲಿಕಾ ಹಿತಭಾವವನ್ನು ಉತ್ಸಾಹದ ಚಿಲುಮೆಯೊಂದಿಗೆ ಅದಮ್ಯಗೊಳಿಸುತ್ತದೆ. ಪಠ್ಯಾಧಾರಿತ ವಿಷಯಗಳೊಂದಿಗೆ ಇವೆರಡು ವಿಷಯಗಳು ಅನನ್ಯ ನಂಟು ಇರಿಸಿಕೊಂಡಿದ್ದು ಶಿಕ್ಷಕರು ಮಕ್ಕಳಿಗೆ ಈ ವಿಶೇಷ…
ತಿಕೋಟಾ: ವಿಧ್ಯಾರ್ಥಿಗಳು ತಮ್ಮ ಅಂತರಾಳದಲ್ಲಿರುವ ವಿಶೇಷ ಪ್ರತಿಭೆಯು ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳಲ್ಲಿ ವ್ಯಕ್ತವಾಗಿದೆ ಎಂದು ನಿಕಟಪೂರ್ವ ಸಂಪನ್ಮೂಲ ವ್ಯಕ್ತಿ ರಮೇಶ ರಜಪೂತ ಹೇಳಿದರು.ಪಟ್ಟಣದ ಶಿವಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಡೆದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಮಾಡಿರುವ ಚಂದ್ರಯಾನ-3 ಆದಿತ್ಯ-ಎಲ್1, ಗ್ಲೋಬಲ್ ವಾರ್ಮಿಂಗ್, ಜಲಚಕ್ರ, ಕಾಡು ಬೆಳೆಸಿ ನಾಡು ಉಳಿಸಿ, ವಾಟರ್ ಇರಿಗೇಶನ್ ಮುಂತಾದ ಮಾದರಿಗಳನ್ನು ಮಾಡಿರುವ ವಿದ್ಯಾರ್ಥಿಗಳು ಮುಂದಿನ ಭಾವಿ ಜೀವನದ ವಿಜ್ಞಾನಿಗಳಾಗಿ ಹೊರಹೊಮ್ಮುತ್ತಾರೆ. ರಾಮಮಂದಿರ, ಶಿವಲಕ್ಷ್ಮೀ ಶಾಲೆ, ಮನೆಯ ಮಾದರಿ, ಸರ್ಕಾರಿ ಆಸ್ಪತ್ರೆ, ಮಾಡಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಇಂಜಿನಿಯರ್ ಗಳಾಗುತ್ತಾರೆ ಎಂದು ಶುಭ ಹಾರೈಸಿದರು.ಕ್ಲಸ್ಟರ ಸಿಆರ್‌ಪಿ ಸುಜಾತ ಬಾಗಲಕೋಟ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ಜಿ.ಎಸ್.ಹಂಜಗಿ, ಅತಿಥಿಗಳಾಗಿ ಆರಕ್ಷಕ ಠಾಣೆ ಸಿಬ್ಬಂದಿ ಜಗದೀಶ ಹುನಗುಂದ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹಾಂತೇಶ್ ಗುಜುರಿ, ಸುರೇಶ್ ಪೂಜಾರಿ, ಮದಾರ್ ಮುಜಾವರ್, ಸಿ.ಎಂ. ಸಾಲಿಮಠ,…
